Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಡಿ.19 ಹಾಗೂ 20ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.19 ರಂದು ಜಿಲ್ಲೆಗೆ ಆಗಮಿಸಿ, ಜಿಲ್ಲಾ ಮಟ್ಟದ ಮಕ್ಕಳ ಅಹವಾಲು ಮತ್ತು ಸಂವಾದ ಕಾರ್ಯಕ್ರಮ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಮಕ್ಕಳಿಗಿರುವ ಕಾನೂನುಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಡಿ.20 ರಂದು ಇಂಡಿ ತಾಲೂಕಿನ ಅಥರ್ಗಾದಲ್ಲಿ ಪಿಯುಸಿ ಮಕ್ಕಳಿಗೆ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರದ ತನು ಫೌಂಡೇಶನ್ ಕೊಡ ಮಾಡುವ ರಾಜ್ಯಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಪಟ್ಟಣದ ಸಾಮಾಜಿಕ ಹೋರಾಟಗಾರಮುತ್ತು ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ.ಇದೇ ಡಿಸೆಂಬರ್ 15 ರಂದು ಸಂಜೆ 4 ಗಂಟೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.ಈ ವೇಳೆ ಲೇಖಕ ಮಂಜುನಾಥ್ ಜುನಗೊಂಡ ವಿರಚಿತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ.ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮುತ್ತು ಪಟ್ನಶೆಟ್ಟಿಯವರಿಗೆ ಶಾಸಕ ಅಶೋಕ್ ಮನಗೂಳಿ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ ಮತ್ತು ಅವ್ವ ಫೌಂಡೇಶನ್, ರಾಗ ರಂಜಿನಿ ಸಂಗೀತ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾಯಿತ ವಾರ್ಡ ಸದಸ್ಯರುಗಳನ್ನು ಆಧರಿಸಿ ಷರತ್ತುಗಳನ್ನೊಳಗೊಂಡು ಪಾಲಿಕೆಯ ೩೫ ವಾರ್ಡಗಳಿಗೆ ವಾರ್ಡ ಸಮಿತಿ ರಚಿಸಲಾಗುತ್ತಿದ್ದು, ಆಸಕ್ತ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ವಾರ್ಡ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯರು ವಾರ್ಡ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದುದ, ಅವರ ಪೈಕಿ ಕನಿಷ್ಠ ಇಬ್ಬರು ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು. ಕನಿಷ್ಠ ಮೂರು ಜನ ಮಹಿಳಾ ಸದಸ್ಯರು ಹಾಗೂ ನಿವಾಸಿ ಕ್ಷೇಮಾಭಿವೃದ್ದಿ ಸಂಘಗಳನ್ನು ಪ್ರತಿನಿಧಿಸುವಂತಹ ಕನಿಷ್ಠ ಇಬ್ಬರು ಸದಸ್ಯರಿರುತ್ತಾರೆ.ವಾರ್ಡ ಸಮಿತಿ ಸದಸ್ಯನಾಗಿ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಾರ್ಡ ವ್ಯಾಪ್ತಿಯಲ್ಲಿ ಮತದಾರರಾಗಿರುವ ಮತದಾರ ಪಟ್ಟಿಯ ಪ್ರತಿ ಹಾಗೂ ಚುನಾವಣಾ ಗುರುತಿನ ಚೀಟಿ ನಕಲು ಪ್ರತಿಯೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯ ಪರಿಷತ್ ಶಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ : ೨೪-೧೨-೨೦೨೪ರೊಳಗಾಗಿ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಪರಿಷತ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು…

