Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ಜಿ. ಬಿ. ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಾಲು, ಪೇಪರ ದಿನನಿತ್ಯದ ವಹಿವಾಟುಗಳ ದಿನಗಳ ಗುಂಡು ಕಟ್ಟುವ ಹಳೆ ಹಾಳೆಗಳಿಗೆ ವಿದಾಯ, ಹೊಸದಕ್ಕೆ ಸ್ವಾಗತ ಅಗಲಿದ ಹಿರಿಯರ ನೆನಪು, ಸಿಹಿ, ಕಹಿ ಘಟನೆಗಳ ಸ್ಮರಣೆ. ಹಾಗಾಗಬಾರದಿತ್ತೆಂಬ ಹಳಹಳಿ ಮತ್ತೆ ಮರೆವು ಅದೇ ಕುರಡು ಕಾಂಚಾಣದಾಟ, ಸತ್ಯದ ಮೇಲೆ ಹಾರಾಡುವ ಸುಳ್ಳುಗಳು, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕೆಂಬುವ ಸವಕಳಿಯಾದ ಭೋದನೆ.ನಾಲ್ಕಾರು ದಿನಗಳ ಹುರುಪು ಕೋಟಿ, ಕೋಟಿ ಖರ್ಚಿನ ಪಾರ್ಲಿಮೆಂಟು, ವಿಧಾನ ಸಭೆಗಳಲ್ಲಿ ಆಡಳಿತ, ವಿರೋಧಿಗಳ ಕೆಸರಾಟ,ಮಸ್ತಿ, ಮೋಜು ಮತ ಹಾಕಿ ಚುನಾಯಿಸಿದ ನಾಗರಿಕ ಮತನೀಡಿದ ಕೖ ಹಿಚುಕಿ ಪಶ್ಚಾತ್ತಾಪ, ಮತ್ತೆ ಮರೆವು ಆದಕ್ಕೇನೆ ಬೆಂಬಲ ಪ್ರಜಾತಂತ್ರದ ಪದಗಳಿಗೆ ಪ್ರತಿಜ್ನೆ ಮಾಡಿದ ಸ್ವಜನಪಕ್ಷ ಪಾತ, ಜಾತ್ಯಾತೀತೆಗಳು ಕೇವಲ ಅಕ್ಷರಗಳಲ್ಲಿ ಹಳೆಯ ವರ್ಷ ಗತಿಸುವ ನೆಪದಲಿ ಗುಂಡು, ತುಂಡು, ಮೋಜು ಮಸ್ತಿ ಹೊಸ ವರ್ಷಕೆ ಹೊಸ ನಿರ್ಣಯ, ನಿರ್ಧಾರ ಎಂಬ ಬಾವ ಕೆಲ ದಿನ ಮಾತ್ರ ಮತ್ತೆ ಅದೇ ನಡೆ, ಅದೇ ಮಾತು ವರ್ಷ ವರ್ಷ ಕಳೆದರೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶರಣು ವಿಶ್ವ ವಚನ ಫೌಂಡೇಷನ್ ಮೈಸೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇವರ ಸಹಯೋಗದಲ್ಲಿ ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ನಡೆದ ೧೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜ ಮುಖಿ ಕಾರ್ಯ, ಉತ್ತಮ ಬೋಧನೆ, ತರಬೇತಿ ನೀಡುವ ಕೌಶಲ್ಯ ಹಾಗೂ ಸ್ಲಮ್ ಮಕ್ಕಳಿಗಾಗಿ ಉಚಿತ ಕಲಿಕಾ ಕೇಂದ್ರ ಸ್ಥಾಪಿಸಿ ಪಾಠ ಬೋಧನೆ ಮಾಡುವಲ್ಲಿ ಯಶಸ್ವಿಯಾಗಿರುವ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಕರ್ನಾಟಕ ಸ್ಟೇಟ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರದ ಖಜಾಂಚಿ, ಕಿಡ್ಸ್ಜೋನ್ ಶಾಲೆಯ ಆಡಳಿತಾಧಿಕಾರಿ ಹಾಗೂ ಶಿಕ್ಷಕಿ ಶ್ರೀಮತಿ ಸುಮಾ ಚೌಧರಿ ಇವರಿಗೆ ಫೌಂಡೇಷನ್‌ನ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ, ಶ್ರೀಮತಿ ರೂಪಾಕುಮಾರ ಸ್ವಾಮಿ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಅತಿಥಿಗಳು “ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಿದರು.