ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶವನ್ನು ಸಂವಿಧಾನದ ಚೌಕಟಿನಲ್ಲಿ ಭದ್ರವಾಗಿ ನಿಲ್ಲಿಸಿದ ಅಂಬೇಡ್ಕರ್ ಅವರನ್ನು ನೆನೆಯುವುದನ್ನು ಅಮಿತ್ ಶಾ ಟೀಕಿಸುತ್ತಾರೆಂದರೆ ಬಿಜೆಪಿಗರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಎಷ್ಟೊಂದು ಗೌರವವಿದೆ ಎಂಬುದು ಅರ್ಥವಾಗುತ್ತದೆ. ಅವರು ಕೇಂದ್ರ ಸಚಿವರಾಗಿರಲು ಯೋಗ್ಯರಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ವಿಜಯಪುರ ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷೆ ಪ್ರಿಯಾಂಕ ಚೇತನ ತೋರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ನಮಗೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ನಿಜವಾದ ದೇವರು! ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ.-ಸೂರ್ಯ ಚಂದ್ರ ಇರುವರೆಗೂ ಬಾಬಾಸಾಹೇಬರ ಸ್ಮರಣೆ ಇರುತ್ತದೆ. ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಅವರು ಸಂಸತ್ತಿನಲ್ಲಿ ಸಚಿವರಾಗಿರಲು ಯೋಗ್ಯರಲ್ಲ. ತಕ್ಷಣ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಅಮಿತ್ ಶಾ ಅವರೇ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಭಿಕ್ಷೆಯಲ್ಲಿ ನೀವು ಕಾರ್ಯ ನಿರ್ವಹಿಸುತ್ತಿದ್ದೀರಿ ಅದನ್ನು ಮೊದಲು ಅರಿತುಕೊಂಡು ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಪ್ರಿಯಾಂಕ ತೋರವಿ ಆಗ್ರಹಿಸಿದ್ದಾರೆ.

