Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಧುನಿಕತೆಯಲ್ಲಿ ಮುಳುಗಿದ ಮನುಷ್ಯ ಕೌಟುಂಬಿಕ ಸಂಬಂಧಗಳಿಂದ ದೂರ ಉಳಿಯುತ್ತಿದ್ದಾನೆ. ವಿಭಕ್ತ ಕುಟುಂಬದಿಂದ ಮಾನವೀಯ ಮೌಲ್ಯಗಳು ಮರೆಯುತ್ತಿವೆ. ಸಂಸ್ಕೃತಿ, ಸಂದ್ರಾಯಗಳಿಂದ ಯುವಕ-ಯುವತಿಯರು ವಿಮುಖರಾಗುತ್ತಿದ್ದಾರೆ. ಮಾನಸಿಕ ದುಗುಡ ದುಮ್ಮಾನಗಳಿಂದ ಹೊರಬೇಕಾದರೆ ಸಂಗೀತ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಸಂಗೀತ, ಸಾಹಿತ್ಯ ಮತ್ತು ಕಲೆಗಳು ಮನುಷ್ಯನ ನೆಮ್ಮದಿಯ ಜೀವನದ ಸಂಗಾತಿಗಳು ಎಂದು ದರಬಾರ ಕಾಲೇಜಿನ ಉಪನ್ಯಾಸಕ ಹಾಗೂ ಪಂಡಿತ ಡಾ. ವೇದನಿಧಿ ಆಚಾರ್ಯ ಹೇಳಿದರು.ನಗರದ ಕರ್ನಾಟಕ ಕಲಾ ಸಂಘವು, ಬಿಡಿಈ ಬಾಲಕೀಯರ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಶಿಕ್ಷಣ ಅಂಕಗಳಿಗೆ ಸೀಮಿತವಾಗಿದೆ. ಇಂದು ವಿದ್ಯೆಗೆ ಕೊರತೆಯಿಲ್ಲ. ಆದರೆ ಕೌಟುಂಬಿಕ ಬೆಲೆ ಅರಿತುಕೊಳ್ಳುತ್ತಿಲ್ಲ. ಪರಸ್ಪರ ಪ್ರೀತಿ, ಸಹೋದರತೆ ಭಾವ ಮೂಡಿದಾಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಡಯಟ್ ಉಪನ್ಯಾಸಕ ನಾರಾಯಣ ಬಾಬಾನಗರ ಮಾತನಾಡಿ, ಕಳೆದ ೩೦ ವರ್ಷಗಳಿಂದ ಯಾವುದೇ ಫಲಾಪೆಕ್ಷೆಯಿಲ್ಲದೆ ಸಮಾಜಮುಖಿ ಕೆಲಸ ಮಾಡುತ್ತಿರುವ ಕರ್ನಾಟಕ ಕಲಾ ಸಂಘದ ಕಾರ್ಯ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪ್ರಾಚೀನ ಕಾಲದಿಂದಲೂ ಕರ್ತನ ಸಾಹಿತ್ಯ ವೈಶಿಷ್ಠ್ಯತೆ ಮೆರೆದಿದೆ. ಕಿರ್ತನ ಸಂಗೀತದ ನಾದ ಮಾಧುರ್ಯದೊಂದಿಗೆ ಗತಿಸಿಹೊದ ಪ್ರಾಚೀನ ಘಟನೆಗಳನ್ನು,ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಕಥಾ ಕೀರ್ತನ ಸಾಹಿತ್ಯ ತೋರಿಸಿಕೊಟ್ಟಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಬಸಪ್ಪ ಬಜಂತ್ರಿ ಬಾಗಲಕೋಟ ಹೇಳಿದರು.ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಹಾಗೂ ಸ್ಥಳಿಯ ಜೋಳಿಗೆ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಫೆ.19 ರಿಂದ ಐದು ದಿನಗಳ ವರೆಗೆ ಆಯೋಜಿಸಲಾದ ಜನಕಥಾಕಿರ್ತನ ಶಿಬಿರ ಮತ್ತು ಉತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಾಹಿತಿ ರಾಜಶೇಖರ ಮಠಪತಿ ಮಾತನಾಡಿ, 19 ನೇ ಸತಮಾನದಲ್ಲಿ ಆಗಿಹೋದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಆಯ್ದ ಸಂದರ್ಭಗಳನ್ನು ಕಿರ್ತನ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.