ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ, ಮಾದರಿಯಾಗುವಂತೆ ಅರ್ಥಪೂರ್ಣವಾಗಿ ಆಚರಿಸೋಣ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮ್ಮೇಳನದಲ್ಲಿ ಪಕ್ಷಾತೀತವಾಗಿ ಹಾಗು ಜಾತ್ಯತೀತವಾಗಿ ಎಲ್ಲರೂ ಭಾಗವಹಿಸೋಣ. ನಿಮ್ಮೋಂದಿಗೆ ನಾವು ಇದ್ದೇವೆ ಯಾವುದೇ ಕಾರಣಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು ಎದೆಗುಂದದೆ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ನಾಡು-ನುಡಿ. ನೆಲ-ಜಲ. ಸಂಸ್ಕೃತಿ – ಪರಂಪರೆ ಕುರಿತು ಗೋಷ್ಠಿಗಳನ್ನು ಏರ್ಪಡಿಸುತ್ತೇವೆ. ಸ್ಥಳೀಯರಿಗೆ ಪ್ರಾಧ್ಯಾನ್ಯತೆ ನೀಡುತ್ತೇವೆ. ತಾಲ್ಲೂಕಿನ ಎಲ್ಲ ಸ್ವಾಮೀಜಿಗಳು ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸುತ್ತಾರೆ. ಎಲ್ಲರ ಸಹಕಾರ, ಸಲಹೆ ಅತ್ಯಗತ್ಯ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಡಿಸೆಂಬರ್ ೨೭ ಶುಕ್ರವಾರ ದಂದು ದೇವರಹಿಪ್ಪರಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಗೌರವಾನ್ವಿತ ಮುಖಂಡರಿಗೆ ಹಾಗು ಹಿರಿಯರೊಂದಿಗೆ ಸಮ್ಮೇಳನದ ಯಶಸ್ವಿಗೊಳಿಸಲು ವಿನಂತಿಸಲಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ಉದ್ಯಮಿಗಳಾದ ರಿಯಾಜ್ ಯಲಗಾರ, ಸಂಗನಗೌಡ ಬಿರಾದಾರ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ಅರುಣ ಕೋರವಾರ ಮಾತನಾಡಿದರು.
ಬಸವಶರಣ ಸಂಗಮ ಸೇವಾಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಎ.ಕೆ.ನಾಡಗೌಡ, ಹೈದರಸಾಬ್ ಮುಲ್ಲಾ, ಸೋಮಶೇಖರ ಹಿರೇಮಠ, ಪಿ.ಎಸ್.ಮಿಂಚನಾಳ, ಬಸವರಾಜ ತಾಳಿಕೋಟಿ, ಚಿನ್ಮಯ ಕೋರಿ, ಸಿದ್ದು ಮೇಲಿನಮನಿ, ಪ್ರಕಾಶ ಗುಡಿಮನಿ, ಪಿ.ಸಿ.ತಳಕೇರಿ, ಸಂಗನಗೌಡ ಪಾಟೀಲ, ಗುರುರಾಜ ಆಕಳವಾಡಿ, ರವೀಂದ್ರ ಕೊಟೀನ, ಸದಾಶಿವ ಗುಡಿಮನಿ, ಸೋಮು ದೇವೂರ, ಸಂಗನಬಸು ನಂದ್ಯಾಳ, ಕಾಶೀನಾಥ ವಡ್ಡೋಡಗಿ, ರಮೇಶ ಈಳಗೇರ, ಹುಸೇನ್ ಗೌಂಡಿ, ರಾವುತ ತಳಕೇರಿ, ಗೋಲ್ಲಾಳ ಬಿರಾದಾರ, ವೀರಯ್ಯ ವಿಭೂತಿಮಠ, ಸಂಪತ್ ಜಮಾದಾರ ಸೇರಿದಂತೆ ಹಲವರು ಇದ್ದರು.

