Author: editor.udayarashmi@gmail.com

ಡಾ. ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ IEEE-INNOVA-2024 ಕಾರ್ಯಕ್ರಮ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಹೆರಳವಾದ ಪ್ರಾಕೃತಿಕ ಸಂಪನ್ಮೂಲ ಮತ್ತು ಯುವ ಶಕ್ತಿಯ ಕಣಜವಾಗಿದ್ದು, ಇಲ್ಲಿನ ಯುವಕರು ಮಾತಿಗಿಂತ ಕಾಯಕದ ಮೂಲಕ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ IEEE-INNOVA-2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಸಿಂಗಾಪುರ ಜೊತೆ ಆರೋಗ್ಯಯುತ ಸ್ಪರ್ಧೆ ಮಾಡುತ್ತಿದೆ. ರಾಜ್ಯ ಸರಕಾರ ಬೆಂಗಳೂರು ಹೊರತು ಪಡಿಸಿ ಬಿಯಾಂಡ್ ಬೆಂಗಳೂರು ಯೋಜನೆಯಂತೆ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಇತರ ಜಿಲ್ಲೆಗಳಿಗೂ ಆದ್ಯತೆ ನೀಡುತ್ತಿದೆ. ಉತ್ತರ ಕರ್ನಾಟಕದ ಯುವಕರು ಹೆಚ್ಚು ಪ್ರತಿಭಾವಂತರಾಗಿದ್ದು, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿಯತ್ತಿನಿಂದ ಕೆಲಸ ಮಾಡುತ್ತಾರೆ. ಅವರಿಗೆ ಆಂಗ್ಲಭಾಷೆಯ ಸಂವಹನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಬೃಹತ್ ಉದ್ಯೋಗ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶವನ್ನು ಸಂವಿಧಾನದ ಚೌಕಟಿನಲ್ಲಿ ಭದ್ರವಾಗಿ ನಿಲ್ಲಿಸಿದ ಅಂಬೇಡ್ಕರ್ ಅವರನ್ನು ನೆನೆಯುವುದನ್ನು ಅಮಿತ್ ಶಾ ಟೀಕಿಸುತ್ತಾರೆಂದರೆ ಬಿಜೆಪಿಗರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಎಷ್ಟೊಂದು ಗೌರವವಿದೆ ಎಂಬುದು ಅರ್ಥವಾಗುತ್ತದೆ. ಅವರು ಕೇಂದ್ರ ಸಚಿವರಾಗಿರಲು ಯೋಗ್ಯರಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ವಿಜಯಪುರ ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷೆ ಪ್ರಿಯಾಂಕ ಚೇತನ ತೋರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ನಮಗೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ನಿಜವಾದ ದೇವರು! ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ.-ಸೂರ್ಯ ಚಂದ್ರ ಇರುವರೆಗೂ ಬಾಬಾಸಾಹೇಬರ ಸ್ಮರಣೆ ಇರುತ್ತದೆ. ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಅವರು ಸಂಸತ್ತಿನಲ್ಲಿ ಸಚಿವರಾಗಿರಲು ಯೋಗ್ಯರಲ್ಲ. ತಕ್ಷಣ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಅಮಿತ್ ಶಾ ಅವರೇ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಭಿಕ್ಷೆಯಲ್ಲಿ ನೀವು ಕಾರ್ಯ ನಿರ್ವಹಿಸುತ್ತಿದ್ದೀರಿ ಅದನ್ನು ಮೊದಲು ಅರಿತುಕೊಂಡು ಅಮಿತ್ ಶಾ ಅವರು ತಮ್ಮ…