ಚಿನ್ಮಯಜ್ಞಾನಿ ಪ್ರಶಸ್ತಿಗೆ ಭಾಜನರಾದ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಕುಮಸಿ ಗ್ರಾಮದ ಭೀಮಾನದಿ ತೀರದಲ್ಲಿ ಇರುವ ತ್ರಿಕ್ರಮ ಭಾರತೀಯತಿಗಳ ಮಹಾಸಂಸ್ಥಾನ, ನರಸಿಂಹ ಸರಸ್ವತಿ ವಿಶ್ವರೂಪ ದರ್ಶನ ದತ್ತ ಪಾದುಕೆ ಕ್ಷೇತ್ರದಲ್ಲಿ ದತ್ತಾತ್ರೇಯ ಜನ್ಮದಿನೋತ್ಸವ ಜನವರಿ 1 ರಂದು ಜರುಗುವುದು.ನರಸಿಂಹ ಸರಸ್ವತಿ ದತ್ತ ಪ್ರಭುಗಳು ಮಿತಿ ವೈಶಾಖ, ಶುದ್ಧ ದಶಮಿ ದಿನದಂದು ತ್ರಿವಿಕ್ರಮ ಭಾರತಿಯತಿಗಳಿಗೆ ವಿಶ್ವರೂಪದ ದರ್ಶನ ಕೊಟ್ಟಂತ ಈ ಸ್ಥಳದಲ್ಲಿ ದತ್ತ ಮಹಾರಾಜರ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.ಬೆಳಿಗ್ಗೆ ದತ್ತ ಪಾದಕ್ಕೆಗಳಿಗೆ ಅಭಿಷೇಕ, ರುದ್ರಸ್ವಾಹಾಕಾರ, ಬಿಲ್ವಾರ್ಚನೆ ಜರುಗುವುದು.ಮಧ್ಯಾಹ್ನ 12=00 ಗಂಟೆಗೆ ದತ್ತಾತ್ರೇಯ ತೊಟ್ಟಿಲು ಕಾರ್ಯಕ್ರಮ, ಮಹಾಪ್ರಸಾದ,ಸೋಲಾಪುರ, ನಿಪ್ಪಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗುವುದು ಎಂದು ಧರ್ಮದರ್ಶಿ ರಘುನಾಥ್ ಭಟ್ ತಿಳಿಸಿದ್ದಾರೆ
ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂಧತ್ವವನ್ನು ಮೆಟ್ಟಿನಿಂತು ಸಂಗೀತದ ಮೂಲಕ ಸಮಾಜಕ್ಕೆ ಬೆಳಕಾದವರು ಪಂಡಿತ್ ಪಂಚಾಕ್ಷರ ಗವಾಯಿಗಳು. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿ ಬದುಕಿನಲ್ಲಿ ಸಾಧಿಸಿದವರು ಬಹಳ ಜನರಿದ್ದಾರೆ. ಅಂಧರಿಗಾಗಿಯೇ ಲಿಪಿ ಸಿದ್ದಪಡಿಸಿದ ಲೂಯಿಸ್ ಬ್ರೆಲ ಅಂಧರಿಗೆ ಬೆಳಕಾದವರು.ಅಂಧರಿಗೆ ಅವಕಾಶ ಬೇಕಷ್ಟೇ, ಬೇಕಾದದ್ದನ್ನು ಸಾಧಿಸುವ ಶಕ್ತಿ ಅವರಲ್ಲಿದೆ ಎಂಬುದಕ್ಕೆ ಪಂಚಾಕ್ಷರ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳೇ ಸಾಕ್ಷಿ ಎಂದು ಷಣ್ಮುಖಾರೂಢ ಮಠದ ಪೂಜ್ಯಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಬೆಂಗಳೂರು, ಇವರು ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ವಿಜಯಪುರ ಇವರ ಆಯೋಜನೆಯಲ್ಲಿ ಹಮ್ಮಿಕೊಂಡ ‘ಅಖಿಲ ಕರ್ನಾಟಕ ಅಂಧರ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ವಿಜಯಪುರದಲ್ಲಿ ಹಮ್ಮಿಕೊಂಡಿರುವುದು ಇತಿಹಾಸದಲ್ಲಿ ಬರೆದಿಡುವಂತಹದ್ದು, ಸಾಮಾನ್ಯರಿಗಿಂತ ವಿಶಿಷ್ಟ ಸಾಹಿತ್ಯ ರಚಿಸಿದ ಅಂಧರ ಸಾಹಿತ್ಯ ಪ್ರತಿಭೆ ಅನಾವರಣಗೊಂಡಿರುವುದು ಶ್ಲಾಘನೀಯ ಎಂದರು.ಜ್ಞಾನ ಯೋಗಶ್ರಮದ ಪ. ಪೂ ಬಸವಲಿಂಗ…
