ಇಂಡಿ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಪೂಜ್ಯರು, ಹರ ಗುರುಚರಣರು, ಸಾವಿರಾರು ಜನರ ನಡುವೆ ನಡೆಯುವ ಮದುವೆ ಬಡವರ ಮದುವೆ ಅಲ್ಲ, ಇದು ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರರು ಹೇಳಿದರು.
ಪಟ್ಟಣದ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ಮತ್ತು ಹಿರೇ ಇಂಡಿ ಹನುಮಾನ ದೇವಸ್ಥಾನ ಸಮಿತಿ ಮತ್ತು ಶ್ರೀ ಶಾಂತೇಶ್ವರ ಸಹಕಾರ ಸೌಹಾರ್ಧ ಸಂಯುಕ್ತ ಆಶ್ರಯದಲ್ಲಿ ನಡೆದ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮದುವೆ ಇಂದು ಎಲ್ಲ ಸಮಾಜದವರ ಸಾಮಾನ್ಯ ಮತ್ತು ಬಡ ಕುಟುಂಬಗಳ ಜಲ್ವಂತ ಸಮಸ್ಯೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಮಾಡುವದು ಕಷ್ಟ. ಹೀಗಾಗಿ ಕಲಿತಿರುವ ವಧು ವರರು ಯುವಕರು ಗೃಹಸ್ಥಾಶ್ರಮ ಪ್ರವೇಶಕ್ಕೆ ಸಾಮೂಹಿಕ ವಿವಾಹ ಸೂಕ್ತ ಎಂದರು.
ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು ಮಾತನಾಡಿದರು.
೧೨ ಜೊತೆಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು,ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರರು, ಹೊಟಗಿಯ ಯೋಗಿರಾಜೇಂದ್ರ ಶಿವಾಚಾರ್ಯರರು, ಶಹಾಪುರದ ಸುಗುರೇಶ್ವರ ಶ್ರೀಗಳು, ಮೈಂದರಗಿ ಶ್ರೀಗಳು, ಅಥರ್ಗಾದ ಮುರಗೇಂದ್ರ , ಆರ್ಜುಣಗಿ ಜೈನಾಪುರದ ರೇಣುಕಾಚಾರ್ಯ ಶ್ರೀಗಳು, ಹಿರೇಬೇವನೂರದ ಗುರುತಾಯಿ ಅಮ್ಮನವರು, ಹಿಂಗಣಿಯ ಶಿವಮ್ಮತಾಯಿ, ರೋಡಗಿಯ ಶಿವಲೀಂಗೇಶ್ವರ ಶ್ರೀಗಳು, ಕಡಬಗಾಂವ ಮತ್ತು ಅಳ್ಳಗಿ ಶ್ರೀಗಳು, ದಾನಮ್ಮದೇವಿ ಪ್ರವಚನ ನೀಡಿದ ತಡವಲಗಾದ ವೇದಮೂರ್ತಿ ಶಿವಾನಂದ ಶಾಸ್ತ್ರಿಗಳು ಸೇರಿದಂತೆ ಅನೇಕ ಪೂಜ್ಯರು, ರಮೇಶ ಗುತ್ತೆದಾರ, ಸತ್ತಾರ ಬಾಗವಾನ, ಶ್ರೀಕಾಂತ ಕುಡಿಗನೂರ, ಬಿ.ಎಂ.ಕಣ್ಣಿ ಗುರುಗಳು, ಪ್ರಭುಗೌಡ ಪಾಟೀಲರು, ವಿ.ಎಚ್.ಬಿರಾದಾರ, ಅನೀಲ ಜಮಾದಾರ,ಬಾಳು ಮುಳಜಿ, ಸಂತೋಷ ಗವಳಿ, ಮಲ್ಲಿಕಾರ್ಜುನ ಕಿವಡೆ, ಭೀಮಾಶಂಕರ ಮೂರಮನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಹಣಮಂತ ಹೊಟಗಿ, ಪ್ರದೀಪ ಮುರಗುಂಡಿ, ದೇವೆಂದ್ರ ಕುಂಬಾರ, ಸತೀಶ ಕುಂಬಾರ ಮತ್ತಿತರಿದ್ದರು.
” ಇಂದು ಮಠ ಮಾನ್ಯಗಳು ಸಾಮೂಹಿಕ ವಿವಾಹದಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರೀತಿ ಸಂಸ್ಕಾರ ಸಹಕಾರ ಸಹಬಾಳ್ವೆ ಆದ್ಯಾತ್ಮದ ಕಡೆಗೆ ಒಲವು ನೀಡುತ್ತಿದ್ದು ಅದಕ್ಕೆ ಪೂರಕವಾಗಿ ಯುವಕರು ಸ್ಪಂದಿಸಬೇಕಾಗಿದೆ.”
– ರಾಚೋಟೇಶ್ವರ ಶಿವಾಚಾರ್ಯರು
ತಡವಲಗಾ
” ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಯುವಕರು ದೇಶಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಸಂಸಾರಕ್ಕಾ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮಕ್ಕಳನ್ನು ಪಡೆದು, ಅಂತಹ ಸಂಸ್ಕಾರ ಮಕ್ಕಳಿಗೆ ನೀಡಬೇಕು. “
– ಅಭಿನವ ಮುರಗೇಂದ್ರ ಶಿವಾಚಾರ್ಯರು
ಶಿರಶ್ಯಾಡ

