Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ೧೩ ಮತ್ತು ೧೪ನೆಯ ವಾರ್ಡಿನಲ್ಲಿರುವ ಅನಧಿಕೃತವಾಗಿ ನಿರ್ಮಿಸಿದ್ಧ ಶೆಡ್‌ಗಳನ್ನು ಪುರಸಭೆಯವರು ಗುರುವಾರ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.ಸಿಂದಗಿ ಪಟ್ಟಣದ ೧೩ ಮತ್ತು ೧೪ನೆಯ ವಾರ್ಡಿನ ಅನಧಿಕೃತ ಶೆಡ್‌ಗಳು ಉದ್ಯಾನವನದ ಜಾಗೆಯಲ್ಲಿ ತಲೆ ಎತ್ತಿದ್ದರಿಂದ ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ತೆರವಿಗಾಗಿ ಡಿಸಿ ಆದೇಶ ಹೊರಡಿಸಿದ್ದರ ಕಾರಣ ಸಂಬಂಧಿತರಿಗೆ ಶೆಡ್ ತೆರವುಗೊಳಿಸುವಂತೆ ಕಳೆದ ೪-೫ವರ್ಷಗಳಿಂದ ಹೇಳುತ್ತಲೇ ಬರಲಾಗಿದೆ. ಹಲವು ಬಾರಿ ಸೂಚನೆ ನೀಡಿದರೂ ಅವುಗಳನ್ನು ತೆರವುಗೊಳಿಸಿಕೊಂಡಿರಲಿಲ್ಲ. ಇದರಿಂದ ಅನಿವಾರ್ಯವಾಗಿ ಪುರಸಭೆ ವತಿಯಿಂದ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.ನಾವು ಸಮೀಕ್ಷೆ ಮಾಡಿದ ಪ್ರಕಾರ ಅಲ್ಲಿ ೧೮೦ಕ್ಕೂ ಅಧಿಕ ಶೆಡ್‌ಗಳು ಇದ್ದವು. ಅದರಲ್ಲಿ ೬೦-೭೦ ಶೆಡ್‌ಗಳು ಅನಧಿಕೃತವಾಗಿದ್ದವು. ಅವುಗಳನ್ನು ಸ್ವ-ಯಿಚ್ಚೆಯಿಂದ ತೆರವುಗೊಳಿಸಿಕೊಳ್ಳುವೆವು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ ಹೇಳಿದರು.ತೆರವು ಕಾರ್ಯಾಚರಣೆಯಲ್ಲಿ ನಬಿರಸೂಲ್ ಉಸ್ತಾದ, ಅಬ್ಬಾಸಲಿ ಕಾಖಂಡಕಿ, ಅನಿಲ ಚೌರ, ದಯಾನಂದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಪ್ರದೇಶದ ಜನರಿಗೆ, ಹಿಂದುಳಿದ ಸಮುದಾಯಕ್ಕೆ ವರ್ಷದಲ್ಲಿ ೧೦೦ ದಿನಗಳ ಕಾಲ ಕೆಲಸ ಒದಗಿಸಿಕೊಡುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸಲಾಗುತ್ತಿದೆ ಮತ್ತು ಸಂಗಮ ಸಂಸ್ಥೆಯು ಎಲ್ಲಾ ಜನರಿಗೆ ಸರಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಸಬಲರನ್ನಾಗಿ ಮಾಡುತ್ತಿದೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ಸಿಂದಗಿ ಪಟ್ಟಣದ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡ ನರೇಗಾ ದಿವಸ ಹಾಗೂ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ವೇಳೆ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾಡಿಮೆಲ್ಲೊ ಮಾತನಾಡಿ, ಜನರು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ ಮಾಡಲಾಯಿತು. ಆದರೆ ಇದು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿದೆ ಎಂದು ಕಂಡು ಬರುತ್ತದೆ. ಯಾಕಂದರೆ ಗ್ರಾಮೀಣ ಜನರಿಗೆ ೧೦೦ದಿನ ಉದ್ಯೋಗ ಖಾತ್ರಿಯ ಅಡಿಯಲ್ಲಿ ಮಾನವ ಕೂಲಿ ಕೆಲಸ ಸಿಗುತ್ತಲ್ಲ. ಆದ್ದರಿಂದ ಜನವೇದಿಕೆಯ ಮನವಿಗೆ ಸ್ಪಂದಿಸಬೇಕು. ಜನರಿಗೆ ಕೆಲಸ ಸಿಗುವ ಹಾಗೆ ಮಾಡಿಕೂಡಬೇಕು ಮತ್ತು ಅಂಗನವಾಡಿ ಮ್ತು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಲ್ಯಾಣ ಕ್ರಾಂತಿಯ ಪ್ರಮುಖರಲ್ಲಿ ವೀರಗಂಟಿ ಮಡಿವಾಳ ಮಾಚಯ್ಯನವರು ಒಬ್ಬರು. ಭಕ್ತಿಗೆ ಬಸವಣ್ಣ ಅಗ್ರಗಣ್ಯನಾದರೆ ಮಹೇಶ ಸ್ಥಲಕ್ಕೆ ಮಡಿವಾಳ ಮಾಚಯ್ಯ, ಪ್ರಸಾದಿ ಸ್ಥಲಕ್ಕೆ ಚನ್ನಬಸವಣ್ಣ, ಪ್ರಾಣ ಲಿಂಗ ಸ್ಥಲಕ್ಕೆ ಸಿದ್ದರಾಮೇಶ್ವರ, ಶರಣ ಸ್ಥಲಕ್ಕೆ ಅಕ್ಕಮಹಾದೇವಿ ಐಕ್ಯಸ್ಥಲಕ್ಕೆ ಅಲ್ಲಮಪ್ರಭು ಅಗ್ರಗಣ್ಯರಾಗಿದ್ದಾರೆ ಎಂದು ಎಚ್.ಜಿ.ಪಪೂ ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.ಪಟ್ಟಣದ ಸಾರಂಗಮಠದ ಆವರಣದಲ್ಲಿ ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ಭಾರತ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ ೩೩೯ನೆಯ ಸದ್ವಿಚಾರ ಗೋಷ್ಠಿಯಲ್ಲಿ ದೇವರ ಹಿಪ್ಪರಗಿಯ ಶರಣ ಮಡಿವಾಳ ಮಾಚಿದೇವರ ವಿಷಯ ಕುರಿತು ಉಪನ್ಯಾಸ ನೀಡಿ, ಮಹಾತ್ಮ ಮಾಚಿದೇವರ ವಿಚಾರವನ್ನು ಬರೆಯದ ವೀರಶೈವ ಗ್ರಂಥಗಳಿಲ್ಲ. ಶರಣರಲ್ಲಿ ಯಾವ ವಚನಕಾರರು ಮಾಚಿದೇವರ ಹೆಸರನ್ನು ಬಿಟ್ಟಂತೆ ಇಲ್ಲ ಎಂದರು.ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಅಖಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ರಾಷ್ಟ್ರೀಯ ಉಪಧ್ಯಕ್ಷರಾಗಿ ನೇಮಕಗೊಂಡ ಸಿದ್ದರಾಮ ಚೆನ್ನಪ್ಪ ಉಪ್ಪಿನ ಅವರಿಗೆ ಸನ್ಮಾನಿಸಲಾಯಿತು.ಈ ವೇಳೆ ಅಶೋಕ ವಾರದ, ವಿ.ಡಿ.ವಸ್ತçದ, ಚನ್ನಪ್ಪ ಕತ್ತಿ, ಬಸಯ್ಯ ಹಿರೇಮಠ, ಡಾ.ಶರಣಬಸವ ಜೋಗುರ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಸಮಸ್ಯೆಯನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಿನಿ ವಿಧಾನಸೌಧ ಎದುರು ನಡೆಸುತ್ತಿರುವ ಅನಿಷ್ಠಾವಧಿ ಮುಷ್ಕರ ಗುರುವಾರ ನಾಲ್ಕನೆಯ ದಿನ ಮುಂದುವರೆದಿದೆ.ಗ್ರಾಮ ಆಡಳಿತ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಕಂದಾಯ ಇಲಾಖೆಯ ಕೆಲಸ ಕಾರ್ಯ ಗಳನ್ನು ಸ್ಥಗಿತಗೊಳಿಸಿದ್ದರಿಂದ ಇಂಡಿ ತಾಲೂಕಿನಲ್ಲಿ ಗ್ರಾಮ ಆಡಳಿತ ವ್ಯವಸ್ಥೆ ಸ್ತಬ್ಧಗೊಂಡಿದ್ದು ಸಾರ್ವಜನಿಕರು ಸರಕಾರಿ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.ಮೊಬೈಲ ತಂತ್ರಾಂಶಗಳಾದ ಸಂಯೋಜನೆ, ಇ ಆಫೀಸ್ ಆಧಾರ ಸೀಡ್, ಲ್ಯಾಂಡ ಬೀಟ್, ಬಗರ ಹುಕುಂ, ಹಕ್ಕು ಪತ್ರ ಸೇರಿ೨೧ ಮೊಬೈಲ ಅಪ್ಲಿಕೇಷನ್ ಅನ್ ಇನ್ ಸ್ಟಾಲ ಮಾಡಿ ಮುಷ್ಕರ ಆರಂಭಿಸಿದ್ದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಯಲಗೊಂಡ ಪೂಜಾರಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವದು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಮಾಡುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು,ಅಂತರ ಜಿಲ್ಲಾ ವರ್ಗಾವಣೆ ಮರು ಸ್ಥಾಪಿಸುವದು,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸರಕಾರಿ ನೌಕರರು ಪದೇ-ಪದೇ ಪ್ರತಿಭಟನೆ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ, ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸರಕಾರ ಅವರನ್ನು ಒಮ್ಮೆ ಕರೆಯಿಸಿ ಅವರ ಸಮಸ್ಯೆ ಈಡೇರಿಸಿ ಜನ ಸಾಮಾನ್ಯರ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಹೇಳಿದರು.ಅವರು ಗುರುವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.ರಾಜ್ಯ ಸರಕಾರಿ ನೌಕರಸ್ಥರು ಬೀದಿಗಿಳಿದು ಪದೇ ಪದೇ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಕಂಡರೆ ಪ್ರಜ್ಞಾವಂತ ನಾಗರಿಕ ಸಮಾಜಕ್ಕೆ ಮುಜಗರ ಪಡುವಂತಾಗುತ್ತಿದೆ. ಈ ಹೋರಾಟ ಪ್ರತಿಭಟನೆಗೆ ಸರಕಾರವೇ ಜವಾಬ್ದಾರಿ ಮತ್ತು ಕಾರಣ ಹೊರಬೇಕಾಗುತ್ತದೆ. ಈ ನಡೆ ಸರಕಾರದ ಸಂಪೂರ್ಣ ಆಡಳಿತ ವೈಫಲ್ಯ ತೋರುತ್ತಿದೆ. ಈಗಾಗಲೇ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಹಾಗೂ ಎಲ್ಲಾ ಇಲಾಖೆ ಮಾತೃ ಇಲಾಖೆ ಎನಿಸಿಕೊಳ್ಳುವ ಕಂದಾಯ ಇಲಾಖೆ ನೌಕರಸ್ಥರು ಪ್ರತಿಭಟನೆಗೆ ಇಳಿದಿದ್ದು, ಕಾರ್ಯಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆಗಳು ಸಂಪೂರ್ಣ ನಿಂತು…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಆದರ್ಶ ರಾಷ್ಟ್ರ ನಿರ್ಮಾಣದಲ್ಲಿ ಅಕ್ಷರ ಕಲಿಸುವ ಶಿಕ್ಷಕರು, ಸಂಸ್ಕಾರ ಕಲಿಸುವ ತಾಯಿಯೆಂದಿರು ಪಾತ್ರ ಪ್ರಮುಖವಾದುದು ಈರ್ವರು ನಿತ್ಯ ಸ್ಮರಣೀಯರು ಎಂದು ಸಂಸ್ಥೆಯ ಕಾರ್ಯದರ್ಶಿ ವೈ ಟಿ ಪಾಟೀಲ್ ಹೇಳಿದರು.ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾತೃಭೋಜನ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಮ್ಮನ ಕೈತುತ್ತಿನಲ್ಲಿ ಅದಮ್ಯ ಶಕ್ತಿ ಇದೆ, ಅಮ್ಮನ ಮಡಿಲು ಅಪ್ಪನ ಹೆಗಲು ಸ್ವರ್ಗಕ್ಕೆ ಮಿಗಿಲು ಎಂದವರು, ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳಕ್ಕೆ ಶಾಲೆಯ ಶಿಕ್ಷಕರು ಹೆಚ್ಚು ಶ್ರಮಿಸುತ್ತಿದ್ದಾರೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರುಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿ ಆಶೀರ್ವಚನ ನೀಡಿದರು.