Read More

ಇಂದು ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ೪೮ನೇ “ಚಿಣ್ಣರ ನುಡಿಸಿರಿ” ಸಮಾರಂಭ ಉದಯರಶ್ಮಿ ದಿನಪತ್ರಿಕೆ ಆಲಮೇಲ: ೪೮ನೇ “ಚಿಣ್ಣರ ನುಡಿಸಿರಿ” ಯಲ್ಲಿ ವಿಶೇಷ ಉಪನ್ಯಾಸಕರಾಗಿ ಪಟ್ಟಮದ ಬಾಲಭಾರತಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಬಳಗ ಸಿಂದಗಿ ಹಮ್ಮಿಕೊಂಡಿರುವ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದಲ್ಲಿ ಆಲಮೇಲ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಲಮೇಲ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸೃಷ್ಟಿ ಬಂಡಗಾರ ಹಾಗೂ ಭಾಗ್ಯಶ್ರೀ ಮಳ್ಳಿ ರವರನ್ನು ಮುಖ್ಯ ಅತಿಥಿಗಳಾಗಿ ಆಯ್ಕೆ ಮಾಡಲಾಗಿದೆ.ಅವರು ಕ್ರಮವಾಗಿ “ನನ್ನ ಶಾಲೆ” ಹಾಗೂ “ಪರಿಸರ ಉಳಿಸೋಣ” ಎಂಬ ವಿಷಯದ ಮೇಲೆ ಉಪನ್ಯಾಸ ಮಾಡಲಿದ್ದಾರೆ ಎಂದು ಶಾಲೆಯ ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ತಿಳಿಸಿದ್ದಾರೆ.ಈ ಸಮಾರಂಭವು ಡಿ.೨೧ರಂದು ಬೆಳಿಗ್ಗೆ 10 ಗಂಟೆಗೆ ಸಿಂದಗಿಯ ಪ್ರೇರಣಾ ಪಬ್ಲಿಕ ಶಾಲೆಯಲ್ಲಿ ಜರುಗಲಿದೆ.ಈ ಸುವರ್ಣಾವಕಾಶ ಮಾಡಿಕೊಟ್ಟ ಮಕ್ಕಳ ಬಳಗ ಸಿಂದಗಿ ಯ ಸಂಸ್ಥಾಪಕ ಅಧ್ಯಕ್ಷರು ಹಾಗೂ…

Read More

– ✍️ ಮಮತಾ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು// ನಲ್ಮೆಯ ಇಳೆಯ ಮನಕಿಳಿಯುವ ಕಾತುರತೆಪಲ್ಲವಿಸಿತು ಭಾವದೊಸಗೆಯ ಹೃದ್ಯಗೀತೆದಿಗಂತನ ಅವಿಚ್ಛಿನ್ನ ಪ್ರೇಮ ನಿವೇದನೆಒಲವಿನೋಲೆಯಲಿ ಸಮ್ಮಿಳಿತ ಭಾವನೆ// ಬಾನಾಂತರಂಗದ ಮಳೆಹನಿಯ ಆವರ್ತನನಾಚಿನೀರಾದ ವಸುಂಧರೆಯ ದಿವ್ಯನರ್ತನಮಳೆಬಿಲ್ಲಂದದಿ ನಿಂತಳು ಅವನಿ ಹಸಿರುಟ್ಟುಪರಿಶುದ್ಧದೊಲವಿಗೆ ಅಂಬರನ ಹೆಸರಿಟ್ಟು//

Read More

– ✍️ ಮಮತಾ ಇಳೆಯಂಬರದ ಪರಿಣಯ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು// ನಲ್ಮೆಯ ಇಳೆಯ ಮನಕಿಳಿಯುವ ಕಾತುರತೆಪಲ್ಲವಿಸಿತು ಭಾವದೊಸಗೆಯ ಹೃದ್ಯಗೀತೆದಿಗಂತನ ಅವಿಚ್ಛಿನ್ನ ಪ್ರೇಮ ನಿವೇದನೆಒಲವಿನೋಲೆಯಲಿ ಸಮ್ಮಿಳಿತ ಭಾವನೆ// ಬಾನಾಂತರಂಗದ ಮಳೆಹನಿಯ ಆವರ್ತನನಾಚಿನೀರಾದ ವಸುಂಧರೆಯ ದಿವ್ಯನರ್ತನಮಳೆಬಿಲ್ಲಂದದಿ ನಿಂತಳು ಅವನಿ ಹಸಿರುಟ್ಟುಪರಿಶುದ್ಧದೊಲವಿಗೆ ಅಂಬರನ ಹೆಸರಿಟ್ಟು//

