ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ೧೩ ಮತ್ತು ೧೪ನೆಯ ವಾರ್ಡಿನಲ್ಲಿರುವ ಅನಧಿಕೃತವಾಗಿ ನಿರ್ಮಿಸಿದ್ಧ ಶೆಡ್‌ಗಳನ್ನು ಪುರಸಭೆಯವರು ಗುರುವಾರ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.
ಸಿಂದಗಿ ಪಟ್ಟಣದ ೧೩ ಮತ್ತು ೧೪ನೆಯ ವಾರ್ಡಿನ ಅನಧಿಕೃತ ಶೆಡ್‌ಗಳು ಉದ್ಯಾನವನದ ಜಾಗೆಯಲ್ಲಿ ತಲೆ ಎತ್ತಿದ್ದರಿಂದ ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ತೆರವಿಗಾಗಿ ಡಿಸಿ ಆದೇಶ ಹೊರಡಿಸಿದ್ದರ ಕಾರಣ ಸಂಬಂಧಿತರಿಗೆ ಶೆಡ್ ತೆರವುಗೊಳಿಸುವಂತೆ ಕಳೆದ ೪-೫ವರ್ಷಗಳಿಂದ ಹೇಳುತ್ತಲೇ ಬರಲಾಗಿದೆ. ಹಲವು ಬಾರಿ ಸೂಚನೆ ನೀಡಿದರೂ ಅವುಗಳನ್ನು ತೆರವುಗೊಳಿಸಿಕೊಂಡಿರಲಿಲ್ಲ. ಇದರಿಂದ ಅನಿವಾರ್ಯವಾಗಿ ಪುರಸಭೆ ವತಿಯಿಂದ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ನಾವು ಸಮೀಕ್ಷೆ ಮಾಡಿದ ಪ್ರಕಾರ ಅಲ್ಲಿ ೧೮೦ಕ್ಕೂ ಅಧಿಕ ಶೆಡ್‌ಗಳು ಇದ್ದವು. ಅದರಲ್ಲಿ ೬೦-೭೦ ಶೆಡ್‌ಗಳು ಅನಧಿಕೃತವಾಗಿದ್ದವು. ಅವುಗಳನ್ನು ಸ್ವ-ಯಿಚ್ಚೆಯಿಂದ ತೆರವುಗೊಳಿಸಿಕೊಳ್ಳುವೆವು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ ಹೇಳಿದರು.
ತೆರವು ಕಾರ್ಯಾಚರಣೆಯಲ್ಲಿ ನಬಿರಸೂಲ್ ಉಸ್ತಾದ, ಅಬ್ಬಾಸಲಿ ಕಾಖಂಡಕಿ, ಅನಿಲ ಚೌರ, ದಯಾನಂದ ಇವಣಿ, ಕಲ್ಲಪ್ಪ ಚೌರ, ಸಿದ್ದು ಅಂಗಡಿ, ಅಲ್ತಾಫ್ ಮುಜಾವರ, ಈರಬಸಪ್ಪ ಮಾದರ, ಶ್ರೀಶೈಲ ಜಾಡರ್, ಮುಬಾರಕ ಪಡೆಕನೂರ ಸೇರಿದಂತೆ ಪೌರ ಕಾರ್ಮಿಕರು ಇದ್ದರು.
“ಸ್ವಯಿಚ್ಚೆಯಿಂದ ತೆರವು ಮಾಡಿಕೊಳ್ಳಿ ಎಂದು ಅಲ್ಲಿರುವ ನಿವಾಸಿಗಳಿಗೆ ತಿಳಿಸಿದ್ದೇನೆ. ಈ ವಿಷಯದ ಬಗ್ಗೆ ಈಗಾಗಲೇ ಶಾಸಕರ ಜೊತೆಗೆ ಮಾತನಾಡಿದ್ದೇನೆ. ಇನ್ನೂ ಸ್ವಲ್ಪ ದಿನಗಳಲ್ಲಿ ಒಟ್ಟಾರೆ ಸೂರು ಇಲ್ಲದ ಜನರಿಗೆ ಆಸರೆ ಒದಗಿಸಿಕೊಡುತ್ತೇನೆ. ಅಲ್ಲಿನ ಶೆಡ್‌ಗಳ ತೆರವು ಕಾರ್ಯಾಚರಣೆಯಲ್ಲಿ ಪುರಸಭೆಯ ಸಿಬ್ಬಂದಿ ಹಾಗೂ ವಾಹನಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.”
– ಶಾಂತವೀರ ಬಿರಾದಾರ
ಪುರಸಭೆ ಅಧ್ಯಕ್ಷರು, ಸಿಂದಗಿ