ಮೈಸೂರು ಭಾಗದಲ್ಲಿ ಇರತಕ್ಕಂತಹ ಕೀರ್ತನೆಗಳನ್ನು ಉತ್ತರ ಕರ್ನಾಕದ ಜನರಿಗೆ ತಿಳಿಸುವಂತದ್ದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿರುವ ಜನಪದ ಸಾಹಿತ್ಯವನ್ನು ಸಂಸ್ಕೃತಿಯನ್ನ ದಕ್ಷಿಣ ಕರ್ನಾಟಕ ಭಾಗದವರಿಗೆ ತಿಳಿಸುವದೇ ಕಥಾ ಕೀರ್ತನ ಶಿಬಿರದ ಉದ್ದೇಶ.…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿರುವ ಕೂಡಗಿ ಎನ್‌ಟಿಪಿಸಿ ಕಾರ್ಮಿಕರ ಗೋಳು ಕೇಳದೇ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯಭಾವ ತಾಳುತ್ತಿದ್ದಾರೆ ಎಂದು ಎನ್‌ಟಿಪಿಸಿ ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಬಸವರಾಜ್ ಆಲೂರ ಆಕ್ರೋಶ ವ್ಯಕ್ತಪಡಿಸಿದರು.ಕೂಡಗಿ ಎನ್‌ಟಿಪಿಸಿ ಗುತ್ತಿಗೆ ಕಾರ್ಮಿಕರು ಸಮೀಪದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಜರುಗಿಸಿದ ಕುಂದು ಕೊರತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಜ.೬ ರಂದು ಎನ್‌ಟಿಪಿಸಿ ಪ್ರವೇಶ ದ್ವಾರದೆದುರು ಸಹಸ್ರಾರು ಕಾರ್ಮಿಕರು ತಮಗೆ ಸಿಗಬೇಕಿದ್ದ ಮೂಲಭೂತ ಸೌಲಭ್ಯಗಳ ಕುರಿತು ಉರಿ ಬಿಸಿಲಲ್ಲೇ ಕುಳಿತು ಪ್ರತಿಭಟಿಸಿ ಗಮನ ಸೆಳೆದಿದ್ದರು. ಆಗ ಸ್ಥಾವರದ ಹಿರಿಯ ಅಧಿಕಾರಿಗಳು ಬಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದ್ದರು. ಪ್ರಸ್ತುತ ಒಂದೂವರೆ ತಿಂಗಳು ಗತಿಸುತ್ತ ಬಂದರೂ ನಮ್ಮ ಒಂದೇಒಂದು ಬೇಡಿಕೆಯನ್ನು ಈ ಅಧಿಕಾರಿಗಳು ಈಡೇರಿಸಿಲ್ಲ. ಇದೇರೀತಿಯ ಮೊಂಡುತನವನ್ನು ಎನ್‌ಟಿಪಿಸಿ ಅಧಿಕಾರಿಗಳು ಪ್ರದರ್ಶಿಸುತ್ತ ಹೊರಟರೆ ಕೇಂದ್ರ ಕಾರ್ಮಿಕರ ಇಲಾಖೆ ಅಧಿಕಾರಿಗಳ ಬಳಿ ಶೀಘ್ರದಲ್ಲಿಯೇ ದೂರು ನೀಡುವುದಾಗಿ ಅವರು ಎಚ್ಚರಿಸಿದರು.ಕಾರ್ಮಿಕರ ಸಂಘದ ಅಧ್ಯಕ್ಷ ಆರೀಫ್ ತಾಳಿಕೋಟಿ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಹಿಂದು ಧರ್ಮದ ಅಪ್ರತಿಮ ಪ್ರತಿಪಾದಕ,ವೀರ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಮನಭಾವದಲ್ಲಿ ಹುದುಗಿದ್ದ ಹಿಂದುತ್ವದ ತಿರುಳುಳ್ಳ ದೇಶಪ್ರೇಮದ ವಿಚಾರಧಾರೆಗಳು ಅನನ್ಯವಾಗಿವೆ. ಅವು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಅಚ್ಚಳಿಯಾಗಿವೆ ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಟ್ಟಾ ದೇಶಭಕ್ತಿ,ಸ್ವಾಭಿಮಾನಿಯಾಗಿದ್ದ ಛತ್ರಪತಿ ಶಿವಾಜಿಯವರ ರಾಷ್ಟ್ರ ಪ್ರೇಮ,ಧೈರ್ಯ,ಶೌರ್ಯ,ಸಾಹಸಮಯ ಗುಣಗಳು ಆವಣೀ೯ಯವಾಗಿವೆ ಎಂದರು.ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಯಶೋಗಾಥೆ ರೋಚಕಮಯವಾಗಿದೆ. ವೀರ,ಶೂರತೆ,ಸೌಹಾರ್ದತೆ ದಿಟ್ಟತೆಯ ಬಿಂಬಗಳು ಕಂಡಿವೆ. ರಾಷ್ಟ್ರ ರಕ್ಷಕವೆಂಬ ಹೆಗ್ಗಳಿಕೆಯ ಗುರುತುಗಳು ಅವರ ಧೀರತೆಯ ವ್ಯಕ್ತಿತ್ವಕ್ಕೆ ತಾಗಿವೆ.