ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಮಖಂಡಿ ಸೇರಿದಂತೆ ಇನ್ನೀತರ ನಗರಗಳಿಂದ ಬರುವ ನೂರಾರು ಮಂತ್ರಾಲಯ ಪಾದಯಾತ್ರಿಗಳಿಗೆ ಸಂಜೀವಿನಿ ಯುವಕ ಸಂಘದ ವತಿಯಿಂದ ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಪ್ರಸಾದ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಳೆದ ಹಲವು ವರ್ಷಗಳಿಂದ ರೂಢಿಯಲ್ಲಿರುವ ಈ ಸೇವಾ ಕೈಂಕರ್ಯವನ್ನು ಸಂಜೀವಿನಿ ಯುವಕ ಸಂಘ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾಲಿಸಿತು.
ಪಾದಯಾತ್ರಿಗಳು ಬುಧವಾರ ಸಂಜೆ ೬ರ ಹೊತ್ತಿಗೆ ಆಗಮಿಸಿ ಕೊಂಚ ವಿಶ್ರಾಂತಿ ಪಡೆದು ರಾತ್ರಿ ಚಪಾತಿ, ಪಲ್ಯ, ಬೆಲ್ಲದ ಜಾಹಾಂಗೀರ, ಅನ್ನಾ, ಸಾಂಬಾರ ಬಳಿಕ ಬಾಳೆಹಣ್ಣು ಹೀಗೆ ವಿಶೇಶ ಭೋಜನವನ್ನು ಸವಿದರು. ರಾತ್ರಿ ತಂಗಲು ಮತ್ತು ಜೌಷದೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಸುಕಿನ ಜಾವ ೫ಗಂಟೆಗೆ ಇಡ್ಲಿ, ಸಾಂಬಾರ್, ಚಟ್ನಿ ಮತ್ತು ಟೀ ಸವಿದು ಯಾತ್ರಾರ್ಥಿಗಳು ಸಂಘದ ಸದಸ್ಯರಿಗೆ ಶುಭ ಹಾರೈಸಿ ನಡೆದರು.
ಈ ವೇಳೆ ಮಾಧ್ಯಮದೊಂದಿಗೆ ಮುತ್ತಣ್ಣ ಗಣಾಚಾರಿ, ರಾಜು ರಾಯಗೊಂಡ, ಶರಣು ಪಡದಾಳಿ, ಮುತ್ತಣ್ಣ ರಾಯಗೊಂಡ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮತ್ತೀತರರು ಮಾತನಾಡಿ ಕಳೆದ ೩೦ವರ್ಷಗಳಂತೆ ಈ ವರ್ಷವೂ ಕೂಡ ಸೇವೆ ಹಮ್ಮಿಕೊಂಡಿದ್ದೇವೆ. ಬರುವ ದಿನಗಳಲ್ಲಿಯೂ ಸೇವೆ ನೀಡುತ್ತೇವೆ. ಈ ಸೇವೆ ನಿರಂತರವಾಗಿರಲಿದೆ ಎಂದರು.
ಇದೇ ವೇಳೆ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನ ನೂತನ ಆಡಳಿತ ಮಂಡಳಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಟಿ ಭಾಸ್ಕರ, ಸೇವಾರ್ಥಿಗಳಾದ ರಮೇಶ ಕೆಂಧೂಳಿ, ಶೇಖರ ಪತ್ತಾರ, ಹರೀಶ ಬೆವೂರ, ಸಂತೋಷ ಬಾವೂರ, ಮಾಂತು ಮಡಿವಾಳರ, ಅಶೋಕ ವನಹಳ್ಳಿ, ರವಿ ಮಡಿವಾಳರ, ರಾಮು ಪೂಜಾರಿ, ಶಂಕರ ಸಾಲಿಮಠ, ಗುರುರಾಜ ಕಡಿ, ಉದಯಸಿಂಗ್ ರಾಯಚೂರ, ರಾಜು ಬಳ್ಳೊಳ್ಳಿ, ಅಂಬರೀಶ ಸಂಕಿನ್, ಪ್ರಶಾಂತ ಸಂಗಮ, ಅಂಬರೀಶ ಪಡದಾಳಿ, ಮಲ್ಲು ಚೌದರಿ, ನಾಗೇಂದ್ರ ಶಿವಶಿಂಪಿ, ವಿಜು ಸೋನಾರ, ರವಿ ಅಮರಣ್ಣವರ, ಸಂಗಣ್ಣ ಮೇಲಿನಮನಿ, ಅಶೋಕ ಚಟ್ಟೇರ, ಸದು ಮಠ, ಶಿವು ಕೊಣ್ಣೂರ, ವಿಶ್ವನಾಥ ರಾಮಗಿರಿಮಠ ಸೇರಿದಂತೆ ಮತ್ತೀತರರು ಇದ್ದರು

