Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶದ ಭವಿಷ್ಯವು ವರ್ಗ ಕೋಣೆಯಲ್ಲಿ ಅಡಗಿದೆ. ಶಾಲಾ ಸಂಸತ್ತುಗಳ ರಚನೆಯಿಂದ ನಮ್ಮ ದೇಶದ ಮುಂದಿನ ಭವ್ಯ ನಾಯಕರು ಈ ವೇದಿಕೆಯ ಮುಖಾಂತರ ನಿರ್ಮಾಣವಾಗುತ್ತಾರೆ. ಮತ್ತು ಉತ್ತಮ ನಾಯಕತ್ವ ಗುಣ ಮಕ್ಕಳಲ್ಲಿ ಬರುತ್ತದೆ ಎಂದು ರೇಖಾ ಮೋಹರೆ ಹೇಳಿದರು.ನಗರದ ನಾಗೂರ ಬಡಾವಣೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪಠ್ಯೇತರ ಮತ್ತು ಪಠ್ಯಪೂರಕ ಹಾಗೂ ಶಾಲಾ ಸಂಘಗಳ ಉದ್ಘಾಟನೆ ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಜ್ಞಾನ ಸಂಪಾದನೆಯೊಂದಿಗೆ ಗುರುವಿನ ಮಹತ್ವವನ್ನು ತಿಳಿದು, ಗುರುವಿನ ಕೃಪೆಯನ್ನು ಅನಂತವಾಗಿ ಪಡೆಯಬೇಕು. ಮತ್ತು ಪುಸ್ತಕ ಜ್ಞಾನದೊಂದಿಗೆ ಪರಂಪರೆ ಮತ್ತು ಸಂಸ್ಕೃತಿಯ ಜ್ಞಾನವನ್ನು ಗಳಿಸಿದಾಗ ಸರ್ವಾಂಗೀಣ ಪ್ರಗತಿ ಮಕ್ಕಳಲ್ಲಿ ಉಂಟಾಗುತ್ತದೆ ಎಂದರು.ಈ ವೇಳೆ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.ಶಾಲಾ ಸಂಸತ್ತಿಗೆ ಆಯ್ಕೆಯಾದ ಮಕ್ಕಳಿಗೆ ಅಧಿಕಾರದ ಗೌಪ್ಯತೆ ಮತ್ತು ಪ್ರಮಾಣ ವಚನವನ್ನು ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ? ಎದೆ ಸಿಳಿದರೆ ಮೂರು ಅಕ್ಷರವಿಲ್ಲ ಎಂದು ಮುಲ್ಲಾ ಸಮುದಾಯಕ್ಕೆ ನೀಡಲಾಗಿದೆ ಎನ್ನಲಾದ ಹೇಳಿಕೆ ಖಂಡಿಸಿ ಹಾಗೂ ಸಮುದಾಯದ ಗೌರವ ಮತ್ತು ಸಾಮಾಜಿಕ ಗುರುತಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಲ್ಲಾ ಸಮುದಾಯ ಬಂದುಗಳು ತಹಶೀಲ್ದಾರ ಕರೆಪ್ಪ ಬೆಳ್ಳಿ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕರ್ನಾಟಕ ಮುಸ್ಲಿಂ ಹಿತ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಎಂ.ಎ.ಖತೀಬ ಮಾತನಾಡಿ, ಇತ್ತೀಚೆಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧದ. ಎದೆ ಸಿಳಿದರೆ ಮೂರು ಅಕ್ಷರವಿಲ್ಲ. ವಿನಾಃಕಾರಣ ಮಾತನಾಡೋಕೆ ಬಂದಿದ್ದಾರೆ. ಸಾರ್ವಜನಿಕವಾಗಿ ಮಾತನಾಡಿದ್ದು ಮುಲ್ಲಾ ಸಮುದಾಯಕ್ಕೆ ನೋವುಂಟು ಮಾಡಿದೆ. ನಾವೇನು ಭಾರತೀಯರಲ್ಲವೇ, ಬಿಜೆಪಿಯವರು ಸಮುದಾಯ ಸಮುದಾಯಗಳ ನಡುವೆ ಕಂದಕ ಸೃಷ್ಠಿ ಮಾಡಿ ಹಿಂದೂ ಮುಸ್ಲಿಂರಲ್ಲಿ ದ್ವೇಶ ಹುಟ್ಟು ಹಾಕುತ್ತಿದ್ದಾರೆ. ಇವರ ತಲೆಯಲ್ಲಿ ಹಿಂದೂ ಮುಸ್ಲಿಂರಲ್ಲಿ ಜಗಳ ಹಚ್ಚಿ ಹಿಂದೂ ಮತ ಬ್ಯಾಂಕ ಮಾಡುವ ಹುನ್ನಾರು ನಡೆಸಿದ್ದಾರೆ. ವಿನಾಃಕಾರಣ ಇಲ್ಲಸಲ್ಲದ…

