Subscribe to Updates
Get the latest creative news from FooBar about art, design and business.
Author: editor.udayarashmi@gmail.com
೨,೬೧,೩೪೯ ಮತದಾರರಿಗೆ ಗಣತಿ ನಮೂನೆ ವಿತರಣೆ | ಮತದಾರರ ನೋಂದಣಿ ಅಧಿಕಾರಿ ವಿಜಯ ಮೆಕ್ಕಳಕಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಮತಕ್ಷೇತ್ರದಲ್ಲಿ ೨,೯೦,೪೭೯ ಮತದಾರರಿದ್ದು, ಈ ಪೈಕಿ ೨,೬೧,೩೪೯ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಿ ಅಧಿಕಾರಿ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಶೇ.೭೭.೬೮ ರಷ್ಟು ಮತದಾರರು ಮ್ಯಾಪ್ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಮನೆ ಮನೆ ಭೇಟಿ ಹಾಗೂ ಆನ್ ಲೈನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಡಿಜಿಟಲೀಕರಣ ಪ್ರಕ್ರಿಯೆಯು ಚುರುಕಾಗಿ ನಡೆದಿದೆ ಎಂದವರು ತಿಳಿಸಿದ್ದಾರೆ.ಒಟ್ಟು ೧,೧೫,೩೩೮ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‌ಲೈನ್ ನಲ್ಲಿ ೨,೨೩೬ ಮತದಾರರು ಸಲ್ಲಿಸಿದ್ದಾರೆ. ೧,೫೫೭ ಮತದಾರರು ಮರಣ ಹೊಂದಿದ್ದನ್ನು ದೃಢಪಡಿಸಲಾಗಿದೆ. ಹೊಸಾಗಿ ೧,೫೪೮ ಮತದಾರರು ನೋಂದಾಯಿಸಿಕೊಂಡಿದ್ದಾರೆ. ೯೩೪ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಹಾಗೂ ೮೯ ಇತರೆ ಎಂದವರು ತಿಳಿಸಿದ್ದಾರೆ.ಎಸ್ ಐಆರ್ ಕಾರ್ಯಕ್ಕೆ ಮತದಾರರು ತಮ್ಮ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು, ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮದ್ಯಪಾನ ಹಾಗೂ ಮಾದಕ ವಸ್ತುಗಳು ಮನಸ್ಸು ಹಾಗೂ ಶರೀರದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಪಿಎಸೈ ಸಚೀನ ಆಲಮೇಲಕರ ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಶನಿವಾರ ಜರುಗಿದ ಮಾದಕ ದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಾದಕ ಪದಾರ್ಥಗಳು ಹಾಗೂ ಮದ್ಯ ಸೇವನೆಯ ವ್ಯಸನ ಅತ್ಯಂತ ಗಂಭೀರವಾಗಿದ್ದು, ಶರೀರದ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಮಕ್ಕಳು, ವಿದ್ಯಾರ್ಥಿಗಳು ಇವುಗಳಿಂದ ದೂರವಿರಬೇಕು ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀಗುರುಶಾಂತೇಶ್ವರ ಶಾಲೆ ಹಾಗೂ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಗುರುಶಾಂತೇಶ್ವರ ಶಾಲೆಯ ಅಧ್ಯಕ್ಷ ಅಯ್ಯಪ್ಪಯ್ಯ ಸ್ವಾಮಿ ಹಿರೇಮಠ, ಗೋವಿಂದಗೌಡ ಪಾಟೀಲ ಮುಖ್ಯಶಿಕ್ಷಕ ಧನಸಿಂಗ್ ಲಮಾಣಿ, ಸಿಬ್ಬಂದಿ ಮಲ್ಲಿಕಾರ್ಜುನ ತಳಕೇರಿ, ಶ್ವೇತಾ ಮಹಾಜನಶೆಟ್ಟಿ, ದೀಪಾ ಉಪ್ಪಲದಿನ್ನಿ, ಮಹಾದೇವಿ ಬಿರಾದಾರ, ಜಮುನಾ ಜಾತಗಾರ, ಡಿ.