Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಾತಿಗಣತಿ ವರದಿ ಶೀಘ್ರ ಜಾರಿಗೊಳಿಸಬೇಕು :ಆಲಗೂರ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಾಂತರಾಜ ವರದಿಯಂತೆ ಪೂರ್ಣಗೊಂಡ ಜಾತಿಗಣತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಿಂದುಳಿದ, ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಜು ಅಲಗೂರ ಹೇಳಿದರು.ಮಂಗಳವಾರ ಆಲಮೇಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಜಿಲ್ಲೆಯ ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರದ ಮೀಸಲಾತಿ ಪಡೆದುಕೊಳ್ಳಲು ಜಾತಿಗಣತಿ ವರದಿ ಜಾರಿಯಾಗಬೇಕು. ಈ ಜಾತಿಗಣತಿ ವರದಿಯನ್ನು ಜಾರಿಗೋಳಿಸವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾದ್ಯ. ಅದಕ್ಕೆ ಅವರ ಅವಧಿಯಲ್ಲೆ ಜಾತಿಗಣತಿ ವರದಿ ಜಾರಿಗೋಳಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ಶೋಷಿತ ವರ್ಗಗಳ ಹಾಗೂ ಅಹಿಂದ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದಿಂದ ಲಕ್ಷಾಂತರ ಜನರ ಬ್ರಹತ್ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.ಜಾತಿಗಣತಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಬಯಲಾಟಗಳು ಕೇವಲ ಮನರಂಜನೆ ಅಲ್ಲ. ಜೀವನಕ್ಕೆ ಬೇಕಾದ ಕಲೆ – ನೆಲೆ ಬಯಲಾಟದಲ್ಲಿ ಕಾಣುತ್ತೇವೆ. ಟಿ ವಿ ಮತ್ತು ಮೊಬೈಲ್ ಪ್ರಭಾವದಿಂದ ಬಯಲಾಟ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಬಯಲಾಟ ಆಕಾಡೆಮಿ ಅಧ್ಯಕ್ಷ ಡಾ. ಕೆ ಆರ್ ದುರ್ಗಾದಾಸ್ ಅಭಿಪ್ರಾಯಪಟ್ಟರು.ತಾಳಿಕೋಟೆ ತಾಲೂಕು ಮಿಣಜಗಿ ಗ್ರಾಮದ ಗ್ರಾಮದೇವತೆ ಜಾತ್ರೆ ಪ್ರಯುಕ್ತ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಮತ್ತು ಜಾತ್ರಾ ಸಮಿತಿ ಸಹಯೋಗದಲ್ಲಿ ” ಬಯಲಾಟ ವಿಚಾರ ಸಂಕಿರಣ ಮತ್ತು ಪ್ರದರ್ಶನ ” ಉದ್ಘಾಟಿಸಿ ಮಾತನಾಡುತ್ತ ಜಾತ್ರೆ ಉತ್ಸವಗಳ ಮೂಲಕ ನಮ್ಮ ಮಕ್ಕಳಲ್ಲಿ ಸಂಸ್ಕೃತಿ ಬೆಳೆಸುತ್ತಾ, ನಮ್ಮ ಹಳ್ಳಿಗಳನ್ನು ಸಾಂಸ್ಕೃತಿಕ ನೆಲೆಗಳನ್ನಾಗಿ ಮಾಡೋಣ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ ಡಿ ಆರ್ ಮಳಖೇಡ , ಬಯಲಾಟಗಳಲ್ಲಿ ಗ್ರಾಮೀಣ ಬದುಕು ಅನಾವರಣಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಯಲಾಟ ಪ್ರದರ್ಶನ ವಿರಳವಾಗುತ್ತಿದೆ. ಯುವ ಜನಾಂಗ ಜಾನಪದ ಪರಂಪರೆಯಿಂದ ದೂರಾಗುತ್ತಿರುವುದು ಕಳವಳಕಾರಿ ವಿಷಯ ಎಂದರು.” ಬಯಲಾಟಗಳಲ್ಲಿ…
ಡಿ.25 ರಿಂದ ಜ.2 ರವರೆಗೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ದಿ.25 ರಿಂದ ಜನೆವರಿ 2 2025 ರ ವರೆಗೂ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ನಡೆಯಲಿದ್ದು, ಈ ಜ್ಞಾನ ಯಜ್ಞದಲ್ಲಿ ಎಲ್ಲರೂ ಭಾಗವಹಿಸಿ ಗುರುದೇವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಪ್ರಚಾರ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಅಪ್ಪಾವರ ಗುರುನಮನ ಕಾರ್ಯಕ್ರಮ ಎಂದರೆ ಅದೊಂದು ಜ್ಞಾನದ ಯಜ್ಞ ಇದ್ದಂತೆ, 9 ದಿನಗಳ ಕಾಲ ಈ ವಿಶೇಷ ಮಹೋತ್ಸವದಲ್ಲಿ ಸಿದ್ದೇಶ್ವರ ಅಪ್ಪಾವರು, ಪ್ರಚಾರದಿಂದ ಬಹಳಷ್ಟು ದೂರ ಉಳಿದುಕೊಂಡಿದ್ದರು. ಆದರೆ ಅವರ ಪ್ರವಚನಗಳೇ ಅವರಿಗೆ ಸಾಕಷ್ಟು ಪ್ರಚಾರ ಕೊಟ್ಟಿವೆ. ಹಾಗಾಗಿ ಅವರ ಪ್ರವಚನಗಳ ಸಾರವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.ಆಶ್ರಮದ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ಅಂಗವಾಗಿ 9 ದಿನಗಳ ಕಾಲ ವಿಶೇಷ…