Read More

ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿಪ್ರಹಾರ ಹಾಗೂ ಬಂಧನ ಮಾಡಿರುವ ಕ್ರಮಕ್ಕೆ ಖಂಡನೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟಗಾರರನ್ನು ಬಂಧಿಸಿ ಲಾಠಿಪ್ರಹಾರ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ತಾಲ್ಲೂಕು ಪಂಚಮಸಾಲಿ ಸಮುದಾಯದಿಂದ ರಾಷ್ಟ್ರೀಯ ಹೆದ್ದಾರಿ-೫೦ನ್ನು ತಡೆದು ಪ್ರತಿಭಟಿಸಲಾಯಿತು.ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ಸಮುದಾಯದವರು ಪಾದಯಾತ್ರೆಯ ಮೂಲಕ ಹೊರಟು ಪತ್ತಾರಕಟ್ಟಿ, ಮೇನ್‌ಬಜಾರ್, ಮೊಹರೆ ಹಣಮಂತ್ರಾಯ ವೃತ್ತ, ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ತೆರಳಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಕುಳಿತು ಪ್ರತಿಭಟನೆಗೆ ಇಳಿದರು.ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಾಹೇಬಗೌಡ ದಾನಗೊಂಡ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಮಾತನಾಡಿ, ಸರ್ಕಾರದ ಕ್ರಮವನ್ನು ಖಂಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಮಾತನಾಡಿ, ರಾಜ್ಯ ಸರ್ಕಾರದ ಕ್ರಮದ ಕುರಿತು ಸಮುದಾಯದ ಅಭಿಪ್ರಾಯವನ್ನು ಜಿಲ್ಲಾಡಳಿತಕ್ಕೆ ತಲುಪಿಸಲಾಗುವುದು ಎಂದು ಭರವಸೆ ನೀಡಿದಾಗ ಧರಣಿ ಕೊನೆಗೊಂಡಿತು.ಪಂಚಮಸಾಲಿ ಸಮುದಾಯದ ತಾಲ್ಲೂಕು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವಾತಂತ್ರ್ಯ ಪೂರ್ವ ಅಹಾರ ಉತ್ಪಾದನೆ ಕಡಿಮೆ ಇತ್ತು. ನಂತರದ ಸಮಯದಲ್ಲಿ ೫೦ ಕೋಟಿಗೆ ಜನಸಂಖ್ಯೆಗೆ ಸಾಲುವಷ್ಟು ಇತ್ತು, ೧೯೬೦ ರಲ್ಲಿ ಹಸಿರು ಕ್ರಾಂತಿಯ ನಿಮಿತ್ಯ ಅಹಾರ ಉತ್ಪಾದನೆ ಹೆಚ್ಚಾಯಿತು. ಈಗ ೧೪೪ ಕೋಟಿ ಜನರಿಗೆ ಸಾಲುವಷ್ಟು ಆಹಾರ ಉತ್ಪಾದನೆ ಮಾಡಬೇಕಾಗಿದೆ ಎಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ.ಬೆಳ್ಳಿ ಹೇಳಿದರು.ಪಟ್ಟಣದ ಆರ್.ಎಂ. ಶಹಾ ಶಾಲೆಯಲ್ಲಿ ಉತ್ಥಾನ ಮಹೋತ್ಸವ ನಿಮಿತ್ಯ ನಡೆದ ಕೃಷಿ ಮೇಳ ಮತ್ತು ತಾಲೂಕಿನ ಕೃಷಿಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಸಿರು ಕ್ರಾಂತಿಯ ನಂತರ ದೇಶದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚಾಗಿ ಕೃಷಿಯಲ್ಲಿ ವಾತಾವರಣ ಕಲುಷಿತವಾಗುತ್ತಿದೆ. ರೈತರು ಆಧುನಿಕ ಕೃಷಿ ಪದ್ದತಿಯಲ್ಲಿ ಹೆಚ್ಚಿನ ಇಳುವರಿ ಮತ್ತು ಅಧಿಕ ಹಣ ಪಡೆಯುವ ಕೃಷಿಯತ್ತ ಒಲುವು ತೋರುತ್ತಿದ್ದಾರೆ.ಶೂನ್ಯ ಬಂಡವಾಳ, ಸಾವಯುವ ಕೃಷಿ, ಸುಸ್ಥಿರ ಕೃಷಿ ಯತ್ತ ಪ್ರಯತ್ನಿಸಿ ಜನರು ರೈತರು ಉತ್ತಮ ಆರೋಗ್ಯದ ಕಡೆಗೂ ಗಮನ ನೀಡಿ ಹೆಚ್ಚು ರಸಾಯನಿಕ ಔಷದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ “೨ಅ ಮೀಸಲಾತಿಗೆ” ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ವಿವಿಧೆಡೆ ಟೈರ್‌ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಮಾಜ ಬಾಂಧವರು ಸಿದ್ದರಾಮಯ್ಯನವರ ಭಾವಚಿತ್ರವನ್ನು ಸುಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಸಮಾಧಾನಕರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಮುಖ್ಯಮಂತ್ರಿಗಳು ಲಾಟಿ ಪ್ರಹಾರ ನಡೆಸಿ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡಿದ್ದಾರೆ, ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಮೇಲೆ ಮತ್ತು ಪೊಲೀಸ್ ಆಯುಕ್ತರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದರು.ಬಾಕ್ಸ-ದಶಕಗಳಿಂದ ಮೀಸಲಾತಿ ಹೋರಾಟ ನಡೆಯುತ್ತಿದೆ. ಯಾವ ಸರಕಾರವೂ ನಮ್ಮ ಹೋರಾಟಕ್ಕೆ ಇಷ್ಟು ಕಡೆಗಣನೆ ಮಾಡಿರಲಿಲ್ಲ. ಈ ಸರಕಾರ ಲಾಠೀ ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದ್ದರೂ ಸಹಿತ ಕಾಂಗ್ರೇಸ್…

