ಉದಯರಶ್ಮಿ ದಿನಪತ್ರಿಕೆ
ಇಂಡಿ: ನಮ್ಮ ಸಂಸ್ಕೃತಿ ಹಿರಿಯರ ಕಾಲ ಕೋಶಗಳಿಂದ ದೂರ ಹೊಂದತೆಲ್ಲ ಬದುಕು ಸತ್ವ ಕಳೆದು ಕೊಳ್ಳುತ್ತ ಹೋಗುತ್ತದೆ. ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನ ಆಲಿಸಿ ಹೃದಯವಂತ ಸಮಾಜಮುಖಿ ಹೃದಯವಂತ ಯುವಕ ಪಡೆ ವ್ಯಕ್ತಿತ್ವ ನಿರ್ಮಾಣವಾಗಿದೆ ಎಂದು ಘೋಡಗೇರಿ ಶ್ರೀ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳವರಿಗೆ ಗುರು ಆರಾಧನಾ ಮಹೋತ್ಸವ ಯುವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಹೈಕೋರ್ಟು ನ್ಯಾಯಾಧೀಶ ಅರವಿಂದ ಪಾಶ್ಚಾಪುರೆ ಮಾತನಾಡಿ ಶ್ರೀ ಸಿದ್ದೇಶ್ವರ ಶ್ರೀಗಳ ಅಂತಿಮ ಅಬಿನಂದನಾ ಪತ್ರಕ್ಕೆ ಸಾಕ್ಷಿ ಹಾಕಿರುವದು ನನ್ನ ಈ ಜನ್ಮದ ಸುಕೃತ, ಪೂಜ್ಯರ ಪ್ರವಚನದ ಫಲದಿಂದ ನ್ಯಾಯ ಕ್ಷೇತ್ರದಲ್ಲಿ ಹೊಸ ಅಡಿ ಇಟ್ಟು ನ್ಯಾಯ ನೀಡಿದ್ದೇನೆ. ೨೦೧೨ ರಲ್ಲಿ ರಾಜ್ಯ ಮಟ್ಟದ ನ್ಯಾಯಾಧೀಶರ ಸಮ್ಮೇಳನದಲ್ಲಿ ಸಿದ್ದೇಶ್ವರ ಶ್ರೀಗಳು ಮಾತ್ರ ಮಾತನಾಡಿದ್ದು ಯಾವದೇ ನ್ಯಾಯ್ಯಾಧೀಶರ ಸಮ್ಮೇಳನದಲ್ಲಿ ಯಾವದೇ ಪೂಜ್ಯರು ಮಾತಾಡಿಲ್ಲ, ಅದರಂತೆ ಅನೇಕ ನ್ಯಾಯಾಧೀಶರು ಅವರ ಪ್ರವಚನದಿಂದ ಪರಿವರ್ತನೆ ಯಾಗಿ ಇಂದಿಗೂ ಸ್ಮರಿಸುತ್ತಾರೆ ಹೀಗಾಗಿಸಿದ್ದೇಶ್ವರ ಶ್ರೀಗಳು ಯುವಕರಿಗೆ ಸ್ಪೂರ್ತಿ ನೀಡಿದ್ದರು. ಯುವಕರು ಅವರ ಪ್ರವಚನ ಆಲಿಸುವ ಮೂಲಕ ಬದಲಾವಣೆ ಯಾಗಬೇಕು ಎಂದರು.
ದಕ್ಷಿಣ ಭಾರತ ಮುಖ್ಯ ಪತಂಜಲಿ ಪ್ರಭಾರಿಗಳು ಭವರಲಾಲ ಮೀನಾ ಮಾತನಾಡಿ ಯುವ ಸಮೂಹ ನಮ್ಮ ಸಂಸ್ಕೃತಿಯ ರಾಯಭಾರಿಗಳು, ಪ್ರತಿಯೊಬ್ಬ ಯುವಕ ಸುಪ್ತ ಪ್ರತಿಭೆ ಹೊರಗೆ ತಂದು ಅದನ್ನು ಸಮಾಜಮುಖಿಯಾಗಿ ಬಳಕೆ ಯಾಗುವಂತೆ ಶ್ರೀ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನಗಳಲ್ಲಿ ಯುವಕರಿಗೆ ಪ್ರೇರಣೆ ನೀಡುತ್ತಿದ್ದರು. ಯುವಕರು ಯಾವದೇ ಆಕರ್ಷಣೆಗೆ ಒಳಗಾಗದೇ ಬದುಕಿನ ಆಧ್ಯತೆಗಳ ಸ್ಪಷ್ಟನೆ ಶ್ರೀಗಳಿಂದ ಕಲಿತರು ಎಂದರು.
ಶಿರಕನಹಳ್ಳಿಯ ಪರಮಪೂಜ್ಯ ಅಡವಿಲಿಂಗ ಮಹಾರಾಜರು ಮಾತನಾಡಿದರು. ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಉಪಸ್ಥಿತರಿದ್ದರು.
ಗುರುದೇವಾಶ್ರಮದ ಈಶ ಪ್ರಸಾದ ಶ್ರೀಗಳು, ತಾಳಿಕೋಟಿಯ ಅಶೋಕ ಹಂಚಲಿ, ಎಕ್ಸಲಂಟ ಸಮೂಹ ಮುಖ್ಯಸ್ಥ ಬಸವರಾಜ ಕವಲಗಿ, ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ ಮಾತನಾಡಿದರು.
ಸಮಾರಂಭದಲ್ಲಿ ಗಣಪತಿ ಬಾಣಿಕೋಲ, ಶಿವು ನಿಂಬಾಳ, ಮಲಕಣ್ಣ ಬೊಳೆಗಾಂವ, ಬಸವರಾಜ ಹೊನ್ನಳ್ಳಿ, ರೇವಣಸಿದ್ದ ಅಂಕಲಗಿ, ರಾಹುತಪ್ಪ ಹುಲ್ಲೂರ, ಗುರಪ್ಪ ರೂಳಿ, ಧರೆಪ್ಪ ಬ್ಯಾಳಿ ಮತ್ತಿತರಿದ್ದರು.
“ಮಕ್ಕಳೆಂದರೆ ಸಿದ್ದೇಶ್ವರ ಶ್ರೀಗಳಿಗೆ ಪ್ರೀತಿ, ಅವರ ಆರ್ಶೀವಾದದಿಂದ ಕರ್ನಾಟಕದ ಎರಡುವರೆ ಕೋಟಿ ಮಕ್ಕಳನ್ನು ಪ್ರತಿನಿಧಿಸುವ ಅಧ್ಯಕ್ಷನಾಗಿರುವದು ಪೂಜ್ಯರ ಆರ್ಶಿವಾದ, ಮಕ್ಕಳ ಸೇವೆ ಮಾಡುವದರ ಮೂಲಕ ಪೂಜ್ಯರ ನಿಮ್ಮೇಲ್ಲರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

