ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮೂಲಭೂತ ಸೌಲಭ್ಯ ಕಲ್ಪಿಸುವದು, ವೇತನ ಶ್ರೇಣಿ ನಿಗಧಿಪಡಿಸುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು ಸೇರಿದಂತೆ ವಿವಿಧ ಒಟ್ಟು ೨೩ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರಾರಂಭಿಸಿದ ೨ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಬುಧವಾರ ಮೂರು ದಿನಗಳನ್ನು ಪೂರೈಸಿ ಗುರುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಬುಧವಾರ ಮುಷ್ಕರ ನಿರತರ ಬೇಡಿಕೆಗಳನ್ನು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಆಲಿಸಿದರು. ಹೋರಾಟಗಾರರು ತಮ್ಮ ಸೇವೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಮಂತ್ರಿಗಳ ಬಳಿ ತಿಳಿಸಿ, ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚರ್ಚಿಸುವದಾಗಿ ಭರವಸೆ ನೀಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡ ಅಶೋಕ ನಾಡಗೌಡ ಇದ್ದರು.
ಬಿಜೆಪಿ ಮಂಡಲದ ವತಿಯಿಂದ ಹೋರಾಟಗಾರರಿಗೆ ಬೆಂಬಲ ನೀಡಲಾಯಿತು. ಈ ವೇಳೆ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಉಪಾಧ್ಯಕ್ಷ ಸಂಗಮೇಶ ಗುಂಡಕನಾಳ ಮಾತನಾಡಿ ಸರ್ಕಾರಕ್ಕೆ ಚಾಟಿ ಬೀಸಿದರು. ಈ ವೇಳೆ ಸಂಗಮ್ಮ ದೇವರಳ್ಳಿ, ರಾಜು ಬಳ್ಳೊಳ್ಳಿ, ಸಂಜು ಬಾಗೇವಾಡಿ, ಅಶೋಕ ಚಿನಿವಾರ, ಪರಶುರಾಮ ನಾಲತವಾಡ, ಗೌರಮ್ಮ ಹುನಗುಂದ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ರೇಖಾ ಕೊಂಡಗೂಳಿ, ಅಪ್ಪು ಧನ್ನೂರ, ಪ್ರಭು ಬಿರಾದಾರ, ಶಿವು ಬೊಮ್ಮನಳ್ಳಿ, ವಿರೇಶ ಜಗಂಡಭಾವಿ, ಸಿದ್ದಪ್ಪ ಗುರಿಕಾರ, ಶರಣಪ್ಪ ಗಂಗಾವತಿ, ಅಂಬ್ರೀಶ ಕೂಡಲಗಿ, ಮುತ್ತು ಬಿಂಗೇರಿ ಹೋರಾಟಗಾರರಾದ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ, ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಮನೋಜ ರಾಠೋಡ, ತಾಳಿಕೋಟೆ ತಾಲೂಕಾಧ್ಯಕ್ಷ ಶಬ್ಬೀರ ಮುಲ್ಲಾ, ಕಾರ್ಯದರ್ಶಿ ಶಿವಾನಂದ ಅಂಗಡಿ, ಸುನೀಲ ಚೌವ್ಹಾಣ, ಎ.ಎಸ್.ಬಾಬಾನಗರ, ಶ್ರೀನಿವಾಸ ಹುನಗುಂದ, ಹರ್ಷಿತ್.ಎಚ್, ಸಚೀನ ಗೌಡರ, ದೇವರಾಜ ಗುರಿಕಾರ, ರಫೀಕ ಮುಲ್ಲಾ, ಬಿ.ಕೆ.ನಂದಗೊAಡ, ಎಚ್.ಸಿ.ಕೊರಗು, ಆರತಿ ಬಳವಾಟ, ಅನುಪಮಾ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯಾ ಮುಲ್ಲಾಳ, ಶಿವಾನಂದ ಅಂಗಡಿ, ಕಿಶೋರ ಹಜೇರಿ, ಶೈಲಶ್ರೀ ಕಂಚಾಣಿ, ಜಯರಾಮ ಚೌವ್ಹಾಣ, ಈರಪ್ಪ ಪತ್ತಾರ, ಪವನ ಬೆಂಕಿ, ಶೃತಿ ಡಂಬಳ, ಫಕಿರಪ್ಪ ಮಾದಣ್ಣವರ, ಶಾಂತಪ್ಪಗೌಡ ಬಿರಾದಾರ, ಪ್ರಶಾಂತ ಶಾಂತಗೇರಿ, ಮಂಜುನಾಥ ಇಬ್ರಾಹಿಂಪೂರ, ಶಿವಶರಣ ಕುಂಬಾರ, ಉಮಾಪತಿ ಟಿ, ಅನೀಲ ಚೌವ್ಹಾಣ, ಸೇರಿದಂತೆ ಮತ್ತೀತರರು ಇದ್ದರು.