Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸುಸ್ಥಿರ ಅಭಿವೃದ್ಧಿಯ ಎಲ್ಲ ಪ್ರಕಾರಗಳಲ್ಲಿ ತಳಪಾಯವಾಗಿ ನಿಂತು ಪ್ರತಿ ಮಜಲಿನಲ್ಲಿ ಮುಖ್ಯ ಪಾತ್ರ ವಹಿಸುವ ರೈತನನ್ನು ದೇಶದ ಅಸ್ಮಿತೆಯನ್ನಾಗಿಸುವ ಸಂಕಲ್ಪ ದೀವಿಗೆ ಹಚ್ಚಿ ಎಂದು ಚಿಂತಕ ಅರವಿಂದ ಕೊಪ್ಪ ಕರೆ ನೀಡಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಮಾದರಿ ಪರಿಶಿಷ್ಠ ಜಾತಿ – ಪರಿಶಿಷ್ಠ ಪಂಗಡಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಮನೋಹರ ಮುಕ್ಕಣ್ಣಪ್ಪ ಕೋರಿ ರೈತ ಕೌಶಲ್ಯ ಅಭಿವೃದ್ಧಿ ಕೇಂದ್ರ, ಬಸರಕೋಡ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಹಾಗೂ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿಗಾಗಿ ಯುವಕರು – ಯುವಕರಿಗಾಗಿ ಕೃಷಿ ಅಭಿಯಾನ ಉದ್ಘಾಟನೆ ಹಾಗೂ ರೈತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತನ ಬಗ್ಗೆ ದೇಶದಲ್ಲಿ ಹೆಚ್ಚುತ್ತಿರುವ ಅಸಡ್ಡೆ ಭಾವನೆ ಹೀಗೆಯೇ ಮುಂದುವರೆದಲ್ಲಿ ದೇಶದ ಆಹಾರ ಚಕ್ರವೇ ಕುಸಿದು ಬೀಳುವ ಆತಂಕ ದೇಶವನ್ನು ಕಾಡಲಿದ್ದು ಕೂಡಲೇ ಸರ್ಕಾರ ಮತ್ತು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ನಿವಾಸಿಗಳು ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಗೃಹ ರಕ್ಷಕ ತಂತ್ರಾಂಶದಲ್ಲಿ ನಿಮ್ಮ ಮನೆಯಿರುವ ಸ್ಥಳದ ಮಾಹಿತಿಯನ್ನು ಸೇರ್ಪಡೆ ಮಾಡಬೇಕು ಎಂದು ಪಿಎಸ್‌ಐ ಆರೀಫ ಮುಷಾಪುರಿ ಹೇಳಿದರು.ಪಟ್ಟಣದ ಎಚ್. ಜಿ.ಪದವಿ ಪೂರ್ವ ವಿದ್ಯಾಲಯದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಿಂದಗಿ ಪೋಲಿಸ ಠಾಣೆ ಇವುಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪೊಲೀಸ್ ಗಸ್ತು ನೀಡಲಾಗುವುದು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆ ಯಾಗುತ್ತದೆ. ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ ಬಳಿ ಯಾರಾದರೂ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಬಲವಂತವಾಗಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಭಾವಿಪ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.