Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಣವೇ ಪ್ರಬಲ ಅಸ್ತ್ರ, ಇದರ ಮುಂದೆ ಜಗತ್ತಿನ ಯಾವುದೇ ಅಸ್ತ್ರಗಳು ಶೂನ್ಯ, ಶಿಕ್ಷಣ ಜಗತ್ತನ್ನು ಬದಲಾಯಿಸುವದು, ಆದ್ದರಿಂದ ಮನಸ್ಸು ಕೊಟ್ಟು ಓದಿ ಸಾಧನೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಹೇಳಿದರು.ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗ್ರಾಮೀಣ ವಲಯ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಸರಕಾರದಿಂದ ₹ 2 ಲಕ್ಷ ಅನುದಾನದಲ್ಲಿ ನೂತನ ವಿಜ್ಞಾನ ಪ್ರಯೋಗಲಯ ಮತ್ತು ಸಂದ್ಯಾ ಸಂಕಲ್ಪ ( ನಾನು ಪಾಸಾಗುವೆ ) 2025 ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗಾಗಿ ಅಸ್ತಿಯನ್ನು ಮಾಡುವದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಪ್ರಯತ್ನ ಗುಟ್ಟಾಗಿರಲಿ ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ ಮುಟ್ಟುವಂತೆ ನೀವೆಲ್ಲ ಆಸಕ್ತಿಯಿಂದ ಓದಿ ಜಗತ್ತಿಗೆ ಬೆಳಕಾಗಿ ಎಂದು ಶುಭ ಹಾರೈಸಿದರು. ನಿಮ್ಮ ಸಾಧನೆಗೆ ನೀವೇ ದಾರಿದೀಪ ಎನ್ನುವ ಹಾಗೆ ಮಾನ್ಯ ಬಿಇಓ ರವರ ವಿಶೇಷ ಕಾಳಜಿಯಿಂದ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂಘಟನೆ ನಿರಂತರ ಕ್ರಿಯಾಶೀಲವಾಗಿರಬೇಕು ಹಾಗೂ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸಕಾಲಕ್ಕೆ ನಿರ್ವಹಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳ ಕ್ರಮಬದ್ಧ ಅನುಷ್ಠಾನಕ್ಕೆ ಶಿಕ್ಷಕರು ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಹೇಳಿದರು.ಪಟ್ಟಣದ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜರುಗಿದ ಉಚಿತ ತೆರಿಗೆ (ಟ್ಯಾಕ್ಸ್) ಫಾರ್ಮ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಕಾಲಕ್ಕೆ ಶಿಕ್ಷಕರು ತಮ್ಮ ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡಿ ಕೊಡಬೇಕು ಎಂದು ಹೇಳಿದರು.ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ಸಂಘವು ಶಿಕ್ಷಕರ ಏಳಿಗೆಗಾಗಿ ಶ್ರಮಿಸುತ್ತಿದೆ. ನಾವೆಲ್ಲರೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಪ್ರಗತಿ ಪಥದತ್ತ ಕೊಂಡೊಯ್ಯೋಣ ಎಂದರು.ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸಾಧನೆ ಹಾಗೂ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಶಿಕ್ಷಕರಿಗೆ ಆದಾಯ ತೆರಿಗೆ ನಮೂನೆಗಳನ್ನು ನೀಡಲಾಯಿತು. ಜೊತೆಗೆ ಸಂಘಕ್ಕೆ ವಿವಿಧ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ವಿಶೇಷ ತರಬೇತಿ ನೀಡಿ ಎಸ್ಎಸ್ಎಲ್ಸಿ ಮಕ್ಕಳ ಪರೀಕ್ಷಾ ಫಲಿತಾಂಶದ ಪ್ರಗತಿ ಸಾಧಿಸಿ, ನಕಲು ಮುಕ್ತ ಪರೀಕ್ಷಾ ವಾತಾವರಣ ನಿರ್ಮಿಸಬೇಕು ಎಂದು ಜಮಖಂಡಿಯ ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.ಪಟ್ಟಣದ ಶ್ರೀ ಶಾಂತವೀರ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಗ್ರಾಮೀಣ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ಮಾಡಲು ಕೈಗೊಳ್ಳಬೇಕಾದ ಹಲವಾರು ಚಟುವಟಿಕೆಗಳಾದ ನಾವಿನ್ಯಯುತ ಬೋಧನೆ, ರಸಪ್ರಶ್ನೆ, ದಿನಕ್ಕೊಂದು ಪರೀಕ್ಷೆ, ಘಟಕ ಪರೀಕ್ಷೆ, ಟಿ.ಎಲ್.ಎಂ ಬಳಕೆ ಮಾಡಿ ಬೋಧನೆ, ಸರಣಿ ಪರೀಕ್ಷೆ, ಪಾಲಕರ ಸಭೆ ಮುಂತಾದ ಚಟುವಟಿಕೆಗಳನ್ನು ಮಾಡಿ ಪ್ರಗತಿ ಹೊಂದಲು ಕಿವಿ ಮಾತು ಹೇಳಿ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಅವರ ಕನಸಿನ ಕೂಸಾದ ಟಾರ್ಗೆಟ್ -625 ಕಾರ್ಯಕ್ರಮದ ಪ್ರಗತಿ ಕಂಡು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ನಕಲು ಮುಕ್ತ ಪರೀಕ್ಷೆ…

Read More

ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆ ಪತ್ತೆ ಸುಲಭ | ನಗರದಲ್ಲಿ ಎಮ್‌ಸಿಸಿಟಿಎನ್‌ಎಸ್ ಜಾರಿ ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರ ಪೋಲಿಸ್ ಇಲಾಖೆ ನಗರದಲ್ಲಿ ಅಪರಾಧ ನಿಯಂತ್ರಿಸಲು ಹೊಸದಾರಿ ಕಂಡು ಕೊಂಡಿದೆ. ಎಮ್‌ಸಿಸಿಟಿಎನ್‌ಎಸ್ ಮೊಬೈಲ ಕ್ರೈಂ ಆಂಡ್ ಕ್ರಿಮಿನಲ್ ಆಂಡ್ ಟ್ರ್ಯಾಕಿಂಗ್ ಸಿಸ್ಟಮ್ ಆಪ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆ ಶುರು ಮಾಡುವ ಕೆಲಸ ಆರಂಭಿಸಿದ್ದಾರೆ.ಪಟ್ಟಣದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ೧೧ ರ ನಂತರ ಕಳ್ಳತನ ಮತ್ತು ಅಪರಾಧ ಪ್ರಕರಣ ಸಂಖ್ಯೆ ತಡೆಯುವ ಸಲುವಾಗಿ ನಗರ ಪೋಲಿಸ ಇಲಾಖೆ ಬೀಟ್ ಪೋಲಿಸರಿಗೆ ಮೊಬೈಲ ಕ್ರೈಂ ಆಂಡ್ ಕ್ರಿಮಿನಲ್ ಆಂಡ್ ಟ್ರ್ಯಾಕಿಂಗ್ ಸಿಸ್ಟಮ್ ಆಪ್ ಮೂಲಕ ಅನುಮಾನಾಸ್ಪದ ಆರೋಪಿಗಳ ಪತ್ಯೆಗೆ ಮುಂದಾಗಿದೆ.ಈ ಆಪ್ ನಲ್ಲಿ ಕೇವಲ ಫಿಂಗರ್ ಪ್ರಿಂಟನಿಂದ ವ್ಯಕ್ತಿಯ ಅಪರಾಧದ ಪೂರ್ವಾಪರ ತಿಳಿಯುತ್ತದೆ. ಇದರಿಂದ ಮುಂದಾಗುವ ಅಪರಾಧ ಗಳನ್ನು ಮೊದಲೇ ಮುಟ್ಟಿ ಹಾಕಬಹುದು.