Author: editor.udayarashmi@gmail.com

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ’ಆರಂಭ ೨೦೨೫’ ಉದ್ಘಾಟಿಸಿದ ಹಿರಿಯ ಪತ್ರಕರ್ತ ಬಸವರಾಜ ಸಂಪಳ್ಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ರಿಕಾರಂಗದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿಯೇ ಸಾಲದು, ಅದರ ಜೊತೆಗೆ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ವಿಜಯಪುರದ ಪ್ರಜಾವಾಣಿ ಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಸೋಮವಾರ ಆಯೋಜಿಸಿದ್ದ ‘ಆರಂಭ ೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೊಸ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮದ ಬಳಕೆ, ಮತ್ತು ಹೊಸ ಆವಿಷ್ಕಾರಗಳೊಂದಿಗೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು. ನಿರಂತರ ಅಧ್ಯಯನ, ಹೊಸತನವನ್ನು ಅಳವಡಿಸಿಕೊಳ್ಳುವ ಮನೋಭಾವ, ಮತ್ತು ಕಠಿಣ ಪರಿಶ್ರಮದಿಂದ ಈ ರಂಗದಲ್ಲಿ ಯಶಸ್ಸು ಪಡೆಯುವುದು ಸಂಪೂರ್ಣ ಸಾಧ್ಯ. ಪತ್ರಿಕೋದ್ಯಮ ಒಂದು ಸಮೃದ್ಧ ಹಾಗೂ ಪ್ರಭಾವಶಾಲಿ ಕ್ಷೇತ್ರವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಭಾಷಾ ಪ್ರಾವೀಣ್ಯತೆಯು ಅತ್ಯಂತ ಅಗತ್ಯ. ಕೇವಲ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಸ್ ಪ್ರಯಾಣ ದರ ಏರಿಕೆ ಮಾಡಿರುವದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಅಲ್ಲಿ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಗಣೇಶ ಹಂಜಗಿ ಬಸ್ ಪ್ರಯಾಣ ದರ ಶೇ ೧೫ ರಷ್ಟು ಹೆಚ್ಚಿಸಿರುವದು ಖಂಡನೀಯ ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಯಾರಾದರೂ ವಿದ್ಯಾರ್ಥಿಗಳು ಇಂಟರ್‌ವಿವ್ ಸಂದರ್ಶನಗಳಿಗೆ ಹೋಗಲು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ಅದಲ್ಲದೆ ಎಲ್ಲ ದರಗಳು ಹೆಚ್ಚಿದ್ದು ಬಸ್ ದರ ಹೆಚ್ಚಿಸಿದರೆ ಸಾಮಾನ್ಯರ ಜೀವನ ದುಸ್ತರವಾಗುತ್ತದೆ ಎಂದರು.ಪ್ರಧಾನ ಕಾರ್ಯದರ್ಶಿ ಸಚೀನ ದಾನಗೊಂಡ, ರಾಹುಲ್ ಜಾಧವ, ಮಹೇಶ ಮುನ್ನಳ್ಳಿ, ಅಂಬರೀಷ ಬಿರಾದಾರ, ದರ್ಶನ ಹರಿಜನ, ಸಂದೀಪ ಜೇವೂರ, ಸಂದೀಪ ಪರೀಟ,ಸಮರ್ಥ ಗಾಯಕವಾಡ, ಪ್ರತೀಕ ಹಂಜಗಿ, ಮಂಜುನಾಥ ಪೂಜಾರಿ, ರಾಮು ಹೂಗಾರ ಮತ್ತಿತರಿದ್ದರು.ಶಾಂತೇಶ್ವರ ಪದವಿ ಮಹಾವಿದ್ಯಾಲಯ, ಮಿನಿ ವಿಧಾನಸೌಧ, ಬಸವೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣ ತೆರಳಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ಕಲಿಕಾಂಶಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಅನುಕೂಲ ಕಲ್ಪಿಸಿ ಕಲಿಕೆಯ ಫಲಿತಾಂಶವನ್ನು ಸುಧಾರಿಸುವದು ಇಂದಿನ ದಿನಗಳಲ್ಲಿ ಬಹುಮುಖ್ಯವಾಗಿದೆ ಎಂದು ವಿಜಯಪುರ ಡಯಟ್‌ನ ಉಪನಿರ್ದೇಶಕಿ ಉಮಾದೇವಿ ಸೊನ್ನದ ಶಿಕ್ಷಕರಿಗೆ ಕರೆ ನೀಡಿದರು.