ನಂತರ ವಿದ್ಯಾರ್ಥಿ ಮುಖಂಡ ಸಚಿನ ದಾನಗೊಂಡ ಮಾತನಾಡಿ, ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಶಾಲಾ ಕಾಲೇಜಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಲಭ್ಯವಾಗದ ಕಾರಣ ತರಗತಿಯ ಅವಧಿ ಸರಿಯಾಗಿ ಸಿಗುತ್ತಿಲ್ಲ, ಈ ಕುರಿತು ಡಿಪೋ ಮ್ಯಾನೇಜರ್ ಅವರಿಗೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಸರಕಾರ ಶಕ್ತಿ ಯೋಜನೆಯ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ವ್ಯವಸ್ಥೆ ಕಲ್ಪಿಸಿದ್ದರಿಂದ, ವಿದ್ಯಾರ್ಥಿಗಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಇಂಡಿ ಬಸ್ ಘಟಕಕ್ಕೆ ಇನ್ನಷ್ಟು ಬಸ್‌ಗಳನ್ನು ಹೆಚ್ಚಿಸಿಕೊಂಡು ಎಲ್ಲಾ ಮಾರ್ಗಗಳಲ್ಲಿ ಬಸ್ ಓಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಗಣೇಶ ಹಂಜಗಿ, ಸಮರ್ಥ ಗಾಯಕವಾಡ, ಚಂದ್ರಕಾಂತ ಕಾಂಬಳೆ, ರಾಹುಲ್ ಜಾಧವ, ಸೋಮನಾಥ, ಗಂಗಾ, ದೀಪಾ, ರಕ್ಷೀತಾ, ಸುಭ್ರಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಆಳೂರ ಗ್ರಾಮದ ಬಂಗಾರೇವ್ವ ತಂದೆ ಸಿದ್ದಪ್ಪ ಅವಜಿರವರ ಮನೆಯಲ್ಲಿದ ೩.೫೦ ತೊಲಿ ಬಂಗಾರ ಮತ್ತು ೩ಲಕ್ಷ ನಗದು ಕಳ್ಳವಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.ಶಿಕ್ಷಕಿ ಬಂಗಾರೆವ್ವ ಅವಜಿ ಅವರು ಆಳೂರ ಗ್ರಾಮದಲ್ಲಿದ ಅವರ ಮನೆಯಲ್ಲಿ ಬಂಗಾರ ಮತ್ತು ನಗದು ಇಟ್ಟು ತೊಟಕ್ಕೆ ಹೊಗಿದರಿಂದ ಕಳ್ಳರು ಮನೆಯ ಬಾಗಿಲು ಒಡೆದು ಕಳ್ಳತನ ಎಸಗಿದ್ದಾರೆ. ಈ ಕುರಿತು ಇಂಡಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು. ಗ್ರಾಮಿಣ ಪಿಎಸ್‌ಐ ಸೋಮೆಶ ಗೆಜ್ಜಿ ಹಾಗೂ ವಿಜಯಪುರದ ಸ್ವಾನದಳ ಹಾಗೂ ಬೆರಳಚ್ಚಗಾರರು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಂದೆ ತಾಯಿಗಳ ತ್ಯಾಗದ ಋಣ, ಸಮಾಜ ಮತ್ತು ವಿದ್ಯೆ ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯ ಋಣ ಎಂದೂ ತೀರಿಸಲಾಗದು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ರಮೇಶ ಆರ್.ಹೆಚ್ ಹೇಳಿದರು.ಪಟ್ಟಣದ ಜಿ.ಆರ್. ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ಮಂಡಳಿಯ ನಿರ್ದೇಶಕ ಅಜೀತ ಧನಶೆಟ್ಟಿ ಮಾತನಾಡಿದರು.ಹಳೆಯ ವಿದ್ಯಾರ್ಥಿಗಳ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ಎಸ್.ಎಸ್.ದೇಸಾಯಿ, ಉಪಾಧ್ಯಕ್ಷರು ಬಿ.ಡಿ.ಪಾಟೀಲ ಕಾರ್ಯದರ್ಶಿಗಳು ಜಗದೀಶ ಕ್ಷತ್ರಿ ಸಹ ಕಾರ್ಯದರ್ಶಿಗಳು ರಶ್ಮಿ ಗಜಾಕೋಶ ಕೋಶಾಧಿಕಾರಿಗಳು ರಮೇಶ ಪೂಜಾರಿ ಸದಸ್ಯರು ಪುಟ್ಟುಗೌಡ ಪಾಟೀಲ ವಿಜಯಕುಮಾರ ರಾಠೋಡ. ಶ್ರೀಶೈಲ ನವಲಿ, ರಾವುತಪ್ಪಾ ದಳವಾಯಿ ಪ್ರಶಾಂತ ಹಿರೇಮಠ, ಆನಂದ ತಾಂಬೆ, ರಾಮ ಕಾಂಬಳೆ ಪೀರಪ್ಪಾ ದಳವಾಯಿ ಆಯ್ಕೆಯಾದರು.ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಎಸ್.ಆರ್.ತಾಂಬೆ, ಬಿ.ಹೆಚ್.ಬಗಲಿ, ಕುಮಾರಿ. ಧಾನಮ್ಮ ಪಾಟೀಲ, ಪ್ರಾಚಾರ್ಯ ಡಾ.ಎಸ್.ಬಿ.ಜಾಧವ, ಡಾ.ವಿಶ್ವಾಸ ಕೊರವಾರ,…