ನಗರದ ಹಲವು ಕಡೆ ತಡ ರಾತ್ರಿಯ ವರೆಗೆ ಹಲವು ಜನರು ಓಡಾಟ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ರಾತ್ರಿ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪದವಿ ಪರೀಕ್ಷೆ ಕೇಂದ್ರಗಳ ಸುತ್ತಮುತ್ತ (ಸೆಕ್ಷನ್ 144) ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವ ಮೂಲಕ ಅಕ್ರಮಗಳನ್ನು ತಡೆಯಲು, ಕ್ರಮವಹಿಸಲಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಕುಲಸಚಿವರು (ಆಡಳಿತಾತ್ಮಕ) ಡಾ. ಶಂಕರ ವಿ, ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಬಿಎ ಬಿಕಾಂ ಮತ್ತು ಬಿಎಸ್ಸಿ 3 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಖುದ್ದಾಗಿ ವೀಕ್ಷಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಯಮಗಳನ್ನು ತಿಳಿಸಿದವರು, ಮುಂಬರುವ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ವೆಬ್ ಕಾಸ್ಟಿಂಗ್, ಅಳವಡಿಸಲು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗುವುದು, ಯಾವುದೇ ಕಾರಣಕ್ಕೂ ಪ್ರಾಂಶುಪಾಲರನ್ನು ಜಾಗೃತ ದಳದ ವೀಕ್ಷಕರಾಗಿ ನಿಯೊಜಿಸಬಾರದು ಕಾಲೇಜಿನ ಪ್ರಾಂಶುಪಾಲರು ಕೇಂದ್ರ ಸ್ಥಾನ ಬಿಡದಂತೆ ಕ್ರಮ ಕೈಗೊಳ್ಳುವಂತೆ ಕುಲಸಚಿವರು (ಮೌಲ್ಯಮಾಪನ) ಇವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಆಯಾ ಕಾಲೇಜುಗಳ ಪ್ರಾಂಶುಪಾಲರು ಕೇಂದ್ರ ಸ್ಥಳದಲ್ಲಿದ್ದು ಪರೀಕ್ಷೆಗಳನ್ನು ನಡೆಸಿ ಕೊಂಡು ಹೋಗಲು…

Read More

ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಬಸವಾದಿ ಶರಣರ ವಚನಗಳು ಮಾನವನ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ- ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೆ ರೋಚಕದ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ ವಚನಗಳ ಸಂರಕ್ಷಣೆಯ ಸ್ಮರಣೆಯಲ್ಲಿ ಬೀದರ್ ನಲ್ಲಿ 2002ರಲ್ಲಿ ಸಂಸ್ಥಾಪನೆಗೊಂಡ ಬಸವ ಸೇವಾ ಪ್ರತಿಷ್ಠಾನವು ಬಸವ ತತ್ವ ಪ್ರಸಾರ, ಪ್ರಚಾರ ಹಾಗೂ ವಚನಗಳ ಆಶಯಗಳನ್ನು ಬಸವಜ್ಯೋತಿ, ಶರಣ ಸಂಗಮ, ಮಹಾಮನೆ, ಸಾಹಿತ್ಯ ರಚನೆ ಹಾಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ವಚನ ವಿಜಯೋತ್ಸವ ಕಾರ್ಯಕ್ರಮಗಳ ಮೂಲಕ ತಮ್ಮ ಸಹಕಾರದಿಂದ ನಾಡಿನ ಜನಮನದಲ್ಲಿ ಬಿತ್ತುತ್ತಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗದ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದ ಡಾ. ಶಶಿಕಾಂತ್ ಪಟ್ಟಣ ಅವರು ರಾಮದುರ್ಗ, ಸೈನಿಕ ಶಾಲೆ ವಿಜಯಪುರ, ಧಾರವಾಡಗಳಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣ ಪಡೆದು ಮುಂದೆ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ದಿನಸಿ ಅಂಗಡಿಯಲ್ಲಿ ನಿಂತು ವಿವಿಧ ಪದಾರ್ಥಗಳನ್ನು ಆಸೆಯಿಂದ ನೋಡುತ್ತೇವೆ. ಅವುಗಳನ್ನು ಕೊಳ್ಳಲು ಮನಸ್ಸು ಹಾತೊರೆಯುತ್ತದೆ. ಆದರೆ ಅವುಗಳ ಬೆಲೆ ನಮ್ಮ ಜೇಬನ್ನು ನಡಗಿಸುವಂತಿರುತ್ತದೆ. ತುಟ್ಟಿಯಾಗಿರುವ ಕಾಫಿ ಪುಡಿಯನ್ನು ಖರೀದಿಸಲು ನಿರ್ಧರಿಸಿದರೆ, ಬೆಳಗಿನ ಕಪ್ ಕಾಫಿ ಆಡಂಬರದಂತೆ ತೋರುತ್ತದೆ. ಆದರೆ ನಂತರ ನೆಚ್ಚಿನ ಕೆಫೆಯಲ್ಲಿ ವಿಶೇಷ ಕಾಫಿ ಚೌಕಾಶಿಯಂತೆ ಕಾಣಲು ಪ್ರಾರಂಭಿಸುತ್ತದೆ. ಇದೆಲ್ಲ ದೃಷ್ಟಿಕೋನದ ಬಗ್ಗೆ, ಸರಿಯೇ? ಇದು ನಮ್ಮ ದಿನಸಿ ನಿರ್ಧಾರಗಳಲ್ಲಿ ಮಾತ್ರವಲ್ಲದೆ ನಮ್ಮ ಸಂಬಂಧಗಳು ಮತ್ತು ಜೀವನದಲ್ಲಿಯ ಬಯಕೆಗಳು ಅಗತ್ಯತೆಗಳ ನಡುವಿನ ಅಸ್ಪಷ್ಟ ರೇಖೆಯನ್ನು ಮಾಡುತ್ತದೆ. ದೇವರು ಮನುಷ್ಯನಿಗೆ ಅತ್ಯದ್ಭುತ ಕಲ್ಪನಾ ಶಕ್ತಿಯನ್ನು ಕೊಟ್ಟಿದ್ದಾನೆ. ನಮ್ಮ ಆಸೆ ಆಕಾಂಕ್ಷೆಗಳು ಅಂತರಂಗದಲ್ಲಿ ಹುದುಗಿದ್ದು. ಅವುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದನ್ನು ಕನಸು ಎಂದು ಕರೆಯಬಹುದು.ಬಯಕೆಗಳುಚಿಕ್ಕವರಿದ್ದಾಗ ಬೇಸಿಗೆಯಲ್ಲಿ ನಿತ್ಯ ಪೀಪೀ ಸದ್ದು ಮಾಡುತ್ತಿದ್ದ ಐಸ್ ಕ್ಯಾಂಡಿ ಮಾರಲು ಬರುತ್ತಿದ್ದವನಿಂದ ಐಸ್ಕ್ರಿಂ ಬೇಕೇಬೇಕೆಂದು ಅಳುವಾಗ, ಜಾತ್ರೆಯಲ್ಲಿ ಗೊಂಬೆ ಇಲ್ಲವೇ ಆಟಿಕೆ ಬೇಕೆಂದು ಹಟ ಹಿಡಿದಾಗ ಹಿರಿಯರು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಉತ್ತಮವಾದ ಕಾಂಕ್ರೇಟ್ ರಸ್ತೆಯನ್ನು ನಿರ್ಮಿಸಿದ್ದೇವೆ. ಸಧ್ಯ ಆ ರಸ್ತೆಯನ್ನು ಅಗೆದು ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿಗೆ ಪೈಪಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ರಸ್ತೆ ಹಾಳಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಕಾಮಗಾರಿ ಮಾಡಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆ ರಾಜ್ಯ ಸರ್ಕಾರದ ನೇರವಾದ ಯೋಜನೆ ಅಲ್ಲ. ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆ. ಶೇ೫೦ ರಷ್ಟು ಕೇಂದ್ರದಿಂದ ಶೇ೫೦ ರಷ್ಟು ರಾಜ್ಯದಿಂದ ಹಣ ಬಿಡುಗಡೆಯಾಗುತ್ತದೆ. ಈ ಬಗ್ಗೆ ಒಂದು ಮಾತು ಕೂಡ ಶಾಸಕರು ಹೇಳ್ತಿಲ್ಲ. ನಾನು ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡೋದಿಲ್ಲ. ಆದರೆ ಅಭಿವೃದ್ಧಿ ಕಳಪೆಯಾದರೆ ಸುಮ್ಮನಿರೋದಿಲ್ಲ ಎಂದರು.ಈ ಕಾಮಗಾರಿ ಮಾಡುತ್ತಿರುವವರು ಶಾಸಕರ ಅಳಿಯ ಸುರೇಶ ನಾಡಗೌಡರು. ಆವರು ತಾಲೂಕನ್ನು ಲೂಟಿ ಹೊಡೆಯಲು ಬಂದಿದ್ದಾರೆ. ಈ ಕಾಮಗಾರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೈಹಿಕ ಆರೋಗ್ಯಕ್ಕೆ ವೈದ್ಯರು, ಆಸ್ಪತ್ರೆಗಳು ಅಗತ್ಯವಾದಂತೆ, ಮಾನಸಿಕ ಆರೋಗ್ಯ, ಮೌಲ್ಯ, ಸಂಸ್ಕಾರಗಳಿಗೆ ಮಠ ಮಾನ್ಯಗಳು ಅತ್ಯಗತ್ಯವಾಗಿವೆ ಎಂದು ಸಂಗಮೇಶ ಆಸ್ಪತ್ರೆಯ ಡಾ.