– ✍️ ಮಮತಾ
ಉದಯರಶ್ಮಿ ದಿನಪತ್ರಿಕೆ
ನೀಲ ಮೇಘಗಳು ಮಧುರ ಮೈತ್ರಿಯಲಿ
ಭುವಿಯ ಸಾಂಗತ್ಯಬಯಸಿ ಧರೆಗಿಳಿದಂತಿತ್ತು
ವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿ
ಹಬ್ಬದ ವಾತಾವರಣ ಕಂಗಳ ತುಂಬಿತ್ತು//
ನಲ್ಮೆಯ ಇಳೆಯ ಮನಕಿಳಿಯುವ ಕಾತುರತೆ
ಪಲ್ಲವಿಸಿತು ಭಾವದೊಸಗೆಯ ಹೃದ್ಯಗೀತೆ
ದಿಗಂತನ ಅವಿಚ್ಛಿನ್ನ ಪ್ರೇಮ ನಿವೇದನೆ
ಒಲವಿನೋಲೆಯಲಿ ಸಮ್ಮಿಳಿತ ಭಾವನೆ//
ಬಾನಾಂತರಂಗದ ಮಳೆಹನಿಯ ಆವರ್ತನ
ನಾಚಿನೀರಾದ ವಸುಂಧರೆಯ ದಿವ್ಯನರ್ತನ
ಮಳೆಬಿಲ್ಲಂದದಿ ನಿಂತಳು ಅವನಿ ಹಸಿರುಟ್ಟು
ಪರಿಶುದ್ಧದೊಲವಿಗೆ ಅಂಬರನ ಹೆಸರಿಟ್ಟು//