Read More

ಲೇಖನ- ಶೀತಲ್ ಹೆಗಡೆ ಉದಯರಶ್ಮಿ ದಿನಪತ್ರಿಕೆ ಈ ಸಾಲುಗಳನ್ನು ಯಾರೂ ಕೇಳದವರೇ ಇಲ್ಲ. ಇದರಲ್ಲಿ ಮನುಷ್ಯನ ಇಡೀ ಜೀವನದ ಮರ್ಮವೇ ತುಂಬಿದೆ. ನಿಜ! ಹುಟ್ಟಿನಿಂದ ಸಾವಿನಕಡೆಗೆ ಹೋಗುವ ಹಾದಿ ಅಮರತ್ತ್ವದ ಕಡೆಗೆ ನಮ್ಮನ್ನ ಒಯ್ಯಲಾರದು. ಜೀವನ ಬಲು ಕ್ಷಣಿಕ. ಇರುವಷ್ಟು ದಿನ ಉಪಕಾರಿಯಾಗಿ ಪ್ರಾಮಾಣಿಕವಾಗಿ ಏನಾದರೂ ಸಾಧಿಸಿ ಹೋದಲ್ಲಿ ಜೀವನ ಸಾರ್ಥಕತೆಯನ್ನು ಕಾಣುವುದು.ಜಗತ್ತಿನಲ್ಲಿ ಸಾಧನೆಗೈದವರ ಪಟ್ಟಿ ಮಾಡುತ್ತಾ ಹೋದರೆ ಅದು ಲೆಕ್ಕಕ್ಕೇ ಸಿಗದಷ್ಟು ಇದೆ. ಇಂದು ನಾವು ನಾವಾಗಿ ಇರಲು ಗುಲಾಮತನದ ಚಂಗುಲಿಯಿಂದ ಹೊರತಂದ ಮಹಾತ್ಮನೆನಿಸಿದ ಗಾಂಧೀಜಿಯಿಂದ ಹಿಡಿದು ಅನಕ್ಷರಸ್ಥೆಯಾದ್ರೂ ಹಿಂದುಳಿದ ವರ್ಗಕ್ಕೆ ಸೇರಿದ ತಿಮ್ಮಕ್ಕ ಜೀವನದಲ್ಲಿ ತನಗೆ ಮಕ್ಕಳಿಲ್ಲದ ಕೊರಗನ್ನು ಸಸಿಗಳನ್ನು ನೆಟ್ಟು ಮಕ್ಕಳಂತೆ ಸಾಕಿ ಸಾಲುಮರದ ತಿಮ್ಮಕ್ಕನೆನಿಸಿಕೊಂಡಳು.ಸಾಧಿಸಬೇಕು ಸಾಧನೆಗೈಯಬೇಕು ಎಂಬ ಕಿಡಿ ಮನದಲ್ಲಿದ್ದರೆ ಅದಕ್ಕೆ ಗುರಿಯನ್ನೇ ತೈಲವಾಗಿಸಿ ಪ್ರಯತ್ನವೆಂಬ ಬತ್ತಿಯನ್ನು ಹೊಸೆಯುತ್ತಾ ದೀಪ ಸದಾ ಉರಿದು ನಂದಾ ದೀಪದಂತೆ ಎಂದೂ ಆರದೇ ಸದಾಕಾಲ ಬೆಳಗುವಂತೆ ಮಾಡಬಹುದು ಎಂಬುದಕ್ಕೆ ಇಂದು ಒಬ್ಬ ಕಲಾಕಾರನ ಕಲಾಮಹಾತ್ಮೆಯ ಬಗ್ಗೆ ಅವನ ಇಚ್ಚಾಶಕ್ತಿ, ಏಕಲವ್ಯನಂತೆ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಯಕ್ತಾಪೂರ ಹಾಗೂ ಬೇವಿನಾನ ಗ್ರಾಮದ ಶ್ರೀ ಗುತ್ತಿಬಸವೇಶ್ವರ ದೇವಸ್ಥಾನ ಮಂಡಳಿಯವರು ಪಟ್ಟಣದ ಉಪತಹಸೀಲ್ದಾರ್ ಮೂಲಕ ಮಂಗಳವಾರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಿದರು.ಇದೇ ವೇಳೆ ಹಿರಿಯ ಮುಖಂಡ ಮಾಜಿ ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ಈ ಭಾಗದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನದ ನವೀಕರಣಕ್ಕೆ ಮುಜುರಾಯಿ ಇಲಾಖೆಯಲ್ಲಿರುವ ದೇವಸ್ಥಾನದ ಹಣ ಮತ್ತು ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈಗಾಗಲೇ ಭಕ್ತರಿಂದ ದೇಣಿಗೆ ಪಡೆದು ಹಣ ಸುರಪುರ ತಹಸೀಲ್ದಾರ್ ಖಾತೆಗೆ ಜಮಾ ಮಾಡಿ ಜಮಾ ಖರ್ಚಿನ ಲೆಕ್ಕ ನಿರ್ವಹಣೆ ಕುರಿತು ತಹಿಸೀಲ್ದಾರ ಸುರಪುರವರಿಗೆ ತಿಳಿಸಲಾಗಿದೆ, ಆದರೆ ಕೆಲವರು ದೇವಸ್ಥಾನದ ಹಣ ದುರುಪಯೋಗವಾಗಿದೆ ಎಂದು ದೂರು ನೀಡಿ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ, ಮುಜುರಾಯಿ ಇಲಾಖೆಯ ಅಡಿಯಲ್ಲಿ ಬರುವ 400 ಹೆಚ್ಚು ದೇವಸ್ಥಾನಗಳು ಹೇಗೆ ಹಣ ಸಂಗ್ರಹಿಸಿ ನಿರ್ವಹಣೆ ಮಾಡುತ್ತವೆ ಹಾಗೆಯೇ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಬಂಟನೂರ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ₹33.25ಲಕ್ಷ ಮೌಲ್ಯದ 133 ಕೆ.ಜಿ ಗಾಂಜಾ ಬೆಳೆದ ಖಚಿತ ಮಾಹಿತಿಯನ್ನು ಪಡೆದುಕೊಂಡು ಪೊಲೀಸರು ದಾಳಿ ನಡೆಸಿ ಬುಧವಾರ ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಪ್ರಕರಣದ ಸಂಬಂಧ ಜಮೀನಿನ ಬಸವರಾಜ ಬಾಳಪ್ಪ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.ಡಿವೈಎಸ್ಪಿ ಜಗದೀಶ ಎಚ್.ಎಸ್ ಅವರ ಮಾರ್ಗದರ್ಶನದಲ್ಲಿ ಸಿಪಿಎಸ್ ನಾನಾಗೌಡ ಪೊಲೀಸ್ ಪಾಟೀಲ್, ಪಿಎಸ್‌ಐ ಆರೀಫ್ ಮುಶಾಪುರಿ ಅವರ ನೇತೃತ್ವದಲ್ಲಿ ಸಿಂದಗಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ ಸಿಬ್ಬಂದಿಗಳಾದ ಸುರೇಶ ಕೊಂಡಿ, ಭಗವಂತ ಮುಳಸಾವಳಗಿ, ಬಿ.ಪಿ.ಗೋಗಿ, ಡಿ. ಎಲ್.ಪೂಜಾರಿ, ಜಟ್ಟೆಪ್ಪ ದೊಡಮನಿ ಸೇರಿದಂತೆ ಅನೇಕರಿದ್ದರು.