ಎಸ್.ಎಸ್.ಪಾಟೀಲ ಹೇಳಿದರು.ನಗರದ ಉಕ್ಕಲಿ ರಸ್ತೆಯ ಜಯಶಾಂತಲಿಂಗೇಶ್ವರ ಬೃಹನ್ಮಠದಲ್ಲಿ ಸೋಮವಾರ ಜರುಗಿದ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇಂದು ದೈಹಿಕ ಆರೋಗ್ಯದ ಜೊತೆಜೊತೆಗೆ ಮಾನಸಿಕ ಕ್ಷಮತೆ ಅತೀ ಮುಖ್ಯವಾಗಿವೆ. ಮಾನಸಿಕ ಆರೋಗ್ಯಕ್ಕೆ ಮಾನವೀಯ ಮೌಲ್ಯಗಳು, ಶಿಕ್ಷಣ, ಸಂಸ್ಕಾರಗಳು ಬೇಕು. ಇವುಗಳನ್ನು ಮಠ, ಮಂದಿರ, ಪುರಾಣ, ಪ್ರವಚನಗಳ ಮೂಲಕ ಪಡೆಯಬಹುದಾಗಿದೆ ಎಂದರು.ಸ್ಥಳೀಯ ಚಿನ್ಮಯ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಇಜೇರಿ ಮಾತನಾಡಿ, ಉತ್ತಮ ಆರೋಗ್ಯ ಹಾಗೂ ಪರಿಸರಕ್ಕೆ ತಾಯಿ ಮಾತ್ರ ಸಂಸ್ಕಾರ ನೀಡಬಲ್ಲಳು ಎಂದರು.ಶಿಬಿರದಲ್ಲಿ ಆರೋಗ್ಯಧಾಮದ ಹೃದಯರೋಗ ತಜ್ಞ ಶಂಕರಗೌಡ ಪಾಟೀಲ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂತೋಷಗೌಡ ಪಾಟೀಲ, ಸಂಗಮೇಶ ಪಾಟೀಲ ಹಾಗೂ ಸಂಗಮೇಶ್ವರ ಆಸ್ಪತ್ರೆಯ ಶಾಂತೇಶ ಗಂವಾರಮಠ, ಹಣಮಂತ ರತ್ನಾಕರ, ಮಲ್ಲಿಕಾರ್ಜುನ ಪಾಟೀಲ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.ಶ್ರೀಮಠ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಂಚಕರ್ಮರು ಎಂದು ಹೆಸರಾದ ಐವರು ಕಾಯಕ ಶರಣರ ಚಿಂತನೆಗಳು, ಜೀವನಶೈಲಿ ಹಾಗೂ ಅವರು ಸಾಗಿಬಂದ ದಾರಿ ಇಂದಿನ ಸರ್ವ ಜನಾಂಗಕ್ಕೆ ಮಾದರಿಯಾಗಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಅವರು ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಕಾಯಕ ಶರಣರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಹನ್ನೆರಡನೆಯ ಶತಮಾನದಲ್ಲಿ ತನ್ನ ನಿಷ್ಕಲ್ಮಶ ಭಕ್ತಿಯಿಂದ ಶಿವನಿಗೆ ಅಂಬಲಿ ಕುಡಿಸುತ್ತಿದ್ದ ಮಾದಾರ ಚನ್ನಯ್ಯ, ಚರ್ಮದ ಕಾಯಕ ಮಾಡುತ್ತಲೇ ಸಂಸ್ಕೃತದಲ್ಲಿ ವಚನಗಳನ್ನು ರಚಿಸಿದ ಮಾದಾರ ಧೂಳಯ್ಯ, ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು, ಲಿಂಗದೀಕ್ಷೆ ಪಡೆದು ಕಲ್ಯಾಣ ಕ್ರಾಂತಿಯಲ್ಲಿ ಶರಣರನ್ನು ರಕ್ಷಿಸಿದ ಡೋಹರ ಕಕ್ಕಯ್ಯ, ತಮ್ಮ ತೊಡೆಗಳಿಂದ ಚಮ್ಮಾವುಗೆಗಳನ್ನು(ಪಾದರಕ್ಷೆ) ಮಾಡಿದ ಸಮಗಾರ ಹರಳಯ್ಯ, ನಿರಂತರ ಪ್ರಯತ್ನದಿಂದ ಲಿಂಗದೀಕ್ಷೆ ಪಡೆದು ಜನರ ನೀರಿನ ದಾಹವನ್ನು ನೀಗಿಸಿದ ಉರಿಲಿಂಗಪೆದ್ದಿ ಅವರ ಆದರ್ಶಗಳು ನಿಜಕ್ಕೂ ಪ್ರೇರಣಾದಾಯಕ ಹಾಗೂ ಮಾದರಿಯಾಗಿವೆ ಎಂದು ಐವರು ಶಿವಶರಣರ ಕುರಿತು ಹೇಳಿದರು.ತಹಶೀಲ್ದಾರ ಪ್ರಕಾಶ ಸಿಂದಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿರಸ್ತೇದಾರರಾದ ಸುರೇಶ ಮ್ಯಾಗೇರಿ,…

Read More