ಲೇಖನ- ಯೋಗೆಶ್ ಸೈನಸಾಕಳೆಪತ್ರಿಕೋದ್ಯಮ ವಿದ್ಯಾರ್ಥಿ,ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಸನಾತನ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ಮತ್ತು ಪ್ರತಿಯೊಂದು ಆಚರಣೆಗೂ ಹಾಗೂ ಉತ್ಸವಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಅದೇ ರೀತಿ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಈ ಮಹಾಕುಂಭ ಮೇಳವೂ 12 ವರ್ಷಗಳಿಗೊಮ್ಮೆ ನಡೆಯುವ ಪ್ರಪಂಚದಾದ್ಯಂತ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿದೆ, ಈ ಮೇಳವೂ ಸಮುದ್ರ ಮಂಥನದ ಧಾರ್ಮಿಕ ಪೌರಾಣಿಕ ಕಥೆಗಳನ್ನು ಒಳಗೊಂಡಿದೆ. ಈ ಮೇಳ ದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪಗಳು ನಶಿಸಿ ಹೋಗುತ್ತವೆ ಎಂದು ನಂಬಲಾಗುತ್ತದೆ .
ಈ ಮಹಾಕುಂಭ ಮೇಳವು 2025 ರಲ್ಲಿ ಜನವರಿ 13 ರಿಂದ ಪ್ರಾರಂಭಗೊಂಡು ಫೆಬ್ರುವರಿ 26 ಕ್ಕೆ ಅಂತ್ಯಗೊಳ್ಳುತ್ತದೆ. ಹಿಂದೂ ಕ್ಯಾಲೆಂಡರ್ ನ ಪ್ರಕಾರ ಮಹಾಕುಂಭವು ಪೌಷ ಪೂರ್ಣಿಮೆಯ ದಿನದಂದು ಪ್ರಾರಂಭಗೊಂಡು ಮಹಾಶಿವರಾತ್ರಿ ಯೊಂದಿಗೆ ಅಂತ್ಯಗೊಳ್ಳುತ್ತದೆ. ಈ ಮಹಾಕುಂಭ ಮೇಳವೂ 45 ದಿನಗಳ ಕಾಲ ನಡೆಯಲಿದೆ.ಈ ಮೇಳಕ್ಕೆ ಈ ವರ್ಷ ವಿದೇಶಗಳಿಂದ ಮತ್ತು ಭಾರತದಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಈ ಮೇಳವೂ ಉತ್ತರಪ್ರದೇಶದ ಪ್ರಯಾಗರಾಜ ನಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಅತಿ ದೊಡ್ಡ ಉತ್ಸವವಾಗಿದೆ. ಈ ಮೇಳದಲ್ಲಿ ದೇಶ – ವಿದೇಶಗಳಿಂದ ಸಂತರು, ಯೋಗಿಗಳು ಆಗಮಿಸಲಿದ್ದಾರೆ.
ಈ ಧಾರ್ಮಿಕ ಮಹಾಕುಂಭ ಮೇಳಕ್ಕೆ ಸನಾತನ ಧರ್ಮದಲ್ಲಿ ಯಾಕೆ ಇಷ್ಟು ಮಹತ್ವವಿದೆಯೆಂದರೆ ದೇವತೆಗಳು ಮತ್ತು ರಾಕ್ಷಸರು ಒಟ್ಟಾರೆಯಾಗಿ ಸಮುದ್ರ ಮಂಥನ ಮಾಡಿದಾಗ ಅಮೃತ ಹೊಂದಿರುವ ಮಹಾ ಕಳಶವೂ ಹೊರಹೊಮ್ಮಿಯಿತು. ಆ ಕಳಶದಲ್ಲಿನ ಅಮೃತ ಪಡೆಯುವ ಗೋಸ್ಕರ ದೇವತೆಗಳು ಮತ್ತು ರಾಕ್ಷಸರು ಹೋರಾಡಿದರು. ಇದರಿಂದ ಆ ಕಳಶದಲ್ಲಿರುವ ಅಮೃತದ 4 ಹನಿಗಳು 4 ಸ್ಥಳದಲ್ಲಿ ಬಿದ್ದವು. ಆ ಸ್ಥಳಗಳು ಪ್ರಯಗರಾಜ, ಹರಿದ್ವಾರ , ನಾಸಿಕ , ಉಜೈನ ಗಳಾಗಿವೆ. ಆದ ಕಾರಣ ಈ ಕುಂಭ ಮೇಳ ವನ್ನು ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಿಂದಿನಿಂದಲೂ ಬಂದಿದೆ. ಆದರೆ ಈ ಮಹಾಕುಂಭ ಮೇಳ ದಲ್ಲಿ ಸ್ನಾನ ಮಾಡಿದರೆ ವ್ಯಕ್ತಿಯು ದೈಹಿಕ ಮಾತ್ರವಲ್ಲ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಮಹಾಕುಂಭವೂ ಶಾಹಿ ಸ್ನಾನದ ಕೆಲವೊಂದು ಪ್ರಮುಖ ದಿನಾಂಕಗಳನ್ನು ಒಳಗೊಂಡಿದೆ. ಅವುಗಳು 13 ಜನವರಿ , 14 ಜನವರಿ , 29 ಜನವರಿ , 3 ಫೆಬ್ರುವರಿ , 12 ಫೆಬ್ರುವರಿ , ಮತ್ತು 26 ಫೆಬ್ರುವರಿ ಗಳಾಗಿವೆ. ಕುಂಭ ಮೇಳದ ಸಂದರ್ಭದಲ್ಲಿ ಗಂಗಾ , ಯಮುನಾ , ಗೋದಾವರಿ , ಮತ್ತು ಶಿಪ್ರಾ ಮುಂತಾದ ಪವಿತ್ರ ನದಿಗಳ ನೀರು ಅಮೃತಕ್ಕೆ ಸಮಾನವಾಗುತ್ತದೆ ಎಂದು ನಂಬಲಾಗಿದೆ . 3 ವರ್ಷಗಳಿಗೊಮ್ಮೆ ಕುಂಭ ಮೇಳ ಮತ್ತು 6 ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ಮತ್ತು 12 ವರ್ಷಗಳಿಗೊಮ್ಮೆ ಮಹಾಕುಂಭ
ಮೇಳವನ್ನು ಆಚರಿಸಲಾಗುತ್ತದೆ . ಈ ಹಿಂದೆ 2013 ರಲ್ಲಿ ಮಹಾಕುಂಭ ಮೇಳವನ್ನು ಆಚರಿಸಲಾಗಿತ್ತು.
ಈ ಮಹಾ ಕುಂಭಮೇಳದಲ್ಲಿ ಎಲ್ಲರ ಭಾಗವಹಿಸಬೇಕು ಏಕೆಂದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ಆಧ್ಯಾತ್ಮಿಕ ಚಿಂತನೆಗಳನ್ನು ಆಲಿಸುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಈ ಮಹಾಕುಂಭ ಮೇಳವೂ ನಮ್ಮ ಸನಾತನ ಧರ್ಮದ ಇತಿಹಾಸವನ್ನು
ಪುನರಾವಲಂಬಿಸುತ್ತದೆ. ಇದರಿಂದ ನಮ್ಮ ಸನಾತನ ಧರ್ಮದ ಬಗ್ಗೆ ನಮಗೆ ಇನ್ನೂ ತಿಳಿಯಲೂ ಸಿಗುತ್ತದೆ. ಈ ಮೇಳವು ಮನುಷ್ಯನ ಜೀವನವನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬದಲಾಯಿಸಲು ಮತ್ತು ಮನುಷ್ಯನ ಗುರಿಗಳನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ.
ಈ ಮಹಾಕುಂಭ ಮೇಳದಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿ ಬಗ್ಗೆ ನಮಗೆ ಗೊತ್ತಾಗುತ್ತದೆ ಮತ್ತು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ನಾವೂ ಏನು ಮಾಡಬೇಕು ಎಂಬುದು ಕೂಡಾ ಗೊತ್ತಾಗುತ್ತದೆ.
ಹಾಗೂ ನಮ್ಮ ದೇಶದ ಸಂಸ್ಕೃತಿಯನ್ನು ನಾವು ಕಾಪಾಡಿಕೊಳ್ಳಲು ಯಾವ ಕ್ರಮ ಕೈಗೊಂಡರೆ ಸೂಕ್ತ ಎಂಬುದು ಕೂಡಾ ಅರಿವಿಗೆ ಬರುತ್ತದೆ . ಒಟ್ಟಾರೆಯಾಗಿ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಪ್ರಮುಖವಾಗಿದ್ದು. ಆದ್ದರಿಂದ ನಾವೆಲ್ಲರೂ ಈ ಮೇಳದಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಅರಿತು ನಮ್ಮ ಸಂಸ್ಕೃತಿಯನ್ನು ಇನ್ನೂ ಬಲಿಷ್ಠವಾಗಿ ಕಟ್ಟುವುದಾಗಿದೆ.