ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮುರುಡೇಶ್ವರ ಪವರ್ ಹೌಸ್ ನವರು ತಾಲೂಕಿನ ನಾಗಬೇನಾಳ ಗ್ರಾ.ಪಂ ಗೆ ತೆರಿಗೆ ಪಾವತಿಸದೇ ಮೋಸಮಾಡಿದ್ದು ಕೂಡಲೇ ಬಾಕಿ ಇರುವ ತೆರಿಗೆಯನ್ನು ಪಾವತಿಸಿಕೊಳ್ಳಬೇಕು ಎಂದು ಯುವಜನ ಸೇನೆಯ ಪದಾಧಿಕಾರಿಗಳು ತಾಲೂಕು ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಇದೊಂದು ಸರ್ಕಾರಕ್ಕೆ ಮಾಡಿರುವ ದೊಡ್ಡ ಮೋಸ. ಸಾಕಷ್ಟು ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಈ ಬಗ್ಗೆ ಬಾಕಿ ಇರುವ ತೆರಿಗೆ ಹಣವನ್ನು ಕಟ್ಟಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಹೋರಾಟವನ್ನು ಆರಂಭಿಸಿದ್ದು ತೆರಿಗೆ ಹಣ ಪಾವತಿಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು.
ಹೋರಾಟದಲ್ಲಿ ಹುಲಗಪ್ಪ ಮಾದರ, ಶೇಖಸಾ ನದಾಫ, ಮೌನೇಶ ನಾಗಬೇನಾಳ, ಮಲ್ಲು ತಳವಾರ, ರಫೀಕ ತೆಗ್ಗಿನಮನಿ, ಬಾಬು ತೆಗ್ಗಿನಮನಿ, ಗಂಗು ಗಂಗನಗೌಡ್ರ, ಲಕ್ಷö್ಮಣ ತಾಳಿಕೋಟಿ, ಆನಂದ ಬಟಗಿ, ಗುರಪ್ಪ ಬಟಗಿ, ಶಿವು ವನಕಿಹಾಳ, ಸಂಗಯ್ಯ ಸಾರಂಗಮಠ, ಸಂಗಪ್ಪ ಪೊಲೀಸ್ ಪಾಟೀಲ, ಚಂದ್ರಾಮಪ್ಪ ಹಡಪದ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.