ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘಟನೆ ನಿರಂತರ ಕ್ರಿಯಾಶೀಲವಾಗಿರಬೇಕು ಹಾಗೂ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸಕಾಲಕ್ಕೆ ನಿರ್ವಹಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳ ಕ್ರಮಬದ್ಧ ಅನುಷ್ಠಾನಕ್ಕೆ ಶಿಕ್ಷಕರು ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಹೇಳಿದರು.
ಪಟ್ಟಣದ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜರುಗಿದ ಉಚಿತ ತೆರಿಗೆ (ಟ್ಯಾಕ್ಸ್) ಫಾರ್ಮ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಕಾಲಕ್ಕೆ ಶಿಕ್ಷಕರು ತಮ್ಮ ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡಿ ಕೊಡಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ಸಂಘವು ಶಿಕ್ಷಕರ ಏಳಿಗೆಗಾಗಿ ಶ್ರಮಿಸುತ್ತಿದೆ. ನಾವೆಲ್ಲರೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಪ್ರಗತಿ ಪಥದತ್ತ ಕೊಂಡೊಯ್ಯೋಣ ಎಂದರು.
ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸಾಧನೆ ಹಾಗೂ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಶಿಕ್ಷಕರಿಗೆ ಆದಾಯ ತೆರಿಗೆ ನಮೂನೆಗಳನ್ನು ನೀಡಲಾಯಿತು. ಜೊತೆಗೆ ಸಂಘಕ್ಕೆ ವಿವಿಧ ಶಾಲೆಗಳ ಶಿಕ್ಷಕರನ್ನು ನಾಮನಿರ್ದೇಶನ ಮಾಡಿ ಪ್ರಮಾಣಪತ್ರಗಳನ್ನು ನೀಡಲಾಯಿತು.
ಶಿಕ್ಷಣ ಸಂಯೋಜಕ ಎಸ್.ಎಮ್.ಕಪನಿಂಬರಗಿ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸಿ. ತಳಕೇರಿ, ಉಪಾಧ್ಯಕ್ಷ ಕಾವೇರಮ್ಮ ಚವ್ಹಾಣ, ಖಜಾಂಚಿ ಶಿವಾನಂದ ಕೋಟಿನ, ಸಹಕಾರ್ಯದರ್ಶಿಗಳಾದ ರೇಣುಕಾ ಇಂಡಿ, ಜಯಶ್ರೀ ನಾಯಕ, ಸಂಘಟನಾ ಕಾರ್ಯದರ್ಶಿಗಳಾದ ಪಾರ್ವತಿ ಪೂಜಾರಿ, ದಾನು ರಾಠೋಡ, ನಿರ್ದೇಶಕರಾದ ಎಮ್.ಜಿ.ಯಂಕಂಚಿ, ಎಸ್.ಎಮ್.ರಾಠೋಡ ಸೇರಿದಂತೆ ತಾಲ್ಲೂಕಿನ ಸಿಆರ್‌ಪಿಗಳು, ಮುಖ್ಯಶಿಕ್ಷಕರು, ಶಿಕ್ಷಕರು ಇದ್ದರು.