4ನೇ ವಾರ್ಷಿಕ ಆರ್.ಡಿ.ಪಿ.ಆರ್. ಕ್ರೀಡಾಕೂಟ-೨೦೨೪ ಕ್ಕೆ ಚಾಲನೆ ನೀಡಿದ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾವೆಲ್ಲ ವೃತ್ತಿಗೆ ಪೂರಕವಾಗಿ ಕ್ರೀಡೆಗಳಲ್ಲಿಯೂ ಭಾಗವಹಿಸಿ, ಸದೃಢರಾಗಬೇಕು. ನಮ್ಮ ದೇಹ ಸದೃಢ ಇದ್ದಾಗ ಮಾತ್ರ ನಮ್ಮ ಕುಟುಂಬದ ಆರೋಗ್ಯ ಸ್ಥಿರವಾಗಿರಲು ಸಾಧ್ಯ ಎಂದು ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ ವಿಜಯಪುರ, ಆರ್.ಡಿ.ಪಿ.ಆರ್. ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಡಿ.24, 25 ಮತ್ತು 26 ರಂದು ನಡೆಯಲಿರುವ 4ನೇ ವಾರ್ಷಿಕ ಕ್ರೀಡಾಕೂಟ-2024 ಉದ್ಘಾಟನಾ ಸಮಾರಂಭವನ್ನು ಬಲೂನುಗಳನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಪ್ರತಿದಿನ ನಿರಂತರ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೂ ಸಹ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಪೌರತ್ವ ರದ್ದುಗೊಳಿಸಿ, ದೇಶದ್ರೋಹಿ ಆರೋಪದಡಿ ಬಂಧಿಸಿ, ಗಡಿಪಾರು ಮಾಡುವಂತೆ ಸಾಮೂಹಿಕ ದಲಿತ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿ ಒತ್ತಾಯಿಸಿದೆ. ದೇಶದ ದೇಗುಲವಾದ ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿ ಕೋಟ್ಯಂತರ ಅಂಬೇಡ್ಕರ್ ಅಭಿಮಾನಿಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿರುತ್ತಾರೆ. ಗೃಹ ಸಚಿವರು ತಮ್ಮ ಜವಾಬ್ದಾರಿಯನ್ನು ಮರೆತು ಮಾತನಾಡಿರುವುದು ಅಕ್ಷಮ್ಯ ಅಪರಾಧ, ಕೂಡಲೇ ಪ್ರಧಾನಮಂತ್ರಿ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದವರು, ಕೋಮುವಾದಿಗಳ ಒತ್ತಡಕ್ಕೆ ಮಣಿದ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಈ ಕುರಿತು ಭಾರತದ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪಾರ್ವತಿ ತಂಬಾಕೆ ಅವರು ಸಲ್ಲಿಸಿದ್ದ “ಆ್ಯನ್ ಅನಾಲಿಟಿಕಲ್ ಸ್ಟಡಿ ಆಫ್ ಸೆಲೆಕ್ಟೆಡ್ ಫಿಜಿಕಲ್, ಫಿಜಿಯೋಲಾಜಿಕಲ್, ಸೈಕಲಾಜಿಕಲ್ ಕಾಂಪೊನೆಂಟ್ಸ್ ಆ್ಯಂಡ್ ಡಿಫರೆಂಟ್ ಲೆವೆಲ್ ಆಫ್ ಪರ್ಫಾರ್ಮೆನ್ಸ್ ಆನ್ ನಾರ್ಥ ಕರ್ನಾಟಕ ಸೈಕ್ಲಿಸ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಪಾರ್ವತಿ ತಂಬಾಕೆ ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಸಕ್ಪಾಲ ಹೂವಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.ಡಾಕ್ಟರೇಟ್ ಪದವಿ ಪಡೆದಿರುವ ಪಾರ್ವತಿ ತಂಬಾಕೆ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ :ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಡಾ ಸಂಜೀವ ಹರಳಯ್ಯ ಅವರನ್ನು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಸದಸ್ಯರಾಗಿ ನೇಮಕ ಮಾಡಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಲ್ಲಕ್ಕಿ ರಾಮಣ್ಣ ಶಿವಪ್ರಸಾದ ಅವರು ಆದೇಶ ಹೊರಡಿಸಿದ್ದಾರೆ.