Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಿಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ರನ್ನು ಕಂಡು, ಜನೆವರಿ ತಿಂಗಳಲ್ಲಿ ಜರುಗುವ ತಿಕೋಟಾ ತಾಲೂಕ ಪ್ರಥಮ ಸಮ್ಮೇಳನ ಕುರಿತಂತೆ ಗುರುವಾರ ಸಮಾಲೋಚನೆ ಮಾಡಲಾಯಿತು.ಮುಂಬರುವ ದಿನಗಳಲ್ಲಿ ತಿಕೋಟಾದಲ್ಲಿ ನಡೆಸಲು ಉದ್ದೇಶಿಸಿರುವ ಪ್ರಥಮ ಕನ್ನಡ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಆಚರಿಸುವುದು ತಿಕೋಟಾ ತಾಲ್ಲೂಕಿನ ಎಲ್ಲಾ ಜನರ ಆಶಯವಾಗಬೇಕೆಂದರು.ಸಮ್ಮೇಳನದ ಯಶಸ್ಸಿಗೆ ತನು ಮನ ಧನ ಗಳಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು ಎಂದು ಕ ಸಾ ಪ ತಾಲ್ಲೂಕಾಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾದ ಪ ಪೂ ಬಾಬುರಾವ್ ಮಹಾರಾಜರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ಡಾ.ಎಂ.ಡಿ.ಮೇತ್ರಿಯವರನ್ನು ನೇಮಕಗೊಳಿಸಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ರಾಘವೇಂದ್ರ ಎಸ್.ಆರ್. ಅವರು ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಉಲ್ಲಂಘನೆ,ದೀನ ದುರ್ಬಲರು, ಜನಸಾಮಾನ್ಯರ ಮೇಲೆ ದೌರ್ಜನ್ಯ, ಜನಾಂಗೀಯ ನಿಂದನೆ, ಮಹಿಳೆ ಮತ್ತು ಮಕ್ಕಳ ಮೇಲೆ ಕಿರುಕುಳ, ಮಾಹಿತಿ ಹಕ್ಕು ಬಳಕೆದಾರರ ಮೇಲೆ ಹಲ್ಲೆ, ಸುಳ್ಳು ದೂರು, ದಬ್ಬಾಳಿಕೆಯಂತಹ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಗಳ ವಿರುದ್ಧ ಹೋರಾಟ ನಡೆಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಶ್ರಮಿಸುವಂತೆ ರಾಜ್ಯಾಧ್ಯಕ್ಷರು ನೇಮಕಾತಿಯಲ್ಲಿ ಸೂಚಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿಯಲ್ಲಿ ಪಂಚಮಸಾಲಿಗಳು ನ್ಯಾಯಯುತವಾಗಿ ಮೀಸಲಾತಿ ಪಡೆಯಲು ಶಾಂತಿಯುತವಾಗಿ ಮಾಡುತ್ತಿದ್ದ ಹೋರಾಟವನ್ನು ಪೊಲೀಸ್ ಶಕ್ತಿ ಪ್ರಯೋಗಿಸಿ ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಆಧುನಿಕ ಬ್ರಿಟೀಷರಂತೆ ವರ್ತಿಸಿರುವುದು ಖಂಡನೀಯವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಗೈದ ಜನವಿರೋಧಿ ರಾಜ್ಯ ಸರಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಅವರು ಆಗ್ರಹಿಸಿದರು.ಅವರು ನಗರದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯವನ್ನು ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಲಿಂಗಾಯತ ಪಂಚಮಸಾಲಿ ವಕೀಲರ ವೇದಿಕೆ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಇನ್ನೋರ್ವ ನ್ಯಾಯವಾದಿ ಬಸವರಾಜ ಯಾದವಾಡ ಅವರು ಮಾತನಾಡಿ, ಬೆಳಗಾವಿಯಲ್ಲಿ ಪಂಚಮಸಾಲಿ ಶ್ರೀಗಳು ಹಾಗೂ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯ ಪ್ರಕರಣವನ್ನು ಸುಪ್ರೀಮ್ ಕೋರ್ಟಿನ ಹಾಲಿ ನ್ಯಾಯಾದೀಶರ ನೇತೃತ್ವದಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ನೊಂದ…
ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಗತಿ ಪರಿಶೀಲಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪವನ ಮಾಲಪಾಟಿ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಜನರಿಗೆ ನರೇಗಾ ಯೋಜನೆಯಡಿ ನಿರಂತರವಾಗಿ ಉದ್ಯೋಗ ಒದಗಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಪವನಕುಮಾರ ಮಾಲಪಾಟಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಸ್ತುತ ಸಾಲಿನಲ್ಲಿ ವಿಜಯಪುರ ಜಿಲ್ಲೆಗೆ ೪೨.೦೦ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ೩೦.೭೦ಲಕ್ಷಗಳ ಮಾನವ ದಿನಗಳ ಸೃಜನೆಯಾಗಿದೆ. ಪ್ರಸ್ತುತ ವರ್ಷ ಮುಕ್ತಾಯಗೊಳ್ಳಲು ೪ ತಿಂಗಳು ಬಾಕಿ ಇದೆ. ಆದ್ದರಿಂದ ಬಾಕಿ ಉಳಿದ ಮಾನವ ದಿನಗಳನ್ನು ಗ್ರಾಮ ಪಂಚಾಯಿತಿ ಮತ್ತು ಅನುಷ್ಠಾನ ಇಲಾಖೆಗಳಾದ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆಗಳಿಂದ ನಿಗದಿಪಡಿಸಿದ ಕಾಲದಲ್ಲಿ ಮಾನವ ದಿನಗಳನ್ನು ಸೃಜನೆ ಮಾಡಬೇಕು. ಇದಕ್ಕೆ ಪೂರಕವಾಗಿ ಗ್ರಾಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿ.ಶಂಕರ ಢಾಕಪ್ಪ ಲಮಾಣಿಯವರ ಪುಣ್ಯಸ್ಮರಣಾರ್ಥವಾಗಿ ಪ್ರತಿವರ್ಷ ಕೊಡಮಾಡಲಾಗುವ “ಶಂಕರ ಶ್ರೀ” ದತ್ತಿ ನಿಧಿ ಪುರಸ್ಕಾರಕ್ಕೆ ಈ ವರ್ಷ ನಾಡಿನ ಶ್ರೇಷ್ಠ ಸಾಹಿತಿಗಳಾದ ಡಾ.ಬಾಬು ಕೃಷ್ಣಮೂರ್ತಿ ಯವರನ್ನು ಆಯ್ಕೆ ಮಾಡಲಾಗಿದೆ. “ಗೋರಬಾಯಿ ಟೋಳಿ(ರಿ) ಮಹಿಳಾ ಸಮೂಹ ಸಂಸ್ಥೆ” ವಿಜಯಪುರ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಸವನ ಬಾಗೇವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಡಿಸೆಂಬರ ೧೪ ರಂದು ಬಾಗೇವಾಡಿಯ ಶಂಕರಶ್ರೀ ವನದಲ್ಲಿ ಜರುಗಲಿದೆ. ಈ ಪ್ರಶಸ್ತಿಯೂ ಹತ್ತು ಸಾವಿರ ಗೌರವ ಧನ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.ಡಾ.ಬಾಬು ಕೃಷ್ಣಮೂರ್ತಿಯವರು ಕನ್ನಡ ಸಾಹಿತ್ಯದಲ್ಲಿ ಸುದಿರ್ಘ ಸೇವೆ ಸಲ್ಲಿಸಿದರು. ಸಾಹಿತ್ಯ, ಸಂಸ್ಕೃತಿಯಲ್ಲಿಯೂ ಅಪಾರ ಆಸಕ್ತಿಯುಳ್ಳವರು, ಜೊತೆಗೆ ಕ್ರಿಯಾಶೀಲ ಪ್ರತಿಭೆಗಳನ್ನು ಸೃಜನಶೀಲ ಮನಸ್ಸುಗಳನ್ನು ಪೋಷಿಸುತ್ತಾ ಬಂದವರು. ಕನ್ನಡ ಸಾಹಿತ್ಯ ದ ಮಹಾನ್ ಕನಸುಗಾರರಾಗಿ ಕನಸುಗಳನ್ನು ನನಸಾಗಿಸುವಲ್ಲಿ, ಅವರು ತೋರುವ ಕರ್ತವ್ಯ ನಿಷ್ಠೆ, ದೂರ ದೃಷ್ಟಿ ಸಾಹಿತ್ಯ ಸೇವಾ ಕರ್ತವ್ಯ ನಿಷ್ಠೆ , ಅನನ್ಯವಾದದು. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್,…
ಲೇಖನ- ಯೋಗೆಶ್ ಸೈನಸಾಕಳೆಪತ್ರಿಕೋದ್ಯಮ ವಿದ್ಯಾರ್ಥಿ,ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯವಿಜಯಪುರ ಉದಯರಶ್ಮಿ ದಿನಪತ್ರಿಕೆ ಸನಾತನ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ಮತ್ತು ಪ್ರತಿಯೊಂದು ಆಚರಣೆಗೂ ಹಾಗೂ ಉತ್ಸವಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಅದೇ ರೀತಿ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಈ ಮಹಾಕುಂಭ ಮೇಳವೂ 12 ವರ್ಷಗಳಿಗೊಮ್ಮೆ ನಡೆಯುವ ಪ್ರಪಂಚದಾದ್ಯಂತ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿದೆ, ಈ ಮೇಳವೂ ಸಮುದ್ರ ಮಂಥನದ ಧಾರ್ಮಿಕ ಪೌರಾಣಿಕ ಕಥೆಗಳನ್ನು ಒಳಗೊಂಡಿದೆ. ಈ ಮೇಳ ದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪಗಳು ನಶಿಸಿ ಹೋಗುತ್ತವೆ ಎಂದು ನಂಬಲಾಗುತ್ತದೆ .