ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗಬಸಾವಳಗಿ ಗ್ರಾಮದ ಮಲ್ಲಮ್ಮ ದೇವಸ್ಥಾನದ ಮುಂದೆ ಜೂಜಾಟ ಅಂದರ್-ಬಹಾರ್ ಆಟದಲ್ಲಿ ನಿರತ ಗುಂಪಿನ ಮೇಲೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿರುವ ಸಿಂದಗಿ ಪೊಲೀಸ್ ಠಾಣೆಯ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದು, ಗಬಸಾವಳಗಿ ಗ್ರಾಮದ ನಿವಾಸಿಗಳಾದ ಬಾಪುಗೌಡ ಶರಣಗೌಡ ಕೋನಾಳ, ಅಪ್ಪುಗೌಡ ಭೀಮನಗೌಡ ಬಿರಾದಾರ, ಬಸಣ್ಣ ಭೀಮಶ್ಯಾ ವಾಲೀಕಾರ, ಅಶೋಕ ಶಾಂತಗೌಡ ಬಿರಾದಾರ, ಸಿದ್ದಪ್ಪ ಮಡಿವಾಳಪ್ಪ ಹೂಗಾರ, ಪ್ರಕಾಶ ಸಂಗನಗೌಡ ಬಿರಾದಾರ ಎಂಬುವವರನ್ನು ಬಂಧಿಸಲಾಗಿದೆ.
ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