ಉಪನ್ಯಾಸಕ ಡಾ ಯಂಕನಗೌಡ ಎಸ್ ಪಾಟೀಲ, ಸಿಆರ್ ಪಿ ಬಂದೇನವಾಜ್ ನಾಲತವಾಡ, ಸುಮಿತ್ರಪ್ಪ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೆ ಸಚಿವರ ತವರು ಕ್ಷೇತ್ರ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಮಾವೇಶದಲ್ಲಿ ಒಂದು ದಿನದ ಮಟ್ಟಿಗೆ ಭಾಗವಹಿಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವ ಪದವಿ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ವಿವಿಧ ಉದ್ದಿಮೆಗಳು ಹಾಗೂ ಉದ್ಯಮಿಪತಿಗಳ ಸಂದರ್ಶನಕ್ಕೆ ಅವಕಾಶವನ್ನು ಸ್ವತಃ ಎಂ.ಬಿ.ಪಾಟೀಲ ಅವರು ಕಲ್ಪಿಸಿದ್ದರು.ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿಮ್-2025 ಇನ್ವೆಸ್ಟ್ ಕರ್ನಾಟಕ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹಿಂದೆಗಿಂತಲೂ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಹಾಗೂ ದೇಶದಾದ್ಯಂತ ಉದ್ದಿಮೆದಾರರು ಪಾಲ್ಗೊಂಡಿರುವುದು ಸಮಾವೇಶದ ಸಂಭ್ರಮ ಹೆಚ್ಚಿಸಿದೆ. ಸಮಾವೇಶದ ಎರಡನೇ ದಿನ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರವರು ತಮ್ಮ ಸ್ವ ಕ್ಷೇತ್ರ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ವಿವಿಧ ಗ್ರಾಮಗಳ ಲಾ, ನರ್ಸಿಂಗ್, ಬಿ.ಎ, ಬಿ.ಎಸ್.ಸಿ, ಬಿ.ಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯ್ದ 200 ವಿದ್ಯಾರ್ಥಿಗಳು ಹಾಗೂ 15 ಜನ ಪ್ರಾಧ್ಯಾಪಕರಿಗೆ…
ಲೇಖನ- ಶ್ರೀಮತಿ ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ನೀಲಿಯ ಬಾನಿನಲ್ಲಿ ತೇಲುವ ಆ ಬೆಳ್ಮುಗಿಲುಗಳು, ಬಾನು ಭುವಿಗೆ ಸೇತುವೆ ಕಟ್ಟಿದ ಆ ಕಾಮನಬಿಲ್ಲು, ಒಡಲಲ್ಲಿ ಜೀವಜಲವನ್ನು ಹೊತ್ತುಕೊಂಡು ಭಾರವಾಗಿ ದಿನತುಂಬಿದ ಬಸುರಿಯಂತೆ ಮೆಲ್ಲನೆ ಹೆಜ್ಜೆಯಿಡುತ ನಡೆದಿಹ ಕರಿಕಪ್ಪು ಮೋಡಗಳು, ಹಗಲು-ಇರುಳಿನ ಬೆಳಕಿನ ಸರದಾರರಾದ ರವಿ-ಶಶಿಯ ಆ ಆಟೋಟಗಳನ್ನು, ಅರುಣನ ಕೆಂಪು ಕಿರಣ ರಾಗಮಾಲಿಕೆ, ಬಾನಿಂದ ಧರೆಗುರುಳುವ ವರುಣನ ಆರ್ಭಟ, ಗಿಳಿವಿಂಡಿನಲ್ಲಿ ತನ್ನ ತಾರೆ ಗೆಳತಿಯರೊಡನೆ ಸಂಭಾಷಿಸುತ್ತಿರುವ ಆ ಚಂದಿರ, ಮಿನುಗು ತಾರೆಗಳ ಕಣ್ಣೋಟ..ಹೀಗೆ ಹಗಲು-ರಾತ್ರಿ ಆ ವಿಶಾಲವಾದ ಬಾಂದಳದಲ್ಲಿ ನಡೆಯುವ, ಮನಸೂರೆಗೊಳ್ಳುವ ಈ ಎಲ್ಲ ಪ್ರಕೃತಿಯ ಪ್ರಕ್ರಿಯೆಗಳನ್ನು, ಲೀಲೆಗಳನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುವುದು, ಅನುಭವಿಸುವುದು ನನ್ನ ಪ್ರೀತಿಯ ಹವ್ಯಾಸಗಳಲ್ಲಿ ಒಂದಾಗಿದೆ. ಎಂದಿನಂತೆ ಅಂದು ಕೂಡಾ ರಾತ್ರಿ ಆಕಾಶದೆಡೆ ಮುಖ ಮಾಡಿ ನಿಂತಾಗ ಚಂದಿರ ಮತ್ತು ಆತನ ಗೆಳತಿಯರು ಅಬ್ಬಾ ಎಷ್ಟೊಂದು ಜನ! ಒಂದು, ಎರಡು, ಮೂರು, ನಾಲ್ಕು ಎಣಿಸತೊಡಗಿದೆ. ನನ್ನ ಈ ಹುಚ್ಚಿಗೆ ನನಗೇ ನಗು ಬಂದಿತು. ಊಹುಂ. ಕೊನೆ ಮೊದಲಿಲ್ಲದ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮುರುಡೇಶ್ವರ ಪವರ್ ಹೌಸ್ ನವರು ತಾಲೂಕಿನ ನಾಗಬೇನಾಳ ಗ್ರಾ.