ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಾಮಾನ್ಯ ಸಭೆಯಲ್ಲಿ ಮಾರಾಮಾರಿಯಾಗಿ ಕೊನೆಗೆ ಪೊಲೀಸ್ ಠಾಣಾ ಮೆಟ್ಟಿಲೇರುವಂತಾಗಿದೆ.
ಸಂಸ್ಥೆಯ ಆವರಣದಲ್ಲಿ ಡಿಫಾರಂಸಿ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ ಇವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕಾಸುಗೌಡ ಬಿರಾದಾರ ಹಾಜರಿದ್ದರಿಂದ ಮೂಲಕ ಅವರಿಗೆ ನಿಮ್ಮ ಸದಸ್ಯತ್ವ ರದ್ದು ಪಡಿಸಲಾಗಿದೆ. ಕಾರಣ ನೀವು ಸಭೆಯಲ್ಲಿ ಇರುವ ಅರ್ಹತೆ ಹೊಂದಿಲ್ಲ ಹೀಗಾಗಿ ನೀವು ಹೊರಗೆ ಹೋಗಿ ಎಂದು ಸದಸ್ಯರು ಹೇಳಿದರು.
ಅದಕ್ಕೆ ಪ್ರತಿಯಾಗಿ ಕಾಸುಗೌಡ ಬಿರಾದಾರರವರು ನಮ್ಮ ಕುಟುಂಬವು ಈ ಸಂಸ್ಥೆಗೆ ೧೨ ಎಕರೆ ಜಾಗವನ್ನು ದಾನ ರೂಪದಲ್ಲಿ ನೀಡಿರುತ್ತಾರೆ, ಹೀಗಾಗಿ ನನ್ನ ಸದಸ್ಯತ್ವ ರದ್ದು ಮಾಡಲು ಬರುವದಿಲ್ಲ ಎಂದು ವಾದಿಸಿದರು.
ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳ ಪ್ರಯೋಗವಾಗತೊಡಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಬಿರಾದಾರ ಮತ್ತು ನಿರ್ದೇಶಕ ಸಾತು ತೆನೆಹಳ್ಳಿ ಇವರು ಕಾಸುಗೌಡ ಮೇಲೆ ಹಲ್ಲೆ ಮಾಡಿ ಅಂಗಿ ಹರಿದು ಅವಾಚ್ಯ ಶಬ್ದ ಪ್ರಯೋಗಿಸಿ ಹೊಡೆದ ಘಟನೆ ನಡೆದಿದೆ ಎಂದು ಕಾಸುಗೌಡ ಬಿರಾದಾರರವರು ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ ಇವರ ಬೆಂಬಲ ಇದೆ ಎಂದು ಮತ್ತು ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಬಿರಾದಾರ ಮತ್ತು ನಿರ್ದೇಶಕ ಸಾತು ತೆನೆಹಳ್ಳಿ, ದೀಪಕ್ ಮಾಣಿಕಲಾಲ್ ದೋಶಿ ಅವರ ಮೇಲೆ ಶಹರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Posts
Add A Comment