ಉದಯರಶ್ಮಿ ದಿನಪತ್ರಿಕೆ
ಇಂಡಿ: ಸ್ವಾತಂತ್ರ್ಯ ಪೂರ್ವ ಅಹಾರ ಉತ್ಪಾದನೆ ಕಡಿಮೆ ಇತ್ತು. ನಂತರದ ಸಮಯದಲ್ಲಿ ೫೦ ಕೋಟಿಗೆ ಜನಸಂಖ್ಯೆಗೆ ಸಾಲುವಷ್ಟು ಇತ್ತು, ೧೯೬೦ ರಲ್ಲಿ ಹಸಿರು ಕ್ರಾಂತಿಯ ನಿಮಿತ್ಯ ಅಹಾರ ಉತ್ಪಾದನೆ ಹೆಚ್ಚಾಯಿತು. ಈಗ ೧೪೪ ಕೋಟಿ ಜನರಿಗೆ ಸಾಲುವಷ್ಟು ಆಹಾರ ಉತ್ಪಾದನೆ ಮಾಡಬೇಕಾಗಿದೆ ಎಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ.ಬೆಳ್ಳಿ ಹೇಳಿದರು.
ಪಟ್ಟಣದ ಆರ್.ಎಂ. ಶಹಾ ಶಾಲೆಯಲ್ಲಿ ಉತ್ಥಾನ ಮಹೋತ್ಸವ ನಿಮಿತ್ಯ ನಡೆದ ಕೃಷಿ ಮೇಳ ಮತ್ತು ತಾಲೂಕಿನ ಕೃಷಿಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿರು ಕ್ರಾಂತಿಯ ನಂತರ ದೇಶದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚಾಗಿ ಕೃಷಿಯಲ್ಲಿ ವಾತಾವರಣ ಕಲುಷಿತವಾಗುತ್ತಿದೆ. ರೈತರು ಆಧುನಿಕ ಕೃಷಿ ಪದ್ದತಿಯಲ್ಲಿ ಹೆಚ್ಚಿನ ಇಳುವರಿ ಮತ್ತು ಅಧಿಕ ಹಣ ಪಡೆಯುವ ಕೃಷಿಯತ್ತ ಒಲುವು ತೋರುತ್ತಿದ್ದಾರೆ.
ಶೂನ್ಯ ಬಂಡವಾಳ, ಸಾವಯುವ ಕೃಷಿ, ಸುಸ್ಥಿರ ಕೃಷಿ ಯತ್ತ ಪ್ರಯತ್ನಿಸಿ ಜನರು ರೈತರು ಉತ್ತಮ ಆರೋಗ್ಯದ ಕಡೆಗೂ ಗಮನ ನೀಡಿ ಹೆಚ್ಚು ರಸಾಯನಿಕ ಔಷದ ಬಳಕೆ ಮತ್ತು ಕೀಟನಾಶಕ ಬಳಕೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ನೌಕರಿ ಸಿಗದೇ ಇದ್ದರೆ ಕೃಷಿ ಉದ್ದಿಮೆಯಲ್ಲಿ ತೊಡಗಿ,ಕೃಷಿಯಲ್ಲಿ ಸಾದನೆ ಮಾಡಿ ಹೆಚ್ಚಿಗೆ ಆದಾಯ ಪಡೆಯಲು ಕೇಳಿಕೊಂಡರು.