ಎಚ್.ರಾಠೋಡ, ಎನ್.ಎಸ್.ಹಿರೇಮಠ ಹಾಗೂ ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆಯಲ್ಲಿ ಜನಮನ ರಂಜಿಸಿದ ಗೀಗೀ ಪದಗಳುತಾಳಿಕೋಟೆ, ತಾಳಿಕೋಟೆಯ ಶ್ರೀ ಗ್ರಾಮದೇವಿ ಜಾತ್ರಾಮಹೋತ್ಸವ ಅಂಗವಾಗಿ ೨.೩ ದಿನಗಳ ಕಾಲ ರಾಜವಾಡೆಯಲ್ಲಿ ಏರ್ಪಡಿಸಲಾದ ಗೀಗೀ ಪದಗಳು ವಿವಿಧ ರೀತಿಯ ಕಥೆಗಳನ್ನು ಪದಗಳಿಂದ ಹಾಡುವ ಮೂಲಕ ಅರ್ಥೈಯಿಸುವದರೊಂದಿಗೆ ಹಾಡಿಕೆಯ ಗೀಗೀ ಪದಗಳು ಅರ್ಥಪೂರ್ಣವಾಗಿ ಜನಮನ ಸೆಳೆದವು.ಈ ಗೀಗೀ ಪದಗಳ ಹಾಡಿಕೆಯ ತಂಡ ಬೆಳಗಾಂವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಣದಾಳದ ಮುಖ್ಯ ಗಾಯಕ ಲಕ್ಷ್ಮಣ ಕಣದಾಳ ಹಾಗೂ ಇನ್ನೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಲಬಾವಿ ಗ್ರಾಮದ ಮುಖ್ಯ ಗಾಯಕಿ ಶ್ರೀಮತಿ ರೇಖಾ ಗೋಲಭಾವಿ ಅವರ ಈ ಎರಡೂ ತಂಡಗಳ ನಡುವೆ ನಡೆದ ಸೆಣಸಾಟದ ಗೀಗೀ ಪದಗಳಲ್ಲಿ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಹಾಗೂ ಭಕ್ತಿ ಚರಿತ್ರೆಯ ಹಾಡುಗಳನ್ನು ಹಾಡುವದರೊಂದಿಗೆ ಕೇಳುಗರ ಹಾಗೂ ನೋಡುಗರ ಜನಮನ ಸೆಳೆದವಲ್ಲದೇ ಗ್ರಾಮೀಣ ಭಾಗದ ಜನಪದ ಕಲೆಗಳಲ್ಲಿ ಒಂದಾದ ಗೀ ಗೀ ಪದಗಳು ಇಂದಿಗೂ ತನ್ನದೇ ಆದ ಆರ‍್ಷಣೆಯನ್ನು ಉಳಿಸಿಕೊಂಡಿದ್ದು, ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತಾಯಿತು.ಜಾತ್ರಾ ಮಹೋತ್ಸವಗಳಲ್ಲಿ…
ಒಂದು ಟನ್ ಗೆ ₹2500-3000 ಸಾವಿರ ಇದ್ದ ಬೆಲೆ ಈಗ ಟನ್‌ಗೆ ₹4,500 ರವರೆಗೆ ಬೆಲೆ ಉದಯರಶ್ಮಿ ದಿನಪತ್ರಿಕೆ ವರದಿ : ಶ್ರೀಕಂಠ ಈಶ್ವರ್ಎಚ್ ಡಿ ಕೋಟೆ: ತಾಲೂಕಿನಲ್ಲಿ ಮಳೆ ಕೊರತೆ ನಡುವೆಯೂ ಮುಸುಕಿನ ಜೋಳ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.ಕೆಲವು ಪ್ರದೇಶಗಳಲ್ಲಿ ಬೂಜು ಮತ್ತು ಬಿಳಿ ಸುಳಿ ರೋಗದ ಬಾಧೆ ಜೊತೆಗೆ ಬೆಳೆ ಸಮಸ್ಯೆಗಳು ಎದುರಾದರೂ ನೀರಾವರಿ ಸೌಲಭ್ಯ ಮತ್ತು ಸಮರ್ಪಕ ನಿರ್ವಹಣೆ ಮಾಡಿದ ರೈತರಿಗೆ ಮುಸುಕಿನ ಜೋಳ ಅಚ್ಚರಿ ಎಂಬಂತೆ ಲಾಭ ತಂದುಕೊಟ್ಟಿದೆ. ಸಾಮಾನ್ಯವಾಗಿ ಮುಸುಕಿನ ಜೋಳ ಬೆಳೆದ ರೈತರು ಕಾಳಿನತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಈ ಬಾರಿ ಕಥೆ ಸ್ವಲ್ಪ ಬೇರೆನೇ ಆಗಿದೆ. ಮುಸುಕಿನ ಕಾಳಿಗಷ್ಟೇ ಅಲ್ಲ, ಕಡ್ಡಿಗೂ ಉತ್ತಮ ಬೆಲೆ ಸಿಕ್ಕಿರುವುದು ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.