ಇಂದು ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ೪೮ನೇ “ಚಿಣ್ಣರ ನುಡಿಸಿರಿ” ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ೪೮ನೇ “ಚಿಣ್ಣರ ನುಡಿಸಿರಿ” ಯಲ್ಲಿ ವಿಶೇಷ ಉಪನ್ಯಾಸಕರಾಗಿ ಪಟ್ಟಮದ ಬಾಲಭಾರತಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಬಳಗ ಸಿಂದಗಿ ಹಮ್ಮಿಕೊಂಡಿರುವ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದಲ್ಲಿ ಆಲಮೇಲ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಲಮೇಲ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸೃಷ್ಟಿ ಬಂಡಗಾರ ಹಾಗೂ ಭಾಗ್ಯಶ್ರೀ ಮಳ್ಳಿ ರವರನ್ನು ಮುಖ್ಯ ಅತಿಥಿಗಳಾಗಿ ಆಯ್ಕೆ ಮಾಡಲಾಗಿದೆ.
ಅವರು ಕ್ರಮವಾಗಿ “ನನ್ನ ಶಾಲೆ” ಹಾಗೂ “ಪರಿಸರ ಉಳಿಸೋಣ” ಎಂಬ ವಿಷಯದ ಮೇಲೆ ಉಪನ್ಯಾಸ ಮಾಡಲಿದ್ದಾರೆ ಎಂದು ಶಾಲೆಯ ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ತಿಳಿಸಿದ್ದಾರೆ.
ಈ ಸಮಾರಂಭವು ಡಿ.೨೧ರಂದು ಬೆಳಿಗ್ಗೆ 10 ಗಂಟೆಗೆ ಸಿಂದಗಿಯ ಪ್ರೇರಣಾ ಪಬ್ಲಿಕ ಶಾಲೆಯಲ್ಲಿ ಜರುಗಲಿದೆ.
ಈ ಸುವರ್ಣಾವಕಾಶ ಮಾಡಿಕೊಟ್ಟ ಮಕ್ಕಳ ಬಳಗ ಸಿಂದಗಿ ಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಕ್ಕಳ ಸಾಹಿತಿ ಹ.ಮ.ಪೂಜಾರಿ ರವರಿಗೆ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ಎಸ್.ಆಯ್.ಜೋಗೂರ ಧನ್ಯವಾದ ತಿಳಿಸಿದ್ದಾರೆ.