ಇAದು ಒಂದು ಎಕರೆಗೆ ೫೦ ಸಾವಿರ ರೂ ಯೋಜನೆ ಹಾಕಿ ಕೊಳ್ಳುತ್ತಿದ್ದು ಯುವಕರು ಆಧುನಿಕ ಕೃಷಿಯ ಕಡೆಗೆ ಒಲವು ತೋರಿ ಹೆಚ್ಚಿನ ಆದಾಯ ಪಡೆಯಲು ವಿನಂತಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಮಾತನಾಡಿ ಎಲ್ಲರಿಗೂ ಅಹಾರ ಬೇಕು ಆದರೆ ಕೃಷಿ ಮಾಡುವದು ಬೇಡ ಎಂದು ಯುವಕರು ಬಯಸಿದರೆ ಕೃಷಿ ಉತ್ಪಾದನೆ ಕಡಿಮೆ ಯಾಗುತ್ತದೆ. ಆಹಾರದ ಜೊತೆಗೆ ಹಣ ಮಾಡುವ ಬೆಳೆಗಳಿಗೆ ಪ್ರಾದ್ಯಾನತೆ ನೀಡಬೇಕು. ಕೃಷಿ ಕಸಬು ಜೊತೆಗೆ ಉಪ ಕಸಬು ಮಾಡಿ ಅದರಿಂದಲೂ ಹಣ ಗಳಿಸಬಹುದು. ಜೇನು ಹುಳು ಸಾಕಾಣಿಕೆ ಮಾಡಿ, ನಿಂಬೆ ಮೌಲ್ಯವರ್ಧನೆ ಮಾಡಿ ಕೊಟ್ಯಾಂತರ ಹಣ ಗಳಿಸಿದ ಉಧಾಹರಣೆ ಇದೆ. ಜೀವಾಣು, ಫಲವತ್ತತೆ ಮತ್ತು ಜಲಕ್ಕೆ ಪ್ರಾಧಾನತೆ ನೀಡಬೇಕಾಗಿದೆ. ಮಣ್ಣು ಮತ್ತು ನೀರಿನ ರಕ್ಷಣೆ ಮಾಡುವ ಜವಾಬ್ದಾರಿ ಯುವಕರ ಮೇಲಿದೆ. ಕರ್ನಾಟಕದಲ್ಲಿ ೩೩ ಪ್ರತಿಶತ ಅರಣ್ಯ ವಿದ್ದರೆ ವಿಜಯಪುರದಲ್ಲಿ ಕೇವಲ ಒಂದು ಪ್ರತಿಶತ ಮಾತ್ರ ಅರಣ್ಯ ಪ್ರದೇಶವಿದೆ. ಅರಣ್ಯ ಪ್ರದೇಶ ವಿಲ್ಲದೆ ಬಿಸಿಲು ಹೆಚ್ಚಾಗಿ ನೀರು ಆವಿಯಾಗಿ ಹೋಗುತ್ತಿದೆ. ಅದಕ್ಕಾಗಿ ಹೆಚ್ಚು ಮರ ಗಿಡಗಳನ್ನು ಬೆಳೆಸುವ ಜೊತೆಗೆ ಗಿಡಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ಡಾ. ಹೀನಾ, ಸಂಸ್ಥೆಯ ಸುನೀಲ ಕುಲಕರ್ಣಿ,ಕಾವ್ಯ ಬಾಗಲಕೋಟ, ಸುಕನ್ಯಾ ನಾಕೋಡ, ವಿಜಯಕುಮಾರ ನರಕಿ, ಬಾಹುಬಲಿ ಪಂಡಿತ ಮಾತನಾಡಿದರು.
ಕೃಷಿಯಲ್ಲಿ ಸಾದನೆ ಮಾಡಿದ ಪ್ರಗತಿಪರ ರೈತರಾದ ಬೀರಪ್ಪ ವಗ್ಗಿ, ಎಸ್.ಟಿ.ಪಾಟೀಲ, ರಾಜಶೇಖರ ನಿಂಬರಗಿ, ಶರಣಪ್ಪ ಮಜ್ಜಿಗೆ, ಭಾರತಿ ಮೆಂಡೆಗಾರ, ಅಂಕಿತಾ ಪಾಟೀಲ, ಭೀಮನ ಗೌಡ ಪಾಟೀಲ , ವೀಣಾ ಜಂಬಗಿ ರೈತರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಭಿಮರಾಯ ಕಡಹಳ್ಳಿ ಪ್ರಗತಿಪರ ರೈತರಾದ ಚಿದಂಬರ ಕುಲಕರ್ಣಿ , ಸಂಜೀವ ಕುಮಾರ ಮಾಲಗಾರ, ಬಸು ಹೂಗಾರ , ಮಲ್ಲೆಶಪ್ಪಾ ಕಲ್ಯಾಣ ಶೆಟ್ಟಿ ಮತ್ತಿತರಿದ್ದರು.
೧೦೦ ಹೆಚ್ಚು ರೈತರು ಮಳಿಗೆ ಹಾಕಿ ಕೃಷಿಗಳ ವಸ್ತುಗಳ ಪ್ರದರ್ಶನ ಮಾಡಿದರು.

