Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜನಗಣತಿ ಸಿಬ್ಬಂದಿ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು

ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚಂದನ್ ಗೌಡ ಒತ್ತಾಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಮನೆ ಹಸ್ತಾಂತರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಪರಾಧಗಳ ಹಿನ್ನೆಲೆ ಪತ್ತೆಗೆ ಆಪ್ ಬಳಕೆ :ಸಿಪಿಐ ಜಿರಗಿಹಾಳ
(ರಾಜ್ಯ ) ಜಿಲ್ಲೆ

ಅಪರಾಧಗಳ ಹಿನ್ನೆಲೆ ಪತ್ತೆಗೆ ಆಪ್ ಬಳಕೆ :ಸಿಪಿಐ ಜಿರಗಿಹಾಳ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆ ಪತ್ತೆ ಸುಲಭ | ನಗರದಲ್ಲಿ ಎಮ್‌ಸಿಸಿಟಿಎನ್‌ಎಸ್ ಜಾರಿ

ಉದಯರಶ್ಮಿ ದಿನಪತ್ರಿಕೆ

ಇಂಡಿ: ನಗರ ಪೋಲಿಸ್ ಇಲಾಖೆ ನಗರದಲ್ಲಿ ಅಪರಾಧ ನಿಯಂತ್ರಿಸಲು ಹೊಸದಾರಿ ಕಂಡು ಕೊಂಡಿದೆ. ಎಮ್‌ಸಿಸಿಟಿಎನ್‌ಎಸ್ ಮೊಬೈಲ ಕ್ರೈಂ ಆಂಡ್ ಕ್ರಿಮಿನಲ್ ಆಂಡ್ ಟ್ರ್ಯಾಕಿಂಗ್ ಸಿಸ್ಟಮ್ ಆಪ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆ ಶುರು ಮಾಡುವ ಕೆಲಸ ಆರಂಭಿಸಿದ್ದಾರೆ.
ಪಟ್ಟಣದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ೧೧ ರ ನಂತರ ಕಳ್ಳತನ ಮತ್ತು ಅಪರಾಧ ಪ್ರಕರಣ ಸಂಖ್ಯೆ ತಡೆಯುವ ಸಲುವಾಗಿ ನಗರ ಪೋಲಿಸ ಇಲಾಖೆ ಬೀಟ್ ಪೋಲಿಸರಿಗೆ ಮೊಬೈಲ ಕ್ರೈಂ ಆಂಡ್ ಕ್ರಿಮಿನಲ್ ಆಂಡ್ ಟ್ರ್ಯಾಕಿಂಗ್ ಸಿಸ್ಟಮ್ ಆಪ್ ಮೂಲಕ ಅನುಮಾನಾಸ್ಪದ ಆರೋಪಿಗಳ ಪತ್ಯೆಗೆ ಮುಂದಾಗಿದೆ.
ಈ ಆಪ್ ನಲ್ಲಿ ಕೇವಲ ಫಿಂಗರ್ ಪ್ರಿಂಟನಿಂದ ವ್ಯಕ್ತಿಯ ಅಪರಾಧದ ಪೂರ್ವಾಪರ ತಿಳಿಯುತ್ತದೆ. ಇದರಿಂದ ಮುಂದಾಗುವ ಅಪರಾಧ ಗಳನ್ನು ಮೊದಲೇ ಮುಟ್ಟಿ ಹಾಕಬಹುದು.
ನಗರದ ಹಲವು ಕಡೆ ತಡ ರಾತ್ರಿಯ ವರೆಗೆ ಹಲವು ಜನರು ಓಡಾಟ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ರಾತ್ರಿ ೧೧ ರ ನಂತರ ಮಾರುಕಟ್ಟೆ ಸೇರಿ ಎಲ್ಲೆಡೆ ಅಂಗಡಿ ಮುಗ್ಗಟ್ಟು ಮುಚ್ಚಲಾಗುತಿದೆ. ಇದಾದ ನಂತರ ಅಲ್ಲಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಕೆಲವು ಬಾರಿ ಸಾಮಾನ್ಯ ಜನರಂತೆ ಅಪರಾಧಿಗಳು ರಾತ್ರಿ ಓಡಾಡುವ ಮೂಲಕ ಮುಂದಿನ ಅಪರಾಧ ಕೃತ್ಯಗಳ ಕುರಿತು ಉಪಾಯ ಹಾಕುತ್ತಾರೆ. ಈ ವೇಳೆ ಯಾರು ಜನಸಾಮಾನ್ಯರು ಅಥವಾ ಯಾರು ಅಪರಾಧ ಹಿನ್ನೆಲೆ ಇರುವವರು ಎಂಬುದು ತಿಳಿಯುವದಿಲ್ಲ. ಇಂತಹ ವೇಳೆ ಈ ಆಪ್ ಪೂರ್ಣ ರೂಪದಲ್ಲಿ ಸಹಕಾರಕ್ಕೆ ಬರುತ್ತದೆ. ಇದರಿಂದ ಆರೋಪಿಗಳ ಪೂರ್ವಪರ ತಿಳಿದುಕೊಂಡು ಅವರಿಂದ ಆಗುವ ಅಪರಾಧಗಳನ್ನು ತಪ್ಪಿಸಲು ಅನುಕೂಲವಾಗಲಿದೆ.
ರಾತ್ರಿ ಬೀಟ್ ಸೇರಿ ಸುರಕ್ಷತೆ ಕೆಲಸ ಮಾಡುವ ಪೋಲಿಸ ಸಿಬ್ಬಂದಿ ಬಳಿ ಫಿಂಗರ ಪ್ರಿಂಟ್ ಸ್ಕ್ಯಾನ್ ಇರುವ ಡಿವೈಸ ಇರುತ್ತದೆ. ಇದನ್ನು ಇಂಟರ್ ನೆಟ ಮೂಲಕ ಜೋಡಿಸಿ ಕೇಂದ್ರ ಸರಕಾರ ಅಪರಾಧಿ ಡಿಜಿಟಲ್ ದಾಖಲೆಗಳ ಜೊತೆ ಜೋಡಣೆ ಮಾಡಲಾಗುತ್ತಿದೆ..
ಯಾವದೇ ವ್ಯಕ್ತಿಯ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡುತ್ತಲೇ ತಮ್ಮಲ್ಲಿನ ಡಿಜಿಟಲ್ ದಾಖಲೆಗಳಲ್ಲಿನ ಫಿಂಗರ ಪ್ರಿಂಟ ಜೊತೆ ಮ್ಯಾಚ ಮಾಡುತ್ತ ಹೋಗುತ್ತದೆ. ಇಲ್ಲಿ ಸಾಮಾನ್ಯ ವ್ಯಕ್ತಿಯೊ ಅಥವಾ ಈತನ ವಿರುದ್ಧ ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಕುರಿತು ಮಾಹಿತಿ ದೊರೆಯುತ್ತದೆ.

