ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳಲ್ಲಿ ಹುಮ್ಮಸ್ಸು, ವಿಜ್ಞಾನ ಶಿಕ್ಷಕರಲ್ಲಿನ ಕುತೂಹಲ ಹಾಗೂ ಇತರೆ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹಿರಿಯ ನ್ಯಾಯವಾದಿ ರಾಜಶೇಖರ ಚೌರ ಮಾತನಾಡಿದರು.
ಸಿಂದಗಿ ಪಟ್ಟಣದ ಗ್ಲೋಬಲ್ ಸ್ಮಾರ್ಟ್ಕಿಡ್ಸ್ ಪೂರ್ವ ಪ್ರಾಥಮಿಕ ಹಾಗೂ ಇಂದಿರಾ ಗಾಂಧಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ರಬ್ಬಿನ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳನ್ನು ಓದು ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಮಾತೆ ರೇಖಾ ಕಟಕೆ ಮಾತನಾಡಿದರು. ಈ ವೇಳೆ ಶಾಲಾ ವ್ಯವಸ್ಥಾಪಕ ರವಿಕಿರಣ ಕಟಕೆ, ಪತ್ರಕರ್ತ ಶಿವಾನಂದ ಆಲಮೇಲ, ಖಾಧರಬಾಷಾ ಸೌದಾಗರ, ವಿಜಯಲಕ್ಷಿö್ಮÃ ತಳವಾರ, ಗೀತಾಚೆನ್ನಾ ವಂದನಾ ಕಟಕೆ, ಕವಿತಾ ಚೌಗಲೆ, ಸುಮಯಾ ಮಸಳಿ, ಮಿಷ್ಬಾ ಮನಗೂಳಿ, ಭವಾನಿ ಸೇರಿದಂತೆ ಪಾಲಕರು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

