ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಗೆ ಯುಗದರ್ಶಿನಿ ಪ್ರಶಸ್ತಿಯನ್ನು ನೀಡಿದೆ. ಯುಗದರ್ಶಿನಿ ಸಂಸ್ಥೆಯು ಉತ್ತರಪ್ರದೇಶದ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಡಿ.೨೬ರಿಂದ ೨೮ರವರೆಗೆ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನವು ಹಮ್ಮಿಕೊಂಡಿದೆ, ಈ ಸಂದರ್ಭದಲ್ಲಿ ಬೆರಗು ಪ್ರಕಾಶನ ಸಂಸ್ಥೆಯ ಕಾರ್ಯವನ್ನು ಗುರುತಿಸಿ ಪ್ರಕಾಶಕಿ ಶ್ರೀಮತಿ ವಿಜಯಲಕ್ಷ್ಮಿ ಆರ್. ಕತ್ತಿ ಅವರಿಗೆ ಯುಗದರ್ಶಿನಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಸಮ್ಮೇಳನದ ಸಂಚಾಲಕಿ ಡಾ.ಸರಸ್ವತಿ ಚಿಮ್ಮಲಗಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರು ಹಾಗೂ ಮಹಿಳಾ ಸಾಹಿತಿಗಳು ಭಾಗವಹಿಸಲಿದ್ದಾರೆ.
ಬೆರಗು ಪ್ರಕಾಶನವು ಈವರೆಗೆ ೧೫೬ ಪುಸ್ತಕಗಳನ್ನು ಸಾರಸ್ವತ ಲೋಕಕ್ಕೆ ನೀಡಿದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಸ್ಥೆಗಳು ಗೌರವಿಸಿವೆ.