Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ನಮ್ಮ ಸಂಸ್ಕೃತಿ ಹಿರಿಯರ ಕಾಲ ಕೋಶಗಳಿಂದ ದೂರ ಹೊಂದತೆಲ್ಲ ಬದುಕು ಸತ್ವ ಕಳೆದು ಕೊಳ್ಳುತ್ತ ಹೋಗುತ್ತದೆ. ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನ ಆಲಿಸಿ ಹೃದಯವಂತ ಸಮಾಜಮುಖಿ ಹೃದಯವಂತ ಯುವಕ ಪಡೆ ವ್ಯಕ್ತಿತ್ವ ನಿರ್ಮಾಣವಾಗಿದೆ ಎಂದು ಘೋಡಗೇರಿ ಶ್ರೀ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಹೇಳಿದರು.ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳವರಿಗೆ ಗುರು ಆರಾಧನಾ ಮಹೋತ್ಸವ ಯುವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.ನಿವೃತ್ತ ಹೈಕೋರ್ಟು ನ್ಯಾಯಾಧೀಶ ಅರವಿಂದ ಪಾಶ್ಚಾಪುರೆ ಮಾತನಾಡಿ ಶ್ರೀ ಸಿದ್ದೇಶ್ವರ ಶ್ರೀಗಳ ಅಂತಿಮ ಅಬಿನಂದನಾ ಪತ್ರಕ್ಕೆ ಸಾಕ್ಷಿ ಹಾಕಿರುವದು ನನ್ನ ಈ ಜನ್ಮದ ಸುಕೃತ, ಪೂಜ್ಯರ ಪ್ರವಚನದ ಫಲದಿಂದ ನ್ಯಾಯ ಕ್ಷೇತ್ರದಲ್ಲಿ ಹೊಸ ಅಡಿ ಇಟ್ಟು ನ್ಯಾಯ ನೀಡಿದ್ದೇನೆ. ೨೦೧೨ ರಲ್ಲಿ ರಾಜ್ಯ ಮಟ್ಟದ ನ್ಯಾಯಾಧೀಶರ ಸಮ್ಮೇಳನದಲ್ಲಿ ಸಿದ್ದೇಶ್ವರ ಶ್ರೀಗಳು ಮಾತ್ರ ಮಾತನಾಡಿದ್ದು ಯಾವದೇ ನ್ಯಾಯ್ಯಾಧೀಶರ ಸಮ್ಮೇಳನದಲ್ಲಿ ಯಾವದೇ ಪೂಜ್ಯರು ಮಾತಾಡಿಲ್ಲ, ಅದರಂತೆ ಅನೇಕ ನ್ಯಾಯಾಧೀಶರು ಅವರ ಪ್ರವಚನದಿಂದ ಪರಿವರ್ತನೆ ಯಾಗಿ…

Read More

ಇಂಡಿ ತಾಲೂಕಿನಲ್ಲಿ ಮತದಾರರು ೨,೫೩,೨೫೮ | ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು ೨,೫೩,೨೫೮ ಒಟ್ಟು ಮತದಾರರು ಇದ್ದಾರೆ. ಪ್ರಸಕ್ತ ವರ್ಷ ೨೫೫೩ ಮತದಾರರು ಹೆಚ್ಚಾಗಿದ್ದಾರೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.ತಾಲೂಕಿನ ಎಸಿ ಕಚೇರಿಯಲ್ಲಿ ತಾಲೂಕಿನ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ತಾಲೂಕಿನಲ್ಲಿ ೧,೩೦,೧೦೯ ಪುರುಷ ಮತದಾರರು, ೧,೨೩, ೧೩೫ ಮಹಿಳಾ ಮತದಾರರು, ಇತರೆ ೧೮ ಮತದಾರರು ಇದ್ದಾರೆ.ಕಳೆದ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದಲ್ಲಿ ೧, ೨೨ ೯೯೭ ಪುರುಷರು, ೧,೧೪ ೩೮೨ ಮಹಿಳೆಯರು ಇತರರು ೧೮ ಒಟ್ಟು ೨,೩೭೩೯೭ ಮತದಾರರಿದ್ದರು.ಈ ಬಾರಿ ೨೫೫೩ ಮತದಾರರು ಹೆಚ್ಚಾಗಿದ್ದು ೬೫೯ ಮತದಾರರ ಹೆಸರನ್ನು ವರ್ಗಾವಣೆ ಅಥವಾ ಮರಣ ಹೊಂದಿದ ನಿಮಿತ್ಯ ತೆಗೆಯಲಾಗಿದೆ.ತಾಲೂಕಿನಲ್ಲಿ ಪ್ರತಿ ಒಂದು ಸಾವಿರ ಪುರುಷರಿಗೆ ೯೪೭ ಮಹಿಳೆಯರು ಇದ್ದಾರೆ. ಬಹುತೇಕ ಈ ಹಿಂದೆಗಿಂತಲೂ ಈ ಬಾರಿ ಮಹಿಳೆಯರ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅಪರಿಚಿತ ವ್ಯಕ್ತಿಯ ಶವವೊಂದು ಭೀಮಾನದಿಯಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಳೆ ಪಡನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಪ್ಪಾಸಾಹೇಬ್ ಎಂಬುವರ ಜಮೀನ ಬಳಿಯ ಭೀಮಾನದಿಯಲ್ಲಿ ಸುಮಾರು 30-35 ವಯಸ್ಸಿನ ಪುರುಷನ ಶವ ಸಿಕ್ಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ.ಅಲ್ಲದೇ, ಶವ ಬಲಗೈ ಮೇಲೆ ಮಾರಾಠಿಯಲ್ಲಿ ಬಾಬಾ ಮಮತಾ ಅಕ್ಕಲಕೋಟ ಅಂತಾ ಟ್ಯಾಟೂ ಮತ್ತು ಬಲಗೈಯಲ್ಲಿ ಕೇಸರಿ ಬಣ್ಣದ ಕಾಸಿದಾರ್ ಮತ್ತು ಬಳಗಾಲಿನಲ್ಲಿ ಕಪ್ಪು ಬಣ್ಣದ ಕಾಸಿದಾರ ಕಟ್ಟಿದ್ದು, ಮೈಮೇಲೆ ಹಾಕಲೇಟ್ ಬಣ್ಣದ ಅಂಡರ್ ವಿಯರ್ ಮಾತ್ರ ಇದೆ. ಅದಕ್ಕಾಗಿ ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸಲು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಧಿಕೃತವಾಗಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧವಾಗಿದ್ದು, ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿಗಳಿಗೆ ತಿಳಿಸಿದರು.ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿಪಿಎನ್ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾಯ್ದೆಯನ್ವಯ ಅಪರಾಧವಾಗಿದ್ದು, ಒಂದು ವೇಳೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಂತಹವರ ಮೇಲೆ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಿರುವ ಆಸ್ಪತ್ರೆ/ ಸ್ಕ್ಯಾನಿಂಗ್ ಕೇಂದ್ರಗಳ ಮಾಲೀಕರು, ಸದರಿ ಕಾಯ್ದೆ ಅಡಿಯಲ್ಲಿ ನೊಂದಣಿಯಾಗುವವರೆಗೆ ಬಳಸತಕ್ಕದಲ್ಲ, ಹಾಗೂ ಅದನ್ನು ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರುಗಳು ಖಚಿತ ಪಡೆಸಿಕೊಳ್ಳಬೇಕು. ಒಂದು ವೇಳೆ ನೊಂದಣಿಯನ್ನು ಪಡೆದುಕೊಳ್ಳದೆ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಿದ್ದಲ್ಲಿ ಅಂತಹವರ ವಿರುದ್ದ ಮೇಲೆ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಹಲವು ಅನೇಕ ಸ್ಥಳಗಳಲ್ಲಿ ಕಳ್ಳತನ ಕೃತ್ಯವೆಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳೂರು ಗ್ರಾಮದ ನಿಂಗಪ್ಪ ರಾಜಪ್ಪ ಬಡಿಗೇರ ಎಂಬುದು ತಿಳಿದುಬಂದಿದೆ. ಸಿಂದಗಿಗೆ ಬಂದು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.ಸಿಂದಗಿ ಪಟ್ಟಣದಲ್ಲಿ ಸಂಶಯಾಸ್ಪದವಾಗಿ ಮೋಟರ್ ಸೈಕಲ್ ಮೇಲೆ ತಿರುಗಾಡುತ್ತಿದ್ದನು. ಈತನನ್ನು ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಲ್ಯಾಣ ನಗರ, ಮಲ್ಲಿಕಾರ್ಜುನ ನಗರ, ಕೊಕಟನೂರ ಹಾಗೂ ಸುಂಗಠಾಣ ಗ್ರಾಮದಲ್ಲಿಯೂ ಸಹ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಒಂದು ಬೈಕ್, ೧೦೫ಗ್ರಾಂ ಚಿನ್ನಾಭರಣ ವಶಪಡಿಕೊಂಡಿದ್ದಾರೆ.ಈ ಪ್ರಕರಣ ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಈ ವೇಳೆ ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್‌ಐ ಆರೀಫ್ ಮುಷಾಪುರಿ ಸೇರಿದಂತೆ ಸಿಬ್ಬಂದಿಗಳ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ಸ್ಥಾಯಿ ಸಮೀತಿಗೆ ನೂತನ ಅಧ್ಯಕ್ಷರನ್ನಾಗಿ ಯಲ್ಲಪ್ಪ ನಾಯಕಮಕ್ಕಳ ಅವರು ಅವಿರೋಧವಾಗಿ ಆಯ್ಕೆಯಾದರು.