ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರಾಚೀನ ಕಾಲದಿಂದಲೂ ಕರ್ತನ ಸಾಹಿತ್ಯ ವೈಶಿಷ್ಠ್ಯತೆ ಮೆರೆದಿದೆ. ಕಿರ್ತನ ಸಂಗೀತದ ನಾದ ಮಾಧುರ್ಯದೊಂದಿಗೆ ಗತಿಸಿಹೊದ ಪ್ರಾಚೀನ ಘಟನೆಗಳನ್ನು,ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಕಥಾ ಕೀರ್ತನ ಸಾಹಿತ್ಯ ತೋರಿಸಿಕೊಟ್ಟಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಬಸಪ್ಪ ಬಜಂತ್ರಿ ಬಾಗಲಕೋಟ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಹಾಗೂ ಸ್ಥಳಿಯ ಜೋಳಿಗೆ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಫೆ.19 ರಿಂದ ಐದು ದಿನಗಳ ವರೆಗೆ ಆಯೋಜಿಸಲಾದ ಜನಕಥಾಕಿರ್ತನ ಶಿಬಿರ ಮತ್ತು ಉತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ರಾಜಶೇಖರ ಮಠಪತಿ ಮಾತನಾಡಿ, 19 ನೇ ಸತಮಾನದಲ್ಲಿ ಆಗಿಹೋದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಆಯ್ದ ಸಂದರ್ಭಗಳನ್ನು ಕಿರ್ತನ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಮೈಸೂರು ಭಾಗದಲ್ಲಿ ಇರತಕ್ಕಂತಹ ಕೀರ್ತನೆಗಳನ್ನು ಉತ್ತರ ಕರ್ನಾಕದ ಜನರಿಗೆ ತಿಳಿಸುವಂತದ್ದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿರುವ ಜನಪದ ಸಾಹಿತ್ಯವನ್ನು ಸಂಸ್ಕೃತಿಯನ್ನ ದಕ್ಷಿಣ ಕರ್ನಾಟಕ ಭಾಗದವರಿಗೆ ತಿಳಿಸುವದೇ ಕಥಾ ಕೀರ್ತನ ಶಿಬಿರದ ಉದ್ದೇಶ. ಈ ಕೀರ್ತನೆಗಳ ವೈಭವವನ್ನು ಮುಂದಿನ ಪಿಳಿಗೆಗೆ ಕೊಂಡುಯುವುದೇ ಜನಕಥಾ ಕೀರ್ತನ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ ಪ್ರಾಚಾರ್ಯ ಆರ್ ಪಿ ಬಗಲಿ ಮಾತನಾಡಿ ಜನಕಥಾ ವೈಭವನ್ನು ಮೆಲಕು ಹಾಕಿದರು..
ಪ್ರೊಫೆಸರ್ ಎಸ್ ಜಿ ಜಂಗಮಶೆಟ್ಟಿ. ಪತ್ರಕರ್ತ ಸಂಗಮೇಶ್ ಹೂಗಾರ್ ,ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಇದ್ದರು.
ನಂತರ ಬಾಬಾಸಾಹೇಬ ಅಂಬೇಡ್ಕರ ಅವರು ಕಥಾ ಕಿರ್ತನ ಹಾಗೂ ಶಂಕರ ಭಾರತೀಪುರ ಅವರ ಕಿರ್ತನ ಗಮನ ಸೆಳೆಯಿತು.