Read More

ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ರ ಸಾಮಾಜಿಕ ಕಳಕಳಿಗೆ ರೈತರ ಮೆಚ್ಚುಗೆ :ಸನ್ಮಾನ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಡಗಾನೂರಿನಿಂದ ಇಂಗಳಗಿಗೆ ಸಂಪರ್ಕಿಸುವ ೨೦-೩೦ ವರ್ಷದ ಹಳೆ ರಸ್ತೆ ಸಂಪೂರ್ಣವಾಗಿ ಮುಳ್ಳು-ಕಂಟಿಗಳಿಂದ ಸಂಪೂರ್ಣ ಮುಚ್ಚಿಹೋಗಿದ್ದ ರಸ್ತೆಯನ್ನು ರೈತಾಪಿ ಜನರ ವಿನಂತಿಯ ಮೇರೆಗೆ ಮತಕ್ಷೇತ್ರದ ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಮುಳ್ಳುಕಂಠಿ ಕಡಿಸುವದರೊಂದಿಗೆ ಗರಸು ಮಣ್ಣು ಹಾಕಿಸಿ ರಸ್ತೆ ದುರಸ್ಥಿ ಮಾಡಿಸಿ ರೈತಾಪಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ರಸ್ತೆಯಲ್ಲಿ ಮುಳ್ಳು ಕಂಠಿ-ತಗ್ಗು ದಿನ್ನಿಗಳು ತುಂಬಿಕೊಂಡ ಪರಿಣಾಮವಾಗಿ ಯಾವುದೇ ವಾಹನಗಳ ಸಂಚಾರ ಮಾತ್ರವಲ್ಲದೆ ಕಾಲ್ನಡಿಗೆಯಲ್ಲಿಯೂ ತೆರಳುವುದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಈ ರಸ್ತೆಯ ಮೂಲಕ ತಮ್ಮ ಜಮೀನುಗಳಿಗೆ ತೆರಳುವ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.ಈ ಸಮಸ್ಯೆಯನ್ನು ಅಲ್ಲಿನ ರೈತ ಬಾಂಧವರು ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರ ಗಮನಕ್ಕೆ ತರುವದರೊಂದಿಗೆ ರಸ್ತೆ ದುರಸ್ಥಿಯ ಸಾಮಾಜಿಕ ಸೇವೆ ಸಲ್ಲಿಸಬೇಕೆಂಬ ಮನವಿಯ ಮೇರೆಗೆ ಸ್ಥಳಕ್ಕೆ ಭೇಟಿ…

Read More

ಲೇಖನ- ಡಾ ಶಶಿಕಾಂತ ಪಟ್ಟಣ. ರಾಮದುರ್ಗ – ಪುಣೆಮೊ: 9552002338 ಉದಯರಶ್ಮಿ ದಿನಪತ್ರಿಕೆ ವಚನ ಸಾಹಿತ್ಯವು ೧೨ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಉದಯಿಸಿದ, ಸಾಮಾಜಿಕ ಕ್ರಾಂತಿ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬಿಂಬಿಸುವ ಅದ್ಭುತ ಸಾಹಿತ್ಯ ಪ್ರಕಾರವಾಗಿದೆ. ಇದು ಸರಳ ಕನ್ನಡದಲ್ಲಿ ರಚಿತವಾದ ಗದ್ಯ-ರೂಪದ ಕಾವ್ಯವಾಗಿದ್ದು, ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಸಮಾನತೆ ಹಾಗೂ ಕಾಯಕ ಮಹತ್ವವನ್ನು ಸಾರುತ್ತದೆ.ಪ್ರಮುಖ ಲಕ್ಷಣಗಳುಅಂಕಿತನಾಮ: ಪ್ರತಿಯೊಂದು ವಚನವು ಕೊನೆಯಲ್ಲಿ ಶಿವನ ಅಥವಾ ಇಷ್ಟಲಿಂಗದ ಹೆಸರನ್ನು ‘ಅಂಕಿತನಾಮ’ವಾಗಿ ಹೊಂದಿರುತ್ತದೆ (ಉದಾಹರಣೆಗೆ: ಕೂಡಲಸಂಗಮದೇವ, ಗುಹೇಶ್ವರ).ಸರಳತೆ: ಸಂಸ್ಕೃತ ಭಾಷೆಯ ಕಠಿಣ ನಿಯಮಗಳಿಲ್ಲದೆ, ಜನಸಾಮಾನ್ಯರ ಆಡುಭಾಷೆಯಲ್ಲಿ ರಚಿತವಾಗಿದೆ.ಕಾಯಕ ತತ್ವ: ‘ಕಾಯಕವೇ ಕೈಲಾಸ’ (ಕೆಲಸವೇ ಪೂಜೆ) ಎಂಬ ಮೌಲ್ಯವನ್ನು ಬಲವಾಗಿ ಪ್ರತಿಪಾದಿಸುತ್ತದೆ.ಪ್ರಮುಖ ವಚನಕಾರರು ಮತ್ತು ಅವರ ಅಂಕಿತನಾಮಗಳುಬಸವಣ್ಣ: ವಚನ ಸಾಹಿತ್ಯದ ಪ್ರವರ್ತಕರು, ‘ಕೂಡಲಸಂಗಮದೇವ’.ಅಕ್ಕಮಹಾದೇವಿ : ಮಹಿಳಾ ವಚನಗಾರ್ತಿ, ‘ಚೆನ್ನಮಲ್ಲಿಕಾರ್ಜುನ’.ಅಲ್ಲಮಪ್ರಭು: ವಚನಕಾರರ ಮಾರ್ಗದರ್ಶಿ, ‘ಗುಹೇಶ್ವರ’. ಜೇಡರ ದಾಸಿಮಯ್ಯ: ಮೊಟ್ಟಮೊದಲ ವಚನಕಾರರಲ್ಲಿ ಒಬ್ಬರು, ‘ರಾಮನಾಥವಚನ ಸಾಹಿತ್ಯದಲ್ಲಿ ಶಿಕ್ಷಣವು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗಿರದೆ, ಅದು ಜೀವನ ಮೌಲ್ಯ,…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮುದ್ದಾದ ರೋಹಿಣಿಪ್ರತಿದಿನವೂ ಘಮಘಮಿಸುವ ಮುಂಜಾವಿನ ಹೂವು ನೀನು. ಅಂದು ಮುಸ್ಸಂಜೆ ನದಿ ತೀರದಿ ಪರಮ ಪ್ರೇಮದ ರಮಣೀಯವಾದ ವಾತಾವರಣದಲ್ಲಿ ಯಾವುದೋ ಕಾಣದ ಲೋಕದಿಂದ ಬಂದವಳಂತೆ ಎದುರು ನಿಂತಿದ್ದೆ. ಅಚ್ಚ ಮಲ್ಲಿಗೆಗಿಂತಲೂ ಬೆಳ್ಳಗೆ ಮೈಬಣ್ಣ. ನಾಗರ ಜಡೆಯ ಬೀಸಿಕೊಂಡು, ಗೆಜ್ಜೆ ಶಬ್ದ ಮಾಡಿಕೊಂಡು, ಬಿಂಕದಿ ನೀ ನಡೆಯುತಿರುವಾಗ ನಿನ್ನಂದ ಸೆರೆ ಹಿಡಿಯಲು ಕಣ್ಣೆರಡು ಸಾಲವು ಎಂದೆನಿಸಿತು. ನಿನ್ನವು ಪುಟ್ಟ ಹೆಜ್ಜೆಯಾಗಿದ್ದರೂ ದಿಟ್ಟ ಹೆಜ್ಜೆಯಾಗಿದ್ದವು. ನೀನು ನಡೆದ ದಾರಿಯನ್ನೇ ಕಾಲು ಹಿಂಬಾಲಿಸುತ್ತಿದ್ದವು. ನಿನ್ನ ನಡೆಯ ಸೊಗಸಿನ ಸುಗಂಧ ಪರಿಮಳ ಆಗಲೇ ಮನದಲ್ಲಿ ಮನೆ ಮಾಡಿತ್ತು. ಚಂದದ ಬೆಳದಿಂಗಳು ಹರಡುತ್ತಿತ್ತು.ಸನಿಹ ನಿಂತು ಮಾತನಾಡುವಷ್ಟು ಸಲಿಗೆ ಇನ್ನೂ ಬೆಳೆದಿರಲಿಲ್ಲ. ದೂರ ನಿಂತು ನಿನ್ನ ನಿಲುವನು ಆಸ್ವಾದಿಸುತ್ತಿದ್ದೆ. ಹಾರುವ ಚಿಟ್ಟೆಗಳ, ಗೂಡಿನ ಹಕ್ಕಿಗಳ ನೋಡುತ ನೀ ಮೈಮರೆತಿದ್ದೆ. ಮುಳುಗುವ ದಿಗಂತದಿ ಸಾಗುವ ಪುಟ್ಟ ದೋಣಿಯತ್ತ ನಿನ್ನ ಚಿತ್ತ ಹರಿದಿತ್ತು. ನನ್ನ ಚಿತ್ತ ಮಾತ್ರ ನಿನ್ನತ್ತಲೇ ಇತ್ತು. ಮೋಹದಿಂದ ನಿನ್ನತ್ತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ೨೦೨೬-೨೭ನೇ ಸಾಲಿನ ಯು.ಪಿ.ಎಸ್.ಸಿ ನಾಗರಿಕ ಸೇವಾ ಪರೀಕ್ಷೆಗಳ ಉಚಿತ ಪೂರ್ವಭಾವಿ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.ಹಿಂದುಳಿದ ವರ್ಗಗಳ ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಈ ತರಬೇತಿ ನೀಡಲಾಗುತ್ತದೆ.ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ವರ್ಗ: ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ) ಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಹರು.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳು, ಪ್ರವರ್ಗ ಹಾಗೂ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯಿಂದಲೇ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುವುದರಿಂದ ಪ್ರತ್ಯೇಕವಾಗಿ ಯಾವುದೇ ತರಬೇತಿ ಭತ್ಯೆ ನೀಡಲಾಗುವುದಿಲ್ಲ.ಆಗಸ್ಟ್ ೩ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿsevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ಹೆಚ್ಚಿನ ಮಾಹಿತಿಗಾಗಿ ೮೦೫೦೭೭೦೦೦೪ ಸಂಖ್ಯೆಯನ್ನು ಸಂಪರ್ಕಿಸಬಹುದು ಪರೀಕ್ಷಾ ಕೇಂದ್ರ, ದಿನಾಂಕ ಮತ್ತು…

Read More

ಚುರುಕಾದ ಮತದಾರರ ಪಟ್ಟಿಯ ಮನೆ ಮನೆ ಗಣತಿ ಕಾರ್ಯ | ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾಹಿತಿ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಗಣತಿ ಕಾರ್ಯ ಭರದಿಂದ ನಡೆದಿದ್ದು, ೧೪.೮೩ ಲಕ್ಷ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.​ಜೂನ್ ೧೬, ೨೦೨೬ರಲ್ಲಿದ್ದಂತೆ ಒಟ್ಟು ೧೯,೮೨,೧೧೪ ಮತದಾರರಿದ್ದು, ಇವರಿಗೆ ಸಂಬಂಧಿಸಿದ ಗಣತಿ ನಮೂನೆಗಳನ್ನು ಮುದ್ರಿಸಿ ಬಿ.ಎಲ್.ಒ ಗಳಿಗೆ ವಿತರಿಸಲಾಗಿದೆ. ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜೂನ್ ೩೦, ೨೦೨೬ ರಿಂದ ಆಗಸ್ಟ್ ೦೮, ೨೦೨೬ ರವರೆಗೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.ಪ್ರಸ್ತುತ ಗಣತೀಕರಣದ ಸ್ಥಿತಿ (ಜುಲೈ ೨೪, ೨೦೨೬ರ ಸಂಜೆ ೬:೦೦ ಗಂಟೆಯ ವೇಳೆಗೆ): ​ಒಟ್ಟು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ೧೪,೮೩,೫೦೨ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದವರು ತಿಳಿಸಿದ್ದಾರೆ.​ಆನ್‌ಲೈನ್‌ನಲ್ಲಿ ಸಾರ್ವಜನಿಕರು ಸಲ್ಲಿಸಿದ ನಮೂನೆಗಳು: ೩,೮೬೭, ​ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು: ೧೯,೯೮೭, ​ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು: ೬೧,೨೪೭,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಅಧಿಕಾರ ಪದಗ್ರಹಣ ಮತ್ತು ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ಇದೇ ದಿನಾಂಕ : ೨೬ ರಂದು ರವಿವಾರ ಜಗರುಗಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಷಾ ಮಂಜುನಾಥ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.