ಎಚ್.ಡಿ. ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಈ ವರ್ಷ ಸುಮಾರು 24,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶನಿವಾರ ನಗರದ ನ್ಯಾಯಾಲಯದಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಚೆಕ್ ಬೌನ್ಸ ಪ್ರಕರಣಗಳ ವಿಶೇಷ ಅದಾಲತ್ ನಡೆಸಲಾಯಿತು.ಸದರಿ ಅದಾಲತದಲ್ಲಿ ೬೫ ಪ್ರಕರಣಗಳಲ್ಲಿ ರಾಜಿ ಸಂಧಾನ ನಡೆಸಿ ಸುಮಾರು ೫೦ ಲಕ್ಷಕ್ಕೂ ಅಧಿಕ ಮೊತ್ತ ಅರ್ಜಿದಾರ ಪಕ್ಷಗಾರರಿಗೆ ಜಮಾ ಮಾಡಲಾಯಿತು.ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವೆಗಳ ಸಮಿತಿ ಸುನಿಲಕುಮಾರ ಎಂ.ಎಸ್, ನ್ಯಾಯವಾದಿಗಳಾದ ಪಿ.ಬಿ.ಶಿರಕನಹಳ್ಳಿ, ಶಾಂತು ನಿಂಬರಗಿಮಠ, ಎಸ್.ಬಿ. ನಿಂಬರಗಿಮಠ, ಎಂ.ಎಸ್.ಪಾಟೀಲ, ಆರ್.ಆರ್.ಕೋಳಿ, ಡಿ.ಎಸ್. ಹಾಲಕವಾಡಿ ಆರ್.ಎಸ್.ತೆಗ್ಗೆಳ್ಳಿ ಎಸ್.ಟಿ.ಗೂಗಿಹಾಳ ಎಸ್.ಕೆ ಬಂಗಾರತಳ ಮತ್ತು ಮಂಜುನಾಥ ನಾವಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಬಿ.ಎಂ.ಲಿಂಗಸುರ, ಮಹೇಶ ಕೋತ, ಚಂದ್ರಕಾಂತ ಲಾಳಸಂಗಿ, ಸಿದ್ದು ಹಾವಳಗಿ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಕಲಬುರ್ಗಿ: ಯಡ್ರಾಮಿ ಪಟ್ಟಣದ ಕದಂಬ ಪಿ.ಯು. ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು,ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆ, ಕರುಣೆ, ಸಹೋದರತೆ ಜೊತೆಗೆ ಮಾನವೀಯ ಮೌಲ್ಯಗಳು ಬಿತ್ತಿದ ಶ್ರೇಷ್ಠ ದಾರ್ಶನಿಕರು ವಿದ್ಯಾರ್ಥಿಗಳು ಕನಕದಾಸರ ಮೌಲ್ಯಯುತ ಕೃತಿಗಳನ್ನು ಓದಿ ಉತ್ತಮವಾದ ಬದುಕು ಕಟ್ಟಿಕೊಳ್ಳಿ ಎಂದು ಜೇವರ್ಗಿಯ ನರೇಂದ್ರ ಪದವಿ ಪೂರ್ವ ಕಾಲೇಜನ ಕನ್ನಡ ಉಪನ್ಯಾಸಕ ಮಾಳಪ್ಪ ದೇಸಾಯಿ ಹೇಳಿದರು.ಮುಖ್ಯ ಅತಿಥಿ, ಯುವ ಸಾಹಿತಿ ಡಾ.ಮಲ್ಲಿಕಾರ್ಜುನ ಆಲಮೇಲ ಮಾತನಾಡಿ, ಕನಕದಾಸರು ಸರ್ವಧರ್ಮ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಕುಲಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯನ್ನು ಜಗತ್ಪ್ರಸಿದ್ಧಗೊಳಿಸಿದ ಮಹಾನ್ ಶ್ರೇಷ್ಠ ಸಂತ ಎಂದು ಬಣ್ಣಿಸಿದರು.ಕದಂಬ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರ ಗುಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರಂಗ ಶುದ್ಧಿಗೊಳಿಸಿ ಭಗವಂತನಿಗೆ ಶರಣಾಗುವುದು ಕನಕದಾಸರ ಮುಖ್ಯ ಧ್ಯೇಯ ಮತ್ತು ಉದ್ದೇಶವಾಗಿತ್ತು ಅದರಿಂದ ಅವರ ತತ್ವ…