ಜಯ್ ನುಡಿ(ವ್ಯಕ್ತಿತ್ವ ವಿಕಸನ ಲೇಖನ ಮಾಲೆ) ಲೇಖನ – ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಶಿಲ್ಪಿಯೊಬ್ಬ ಒಂದು ಕಾಡಿನಿಂದ ದಾಟಿ ಹೋಗುತ್ತಿದ್ದ. ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಎರಡು ಹೆಬ್ಬಂಡೆಗಳನ್ನು ನೋಡಿದ. ಬಹು ದಿನಗಳಿಂದ ಅವನು ಇಂತಹ ಕಲ್ಲುಗಳ ಹುಡುಕಾಟದಲ್ಲಿದ್ದ. ಕಾಡಿನಲ್ಲಿ ಸುಮ್ಮನೇ ಬಿದ್ದಿರುವ ಕಲ್ಲುಗಳಿಗೆ ಪೂಜ್ಯ ಸ್ಥಾನ ನೀಡುವುದು ಉತ್ತಮ ಆಲೋಚನೆ ಎನಿಸಿತು. ಮರುದಿನ ಕೆತ್ತನೆಗೆ ಬೇಕಾದ ಸರಂಜಾಮುಗಳನ್ನು ತಂದು ಅವುಗಳಲ್ಲಿ ಒಂದು ಕಲ್ಲನ್ನು ದೇವರ ಮೂರ್ತಿಗೆಂದು ಕೆತ್ತಲು ಆರಂಭಿಸಿದ. ಆ ಕಲ್ಲು ಏಟುಗಳನ್ನು ತಿನ್ನಲು ತನಗೆ ಆಗುತ್ತಿಲ್ಲವೆಂದು ಕೆತ್ತನೆಗೆ ಸಹಕರಿಸಲಿಲ್ಲ. ಪೆಟ್ಟು ಬಿದ್ದಲ್ಲಿಂದ ನೋವಿಗೆ ಚೂರು ಚೂರಾಗತೊಡಗಿತು. ಈ ಕಲ್ಲು ಮೂರ್ತಿಯಾಗುವವರೆಗೆ ಸಹಿಸಿಕೊಳ್ಳುವುದಿಲ್ಲ ಎಂದು ಅರ್ಥ ಮಾಡಿಕೊಂಡ. ಶಿಲ್ಪಿ ಅದರ ಪಕ್ಕದಲ್ಲೇ ಇದ್ದ ಕಲ್ಲಿಗೆ ಉಳಿಪೆಟ್ಟು ಕೊಡಲು ಶುರು ಮಾಡಿದ. ಆ ಕಲ್ಲು ಪೆಟ್ಟು ತಿಂದರೂ ಬೆಚ್ಚದೇ ಬೆದರದೇ ಶಿಲ್ಪಿ ಕಟೆದಂತೆ ಕಟೆಸಿಕೊಳ್ಳತೊಡಗಿತು. ಆತ ಕಟೆದಂತೆ ತನ್ನ ನೋವು ವ್ಯಕ್ತಪಡಿಸದೇ ಮೈಯನ್ನು ಆತನಿಗೆ ತಾಳ್ಮೆಯಿಂದ ನೀಡಿತು. ಕಲ್ಲಿನ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ರೈತ ಮಹಿಳೆಯರು ಸೋಮವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತೈದೆಯರಿಗೆ ಉಡಿ ತುಂಬುವ ಮೂಲಕ ರಾಷ್ಟ್ರೀಯ ರೈತ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.ಬೆಳದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜೆ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಭೂತಾಯಿಗೆ ಚರಗ ಚೆಲ್ಲಿದರು. ಗ್ರಾಮದ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯ ಸೇರಿದಂತೆ ಇತರ ವಿಶೇಷ ಭೋಜನವನ್ನು ಭೂತಾಯಿಗೆ ಅರ್ಪಿಸಿದರು.ಚರಗ ಚೆಲ್ಲುವ ಸಂಭ್ರಮ ಮುಗಿದ ನಂತರ ತುಂಬಿದ ಹೊಲದ ಮಧ್ಯ ಮುತೈದೆಯರ ಊಟವಾದ ಮೇಲೆ ಎಲ್ಲರೂ ಸಹ ಭೋಜನವನ್ನು ಸವಿದರು. ಸ್ವಲ್ಪ ಹೊತ್ತು ಹೊಲದಲ್ಲಿ ವಿಶ್ರಾಂತಿ ಕಳೆದು ಸಂಜೆ ವೇಳೆಗೆ ಮನೆಗೆ ಮರುಳಿದರು.ರೇವತಗಾಂವ ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿಯವರು…