ಗುರುವಾರ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಹಣಮಂತ ಭೋವಿ ಸೂಚಕರಾಗಿ, ಶರೀಫಾ ಮೂಲಿಮನಿ ಅನುಮೋದಕರಾಗಿದ್ದರು. ಇವರ ಬಳಿಕ ನಿಗಧಿತ ಅವಧಿಯಲ್ಲಿ ಮತ್ತಾವುದೇ ನಾಮಪತ್ರ ಸಲ್ಲಿಕೆಯಾಗದಿದ್ದರಿಂದ ಯಲ್ಲಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ತಿಳಿಸಿದರು.ಆದ್ಯಕ್ಷ ಘೋಷಣೆಯಾಗುತ್ತಿದ್ದಂತೆಯೇ ಅಧ್ಯಕ್ಷರಿಗೆ ಸಿಹಿ ತನ್ನಿಸಿ, ಸನ್ಮಾನಿಸಿ ಗೌರವಿಸುವ ಮೂಲಕ ಯಲ್ಲಪ್ಪ ಅವರ ಆಪ್ತ ಸದಸ್ಯರು, ಸ್ನೇಹಿತರು, ಹಿತೈಶಿಗಳು ಸಂಭ್ರಮಿಸಿದರು.ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮಾಜಿ ಉಪಾಧ್ಯಕ್ಷೆ ಶಹಾಜಾದಬಿ ಹುಣಚಗಿ, ಸದಸ್ಯರಾದ ಭಾರತಿ ಪಾಟೀಲ, ಪ್ರತಿಭಾ ಅಂಗಡಗೇರಿ, ಸೋನಾಬಾಯಿ ನಾಯಕ, ಸಾಹೀರಾಭಾನು ಢವಳಗಿ, ಚಾಂದಬಿ ಮಕಾನದಾರ, ಶರೀಫಾ ಮೂಲಿಮನಿ, ಸಂಗಮ್ಮ ದೇವರಳ್ಳಿ, ರಿಯಾಜ ಢವಳಗಿ, ವಿರೇಶ ಹಡಲಗೇರಿ, ಶಿವು ಶಿವಪೂರ ಪ್ರಮುಖರಾದ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಮಖಂಡಿ ಸೇರಿದಂತೆ ಇನ್ನೀತರ ನಗರಗಳಿಂದ ಬರುವ ನೂರಾರು ಮಂತ್ರಾಲಯ ಪಾದಯಾತ್ರಿಗಳಿಗೆ ಸಂಜೀವಿನಿ ಯುವಕ ಸಂಘದ ವತಿಯಿಂದ ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಪ್ರಸಾದ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಳೆದ ಹಲವು ವರ್ಷಗಳಿಂದ ರೂಢಿಯಲ್ಲಿರುವ ಈ ಸೇವಾ ಕೈಂಕರ್ಯವನ್ನು ಸಂಜೀವಿನಿ ಯುವಕ ಸಂಘ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾಲಿಸಿತು.ಪಾದಯಾತ್ರಿಗಳು ಬುಧವಾರ ಸಂಜೆ ೬ರ ಹೊತ್ತಿಗೆ ಆಗಮಿಸಿ ಕೊಂಚ ವಿಶ್ರಾಂತಿ ಪಡೆದು ರಾತ್ರಿ ಚಪಾತಿ, ಪಲ್ಯ, ಬೆಲ್ಲದ ಜಾಹಾಂಗೀರ, ಅನ್ನಾ, ಸಾಂಬಾರ ಬಳಿಕ ಬಾಳೆಹಣ್ಣು ಹೀಗೆ ವಿಶೇಶ ಭೋಜನವನ್ನು ಸವಿದರು. ರಾತ್ರಿ ತಂಗಲು ಮತ್ತು ಜೌಷದೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಸುಕಿನ ಜಾವ ೫ಗಂಟೆಗೆ ಇಡ್ಲಿ, ಸಾಂಬಾರ್, ಚಟ್ನಿ ಮತ್ತು ಟೀ ಸವಿದು ಯಾತ್ರಾರ್ಥಿಗಳು ಸಂಘದ ಸದಸ್ಯರಿಗೆ ಶುಭ ಹಾರೈಸಿ ನಡೆದರು.ಈ ವೇಳೆ ಮಾಧ್ಯಮದೊಂದಿಗೆ ಮುತ್ತಣ್ಣ ಗಣಾಚಾರಿ, ರಾಜು ರಾಯಗೊಂಡ, ಶರಣು ಪಡದಾಳಿ, ಮುತ್ತಣ್ಣ ರಾಯಗೊಂಡ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮತ್ತೀತರರು ಮಾತನಾಡಿ ಕಳೆದ ೩೦ವರ್ಷಗಳಂತೆ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಇಲಾಖೆ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ವತಿಯಿಂದ “ನಮ್ಮ ನಡೆ ಸಾವಯವ ಮತ್ತು ಸಿರಿಧಾನ್ಯಗಳ ಕಡೆಗೆ” ಕಾರ್ಯಕ್ರಮವನ್ನು ಜ.