ಆಲಮೇಲ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಿ.ಕೆ.ಎಚ್.ಶಾಸ್ತ್ರೀ
ಉದಯರಶ್ಮಿ ದಿನಪತ್ರಿಕೆ
ಗದಗ: ವಿಜಯಪುರ ಜಿಲ್ಲಾ ಆಲಮೇಲದಲ್ಲಿ ದಿನಾಂಕ ೧೪ ರಂದು ನಡೆಯಲಿರುವ ಆಲಮೇಲ ತಾಲೂಕಾ ೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ ಕೆ ಎಚ್ ಶಾಸ್ತ್ರೀ (ಕಡಣಿ) ಇವರನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಯಿತು.
ಗದುಗಿನ ವಿಶ್ವಪ್ರಸಿದ್ದ ವಿರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಸನ್ನಿಧಿಯಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತ ಸಾಹಿತ್ಯ ಕಥಾ ಕೀರ್ತನ ಪುರಾಣ ಪ್ರವಚನ ಗಮಕ ವಾಚನ ಅಧ್ಯಯನ ಮಾಡಿ, ಸಂಗೀತದಲ್ಲಿ ಕರ್ನಾಟಕ ಸರಕಾರದ ಸಿನೀಯರ ಗ್ರೇಡ್ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಆಕಾಶವಾಣಿ ದೂರದರ್ಶನ ಕಲಾವಿದರಾಗಿ ಮಾನ್ಯತೆ ಪಡೆದವರು. ಕರ್ನಾಟಕ ಆಂದ್ರ ಪ್ರದೇಶ ಗೋವಾ ರಾಜ್ಯಗಳಲ್ಲಿ ಪ್ರವಚನ ನೀಡಿದ್ದಾರೆ ಈಗಲೂ ನೀಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಕ್ಕುಂಡಿ ಉತ್ಸವ ಹಂಪಿ ಉತ್ಸವ ಗಳಲ್ಲಿ ಕಥಾ ಈರ್ತನೆ ಗಮಕ ವಾಚನ ತತ್ವಪದ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸುಮಾರು ೨೦೦ ಭಕ್ತಿಗೀತೆ ಹಾಗೂ ಭಾವಗೀತೆಗಳು ಜಾನಪದ ಮತ್ತು ಕೆಲವು ವಚನಗಳನ್ನು ಬರೆದಿದ್ದಾರೆ ೨೫ ಕ್ಕೂ ಹೆಚ್ಚು ನೂತನ ಶರಣರ ಕಥಾ ಕೀರ್ತನ ಗಳು ರಚಿಸಿದ್ದಾರೆ ಇವರ ಅನೇಕ ಕಥಾಕೀರ್ತನೆಗಳ ಧ್ವನಿ ಸುರುಳಿಗಳು ಹೊರಬಂದಿವೆ. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇದುವರೆಗೂ ೧೧ ಕೃತಿಗಳು ಬೆಳಕು ಕಂಡಿವೆ. ಇವರು ರಚಿಸಿದ ಅನೇಕ ಗೀತೆಗಳು ಜಿ.ವಿ. ಅತ್ರಿ, ಶಂಕರ ಶಾನಭಾಗ ರತ್ನಮಾಲಾ ಪ್ರಕಾಶ, ಮಂಜುಳಾ ಗುರುರಾಜ, ನರಸಿಂಹ ನಾಯಕ ಪುತ್ತೂರು ಪಂ. ವೆಂಕಟೇಶ ಆಲ್ಕೋಡ ಮೊದಲಾದ ಖ್ಯಾತ ನಾಮರು ಇವರ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವರ ಇವರ ಅನೇಕ ಗೀತೆಗಳು ಮತ್ತು ಕಥಾ ಕಿರ್ತನೆಗಳು ಹೆಸರಾಂತ ಧ್ವನಿ ಸುರಳಿ ಕಂಪನಿಗಳು ಬಳಸಿಕೊಂಡಿವೆ ಕಲಾ ವಿಕಾಸ ಪರಿಷತ್ ಮೂಲಕ ದೇಶದಾದ್ಯಂತ ಸಂಗೀತ ನೃತ್ಯ ಕಲಾ ಸಮ್ಮೇಳನಗಳು ಆಯೋಜನೆ ಮಾಡಿದ್ದಾರೆ ಈಗಲೂ ಮಾಡುತಿದ್ದಾರೆ. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಮೂಲಕ ಪುಟ್ಟರಾಜರ ಸಾಹಿತ್ಯ ಸಮ್ಮೇಳನ, ವಚನ ಸಮ್ಮೇಳನ ಸಾಹಿತ್ಯೋತ್ಸವ ಮತ್ತು ಭಕ್ತಿಗೀತೆ ಗೋಷ್ಠಿ ಆಯೋಜಿತ್ತಾ ಬಂದಿದ್ದಾರೆ ಇವರು ಸಾಹಿತ್ಯ ಸಂಗೀತ ಸಂಸ್ಕೃತಿ ಸೇವೆಯನ್ನು ಮತ್ತು ಧಾರ್ಮಿಕ ಸಾಮಾಜಿ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಸಾಧನೆ ಪರಿಚಯಿಸುವ ಪ್ರವಚನ ಪಟು ಪುಸ್ತಕ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿದೆ. ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಇವರ ಸಾಧನೆಯನ್ನು ನೋಟ ಪ್ರಸಾರವಾಗಿದೆ.
ಮ ನಿ ಪ್ರ ಬಸವರಾಜ ಮಹಾಸ್ವಾಮಿಗಳು ಬೆಳ್ಳಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ ಬಿ ಹಿರೇಮಠ ಜಾನಪದ ವಿದ್ವಾಂಸ ಡಾ. ಸಿದ್ದಣ್ಣ ಜಕಬಾಳ, ಶ್ರೀಮತಿ ಲಲಿತಾ ಸಿ ಕೆರಿಮನಿ. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ. ಶಿವಾನಂದ ಗಿಡ್ನಂದಿ ಡಾ. ದತ್ತಪ್ರಸನ್ನ ಪಾಟೀಲ ಡಿ ಎಸ್ ಬಾಪುರಿ ಮೊದಲಾದವರು ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಸಮ್ಮೇಳನ ಸರ್ವಾಧ್ಯಕ್ಷರಿಗೆ ಶುಭ ಹಾರೈಸಿ ಸೂಕ್ತ ಆಯ್ಕೆ ಮಾಡಿದ ಆಲಮೇಲ ತಾಲೂಕಾ ಕಸಾಪ ಮತ್ತು ಜಿಲ್ಲಾ ಕಸಾಪ ಪದಾಧಿಕಾರಿಗಳಿಗೆ ಅಭಿನಂದಿಸಿದರು

