ಬೀಜೋತ್ಪಾದನೆ ಕೃಷಿ ಬಗೆಗಿನ ರೈತ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮುಂಗಡ ಬೇಡಿಕೆ ಆಧಾರದ ಮೇಲೆ ಇತ್ತೀಚಿಗೆ ಬಿಡುಗಡೆಯಾದ ತಳಿವರ್ಧಕ ಬೀಜಗಳಿಗೆ ಪ್ರಾಧಾನ್ಯತೆ ನೀಡಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೀಜೋತ್ಪಾದನೆ ಕೃಷಿಯಲ್ಲಿ ಪರಿಣಿತಿ ಸಾಧಿಸಿದಲ್ಲಿ ಹೆಚ್ಚುವರಿ ಆದಾಯ ಖಚಿತವೆಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.
ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಖಾಸಗಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಬೀಜ ನಿಗಮದ ಪ್ರಾಂತೀಯ ಕಛೇರಿ ಧಾರವಾಡ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಾನುವಾರ ಮಿಷನ್ ಯೋಜನೆಯಡಿ ಏರ್ಪಡಿಸಲಾಗಿದ್ದ ಬೀಜೋತ್ಪಾದನೆ ಕೃಷಿ ಬಗೆಗಿನ ರೈತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಬೀಜವು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಆ ಮೂಲಕ ಬೆಳೆ ಇಳುವರಿಯನ್ನು ಪ್ರತಿಶತ ೧೫-೨೦ ರಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ ಸಸ್ಯ ಸಂರಕ್ಷಣಾ ಕಾರ್ಯಗಳಿಗೆ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಜೊತೆ ಸರಿಯಾದ ಮೊಳಕೆ ಪ್ರಮಾಣ, ಮಿಶ್ರ ತಳಿ ರಹಿತ ಹಾಗೂ ಪ್ರಕೃತಿ ವಿಕೋಪಗಳ ವೈಜ್ಞಾನಿಕ ನಿರ್ವಹಣೆಗಳ ಬಗ್ಗೆ ಎಚ್ಚರಿಕೆ ವಹಿಸಿದಲ್ಲಿ ಗುಣಮಟ್ಟದ ಬೀಜಗಳ ಉತ್ಪಾದನೆ ಮೂಲಕ ಸುಸ್ಥಿರ ಕೃಷಿಗೆ ವಿಶೇಷ ಕೊಡುಗೆ ನೀಡಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಬಾಪೂಜಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಂ ನೆರಬೆಂಚಿ ಮಾತನಾಡಿ ದೇಶದ ಕೈಗಾರಿಕಾ ಕ್ರಾಂತಿಗೆ ಆಧಾರವಾಗಿರುವ ಕೃಷಿ ವಲಯವನ್ನು ದೀರ್ಘಕಾಲಿಕವಾಗಿ ಮುನ್ನೆಡೆಯುವಂತೆ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಸಾಧಕ ಕ್ರಮಗಳನ್ನು ರೈತರಿಗೆ ಪರಿಚಯಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಮೂಡಿಸುವಲ್ಲಿ ದಾಸೋಹಿ ರೈತ ಉತ್ಪಾದಕ ಕಂಪನಿ ನಡೆಸುತ್ತಿರುವ ಸಾಂಘಿಕ ಆಂದೋಲನ ಮಾದರಿಯಾಗಿದೆ ಎಂದರು.
ರಾಷ್ಟ್ರೀಯ ಬೀಜ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರವಿ ದುಂಡಗಿನಹಳ್ಳಿ ಮಾತನಾಡಿ ಬೀಜಗಳ ಬೇಡಿಕೆ ಮತ್ತು ಪೂರೈಕೆಯನ್ನು ಮುಂದಿಟ್ಟುಕೊಂಡು ಮೂಲ ಮತ್ತು ಪ್ರಮಾಣಿತ ಬೀಜಗಳ ಗುರಿಯಾಗಿಸಿಕೊಂಡು ಬರುವ ದಿನಗಳಲ್ಲಿ ದಾಸೋಹಿ ರೈತ ಉತ್ಪಾದಕ ಕಂಪನಿಯ ಜೊತೆಗೂಡಿ ತೊಗರಿ, ಈರುಳ್ಳಿ ಮತ್ತು ಶೇಂಗಾ ಬೆಳೆಗಳನ್ನು ಕೇಂದ್ರೀಕರಿಸಿ ಬೀಜೋತ್ಪಾದನೆ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದರು.