೧೦ ರಂದು ಬೆಳಗ್ಗೆ ೭ ರಿಂದ ೧೦ರವರೆಗೆ ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ಮಹಾತ್ಮಗಾಂಧಿ ವೃತ್ತ, ಶ್ರೀ ಬಸವೇಶ್ವರ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಗಗನಮಹಲನಲ್ಲಿ ಮುಕ್ತಾಯಗೊಳುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯ ಹಿಟ್ನಲ್ಲಿ ಪಾರ್ಮನಲ್ಲಿರುವ ಕೃಷಿ ಮಹಾವಿಶ್ವವಿದ್ಯಾಲಯದಲ್ಲಿ ಜ.೧೧ ರಿಂದ ೧೩ರ ವರೆಗೆ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ೨೦೨೪-೨೫ನೇ ಈ ಕೃಷಿ ಮೇಳದ ಘೋಷವಾಕ್ಯ “ಆಹಾರ ಮತ್ತು ಪೌಷ್ಠಿಕ ಭದ್ರತೆಗಾಗಿ ಸುಸ್ಥಿರ ಕೃಷಿ” ಎಂಬುದಾಗಿದೆ.ರಾಜ್ಯ ಸರ್ಕಾರದ ಕೃಷಿ ಸಚಿವ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ.ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಧೋಂಡಿಬಾ ಕಟಕಧೋಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಿಧಾನಸಭೆ ಶಾಸಕ ಅಪ್ಪಾಜಿ ಸಿ ಎಸ್.ನಾಡಗೌಡ, ಲೋಕಸಭಾ ಸಂಸದ ರಮೇಶ ಜಿಗಜಿಣಗಿ, ರಾಜ್ಯಸಭೆ ಸಂಸದೆ ಸುಧಾ ಮೂರ್ತಿ, ವಿಧಾನಸಭೆ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನಸಭೆ ಶಾಸಕ ಬಸವಗೌಡ ಯತ್ನಾಳ, ಬಸನಗೌಡ ಪಾಟೀಲ, ಅಶೋಕ ಮಲ್ಲಪ್ಪ ಮನಗೂಳಿ, ಜಿ.ಎಸ್.ಪಾಟೀಲ, ವಿಧಾನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡೆಹಾರಾಡುನ್‌ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ನಲ್ಲಿ ೮ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಬಾಲಕ ಹಾಗೂ ಬಾಲಕಿಯರಿಂದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ತಿತಿತಿ.ಡಿimಛಿ.gov.iಟಿ ನಲ್ಲಿ ಅರ್ಜಿ ನಮೂನೆಯನ್ನು ಪಡೆದು ಆನ್ ಲೈನ್‌ನಲ್ಲೇ ಶುಲ್ಕ ಪಾವತಿ ಮಾಡಬೇಕು. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಜನ್ಮ ಪ್ರಮಾಣ ಪತ್ರ, ೫ ಪಾಸ್‌ಪೋರ್ಟ್ ಸೈಜ್ ಪೋಟೋ, ಪರೀಕ್ಷಾ ಪ್ರವೇಶ ಪತ್ರ ನಮೂನೆ, ಶಾಲಾ ಧೃಡೀಕರಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಮೂಲಸ್ಥಾನ ಧೃಡೀಕರಣ ಪತ್ರಗಳೊಂದಿಗೆ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಮುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಮ್. ಕರ್ಯಪ್ಪ ಭವನ ನಂ.೫೮ ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ರಸ್ತೆ, ಬೆಂಗಳೂರು-೨೫ ಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ ೩೧ ೨೦೨೫ ಆಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯಕ್ಕೆ ಹಾಗೂ ದೂರವಾಣಿ ಸಂಖ್ಯೆ ೦೮೦-೨೫೫೮೯೪೫೯ಗೆ ಸಂಪರ್ಕಿಸಬಹುದು ಎಂದು…

Read More