ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಲ್ಯಾಣ ಕ್ರಾಂತಿಯ ಪ್ರಮುಖರಲ್ಲಿ ವೀರಗಂಟಿ ಮಡಿವಾಳ ಮಾಚಯ್ಯನವರು ಒಬ್ಬರು. ಭಕ್ತಿಗೆ ಬಸವಣ್ಣ ಅಗ್ರಗಣ್ಯನಾದರೆ ಮಹೇಶ ಸ್ಥಲಕ್ಕೆ ಮಡಿವಾಳ ಮಾಚಯ್ಯ, ಪ್ರಸಾದಿ ಸ್ಥಲಕ್ಕೆ ಚನ್ನಬಸವಣ್ಣ, ಪ್ರಾಣ ಲಿಂಗ ಸ್ಥಲಕ್ಕೆ ಸಿದ್ದರಾಮೇಶ್ವರ, ಶರಣ ಸ್ಥಲಕ್ಕೆ ಅಕ್ಕಮಹಾದೇವಿ ಐಕ್ಯಸ್ಥಲಕ್ಕೆ ಅಲ್ಲಮಪ್ರಭು ಅಗ್ರಗಣ್ಯರಾಗಿದ್ದಾರೆ ಎಂದು ಎಚ್.ಜಿ.ಪಪೂ ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.
ಪಟ್ಟಣದ ಸಾರಂಗಮಠದ ಆವರಣದಲ್ಲಿ ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ಭಾರತ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ ೩೩೯ನೆಯ ಸದ್ವಿಚಾರ ಗೋಷ್ಠಿಯಲ್ಲಿ ದೇವರ ಹಿಪ್ಪರಗಿಯ ಶರಣ ಮಡಿವಾಳ ಮಾಚಿದೇವರ ವಿಷಯ ಕುರಿತು ಉಪನ್ಯಾಸ ನೀಡಿ, ಮಹಾತ್ಮ ಮಾಚಿದೇವರ ವಿಚಾರವನ್ನು ಬರೆಯದ ವೀರಶೈವ ಗ್ರಂಥಗಳಿಲ್ಲ. ಶರಣರಲ್ಲಿ ಯಾವ ವಚನಕಾರರು ಮಾಚಿದೇವರ ಹೆಸರನ್ನು ಬಿಟ್ಟಂತೆ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಅಖಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ರಾಷ್ಟ್ರೀಯ ಉಪಧ್ಯಕ್ಷರಾಗಿ ನೇಮಕಗೊಂಡ ಸಿದ್ದರಾಮ ಚೆನ್ನಪ್ಪ ಉಪ್ಪಿನ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಅಶೋಕ ವಾರದ, ವಿ.ಡಿ.ವಸ್ತçದ, ಚನ್ನಪ್ಪ ಕತ್ತಿ, ಬಸಯ್ಯ ಹಿರೇಮಠ, ಡಾ.ಶರಣಬಸವ ಜೋಗುರ, ಶಿವಕುಮಾರ ಜೋಗುರ, ವಿರೇಶ ಜೋಗುರ, ಶಕುಂತಲಾ ಹಿರೇಮಠ, ಎಂ.ಎಸ್.ಹೈಯಾಳಕರ, ಬಸಮ್ಮ ಧರಿ, ನವೀನ ಶೆಳ್ಳಗಿ, ದ್ರಾಕ್ಷಾಯಿಣಿ ಪಾಟೀಲ, ಸಿದ್ದಪ್ಪ ಗುರುಶೆಟ್ಟಿ, ಬಸವರಾಜ ಗುರುಶೆಟ್ಟಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

