ಡಾ.ಮನಮೋಹನಸಿಂಗ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾವಪೂರ್ಣ ಶೃದ್ಧಾಂಜಲಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: 1992 ರಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣಗಳಂತಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಸಧೃಡ ಅಡಿಪಾಯ ಹಾಕಿದ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನಸಿಂಗ ಅವರ ನಿಧನದಿಂದ ದೇಶ ಬಡವಾಗಿದೆ ಎಂದು ಶಾಸಕ ವಿಠ್ಠಲ ಕಟಕಧೊಂಡ ಸಂತಾಪ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ. ಮನಮೋಹನಸಿಂಗ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅಯೋಜಿಸಿದ್ದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಡಾ.ರವಿದಾಸ ಜಾಧವ ಮಾತನಾಡಿ, ರೈತರ ಆರ್ಥಿಕತೆ ವೃದ್ಧಿಗಾಗಿ ಸಾಲ ಮನ್ನಾ,ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ, ಆರ್‌ಟಿಐ ಕಾನೂನು ಸೇರಿದಂತೆ ಹಲವು ಋಥಿಕ ಯೋಜನೆಗಳನ್ನು ತಂದ ಮನಮೋಹನಸಿಂಗ ಅವರು,ವಿಶ್ವಕ್ಕೆ ಆರ್ಥಿಕ ನೀತಿಯ ಸಲಹೆಗಾರರಾಗಿದ್ದರು ಎಂದರು.
ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ, ನಗರ ಘಟಕದ ಅಧ್ಯಕ್ಷ ಪ್ರಭು ಕೋಳಿ, ಮುಖಂಡ ಮಹಾದೇವ ಹಿರೇಕುರಬರ, ಧಾನಮ್ಮಗೌಡತಿ ಪಾಟೀಲ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನಸಿಂಗ ಅವರ ಸಾಧನೆಗಳನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ರಫೀಕ ಮಕಾನದಾರ, ಇಲಾಯಿ ನದಾಫ, ರಮೇಶ ಶಿಂಧೆ, ಪರಸು ಶಿಂದೆ,ಕುತುಬುದ್ದಿನ್ ಪಟೇಲ, ಲಾಲಸಾಬ ಅತ್ತಾರ, ಶಬ್ಬೀರ ನದಾಫ, ಸತೀಶ ಉಟಗಿ,ರವಿ ಬಿರಾದಾರ, ಕೆ.ಎಂ.ಅರವತ್ತಿ, ವಿನೋದ ಬಿರಾದಾರ, ದೇವಪ್ಪಗೌಡ ಪಾಟೀಲ, ಮಲ್ಲು ಪುಜಾರಿ, ಮಹಾನಂದಾ ಪೂಜಾರಿ, ನಾರಾಯಣ ವಾಘಮೋರೆ, ಮುರ್ತುಜಿ ನದಾಫ,ಬಾಬು ಕೊಂಕಣಿ, ಸುಭಾಸ್ ಮೋರೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು,ಸಾರ್ವಜನಿಕರು ಇದ್ದರು.
ಕಾರ್ಯಕ್ರಮದ ಮೋದಲು ಡಾ.ಮನಮೋಹನಸಿಂಗ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ,ಜ್ಯೋತಿ ಬೆಳಗಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.