ಉದಯರಶ್ಮಿ ದಿನಪತ್ರಿಕೆಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಾಮಾನ್ಯ ಸಭೆಯಲ್ಲಿ ಮಾರಾಮಾರಿಯಾಗಿ ಕೊನೆಗೆ ಪೊಲೀಸ್ ಠಾಣಾ ಮೆಟ್ಟಿಲೇರುವಂತಾಗಿದೆ.ಸಂಸ್ಥೆಯ ಆವರಣದಲ್ಲಿ ಡಿಫಾರಂಸಿ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ ಇವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕಾಸುಗೌಡ ಬಿರಾದಾರ ಹಾಜರಿದ್ದರಿಂದ ಮೂಲಕ ಅವರಿಗೆ ನಿಮ್ಮ ಸದಸ್ಯತ್ವ ರದ್ದು ಪಡಿಸಲಾಗಿದೆ. ಕಾರಣ ನೀವು ಸಭೆಯಲ್ಲಿ ಇರುವ ಅರ್ಹತೆ ಹೊಂದಿಲ್ಲ ಹೀಗಾಗಿ ನೀವು ಹೊರಗೆ ಹೋಗಿ ಎಂದು ಸದಸ್ಯರು ಹೇಳಿದರು.ಅದಕ್ಕೆ ಪ್ರತಿಯಾಗಿ ಕಾಸುಗೌಡ ಬಿರಾದಾರರವರು ನಮ್ಮ ಕುಟುಂಬವು ಈ ಸಂಸ್ಥೆಗೆ ೧೨ ಎಕರೆ ಜಾಗವನ್ನು ದಾನ ರೂಪದಲ್ಲಿ ನೀಡಿರುತ್ತಾರೆ, ಹೀಗಾಗಿ ನನ್ನ ಸದಸ್ಯತ್ವ ರದ್ದು ಮಾಡಲು ಬರುವದಿಲ್ಲ ಎಂದು ವಾದಿಸಿದರು.ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳ ಪ್ರಯೋಗವಾಗತೊಡಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಬಿರಾದಾರ ಮತ್ತು ನಿರ್ದೇಶಕ ಸಾತು ತೆನೆಹಳ್ಳಿ ಇವರು ಕಾಸುಗೌಡ ಮೇಲೆ ಹಲ್ಲೆ ಮಾಡಿ ಅಂಗಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಗೆ ಯುಗದರ್ಶಿನಿ ಪ್ರಶಸ್ತಿಯನ್ನು ನೀಡಿದೆ. ಯುಗದರ್ಶಿನಿ ಸಂಸ್ಥೆಯು ಉತ್ತರಪ್ರದೇಶದ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಡಿ.೨೬ರಿಂದ ೨೮ರವರೆಗೆ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನವು ಹಮ್ಮಿಕೊಂಡಿದೆ, ಈ ಸಂದರ್ಭದಲ್ಲಿ ಬೆರಗು ಪ್ರಕಾಶನ ಸಂಸ್ಥೆಯ ಕಾರ್ಯವನ್ನು ಗುರುತಿಸಿ ಪ್ರಕಾಶಕಿ ಶ್ರೀಮತಿ ವಿಜಯಲಕ್ಷ್ಮಿ ಆರ್. ಕತ್ತಿ ಅವರಿಗೆ ಯುಗದರ್ಶಿನಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಸಮ್ಮೇಳನದ ಸಂಚಾಲಕಿ ಡಾ.ಸರಸ್ವತಿ ಚಿಮ್ಮಲಗಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರು ಹಾಗೂ ಮಹಿಳಾ ಸಾಹಿತಿಗಳು ಭಾಗವಹಿಸಲಿದ್ದಾರೆ.ಬೆರಗು ಪ್ರಕಾಶನವು ಈವರೆಗೆ ೧೫೬ ಪುಸ್ತಕಗಳನ್ನು ಸಾರಸ್ವತ ಲೋಕಕ್ಕೆ ನೀಡಿದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಸ್ಥೆಗಳು ಗೌರವಿಸಿವೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿ. 27, ಶುಕ್ರವಾರ ರಂದು ಬೆಳಗಾವಿಯಲ್ಲಿ ನಡೆಯಲಿರುವ “ಬೃಹತ್ ಕಾಂಗ್ರೆಸ್ ಸಮಾವೇಶ” ದಲ್ಲಿ ಪಾಲ್ಗೊಳ್ಳಲು ಬಬಲೇಶ್ವರ ವಿಧಾನಸಭಾ ಕ್ಷೇತ್ರದ 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತರು ಭಾಗವಹಿಸಲಿದ್ದಾರೆ.ಬೆಳಗಾವಿಯ ಕ್ಲಬ್ ರಸ್ತೆಯ ಸಿ.ಪಿ.