ಈ ಮಹಾಕುಂಭ ಮೇಳವು 2025 ರಲ್ಲಿ ಜನವರಿ 13 ರಿಂದ ಪ್ರಾರಂಭಗೊಂಡು ಫೆಬ್ರುವರಿ 26 ಕ್ಕೆ ಅಂತ್ಯಗೊಳ್ಳುತ್ತದೆ. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಮಹಾಕುಂಭವು ಪೌಷ ಪೂರ್ಣಿಮೆಯ ದಿನದಂದು ಪ್ರಾರಂಭಗೊಂಡು ಮಹಾಶಿವರಾತ್ರಿ ಯೊಂದಿಗೆ ಅಂತ್ಯಗೊಳ್ಳುತ್ತದೆ. ಈ ಮಹಾಕುಂಭ ಮೇಳವೂ 45 ದಿನಗಳ ಕಾಲ ನಡೆಯಲಿದೆ.ಈ ಮೇಳಕ್ಕೆ ಈ ವರ್ಷ ವಿದೇಶಗಳಿಂದ ಮತ್ತು ಭಾರತದಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.…
ಆಲಮೇಲ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಿ.ಕೆ.ಎಚ್.ಶಾಸ್ತ್ರೀ ಉದಯರಶ್ಮಿ ದಿನಪತ್ರಿಕೆ ಗದಗ: ವಿಜಯಪುರ ಜಿಲ್ಲಾ ಆಲಮೇಲದಲ್ಲಿ ದಿನಾಂಕ ೧೪ ರಂದು ನಡೆಯಲಿರುವ ಆಲಮೇಲ ತಾಲೂಕಾ ೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ ಕೆ ಎಚ್ ಶಾಸ್ತ್ರೀ (ಕಡಣಿ) ಇವರನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಯಿತು.ಗದುಗಿನ ವಿಶ್ವಪ್ರಸಿದ್ದ ವಿರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಸನ್ನಿಧಿಯಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತ ಸಾಹಿತ್ಯ ಕಥಾ ಕೀರ್ತನ ಪುರಾಣ ಪ್ರವಚನ ಗಮಕ ವಾಚನ ಅಧ್ಯಯನ ಮಾಡಿ, ಸಂಗೀತದಲ್ಲಿ ಕರ್ನಾಟಕ ಸರಕಾರದ ಸಿನೀಯರ ಗ್ರೇಡ್ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಆಕಾಶವಾಣಿ ದೂರದರ್ಶನ ಕಲಾವಿದರಾಗಿ ಮಾನ್ಯತೆ ಪಡೆದವರು. ಕರ್ನಾಟಕ ಆಂದ್ರ ಪ್ರದೇಶ ಗೋವಾ ರಾಜ್ಯಗಳಲ್ಲಿ ಪ್ರವಚನ ನೀಡಿದ್ದಾರೆ ಈಗಲೂ ನೀಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಕ್ಕುಂಡಿ ಉತ್ಸವ ಹಂಪಿ ಉತ್ಸವ ಗಳಲ್ಲಿ ಕಥಾ ಈರ್ತನೆ ಗಮಕ ವಾಚನ ತತ್ವಪದ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸುಮಾರು ೨೦೦ ಭಕ್ತಿಗೀತೆ…
ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಸಮಗ್ರ ನಿರ್ವಹಣೆ ಕುರಿತು ರೈತ ಮತ್ತು ವಿಜ್ಞಾನಿಗಳ ಸಂವಾದ ಮತ್ತು ಚರ್ಚಾಗೋಷ್ಠಿ ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಶೇಂಗಾ, ಜೋಳ, ಕಡಲೆ,ಗೋದಿ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಲಿಂಬೆ, ಬದನೆ ಮತ್ತು ಮೆಣಸಿನಕಾಯಿ ಬೆಳೆಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ವಿಜ್ಞಾನಿ ಡಾ. ಹೀನಾ ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಸಮಗ್ರ ನಿರ್ವಹಣೆ ಕುರಿತು ರೈತ ಮತ್ತು ವಿಜ್ಞಾನಿಗಳ ಸಂವಾದ ಮತ್ತು ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು.ಸೂಕ್ತ ಸಮಯದಲ್ಲಿ ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದೆ ಆದ್ದಲ್ಲಿ, ರೈತರು ತಾವು ಬೆಳೆಯುವ ಬೆಳೆಯ ಉತ್ಪಾದನಾ ಖರ್ಚನ್ನು ಗಣನೀಯ ಕಡಿಮೆ ಮಾಡವುದಲ್ಲದೇ, ಉತ್ತಮ ಇಳುವರಿಯೊಂದಿಗೆ ಅಧಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಡಾ. ಶಿವಶಂಕರಮೂರ್ತಿ ಮಾತನಾಡಿ, ಹಿಂಗಾರು ಬೆಳೆಗಳ ರೋಗ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಭವ್ಯ ಭಾರತದ ಭವಿಷತ್ತಿನ ಸೃಷ್ಟಿಕರ್ತರು ನಾವೇ ಕಾನೂನುಗಳ ಪರಿಮಿತಿಯಲ್ಲಿ ಹಕ್ಕುಗಳನ್ನು ಅನುಭವಿಸಬೇಕು ಈ ಬಗ್ಗೆ ಜ್ಞಾನವನ್ನು ಅರಿಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾದೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಕೋಟೆಪ್ಪ ಕಾಂಬಳೆ ಹೇಳಿದರು.ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್ನೆಸ್ಸೆಸ್ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಕಿರಿಯ ನ್ಯಾಯಾದೀಶ ಸುನೀಲಕುಮಾರ ಎಂ.ಎಸ್ ಮಾತನಾಡಿ ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರು, ಉಪನ್ಯಾಸ ನೀಡಿದ ವಿ.ಎಸ್.ಹಂಜಗಿ ‘ವಿಶ್ವದಲ್ಲಿ ಕ್ರಾಂತಿಗಳ ಮೂಲಕ ಹಕ್ಕುಗಳನ್ನು ಪಡೆದು ಪ್ರತಿಯೊಬ್ಬರು ಆತ್ಮಗೌರವದಿಂದ ಬದುಕಲು ಹಕ್ಕುಗಳು ಅವಶ್ಯಕ ಎಂದರು.ಅಧ್ಯಕ್ಷೆತಯನ್ನು ಪ್ರಾಚಾರ್ಯ ಪ್ರೊ.ಆರ್.ಎಚ್. ರಮೇಶ, ಪ್ರಾಸ್ತಾವಿಕವಾಗಿ ರಾಜ್ಯಶಾಸ್ತçದ ಮುಖ್ಯಸ್ಥ ಪ್ರೊ.ರವಿಕುಮಾರ ಅರಳಿ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪಿ.ಎಸ್.ದೇವರ ಪ್ರೊ. ನಂದಕುಮಾರ ಬಿರಾದಾರ ಮಾತನಾಡಿದರು.ವಕೀಲರ ಸಂಘದ ಉಪಾಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ಆಗಸ್ಟ್ ಕ್ರಾಂತಿ ಟ್ರಸ್ಟ್ ಸಹಯೋಗದಲ್ಲಿ ‘ಮಹಾತ್ಮಾ ಗಾಂಧಿ ಮತ್ತು ಭಾರತೀಯ ಮಹಿಳೆ’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮ ಇದೇ ದಿ.೧೩ ರಂದು ಮಧ್ಯಾಹ್ನ ೧೨.೦೦ ಗಂಟೆಗೆ ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಜರುಗಲಿದೆ.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ಜಿ.ಎಸ್.ಎಸ್ ಕಾಲೇಜಿನ ಸೇವಾನಿವೃತ್ತ ಪ್ರಾಂಶುಪಾಲ ಆನಂದ ಕೃಷ್ಣಾ ಮೆಣಸೆ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ ತುಳಸಿಮಾಲ ವಹಿಸಲಿದ್ದಾರೆ. ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ನಗರದ ಆಗಸ್ಟ್ ಕ್ರಾಂತಿ ಟ್ರಸ್ಟ್ ಸದಸ್ಯೆ ರೇವತಿ ಕಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನಗರದ ಗಾಂಧಿ ಭವನ ನಿರ್ವಹಣಾ ಸಮಿತಿ ಸದಸ್ಯ ಹಾಗೂ ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ್, ಬೆಂಗಳೂರಿನ ಗಾಂಧಿವಾದಿ ಅಪ್ಪಾಸಾಹೇಬ ಯರನಾಳ ಉಪಸ್ಥಿತರಿರಲಿದ್ದಾರೆ ಎಂದು ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಅಮರನಾಥ ಪ್ರಜಾಪತಿ ಪತ್ರಿಕಾ ಪ್ರಕಟಣೆಯಲ್ಲಿ…