ಅಂದು ಬೆಳಿಗ್ಗೆ ೧೦ ಘಂಟೆಗೆ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಸಂಘದ ಕೋಶಾಧ್ಯಕ್ಷ ಎಚ್.ಎಲ್. ಸುರೇಶ ಅವರು ಸದಸ್ಯತ್ವ ಸ್ವೀಕರಿಸಲಿದ್ದಾರೆ.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.ಈ ಸಂಘದಲ್ಲಿ ಸದಸ್ಯರಾಗಬಯಸುವವರು ಮಾಧ್ಯಮ ಪಟ್ಟಿಯಲ್ಲಿರುವ ಸಂಪಾದಕರು ೧೧೦೦.೦೦ ರೂ. ಶುಲ್ಕನೀಡಿ ಸದಸ್ಯರಾಗಬಹುದು ಎಂದು ತಿಳಿಸಿದ್ದಾರೆ.ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು.ಕಾರಣ ಮಾಧ್ಯಮ ಪಟ್ಟಿಯಲ್ಲಿರುವ ಸಂಪಾದಕರು ಸಭೆಗೆ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಅವರು ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ೪ನೇ ವಾರ್ಡಿನ ಸಾರ್ವಜನಿಕರ ಬೇಡಿಕೆಯಂತೆ ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ ಹೇಳಿದರು.ಪಟ್ಟಣದ ೪ನೇ ವಾರ್ಡಿನಲ್ಲಿ ಗುರುವಾರ ಸಾಯಂಕಾಲ ಬೋರ್‌ವೆಲ್ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಬೋರ್‌ವೆಲ್ ಮೂಲಕ ೩ ಗುಮ್ಮಿಗಳನ್ನು ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು ಎಂದರು.ವಾರ್ಡಿನ ಬಿಜೆಪಿ ಧುರೀಣ ಸೋಮು ದೇವೂರ ಮಾತನಾಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ತಮ್ಮ ತಾಯಿ ರತ್ನವ್ವ ದೇವೂರರ ಅನುದಾನ ಬಳಕೆ ಮಾಡಿಕೊಂಡು ಈ ಭಾಗದ ಜನರ ನೀರಿನ ಅವಶ್ಯಕತೆಗೆ ಅಗತ್ಯ ಕ್ರಮವಹಿಸಲಾಗಿದೆ. ಇದರಿಂದ ಕನಿಷ್ಠ ೩ ವಾರ್ಡುಗಳಿಗೆ ಅನುಕೂಲವಾಗಲಿದೆ ಎಂದರು.ಮೂರು ದಿನಗಳಲ್ಲಿ ಬೋರ್‌ವೆಲ್ ಕೊರೆಸಿ ನೀರನ್ನು ಶಾಶ್ವತವಾಗಿ ಪೂರೈಸಲಾಗುವುದು ಎಂದು ಹೇಳಿದಂತೆ ನಡೆದ ಮುಖ್ಯಾಧಿಕಾರಿ ಹಾಗೂ ವಾರ್ಡಿನ ಸದಸ್ಯರ ನಡೆಯನ್ನು ವಾರ್ಡಿನ ಗುರುಬಾಯಿ ಬಿರಾದಾರ(ಜಿರ್ಲಿ), ರಜಿನಾಬಾಯಿ ಜಿರ್ಲಿ, ರೂಪಾ ಅಗಸರ, ಶಾರದಾ ಸೌದಿ ಸಹಿತ ಮಹಿಳೆಯರು ಶ್ಲಾಘಿಸಿದ್ದಾರೆ.ಮಡುಗೌಡ ಬಿರಾದಾರ, ಸುರೇಶ ಬಿರಾದಾರ, ರಾವುತ ಅಗಸರ,…

Read More