ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಕುಮಸಿ ಗ್ರಾಮದ ಭೀಮಾನದಿ ತೀರದಲ್ಲಿ ಇರುವ ತ್ರಿಕ್ರಮ ಭಾರತೀಯತಿಗಳ ಮಹಾಸಂಸ್ಥಾನ, ನರಸಿಂಹ ಸರಸ್ವತಿ ವಿಶ್ವರೂಪ ದರ್ಶನ ದತ್ತ ಪಾದುಕೆ ಕ್ಷೇತ್ರದಲ್ಲಿ ದತ್ತಾತ್ರೇಯ ಜನ್ಮದಿನೋತ್ಸವ ಜನವರಿ 1 ರಂದು ಜರುಗುವುದು.
ನರಸಿಂಹ ಸರಸ್ವತಿ ದತ್ತ ಪ್ರಭುಗಳು ಮಿತಿ ವೈಶಾಖ, ಶುದ್ಧ ದಶಮಿ ದಿನದಂದು ತ್ರಿವಿಕ್ರಮ ಭಾರತಿಯತಿಗಳಿಗೆ ವಿಶ್ವರೂಪದ ದರ್ಶನ ಕೊಟ್ಟಂತ ಈ ಸ್ಥಳದಲ್ಲಿ ದತ್ತ ಮಹಾರಾಜರ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಬೆಳಿಗ್ಗೆ ದತ್ತ ಪಾದಕ್ಕೆಗಳಿಗೆ ಅಭಿಷೇಕ, ರುದ್ರಸ್ವಾಹಾಕಾರ, ಬಿಲ್ವಾರ್ಚನೆ ಜರುಗುವುದು.
ಮಧ್ಯಾಹ್ನ 12=00 ಗಂಟೆಗೆ ದತ್ತಾತ್ರೇಯ ತೊಟ್ಟಿಲು ಕಾರ್ಯಕ್ರಮ, ಮಹಾಪ್ರಸಾದ,
ಸೋಲಾಪುರ, ನಿಪ್ಪಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗುವುದು ಎಂದು ಧರ್ಮದರ್ಶಿ ರಘುನಾಥ್ ಭಟ್ ತಿಳಿಸಿದ್ದಾರೆ