ಅವರು ಸೋಮವಾರ ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಎಸ್ ಎಸ್ ಕೆ, ಡಯಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಇಂಡಿ ಹಾಗೂ ಚಡಚಣ ಶೈಕ್ಷಣಿಕ ವಲಯಗಳ ಬಿಇಓ, ಬಿ ಆರ್ ಸಿ ಹಾಗೂ ಸಿ ಆರ್ ಪಿ, ಬಿ ಆರ್ ಪಿ ರವರಿಗೆ ಹಮ್ಮಿಕೊಂಡಿರುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಜಾಗತಿಕ ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಜೀವನಶೈಲಿ, ಮಾನವ ಹಕ್ಕುಗಳ ರಕ್ಷಣೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಮಕ್ಕಳಿಗೆ ಒದಗಿಸುವದು ಶಿಕ್ಷಕರ ಬಹುಮುಖ್ಯ ಕಾರ್ಯವಾಗಿದೆ ಎಂದರು.ಡಯಟ್‌ನ ಉಪನ್ಯಾಸಕ ಅಬ್ದುಲ್‌ರಹಿಮ ಮುಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಮಾತನಾಡಿ, ಶಿಕ್ಷಕರು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮುಖ್ಯಮಂತ್ರಿ ಸಿದ್ದರಾಮಯ್ಯಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ವಿಪಕ್ಷದವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿ ಸ್ವಾವಲಂಬಿ ಕರ್ನಾಟಕ ರೂಪಿಸುವತ್ತ ಸರ್ಕಾರ ಮುನ್ನಡೆದಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಸಮೀಪದ ಗೂಗಿಹಾಳ ಗ್ರಾಮದ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಇವರು ಗೃಹ ಲಕ್ಷ್ಮೀ ನೀಡಿದ ಹಣ ಉಳಿಸಿ ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಮಸ್ಥ ಗ್ರಾಮಸ್ಥರಿಗೆ ಹೊಳಿಗೆ ಊಟ ಮಾಡಿಸಿದ್ದರು.ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ ಚಿಕ್ಕಗಸಿ, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಎ ಪಿ ಎಮ್ ಸಿ ಅಧ್ಯಕ್ಷರ ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ ಮನಗೂಳಿ ಮಾಡಿದರು.ನೂತನ ಆಲಮೇಲ ತಾಲೂಕಿನ ಎ ಪಿ ಎಮ್ ಸಿಯ ಪ್ರಥಮ ಅಧ್ಯಕ್ಷರಾಗಿ ಬಸವರಾಜ ಬಾಗೇವಡಿ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶಿವಶರಣ ಯಶವಂತ ಗುಂದಗಿ ಸದಸ್ಯರಾಗಿ ಸೌಕತಲಿ ಕಾಶಿಮ ಸುಂಬಡ ದವಲಪ್ಪ ಸೋನ್ನ ಗೌರಿಶಂಕರ ತೊಡಕರ ಸಾಧಿಕ ಸುಂಬಡ ಯಶವಂತರಾಯಗೌಡ ರೂಗಿ ರಮೇಶ ಬಂಟನೂರ ಅಶೋಕ ಕೋಳಾರಿ ಪ್ರಭು ವಾಲಿಕಾರ ಸೋಮು ಮೇಲಿನಮನಿ ಸಂಜುಕುಮಾರ ಬೋಗುಂಡಿ ಮುಂತಾದವರು ಇದ್ದರು

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಕುಂಬಾರ ಸಮಾಜಕ್ಕೆ ೧೦ ಲಕ್ಷದ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ಮಾಡಿದರು.ಈ ಪೂಜೆಯಲ್ಲಿ ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ವಿರಭದ್ರ ಕತ್ತಿ ಪ.ಪಂ ಸದಸ್ಯ ಚಂದ್ರಶೇಖರ ಹಳೇಮನಿ ಭಗವಂತ ಆಲಮೇಲಕರ ರಮೇಶ ಬಂಟನೂರ ಅಶೋಕ ಕೋಳಾರಿ ಶ್ರೀಶೈಲ ಕುಂಬಾರ ಗರು ಹಡಪದ ಮಹಾಂತಗೌಡ ಹಳೇಮನಿ sಸೋಮು ಮೇಲಿನಮನಿ ಇತರರು ಇದ್ದರು

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗಬಸಾವಳಗಿ ಗ್ರಾಮದ ಮಲ್ಲಮ್ಮ ದೇವಸ್ಥಾನದ ಮುಂದೆ ಜೂಜಾಟ ಅಂದರ್-ಬಹಾರ್ ಆಟದಲ್ಲಿ ನಿರತ ಗುಂಪಿನ ಮೇಲೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿರುವ ಸಿಂದಗಿ ಪೊಲೀಸ್ ಠಾಣೆಯ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದು, ಗಬಸಾವಳಗಿ ಗ್ರಾಮದ ನಿವಾಸಿಗಳಾದ ಬಾಪುಗೌಡ ಶರಣಗೌಡ ಕೋನಾಳ, ಅಪ್ಪುಗೌಡ ಭೀಮನಗೌಡ ಬಿರಾದಾರ, ಬಸಣ್ಣ ಭೀಮಶ್ಯಾ ವಾಲೀಕಾರ, ಅಶೋಕ ಶಾಂತಗೌಡ ಬಿರಾದಾರ, ಸಿದ್ದಪ್ಪ ಮಡಿವಾಳಪ್ಪ ಹೂಗಾರ, ಪ್ರಕಾಶ ಸಂಗನಗೌಡ ಬಿರಾದಾರ ಎಂಬುವವರನ್ನು ಬಂಧಿಸಲಾಗಿದೆ.ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ದಿನಾಂಕ ೨೯-೧೦-೨೦೨೪ರ ಪಟ್ಟಿಯಂತೆ ಒಟ್ಟು ೧೯೫೫೮೫೩ ಮತದಾರರು ಇದ್ದು, ದಿನಾಂಕ ೬-೧-೨೦೨೫ರ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ಅರ್ಹತಾ ಅಂತಿಮ ಕರಡು ಮತದಾರರಂತೆ ೯೬೫೫ ಹೊಸದಾಗಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟು ಜಿಲ್ಲೆಯಲ್ಲಿ ೧೯೬೫೫೦೮ ಅರ್ಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ಅಂತಿಮಗೊಳಿಸಿ ಪ್ರಚಾರ ಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಹಾಗೂ ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಗಳಾದ ಸುಷಮಾ ಗೋಡಬೋಳೆ ಹೇಳಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶೇಷ ಸಂಕ್ಷಿಪ್ತ ಮತದಾರರಪಟ್ಟಿ ಪರಿಷ್ಕರಣೆ- ೨೦೨೫ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಮೂನೆ-೬ರಲ್ಲಿ ೧೬೯೧೮, ನಮೂನೆ-೭೨೬೩, ನಮೂನೆ-೮ರಲ್ಲಿ ೮೬೫೬ ಹಾಗೂ ೧೯೫೭ ಸೇವಾ ನಿರತ ( ಭಾರತೀಯ ಸೇನೆ ಹಾಗೂ ಇತರೆ) ಸೇವೆ ಸಲ್ಲಿಸುತ್ತಿರುವ ಮತದಾರರ ಪಟ್ಟಿಯನ್ನು ೨೯-೧೦-೨೦೨೪ರಿಂದ ೨೮-೧೧-೨೦೨೪ರ ವರೆಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅನುಮೋದಿಸಲಾಗಿದೆ. ಹಾಗೂ ಸಣ್ಣ ಪುಟ್ಟ ತಿದ್ದುಪಡೆಳನ್ನು ಸರಿ ಪಡಿಸಿ ನಿಗದಿತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಹಾಗೂ ಕೊಡಗಿನಲ್ಲಿನ ಸೈನಿಕ ಶಾಲೆಯ 6ನೇ ತರಗತಿ ಹಾಗೂ 9ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗಿದೆ. 6ನೇ ತರಗತಿ ರ‍್ಜಿ ಸಲ್ಲಿಸಲು ವಿದ್ಯಾರ್ಥಿಯ ವಯಸ್ಸು 10 ರಿಂದ 12 ರ ಒಳಗೆ ಇರಬೇಕು. ಏ.1 2013 ರಿಂದ ಮಾ. 31 2015ರ ಒಳಗಾಗಿ ಜನಿಸಿರಬೇಕು. 9ನೇ ತರಗತಿಗೆ ಅರ್ಜಿಸಲ್ಲಿಸಲು ವಿದ್ಯಾರ್ಥಿಯ ವಯಸ್ಸು ಏ. 1 2010 ರಿಂದ ಮಾ. 31. 2012ರ ಒಳಗಾಗಿ ಜನಿಸಿರಬೇಕು.ಜನವರಿ 13 ಸಂಜೆ 5ಗಂಟೆ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜನವರಿ 14ರ ರಾತ್ರಿ 11.50ರ ವರೆಗೆ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಜ.16 ರಿಂದ 18ರ ವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ರೂ.800 ನಿಗದಿ ಪಡಿಸಲಾಗಿದೆ ಹಾಗೂ ಪ.ಜಾ/ಪ.ಪಂ ದವರಿಗೆ ರೂ. 650 ಶುಲ್ಕ ನಿಗದಿಪಡಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 08352-270638ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಧಾರವಾಡ ವಿಭಾಗದ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯಲ್ಲಿ 6 ತಿಂಗಳ ತರಭೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಪಿ.ಯು.ಸಿ ಅಂಕಪಟ್ಟಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಅರ್ಜಿ ಯ ಜೊತೆಗೆ ಸಲ್ಲಿಸಬೇಕು. ಜ.10 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2448183ಗೆ ಸಂಪರ್ಕಿಸಬಹುದು ಎಂದು ಪ್ರಕಣೆ ತಿಳಿಸಿದೆ.

Read More