ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ನಿಮಿತ್ಯ ಕನ್ನಡಾಂಬೆ ನುಡಿ ತೇರಿಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಬರಹಗಾರರು, ಸಾಹಿತಿಗಳನ್ನ, ಕವಿಗಳನ್ನ ಗುರುತಿಸಿ ಸಮಾಜದಲ್ಲಿ ಬೇಳಕಿಗೆ ತಂದು ಅವರಲ್ಲಿನ ಜ್ಞಾನವನ್ನು ಎಲ್ಲರಿಗೂ ಉಣಬಡಿಸುವ ಸಲುವಾಗಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತದೆ ಅದಕ್ಕೆ ಎಲ್ಲರು ಸಹಕಾರ ನೀಡಿ ಕನ್ನಡ ನುಡಿ ಜಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಕಸಾಪ ಗೌರವಾಧ್ಯಕ್ಷ ಡಾ| ಸಂದೀಪ ಪಾಟೀಲ ಹೇಳಿದರು.
ಅವರು ವಿಭೂತಿಹಳ್ಳಿಯಲ್ಲಿ ಡಿ. ೧೪ರದು ಹಮ್ಮಿಕೊಂಡಿರುವ ಆಲಮೇಲ ತಾಲೂಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ನಿಮಿತ್ಯ ಗುರುವಾರ ಕನ್ನಡಾಂಬೆ ನುಡಿ ತೇರಿಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಾಂಬೆಯ ಜಾತ್ರೆಯಲ್ಲಿ ಸಾಹಿತಗಳನ್ನು ಗುರುತಿಸುವ ದಿನಾ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳ ಇದಾಗಿರುವದರಿಂದ ಗ್ರಾಮೀಣ ಭಾಗದ ಕವಿಗಳು, ಬರಹಗಾರರನ್ನ, ಸಾಹಿತಿಗಳನ್ನ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಪರಿಷತ್ತು ಮಾಡಲಿದೆ ಎಂದು ಹೇಳಿದರು.
ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿ ಈ ಸಮ್ಮೇಳನದಲ್ಲಿ ನಾಡಿನ ವಿವಿಧ ಸಾಹಿತಿಗಳು, ಕವಿಗಳು ಮತ್ತು ಸಂಸ್ಕೃತಿಕ ಚಟುವಟೆ ಮಾಡುವ ಕಲಾವಿದರು ಭಾಗವಹಿಸಲಿದ್ದಾರೆ ಇದು ಆಲಮೆಲ ತಾಲುಕಿನ ದ್ವಿತೀಯ ಸಾಹಿತ್ಯ ಸಮ್ಮೇಳನ ಇದಾಗಿರುವದರಿಂದ ಎಲ್ಲರು ಪಾಲ್ಗೊಂಡು ಇಲ್ಲಿ ನಡೆಯುವ ಸಾಹಿತ್ಯದ ಜ್ಞಾನ ಸಂಪಾದನೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ.ಪಂ ಸದಸ್ಯ ಡಾ| ಸಂಜುಕುಮಾರ ಎಂಟಮಾನ, ಅಯೂಬ ದೇವರಮನಿ, ಶ್ರೀಶೈಲ ಮಠಪತಿ, ಪ್ರಾಚಾರ್ಯ ರಮೇಶ ಗಂಗನಳ್ಳಿ, ಸುರೇಶ ಕೊರಳ್ಳಿ, ಗೀರಿಶ ಗತಾಟೆ, ಶಿವು ಗುರುಗಾರ, ಮಲ್ಲಿಕಾರ್ಜುನ ರಾಂಪೂರಮಠ ಮುಂತಾದವರು ಇದ್ದರು