ಡಾ.ಮನಮೋಹನಸಿಂಗ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾವಪೂರ್ಣ ಶೃದ್ಧಾಂಜಲಿ ಉದಯರಶ್ಮಿ ದಿನಪತ್ರಿಕೆ ಚಡಚಣ: 1992 ರಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣಗಳಂತಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಸಧೃಡ ಅಡಿಪಾಯ ಹಾಕಿದ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನಸಿಂಗ ಅವರ ನಿಧನದಿಂದ ದೇಶ ಬಡವಾಗಿದೆ ಎಂದು ಶಾಸಕ ವಿಠ್ಠಲ ಕಟಕಧೊಂಡ ಸಂತಾಪ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ. ಮನಮೋಹನಸಿಂಗ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅಯೋಜಿಸಿದ್ದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಡಾ.ರವಿದಾಸ ಜಾಧವ ಮಾತನಾಡಿ, ರೈತರ ಆರ್ಥಿಕತೆ ವೃದ್ಧಿಗಾಗಿ ಸಾಲ ಮನ್ನಾ,ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ, ಆರ್‌ಟಿಐ ಕಾನೂನು ಸೇರಿದಂತೆ ಹಲವು ಋಥಿಕ ಯೋಜನೆಗಳನ್ನು ತಂದ ಮನಮೋಹನಸಿಂಗ ಅವರು,ವಿಶ್ವಕ್ಕೆ ಆರ್ಥಿಕ ನೀತಿಯ ಸಲಹೆಗಾರರಾಗಿದ್ದರು ಎಂದರು.ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ, ನಗರ ಘಟಕದ ಅಧ್ಯಕ್ಷ ಪ್ರಭು ಕೋಳಿ, ಮುಖಂಡ ಮಹಾದೇವ ಹಿರೇಕುರಬರ, ಧಾನಮ್ಮಗೌಡತಿ ಪಾಟೀಲ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನಸಿಂಗ…
ರಾಜ್ಯದಲ್ಲಿ ಸರಣಿ ಆತ್ಮಹತ್ಯೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಚಿಸಿ ಆದೇಶ ಬೆಂಗಳೂರು: ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರಮುಖ ನಾಯಕರನ್ನೊಳಗೊಂಡ ಆಂದೋಲನ ಸಮಿತಿ ರಚಿಸಲಾಗಿದೆ.ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅರಗ ಜ್ಞಾನೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ, ಶಾಸಕ ಬಸವರಾಜ ಮತ್ತಿಮೂಡ್ ಮತ್ತಿತರರು ಈ ಸಮಿತಿಯಲ್ಲಿದ್ದಾರೆ.ಬೀದರ್ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಬೆನ್ನಲ್ಲೇ ಆಂದೋಲನ ಸಮಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಚಿಸಿ ಆದೇಶ ಹೊರಡಿಸಿದ್ದಾರೆ.ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್. ನವೀನ್, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಮಾಜಿ ಸಚಿವ ರಾಜುಗೌಡ, ಮಾಜಿ ಶಾಸಕ ರಾಜ ಕುಮಾರ್ ಪಾಟೀಲ್ ತೇಲ್ಕೂರ್, ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ್, ಜಿಲ್ಲಾಧ್ಯಕ್ಷ ಚಂದು ಪಾಟೀಲ್, ವಕ್ತಾರರಾದ ಭಾಸ್ಕರ್ ರಾವ್, ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ ಕುಮಾರ್, ಮಾಧ್ಯಮ ವಿಭಾಗ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅವರು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ-ಸಾಂಬಾರು ಅನ್ನು ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲಲಾಗುತ್ತದೆ. ಈ ಎಳ್ಳಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿಯೂ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಿತುಎಳ್ಳ ಅಮವಾಸ್ಯೆ ಬಂತು ಎಂದರೆ ಸಾಕು ರೈತರಿಗೆ ಎಲ್ಲಿಲ್ಲದ ಖುಷಿ. ವರ್ಷ ಪೂರ್ತಿ ಭೂಮಿ ತಾಯಿಯ ಮಡಿಲಲ್ಲಿ ಬೆವರು ಸುರಿಸಿ ದುಡಿದು, ವರ್ಷಕ್ಕೊಮ್ಮೆ ಅದೇ ಭೂತಾಯಿ ಒಡಲಿನಲ್ಲಿ ಸಹ ಕುಟುಂಬ ಪರಿವಾರ ಸಮೇತ ವೈವಿಧ್ಯಮಯ ಆಹಾರ ತಯಾರಿಸಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರೇ ಸ್ವರ್ಗವೇ ಧರೆಗಿಳಿದು ಬಂದ ಅನುಭವ ಆಗುತ್ತದೆ.ಮಹಿಳೆಯರು ತರ ತರಹದ ಹೋಳಿಗೆ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಎಣ್ಣೆ ಹೋಳಿಗೆ , ಕರಿಗಡಬು, ಕರ್ಚಿಕಾಯಿ ಬಜ್ಜಿ, ಎಳ್ಳು ಹಚ್ಚಿದ ಸಜ್ಜೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಿದ್ದೇಶ್ವರ ಶ್ರೀಗಳು ಯೋಗ ಮತ್ತು ಆಧ್ಯಾತ್ಮಕತೆಯ ಬೋಧನೆಗಳಿಗೆ ಹೆಸರುವಾಸಿಯಾದ ಭಾರತೀಯ ಆಧ್ಯಾತ್ಮಿಕ ಬೋಧಕ ಮತ್ತು ತತ್ವಜ್ಞಾನಿ ಎಂದು ಕಾತರಾಳದ ಅಮೃತಾನಂದ ಶ್ರೀಗಳು ಹೇಳಿದರು.ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳವರ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಮ್ಮ ಸರಳಾತಿ ಸರಳ ಜೀವನ ಮತ್ತು ಅರ್ಥಪೂರ್ಣ ಬೋಧನೆಗಳ ಮೂಲಕವೇ ಜನಮನಗೆದ್ದಿದ್ದ ಶ್ರೀಗಳ ಒಂದೊಂದು ಮಾತು ಮಾಣಿಕ್ಯ ಎಂದರು.ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಮಾತನಾಡಿ, ನಡೆದಾಡುವ ದೇವರು ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗತ್ ಪ್ರಸಿದ್ದ ರಾಗಿದ್ದರು ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು.ಅಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿ ಎಂದು ಇಚ್ಛಾಮರಣ ಹೊಂದಿದ್ದರು ಎಂದರು.ಚಿಂಚೋಳಿ ಭಾಲ್ಕಿಯ ಸಿದ್ಧರಾಮೇಶ್ವರ ಪಟ್ಟದೇವರು ಮಾತನಾಡಿ, ಉತ್ತಮ ಮಾರ್ಗದಲ್ಲಿ ನಡೆದು ಅದನ್ನೇ ಹೃದಯದಲ್ಲಿ ತುಂಬಿಕೊಂಡು ತಮ್ಮ ಹೃದಯದಲ್ಲಿ ಮೂಡಿದ ಸದ್ಭಾವನೆ ಪಾಠವನ್ನೇ ಮಾತಿನಾನುಭೂತಿಯಲ್ಲಿ ಅಭಿವ್ಯಕ್ತಿಸುವ ಮಹಾತ್ಮರ ಹಾದಿ ಇಂದಿನ ಯುಗದ ಅಪರೂಪದ ಮಹಾತ್ಮರಲ್ಲಿ ಶ್ರೀ…