ನರ್ಸಿಂಗ್ ವಿಜ್ಞಾನದಲ್ಲಿ ಪಿಎಚ್ ಡಿ ಪದವಿ ಪಡೆದಿರುವ ಡಾ ಸಂಜೀವ ಅವರು ಪ್ರಸ್ತುತ ಗದಗನ ಸರಕಾರಿ ಶುಶೂಷ್ರಕ ಮಹಾವಿದ್ಯಾಲಯದಲ್ಲಿ ಮನಶಾಸ್ತ್ರದ ಸಹಾಯಕ ಪ್ರಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಜಿಲ್ಲೆಯ ಪ್ರತಿಭಾನ್ವಿತ ಪ್ರಾಧ್ಯಾಪಕರಾದ ಹರಳಯ್ಯ ಅವರು ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದಕ್ಕೆ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ, ಹಾಗೂ ಕಾರ್ಯಾಧ್ಯಕ್ಷ ಕಲ್ಲಪ್ಪ ಶಿವಶರಣ ಹರ್ಷ ವ್ಯಕ್ತಪಡಿಸಿದ್ದಾರೆ.
ಅಪ್ರತಿಮ ಮಹಿಳೆ ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಮದರ್ ತೆರೇಸಾ ಅವರು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.1970ರ ವೇಳೆಗೆ ಇವರು ಒಬ್ಬ ಮಾನವತಾವಾದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಅವರಿಗೆ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ ,ವೃದ್ಧರ, ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಮದರ್ ತೆರೇಸಾ ಅವರು ಅಲ್ಬೇನಿಯಾದವರು. ಭಾರತದ ಪೌರತ್ವವನ್ನು ಸಹ ಪಡೆದಿದ್ದರು. ಇವರು 1950 ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಭಾರತದ ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯನ್ನು ಮೊದಲು ಭಾರತದಾದ್ಯoತ ವಿಸ್ತರಿಸಲು ಮಾರ್ಗದರ್ಶಿಯಾಗಿ, ನಂತರ ವಿಶ್ವದ ಇತರ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.ಮದರ್ ತೆರೇಸಾ ಅವರ ಬಗ್ಗೆ ಮ್ಯಾಲ್ಕಮ್ ಮುಗ್ಗರಿಜ್ ಸಮ್ ಥಿಂಗ್ ಬ್ಯೂಟಿಫುಲ್ ಫಾರ್ ಗಾಡ್…
ಚಡಚಣ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಣ್ಣುಗಳು ಮನುಷ್ಯನ ಪ್ರಮುಖ ಅಂಗ. ಅವು ಮನುಷ್ಯನ ಮುಖಕ್ಕೆ ಸೌಂದರ್ಯವನ್ನು ನೀಡುತ್ತವೆ. ಕಣ್ಣುಗಳು ಬಹಳಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ವೈದ್ಯರಿಂದ ಪರೀಕ್ಷಿಸಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಅವರು ಉಚಿತ ಶಸ್ತ್ರಚಿಕಿತ್ಸೆ ಕೂಡ ನೀಡುತ್ತಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಶಂಕರ ನೇತ್ರ ತಜ್ಞರ ತಂಡ,ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಸೋಮನಿಂಗ ಬೋರಗಿ, ಅಮೋಘಸಿದ್ದ ಮೆಟಗಾರ, ಎಸ್…
ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಣ್ಣುಗಳು ಮನುಷ್ಯನ ಪ್ರಮುಖ ಅಂಗ. ಅವು ಮನುಷ್ಯನ ಮುಖಕ್ಕೆ ಸೌಂದರ್ಯವನ್ನು ನೀಡುತ್ತವೆ. ಕಣ್ಣುಗಳು ಬಹಳಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ವೈದ್ಯರಿಂದ ಪರೀಕ್ಷಿಸಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಅವರು ಉಚಿತ ಶಸ್ತ್ರಚಿಕಿತ್ಸೆ ಕೂಡ ನೀಡುತ್ತಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಶಂಕರ ನೇತ್ರ ತಜ್ಞರ ತಂಡ,ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಸೋಮನಿಂಗ ಬೋರಗಿ, ಅಮೋಘಸಿದ್ದ ಮೆಟಗಾರ, ಎಸ್ ಎಸ್…