“ರಾತ್ರಿ ನಗರದಲ್ಲಿ ಅಪರಾಧಗಳ ಸಂಖ್ಯೆ ಇಳಿಕೆ ಮಾಡಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಎಮ್‌ಸಿಸಿಟಿಎನ್‌ಎಸ್ ಆಪ್ ಬಳಕೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಅನಾವಶ್ಯಕವಾಗಿ ಅಪರಾಧ ಹಿನ್ನೆಲೆ ಹೊಂದಿರುವವರು ಓಡಾಡುವುದನ್ನು ಇದರಿಂದ ತಡೆಯಬಹುದು. ಅಲ್ಲದೆ ಅಪರಾಧಗಳ ಸಂಖ್ಯೆ ಇಳಿಕೆ ಮಾಡಲು ಸಹಕಾರಿಯಾಗುತ್ತದೆ.”

– ರತನಕುಮಾರ ಜಿರಗಿಹಾಳ
ಸಿ.ಪಿ.ಐ ಇಂಡಿ ಪಟ್ಟಣ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜನಗಣತಿ ಸಿಬ್ಬಂದಿ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು

ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚಂದನ್ ಗೌಡ ಒತ್ತಾಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಮನೆ ಹಸ್ತಾಂತರ

ದೇವಗಿರಿ ಯಾದವ ರಾಜರ ಗಜಪಡೆಯ ಉಬ್ಬು ಶಿಲ್ಪ ಪತ್ತೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜನಗಣತಿ ಸಿಬ್ಬಂದಿ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚಂದನ್ ಗೌಡ ಒತ್ತಾಯ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಮನೆ ಹಸ್ತಾಂತರ
    In (ರಾಜ್ಯ ) ಜಿಲ್ಲೆ
  • ದೇವಗಿರಿ ಯಾದವ ರಾಜರ ಗಜಪಡೆಯ ಉಬ್ಬು ಶಿಲ್ಪ ಪತ್ತೆ
    In (ರಾಜ್ಯ ) ಜಿಲ್ಲೆ
  • ಶಾಸಕಾಂಗ ಸಭೆಯಲ್ಲಿ ‘ಕೈ’ ಮುಖಂಡರ ರಣತಂತ್ರ:
    In (ರಾಜ್ಯ ) ಜಿಲ್ಲೆ
  • ಹತ್ತಳ್ಳಿ ಬೋರಿ ಹಳ್ಳದಲ್ಲಿ ಪಕ್ಷಿಗಳ ಮಾರಣಹೋಮ :ಜನರಲ್ಲಿ ಆತಂಕ
    In (ರಾಜ್ಯ ) ಜಿಲ್ಲೆ
  • ಪಿಂಚಣಿ ಮಸೂದೆ ಜಾರಿಗೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಂಗಭೂಮಿಯು ಜೀವಂತ ಕಲೆಯ ತಾಣ
    In (ರಾಜ್ಯ ) ಜಿಲ್ಲೆ
  • ಶಿವಭಕ್ತಿಗೆ ಸಾಕ್ಷಿ ಗೋಲಗೇರಿ ಗೋಲ್ಲಾಳೇಶ್ವರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.