ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಬಂಟನೂರ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ₹33.25ಲಕ್ಷ ಮೌಲ್ಯದ 133 ಕೆ.ಜಿ ಗಾಂಜಾ ಬೆಳೆದ ಖಚಿತ ಮಾಹಿತಿಯನ್ನು ಪಡೆದುಕೊಂಡು ಪೊಲೀಸರು ದಾಳಿ ನಡೆಸಿ ಬುಧವಾರ ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸಂಬಂಧ ಜಮೀನಿನ ಬಸವರಾಜ ಬಾಳಪ್ಪ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಜಗದೀಶ ಎಚ್.ಎಸ್ ಅವರ ಮಾರ್ಗದರ್ಶನದಲ್ಲಿ ಸಿಪಿಎಸ್ ನಾನಾಗೌಡ ಪೊಲೀಸ್ ಪಾಟೀಲ್, ಪಿಎಸ್‌ಐ ಆರೀಫ್ ಮುಶಾಪುರಿ ಅವರ ನೇತೃತ್ವದಲ್ಲಿ ಸಿಂದಗಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಸಿಬ್ಬಂದಿಗಳಾದ ಸುರೇಶ ಕೊಂಡಿ, ಭಗವಂತ ಮುಳಸಾವಳಗಿ, ಬಿ.ಪಿ.ಗೋಗಿ, ಡಿ. ಎಲ್.ಪೂಜಾರಿ, ಜಟ್ಟೆಪ್ಪ ದೊಡಮನಿ ಸೇರಿದಂತೆ ಅನೇಕರಿದ್ದರು.