ಛಲಗಾರ,ಶ್ರೇಷ್ಠ ಆಡಳಿತಗಾರೆಂಬ ಖ್ಯಾತಿ ಪಡೆದು ಮಿನುಗಿದ್ದಾರೆ. ಜನಸಾಮಾನ್ಯರ ಕಳಕಳಿಗೆ ಸ್ಪಂದಿಸಿ ಜನೋಪಕಾರಿ ಸಮಾಜಸೇವಾ ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಕಾರ್ಯರೂಪಕ್ಕೆ ತಂದು ಜನಮೆಚ್ಚುಗೆ ಪಡೆದಿದ್ದಾರೆ. ಶಿವಾಜಿ ಮಹಾರಾಜರು ದೇಶದ ಅಮೂಲ್ಯ ಆಸ್ತಿಯಾಗಿದ್ದಾರೆ.ಜನಮನದಲ್ಲಿ ಆತ್ಮಮನೋಬಲ ತುಂಬಿದ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯ 71ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ .ಎಸ್.ಎಲ್.ಸಿ. ವಿದ್ಯಾಥಿ೯ಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.ಶಾಲೆಯ ಮುಖ್ಯಗುರುಗಳಾದ ಹೆಚ್.ಆರ್.ಬಗಲಿ ಅವರು ಶಾಲೆಯ ಮತ್ತು ವಿದ್ಯಾರ್ಥಿಗಳ ಸಾಧನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ವ್ಹಿ.ಜಿ.ಮುತ್ತಿನ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟ ಶಿಕ್ಷಣ ಪಡಿಯುತ್ತಾ ಇದ್ದಾರೆ.ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನ ಪಡಬೇಕು ಮತ್ತು ತಂದೆ ತಾಯಿ ಶಿಕ್ಷಕರು ಹೆಮ್ಮೆ ಪಡುವ ಹಾಗೆ ಜೀವನ ರೂಪಿಸಿಕೊಳ್ಳಬೇಕು ಎಂದರು.ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಎಸ್.ಎಸ್.ಚೋರಗಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ, ಶ್ರಮಪಟ್ಟು ಓದಿದರೆ ಗೆಲುವು ಕಟ್ಟಿಟ್ಟ ಬುತ್ತಿ ಮತ್ತು ನಾವು ಯಾವಾಗಲೂ ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದ ಆಚರಣೆಗಳು ಆಚರಿಸಬೇಕು ಎಂದರು.ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿ.ಎಸ್.ಗೀಡವಿರ, ಶಿಕ್ಷಕರಾದ ಎಸ್.ಆರ್. ಹಿಟ್ನಳೀ, ಟಿ.ಆರ್.ಕೋಳಿ, ಆರ್.ಆರ್.ಕೋಳಿ, ಪಿ.ಎಸ್.ತೋಟಗರ, ಎಸ್.ಜಿ.ಉಮರಾಣಿ, ಎಮ್.ಆಯ್.ಅಮರಖೇಡ, ಎಸ್.ಆಯ್.ಗಚ್ಚಿನಕಟ್ಟೀ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ಮಾತಿಲ್ಲ ಎಂಬಂತೆ ಸಮಾಜದ ಉದ್ಧಾರಕ್ಕಾಗಿ ಪ್ರತಿ ವಿಷಯ-ಸಂಗತಿ ಮೇಲೆ ವಚನಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರ ತ್ರಿಪದಿಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಹಸನಾಗಿಸಿಕೊಳ್ಳುವಂತೆ ಶಿಕ್ಷಕ ಸಂತೋಷ ಬಂಡೆ ತಿಳಿಸಿದರು.ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರದಂದು ಹಮ್ಮಿಕೊಂಡ ಕವಿ ಸರ್ವಜ್ಞರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಸರ್ವಜ್ಞ ಸೌಜನ್ಯಶೀಲ, ಗೌರವದ ಬದುಕನ್ನು ಸಾಗಿಸಿ,ಸಮಾಜ ತಿದ್ದುವ ಕೆಲಸ ಮಾಡುತ್ತಾ, ಹಳ್ಳಿಯ ಜಾನಪದ ಭಾಷಾ ಶೈಲಿಯಲ್ಲಿ, ಸಾಮಾನ್ಯ ಜನರಿಗೆ ಮನವರಿಕೆ ಆಗುವ ರೀತಿಯಲ್ಲಿ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳನ್ನು ಇಂದಿನ ಮಕ್ಕಳು, ಯುವಜನಾಂಗ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯಾತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆ. ಅವರು ಸರಳ, ಆದರ್ಶ, ಸುಂದರ ಸಮಾಜವನ್ನು ನಿರ್ಮಿಸಲು…
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ನಿರ್ಧಾರ ಖಂಡಿಸಿ ನಗರದಲ್ಲಿ ಎಬಿವಿಪಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ ಉಳಿವಿಗಾಗಿ ಭಿಕ್ಷಾಟನೆ ಮಾಡಿದ ಹಣವನ್ನು ಬುಧವಾರ ಮುಖ್ಯಮಂತ್ರಿಗಳ ಖಾತೆಗೆ ಜಮಾ ಮಾಡಲಾಯಿತು.ಪಟ್ಟಣದ ತಾಲ್ಲೂಕು ಸರಕಾರಿ ಬಸ್ ನಿಲ್ದಾಣ ಹಾಗೂ ಪ್ರಮುಖ ಬಿದಿಗಳಲ್ಲಿ ಎಬಿವಿಪಿ ಕಾರ್ಯಕರ್ತರು ಭಿಕ್ಷಾಟನೆ ನಡೆಸಿ ಸುಮಾರು1312 ರೂಪಾಯಿ ಸಂಗ್ರಹಿಸಿ ಮುಖ್ಯ ಮಂತ್ರಿ ಖಾತೆಗೆ ಜಮಾ ಮಾಡಿದ್ದಾರೆ.ಈ ಸಂದರ್ಭದಲ್ಲಿಎಬಿವಿಪಿ ಪದಾಧಿಕಾರಿ ಸಚಿನ್ ದಾನಗೊಂಡ ಪ್ರಾಂತ ಕಾರ್ಯಕಾರಣಿ ಸದಸ್ಯ ಮಾತನಾಡಿ, ಸಾಮಾನ್ಯವಾಗಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯ ಇರಬೇಕು ಎಂಬುದು ಆದರ್ಶ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳು ಸಂಖ್ಯೆಗೆ ಹೋಲಿಕೆ ಮಾಡಿದರೆ ಸದ್ಯದ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳ ಅಂಕಪಟ್ಟಿ ಪ್ರಮಾಣಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 200 ಕಿಮೀ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕು. ಇಂತಹ ಸಮಸ್ಯೆಗೆ ಪರಿಹಾರ ಕಲ್ಪಿಸಿರುವ ಹೊಸ ವಿವಿಗಳನ್ನು ಉಳಿಸಿಕೊಳ್ಳಬೇಕು. ಯಾವುದೇ ಸರ್ಕಾರಗಳು ಘೋಷಣೆ ಮಾಡಿದ ವಿವಿಗಳನ್ನು ಅಭಿವೃದ್ಧಿಪಡಿಸಬೇಕು ವಿನಾ ಅತಂತ್ರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಇಂಗಳಗಿ ಪಿಕೆಪಿಎಸ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲವೂ ಶಾಸನಬದ್ಧವಾಗಿಯೆ ನಡೆಯುತ್ತಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ದಾಖಲೆ ರಹಿತವಾಗಿ ಏನ ಏನೋ ಆರೋಪ ಮಾಡುತ್ತೀರುವುದು ಕಂಡರೆ, ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಪ್ರಭು ಹೊಸಮನಿ ಕಿಡಿಕಾರಿದರು.