Read More

ಬೀಜೋತ್ಪಾದನೆ ಕೃಷಿ ಬಗೆಗಿನ ರೈತ ತರಬೇತಿ ಕಾರ್ಯಕ್ರಮ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮುಂಗಡ ಬೇಡಿಕೆ ಆಧಾರದ ಮೇಲೆ ಇತ್ತೀಚಿಗೆ ಬಿಡುಗಡೆಯಾದ ತಳಿವರ್ಧಕ ಬೀಜಗಳಿಗೆ ಪ್ರಾಧಾನ್ಯತೆ ನೀಡಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೀಜೋತ್ಪಾದನೆ ಕೃಷಿಯಲ್ಲಿ ಪರಿಣಿತಿ ಸಾಧಿಸಿದಲ್ಲಿ ಹೆಚ್ಚುವರಿ ಆದಾಯ ಖಚಿತವೆಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಖಾಸಗಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಬೀಜ ನಿಗಮದ ಪ್ರಾಂತೀಯ ಕಛೇರಿ ಧಾರವಾಡ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಾನುವಾರ ಮಿಷನ್ ಯೋಜನೆಯಡಿ ಏರ್ಪಡಿಸಲಾಗಿದ್ದ ಬೀಜೋತ್ಪಾದನೆ ಕೃಷಿ ಬಗೆಗಿನ ರೈತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗುಣಮಟ್ಟದ ಬೀಜವು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಆ ಮೂಲಕ ಬೆಳೆ ಇಳುವರಿಯನ್ನು ಪ್ರತಿಶತ ೧೫-೨೦ ರಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ ಸಸ್ಯ ಸಂರಕ್ಷಣಾ ಕಾರ್ಯಗಳಿಗೆ ಸಮಗ್ರ ಕೀಟ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಾತಿಗಿಂದ ನೀತಿ ಪ್ರಧಾನವಾದದ್ದು. ಮಕ್ಕಳಿರುವಾಗಲೇ ಸಾಮರಸ್ಯದ ಬದುಕನ್ನು ಕಲಿಸಲು ಎಲ್ಲ ಪಾಲಕರು ಮುಂದಾಗಬೇಕಿದೆ ಎಂದು ೧೦ನೇ ತರಗತಿ ವಿದ್ಯಾರ್ಥಿನಿ ಅಪ್ಸರಾ ಅವಟಿ ಹೇಳಿದಳು.ತಾಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಜಯಂತಿ ಮತ್ತು ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವಳು ಮಾತನಾಡಿದಳು.ಭಗವದ್ಗೀತಾ ಅಭಿಯಾನದ ಮೂಲಕ ಜನರಲ್ಲಿ ಸಾಮರಸ್ಯತೆ ಮತ್ತು ದೇಶದ ಸಮಗ್ರತೆ ಬೆಳೆಸಲಾಗುತ್ತಿದೆ. ಶಾಂತಿಯುತ ಸಹಬಾಳ್ವೆಯ ಅಭಿವೃಧ್ಧಿಯುತ ದೇಶ ನಿರ್ಮಾಣದ ಉದ್ದೇಶದಿಂದಲೇ ಸ್ವಾಮೀಜಿಯವರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಉತ್ತಮ ಗ್ರಂಥಗಳ ಉತ್ತಮಾಂಶಗಳನ್ನು ಎಲ್ಲರು ಅನುಸರಿಸುವಂತಾಗ ಬೇಕು. ಶಿಕ್ಷಣದ ಪಠ್ಯಕ್ರಮದಲ್ಲೂ ಜನ ಪ್ರತಿನಿಧಿಗಳು ಪಠ್ಯಪುಸ್ತಕದ ರಚನೆಯಲ್ಲಿ ಮಾನವೀಯ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದಳು.ಪ್ರಮುಖರಾದ ಪ್ರಾಣೇಶ ಜೋಶಿ ಮಾತನಾಡಿ ಮನಸ್ಥೈರ್ಯ ಮತ್ತು ಧರ್ಮವನ್ನು ಬೆಳೆಸುವ ಘನ ಉದ್ದೇಶದಿಂದ ಭಗವದ್ಗೀತೆ ತಲೆ ಎತ್ತಿ ನಿಂತಿದೆ. ಅದೊಂದು ದಿವ್ಯ ಔಷಧವಾಗಿದೆ. ಸಮಾಜ ಜಾಗೃತಮಾಡುವ ಶಕ್ತಿ ಹೊಂದಿದೆ. ಭಕ್ತಿಗೆ ಅನುರೂಪವೆಂದರೆ ಕನಕದಾಸರೆಂದು ನಿದರ್ಶಿಸುವುದು ಇದೆ. ಹಾಗಾದರೆ ಆ ಮಟ್ಟದ ಭಕ್ತಿ ಪರವಶತೆ ನಮ್ಮೆಲ್ಲರಲ್ಲಿ ಬರಬೇಕಾಗಿದೆ.…