ಎಡ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಪ್ರತಿ ಗ್ರಾಮಗಳಿಂದ ಯುವಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಕೋಟಾ-ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದುಗೌಡನವರ ಹಾಗೂ ಈರಗೊಂಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂಪತ್ ಗುಣಾರಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಟ್ರಾಮಾ ಬ್ಲಾಕ್ ನಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಶ್ರವಣ ದೋಷ ಹೊಂದಿರುವ ಮಕ್ಕಳಲ್ಲಿ ಕಾಕಲಿಯರ್ ಇಂಪ್ಲಾಟ್ ನ ಪ್ರಯೋಜನಗಳು ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು.ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜೆ. ಎನ್. ಮೆಡಿಕಲ್ ಕಾಲೇಜಿನ ಕಾಕ್ಲಿಯರ್ ಇಂಪ್ಲಾಟ್ ಸರ್ಜನ್ ಡಾ. ಪ್ರೀತಿ ಹಜಾರೆ ವೈದ್ಯರು ಮತ್ತು ವಾಕ್ ಶ್ರವಣ ತಜ್ಞರು ಹಾಗೂ 200 ಆಶಾ ಕಾರ್ಯಕರ್ತೆಯರಿಗೆ ಶ್ರವಣದೋಷ ಮತ್ತು ಕಾಕಲಿಯರ್ ಇಂಪ್ಲಾಂಟ್ ನಿಂದ ಆಗುವ ಲಾಭಗಳ ಕುರಿತು ಉಪನ್ಯಾಸ ನೀಡಿದರು.ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಶ್ರವಣದೋಷ ಸಮಸ್ಯೆ ಇರುವ ಐದು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಒಂದು ವರ್ಷದ ತರಬೇತಿ ಸೌಲಭ್ಯವಿದೆ. ಅಗತ್ಯವಿರುವ ಪೋಷಕರು ಇದರ…
2.48 ಗಂಟೆಯಲ್ಲಿ 21 ಕಿ.ಮೀ. ಓಟ ಓಡಿದ14 ವರ್ಷದ ಅನಿಕೇತ | ನೋಡಲು ಬಂದು ಓಡಿದ ಶ್ರೀಗಳು | ಕೌಟುಂಬಿಕ ಕಲರವ ಸೃಷ್ಠಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೊರಗಡೆ ಉದ್ಯೋಗದಲ್ಲಿರುವ ಜನ ತಮ್ಮೂರ ಜಾತ್ರೆಗೆ ಬಂದು ಸಂಭ್ರಮಿಸುವುದು ಮೂಮೂಲು. ಬಾಲಕರಿಂದ ಹಿಡಿದು ಯುವಕರಾದಿಯಾಗಿ ಹಿರಿಯರೂ ಪಾಲ್ಗೊಂಡು ಸಂಭ್ರಮಿಸುವುದು ವಾಡಿಕೆ. ಆದರೆ, ಈ ಬಾರಿ ನಗರದಲ್ಲಿ ರವಿವಾರ ನಡೆದ ವೃಕ್ಷಥಾನ್ ಹೆರಿಟೇಜ್ ರನ್-2024 ಈ ಬಾರಿ ಹಲವಾರು ವೈಶಿಷ್ಠ್ಯಗಳಿಗೆ ಸಾಕ್ಷಿಯಾಗಿದೆ.14 ವರ್ಷದ ಪೋರ 21 ಕಿ. ಮೀ. ಓಡಿ ವಿಧಾನ ಸಭಾಧ್ಯಕ್ಷರು ಮತ್ತು ಸಚಿವರಿಂದ ಪ್ರಶಂಸೆಗೆ ಪಾತ್ರನಾದರೆ, ಬೆಂಗಳೂರ ಮತ್ತು ಹೈದರಾಬಾದಿನಲ್ಲಿ ವಾಸಿಸುವ ಒಂದೇ ಊರಿನ ನಾಲ್ಕು ಕುಟುಂಬಗಳು ತಮ್ಮ ಮಕ್ಕಳ ಸಮೇತ ಓಟದಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. ಈ ಓಟವನ್ನು ನೋಡಲು ಅಮೇರಿಕದಿಂದ ಬಂದ ಸ್ವಾಮೀಜಿಯೊಬ್ಬರು ಸೇರಿದ ಜನರನ್ನು ನೋಡಿ ತಾವು ಕೂಡ ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ಈ ಬಾರಿಯ ವಿಶೇಷವಾಗಿದೆ. ಕೌಟುಂಬಿಕ ಕಲರವ ಸೃಷ್ಠಿಸಿದ ವೃಕ್ಷಥಾನ್ ಹೆರಿಟೇಜ್ ರನ್:ಮತ್ತೊಂದೆಡೆ ಬಸವನ…