ವಿಧಾನ ಪರಿಷತ್ ಶಾಸಕ ಸುನೀಲಗೌಡ ಅವರ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ಅಂಗವಿಕಲರನ್ನು ನೇಮಿಸಬೇಕು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಮಾಡಿದ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಮುಂಬರುವ ವಿಧಾನ ಪರಿಷತ ಅಧಿವೇಶನದಲ್ಲಿಯೂ ಈ ಕುರಿತು ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಮಾಲ್ ಗಳು ಸೇರಿದಂತೆ ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್ ಬಳಸಲಾಗುತ್ತದೆ. ಈ ಲಿಪ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ಅಂಗವಿಕಲರನ್ನೇ ನೇಮಕಾತಿ ಮಾಡಬೇಕು. ಇದರಿಂದ ಅವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಅಲ್ಲದೇ, ಅವರಿಗೆ ಕೆಲಸ ಭಾರ ಎನಿಸುವುದಿಲ್ಲ. ಅಂಗವಿಕಲರು ಸ್ವಾಭಿಮಾನದಿಂದ ಬದಕಲು ಇದರಿಂದ ಅವಕಾಶ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.ಬೆಂಗಳೂರು ಸೇರಿದಂತೆ ನಾನಾ ಮಹಾನಗರಗಳಲ್ಲಿ ಅಂಗವಿಕಲರು ಲಿಫ್ಟ್ ಆಪರೇಟ್ ಮಾಡುವುದನ್ನು ಸ್ವತಃ ನೋಡಿದ್ದೇವೆ. ಅಷ್ಟೇ ಅಲ್ಲ, ಅವರು ಲಿಫ್ಟ್ ಗಳನ್ನು ಸ್ವಚ್ಛವಾಗಿಟ್ಟಿರುತ್ತಾರೆ.…
ವಿಜಯಪುರದಲ್ಲಿ ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜಣಗೌಡ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೌಹಾರ್ದ ಸಹಕಾರ ಸಂಘಗಳು ಸೌಹಾರ್ದ ಕಾಯ್ದೆಯ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಾ ಸದಸ್ಯರಿಗೆ ಉತ್ತಮ ಸೇವೆ ಒದಗಿಸಿ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜಣಗೌಡ ಕರೆ ನೀಡಿದರು.ನಗರದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರ ಸಂಘಗಳಿಗಾಗಿ ಆಯೋಜಿಸಲಾಗಿದ್ದ “ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ನಂಜಣಗೌಡ ಮಾತನಾಡಿ, “ಸಹಕಾರ ಸಂಘದ ಪದಾಧಿಕಾರಿಗಳು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಸಂಘದಿಂದ ನೀಡಲಾದ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ಕಾನೂನಿನ ಪ್ರಕಾರ ನಿರ್ದೇಶಕ ಮಂಡಳಿಯ ಜವಾಬ್ದಾರಿ ನಿಶ್ಚಿತವಾಗುತ್ತದೆ. ಆದ್ದರಿಂದ ಪಾರದರ್ಶಕ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರಿಗೆ ಗುಣಮಟ್ಟದ ಸೇವೆ ನೀಡುವುದು ಅತ್ಯಗತ್ಯ” ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕ ಸಂಜಯ್ ಬಿ. ಪಾಟೀಲ…
ವಿಜಯಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾನವ ಅಭಿವೃದ್ಧಿ ಸೂಚ್ಯಂಕಗಳೇ ಪ್ರಮುಖ ಮಾನದಂಡವಾಗಿದ್ದು, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತಾಲೂಕುಗಳ ದತ್ತಾಂಶ ಸಂಗ್ರಹ ಸ್ಪಷ್ಟವಾಗಿ ನಿಖರವಾಗಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ–೨೦೩೧ ವರದಿಗಳ ತಯಾರಿಕೆ ಕುರಿತ ದತ್ತಾಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪರಿಸ್ಥಿತಿಯೂ ವಿಭಿನ್ನವಾಗಿದ್ದು, ಕೆಲ ತಾಲೂಕುಗಳು ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಹಾಗೂ ಮೂಲಸೌಲಭ್ಯಗಳಲ್ಲಿ ಕೊರತೆ ಇರಬಹುದು. ಇಂತಹ ದತ್ತಾಂಶಗಳ ಕಡೆಗೆ ಗಮನ ಹರಿಸಬೇಕು ನೀಡುವ ದತ್ತಾಂಶಗಳ ಆಧರಾದ ಮೇಲೆ ಸಮಗ್ರ ವಿಶ್ಲೇಷಣೆ ನಡೆಸಿ ಅಂತಹ ಕ್ಷೇತ್ರಗಳನ್ನು ಗುರುತಿಸಿ ವಿಶೇಷ ಕಾರ್ಯಯೋಜನೆ ರೂಪಿಸಲು…
ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಸನಾ ಪಿಯು ಕಾಲೇಜಿನ 2026–27ನೇ ಶೈಕ್ಷಣಿಕ ವರ್ಷದ ಒಟ್ಟು 8 ವಿದ್ಯಾರ್ಥಿಗಳು ನೀಟ್ (NEET) ಪರೀಕ್ಷೆಯಲ್ಲಿ ಉತ್ಕೃಷ್ಟ ಅಂಕಗಳನ್ನು ಪಡೆದು ಎಂಬಿಬಿಎಸ್ (MBBS) ವೈದ್ಯಕೀಯ ಕೋರ್ಸ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಅಥಣಿ ಅಂಜುಮನ್-ಎ-ಇಸ್ಲಾಂ ಸಮಿತಿ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಯಶಸ್ವಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಇನ್ನೂಸ್ ಮುಲ್ಲಾ, “ಕೇವಲ ಕೋಚಿಂಗ್ ತರಗತಿಗಳಾಗಿ ಆರಂಭಗೊಂಡ ಸನಾ ಸಂಸ್ಥೆ, ಇಂದು ಪಿಯು ಕಾಲೇಜಾಗಿ ಅಲ್ಪಾವಧಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಅಧ್ಯಕ್ಷ ಖಲೀಲ ಬಾಗವಾನ ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿ ಇಂದು ಈ ಸಾಧನೆ ಸಾಧ್ಯವಾಗಿದೆ. ಪ್ರತಿಯೊಬ್ಬ ಪಾಲಕರ ಕನಸು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸುವುದಾಗಿದೆ. ಆ ನಿಟ್ಟಿನಲ್ಲಿ ಸನಾ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾಗಲಿ,”…