Read More

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ | ಸಿಟಿ ರವಿ ವಿರುದ್ಧ ಎಫ್​ಐಆರ್ ದಾಖಲು | ಅಮಿತ್ ಶಾ ಹೇಳಿಕೆಗೆ ಖಂಡನೆ ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇನಕಾರಿ ಹೇಳಿಕೆ ಖಂಡಿಸಿ ಗುರುವಾರ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಕೇಳಿಬಂದಿದೆ.ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಶೂನ್ಯ ವೇಳೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಸದಸ್ಯರು ಧರಣಿಗೆ ಮುಂದಾದರು. ಕೂಡಲೇ ಅಮಿತ್ ಶಾ ಅವರನ್ನು ಬಂಧಿಸಿ, ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.ಇದೇ ವೇಳೆ, ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನೂ ಅವರು ನೀಡಲಿಲ್ಲ ಎಂದು ಹರಿಹಾಯ್ದರು.ಬಳಿಕ ರಾಹುಲ್…

Read More

ಬಿ.ಜೆ.ಪಿ ಎಸ್ ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಗುಡುಗು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕೂ ಇಲ್ಲ ಎಂದು ಬಿ.ಜೆ.ಪಿ ಎಸ್ ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಗುಡುಗಿದ್ದಾರೆ.ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಬಳಿಕ ಅವರನ್ನು ಸೋಲಿಸಿದವರಿಗೆ ಪದ್ಮಭೂಷಣ ನೀಡಿ ಗೌರವಿಸಿತು. ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ ಎಂದು ಟೀಕಿಸಿದರು.ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್…

Read More