ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಿಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ರನ್ನು ಕಂಡು, ಜನೆವರಿ ತಿಂಗಳಲ್ಲಿ ಜರುಗುವ ತಿಕೋಟಾ ತಾಲೂಕ ಪ್ರಥಮ ಸಮ್ಮೇಳನ ಕುರಿತಂತೆ ಗುರುವಾರ ಸಮಾಲೋಚನೆ ಮಾಡಲಾಯಿತು.
ಮುಂಬರುವ ದಿನಗಳಲ್ಲಿ ತಿಕೋಟಾದಲ್ಲಿ ನಡೆಸಲು ಉದ್ದೇಶಿಸಿರುವ ಪ್ರಥಮ ಕನ್ನಡ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಆಚರಿಸುವುದು ತಿಕೋಟಾ ತಾಲ್ಲೂಕಿನ ಎಲ್ಲಾ ಜನರ ಆಶಯವಾಗಬೇಕೆಂದರು.
ಸಮ್ಮೇಳನದ ಯಶಸ್ಸಿಗೆ ತನು ಮನ ಧನ ಗಳಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು ಎಂದು ಕ ಸಾ ಪ ತಾಲ್ಲೂಕಾಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾದ ಪ ಪೂ ಬಾಬುರಾವ್ ಮಹಾರಾಜರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