Read More

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ನಿಮಿತ್ಯ ಕನ್ನಡಾಂಬೆ ನುಡಿ ತೇರಿಗೆ ಚಾಲನೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಬರಹಗಾರರು, ಸಾಹಿತಿಗಳನ್ನ, ಕವಿಗಳನ್ನ ಗುರುತಿಸಿ ಸಮಾಜದಲ್ಲಿ ಬೇಳಕಿಗೆ ತಂದು ಅವರಲ್ಲಿನ ಜ್ಞಾನವನ್ನು ಎಲ್ಲರಿಗೂ ಉಣಬಡಿಸುವ ಸಲುವಾಗಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತದೆ ಅದಕ್ಕೆ ಎಲ್ಲರು ಸಹಕಾರ ನೀಡಿ ಕನ್ನಡ ನುಡಿ ಜಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಕಸಾಪ ಗೌರವಾಧ್ಯಕ್ಷ ಡಾ| ಸಂದೀಪ ಪಾಟೀಲ ಹೇಳಿದರು.ಅವರು ವಿಭೂತಿಹಳ್ಳಿಯಲ್ಲಿ ಡಿ. ೧೪ರದು ಹಮ್ಮಿಕೊಂಡಿರುವ ಆಲಮೇಲ ತಾಲೂಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ನಿಮಿತ್ಯ ಗುರುವಾರ ಕನ್ನಡಾಂಬೆ ನುಡಿ ತೇರಿಗೆ ಚಾಲನೆ ನೀಡಿ ಮಾತನಾಡಿದರು.ಕನ್ನಡಾಂಬೆಯ ಜಾತ್ರೆಯಲ್ಲಿ ಸಾಹಿತಗಳನ್ನು ಗುರುತಿಸುವ ದಿನಾ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳ ಇದಾಗಿರುವದರಿಂದ ಗ್ರಾಮೀಣ ಭಾಗದ ಕವಿಗಳು, ಬರಹಗಾರರನ್ನ, ಸಾಹಿತಿಗಳನ್ನ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಪರಿಷತ್ತು ಮಾಡಲಿದೆ ಎಂದು ಹೇಳಿದರು.ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿ ಈ ಸಮ್ಮೇಳನದಲ್ಲಿ ನಾಡಿನ ವಿವಿಧ ಸಾಹಿತಿಗಳು, ಕವಿಗಳು ಮತ್ತು ಸಂಸ್ಕೃತಿಕ ಚಟುವಟೆ ಮಾಡುವ ಕಲಾವಿದರು…

Read More

ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಂದ ನರೇಗಾ ಕಾಮಗಾರಿಗಳ ಪರಿಶೀಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು ಗುರುವಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ವಿಜಯಪುರ ತಾಲೂಕಿನ ಭೂತನಾಳ ಗ್ರಾಮದ ನರ್ಸರಿ ಕಾಮಗಾರಿ ವೀಕ್ಷಣೆ, ಸಸಿಗಳನ್ನು ನಾಟಿ ಮಾಡಿರುವ ಕುರಿತು ಪರಿಶೀಲನೆ ನಡೆಸಿದ ಅವರು, ಪ್ರತಿ ದಿನಕ್ಕೆ ( ಬೆಳಿಗ್ಗೆ ಹಾಗೂ ಮದ್ಯಾಹ್ನ ) ಎರಡು ಬಾರಿ ಎನ್ ಎಂ ಆರ್ ಹಾಜರಾತಿಗೆ ಕ್ರಮ ವಹಿಸಬೇಕು. ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಬದಿ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಡುಗೆ ಕೋಣೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಉತ್ತಮ ಸಾಮಗ್ರಿಗಳನ್ನು ಬಳಸುವಂತೆ ತಿಳಿಸಿದ ಅವರು ಕಳಪೆ ಮಟ್ಟದ ಕಾಮಗಾರಿಯಾಗದಂತೆ ಎಚ್ಚರಿಕೆ ವಹಿಸುವಂತೆ…

Read More