ಪಂ ಗೆ ತೆರಿಗೆ ಪಾವತಿಸದೇ ಮೋಸಮಾಡಿದ್ದು ಕೂಡಲೇ ಬಾಕಿ ಇರುವ ತೆರಿಗೆಯನ್ನು ಪಾವತಿಸಿಕೊಳ್ಳಬೇಕು ಎಂದು ಯುವಜನ ಸೇನೆಯ ಪದಾಧಿಕಾರಿಗಳು ತಾಲೂಕು ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಈ ವೇಳೆ ಮಾಧ್ಯಮದವರೊಂದಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಇದೊಂದು ಸರ್ಕಾರಕ್ಕೆ ಮಾಡಿರುವ ದೊಡ್ಡ ಮೋಸ. ಸಾಕಷ್ಟು ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಈ ಬಗ್ಗೆ ಬಾಕಿ ಇರುವ ತೆರಿಗೆ ಹಣವನ್ನು ಕಟ್ಟಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಹೋರಾಟವನ್ನು ಆರಂಭಿಸಿದ್ದು ತೆರಿಗೆ ಹಣ ಪಾವತಿಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು.ಹೋರಾಟದಲ್ಲಿ ಹುಲಗಪ್ಪ ಮಾದರ, ಶೇಖಸಾ ನದಾಫ, ಮೌನೇಶ ನಾಗಬೇನಾಳ, ಮಲ್ಲು ತಳವಾರ, ರಫೀಕ ತೆಗ್ಗಿನಮನಿ, ಬಾಬು ತೆಗ್ಗಿನಮನಿ, ಗಂಗು ಗಂಗನಗೌಡ್ರ, ಲಕ್ಷö್ಮಣ ತಾಳಿಕೋಟಿ, ಆನಂದ ಬಟಗಿ, ಗುರಪ್ಪ ಬಟಗಿ, ಶಿವು ವನಕಿಹಾಳ, ಸಂಗಯ್ಯ ಸಾರಂಗಮಠ, ಸಂಗಪ್ಪ ಪೊಲೀಸ್ ಪಾಟೀಲ, ಚಂದ್ರಾಮಪ್ಪ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮೂಲಭೂತ ಸೌಲಭ್ಯ ಕಲ್ಪಿಸುವದು, ವೇತನ ಶ್ರೇಣಿ ನಿಗಧಿಪಡಿಸುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು ಸೇರಿದಂತೆ ವಿವಿಧ ಒಟ್ಟು ೨೩ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರಾರಂಭಿಸಿದ ೨ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಬುಧವಾರ ಮೂರು ದಿನಗಳನ್ನು ಪೂರೈಸಿ ಗುರುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.ಬುಧವಾರ ಮುಷ್ಕರ ನಿರತರ ಬೇಡಿಕೆಗಳನ್ನು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಆಲಿಸಿದರು. ಹೋರಾಟಗಾರರು ತಮ್ಮ ಸೇವೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಮಂತ್ರಿಗಳ ಬಳಿ ತಿಳಿಸಿ, ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚರ್ಚಿಸುವದಾಗಿ ಭರವಸೆ ನೀಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡ ಅಶೋಕ ನಾಡಗೌಡ ಇದ್ದರು.ಬಿಜೆಪಿ ಮಂಡಲದ ವತಿಯಿಂದ ಹೋರಾಟಗಾರರಿಗೆ ಬೆಂಬಲ ನೀಡಲಾಯಿತು. ಈ ವೇಳೆ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಉಪಾಧ್ಯಕ್ಷ ಸಂಗಮೇಶ ಗುಂಡಕನಾಳ ಮಾತನಾಡಿ ಸರ್ಕಾರಕ್ಕೆ ಚಾಟಿ…