ಬುಧವಾರ ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಇಂಗಳಗಿ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಎಲ್ಲವೂ ಶಾಸನಬದ್ಧವಾಗಿದೆ. ವಾರ್ಷಿಕ ಸಭೆ ಸೇರಿದಂತೆ ಸಂಘದ ಎಲ್ಲಾ ಚಟುವಟಿಕೆಗಳು ಕಾನೂನು ಅಡಿಯಲ್ಲಿಯೇ ನಡೆದಿವೆ. ಅದಲ್ಲದೆ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇಲಾಖೆಯ ಜಿಲ್ಲಾ ಅಧಿಕಾರಿ ಮಾರ್ಗಸೂಚಿಯಲ್ಲಿಯೇ ನಡೆಯುತ್ತಿದೆ. ಆದರೆ ಸಂಘದ ಕಾರ್ಯದರ್ಶಿ ಅವರಿಗೆ ಬೆದರಿಕೆ ಹಾಕಿ ಸಾಮಾನ್ಯ ಸಭೆ ಪುಸ್ತಕ ತೆಗೆದುಕೊಂಡು ಹೋಗಿ ಗೈರಾದ ಸದಸ್ಯರ ಸಹಿಗಳು ಮಾಡಿದ್ದಾರೆ ಎಂದು ಹೇಳಿದರು.ಇನ್ನೂ ಸಂಘದ ಕಾರ್ಯದರ್ಶಿ ಅವರ ಕಣ್ಣತಪ್ಪಿನಿಂದ ಸಣ್ಣ-ಪುಟ್ಟ ತಪ್ಪುಗಳಾಗಿದ್ದು, ಅವುಗಳನ್ನು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಶ್ವದಲ್ಲಿ ಗಂಭೀರವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ವಿಶ್ವದಾದ್ಯಂತ ಪ್ರತಿ ವರ್ಷ ಫೆ೨೦ ರಂದು ಆಚರಿಸಲಾಗುತ್ತದೆ ಎಂದು ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಸಿಂಧು ಪೋತದಾರ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಎಲ್ಲ ಜನತೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆ ಮಾಡಿದಲ್ಲಿ ರಾಷ್ಟçದ ಅಭಿವೃದ್ಧಿ ಸಾಧ್ಯ. ಹಾಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಮಾಜದಲ್ಲಿ ಬದಲಾವಣೆ ತರುವದೇ ದಿನಾಚರಣೆಯ ಪ್ರಮುಖ ಉದ್ದೇಶ ಎಂದರು.ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ಮನುಷ್ಯ ಸಂಘಜೀವಿ. ಆತನಿಗೆ ಸಮಾಜದಲ್ಲಿ ವಾಸಿಸುವದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯ ಆತನಿಗೆ ಸಾಮಾಜಿಕ ನ್ಯಾಯ ಕೊಡಿಸುವದೂ ಆಗಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ವಿವಿಧ ಪದ್ಧತಿಗಳ ಮೂಲಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೪-೨೫ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಮಹಿಳಾ ವಿವಿಯ ವುಶು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವುಶು ಕ್ರೀಡೆಯು ಇದೇ ದಿ. ೨೨ ರಿಂದ ೨೭ ರವರೆಗೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಜರುಗಲಿದ್ದು ಸದರಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವುಶು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ತಂಡದ ತರಬೇತಿದಾರಾಗಿ ಅನಿತಾ ಚವ್ಹಾಣ ಮತ್ತು ವ್ಯವಸ್ಥಾಪಕರಾಗಿ ಜಬಿನತಾಜ ಜಿಗಳೂರ ಭಾಗವಹಿಸಲಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.