ನAತರ ನಡೆದ ತಾಂತ್ರಿಕ ಗೋಷ್ಠಿಗಳಲ್ಲಿ ವರ್ಚುವಲ್ ಮೂಲಕ ಅಫೇಡಾದ ಬೆಂಗಳೂರು ಕಛೇರಿಯಿಂದ ಬಿ. ಕಾರಂತರವರು ಎಫ್.ಪಿ.ಓ ಮೂಲಕ ಕೃಷಿ ರಫ್ತು, ಇ-ನಾಮ ನ ರಾಜ್ಯ ಸಮನ್ವಯಾಧಿಕಾರಿ ಕೆ.ಜಿ ಮಹೇಶ ಇ-ನಾಮ ಮೂಲಕ ಕೃಷಿ ಉತ್ಪನ್ನಗಳ ಮಾರಾಟ, ದೆಹಲಿಯ ಎಸ್.ಎಫ್.ಎ.ಸಿ ಕಛೇರಿಯ ಉಪ ನಿರ್ದೇಶಕ ಡಾ. ರಜನೀಶಸಿಂಗ ರಜಪೂತ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು, ಎಸ್,ಎಫ್.ಎ.ಸಿ ಕಛೇರಿಯ ಪ್ರೊಜೆಕ್ಟ ಕೋ-ಆರ್ಡಿನೇಟರ ಡಾ. ಪ್ರಿಯಾ ಶರ್ಮಾ ಇವರು ಎಫ್.ಪಿ.ಓ ರಚನೆ ಮತ್ತು ಉತ್ತೇಜನ ಚಟುವಟಿಕೆಗಳು, ದೆಹಲಿಯ ಎನ್.ಪಿ.ಎಂ. ಎ ಕಛೇರಿಯ ಹಿಮನ್ಸು ರಾಯ್ ರವರು ಲನಿಂಗ್ ಮ್ಯಾನೇಜ್ಮೆಂಟ್ ಕುರಿತಾಗಿ ವಿಷಯ ಮಂಡಿಸಿದರೆ ರಾಷ್ಟಿçÃಯ ಬೀಜ ನಿಗಮದ ಉತ್ಪಾದನೆ ಮತ್ತು ಸಂಸ್ಕರಣೆ ವಿಭಾಗದ ಮುಖ್ಯಸ್ಥ ಸಲೀಂ ಬೀಜೋತ್ಪಾದನೆಯ ತಾಂತ್ರಿಕತೆಗಳು, ಪೂರೈಕೆ ಮತ್ತು ಖರೀದಿ ಒಪ್ಪಂದ, ಗುಣಮಟ್ಟಗಳಬಗ್ಗೆ ತಿಳಿಸಿದರು.
ವೇದಿಕೆಯ ಮೇಲೆ ವಿಶ್ರಾಂತ ಉಪ ತಹಸೀಲ್ದಾರ ಆರ್.ಬಿ ಸಜ್ಜನ, ದಾಸೋಹಿ ಕಂಪನಿ ನಿರ್ದೇಶಕÀ ಕಲ್ಲಣ್ಣ ಪ್ಯಾಟಿ, ಸೋಮಲಿಂಗಪ್ಪ ಗಸ್ತಿಗಾರ, ಭೀಮಣ್ಣ ಮಳಗೌಡರ, ಸೋಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಶರಣಯ್ಯ ಹಿರೇಮಠ, ಬಿ.ಎಂ.ಪಾಟೀಲ ಸೇರಿದಂತೆ ಇತರರು ಇದ್ದರು.
ಉದಯ ರಾಯಚೂರ ಸ್ವಾಗತಿಸಿದರು. ನ್ಯಾಯವಾದಿ ರಶ್ಮಿ ಕೊಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಬೆಳ್ಳಿಕಟ್ಟಿ ನಿರೂಪಿಸಿದರು. ಎಫ್.ಪಿ.ಓ ವಿಸ್ತೀರ್ಣಾಧಿಕಾರಿ ಮಂಜುನಾಥ ದೊಡಮನಿ ವಂದಿಸಿದರು.

