ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಶ್ವದಲ್ಲಿ ಗಂಭೀರವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕುವ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ವಿಶ್ವದಾದ್ಯಂತ ಪ್ರತಿ ವರ್ಷ ಫೆ೨೦ ರಂದು ಆಚರಿಸಲಾಗುತ್ತದೆ ಎಂದು ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಸಿಂಧು ಪೋತದಾರ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ಜನತೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆ ಮಾಡಿದಲ್ಲಿ ರಾಷ್ಟçದ ಅಭಿವೃದ್ಧಿ ಸಾಧ್ಯ. ಹಾಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಮಾಜದಲ್ಲಿ ಬದಲಾವಣೆ ತರುವದೇ ದಿನಾಚರಣೆಯ ಪ್ರಮುಖ ಉದ್ದೇಶ ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ಮನುಷ್ಯ ಸಂಘಜೀವಿ. ಆತನಿಗೆ ಸಮಾಜದಲ್ಲಿ ವಾಸಿಸುವದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯ ಆತನಿಗೆ ಸಾಮಾಜಿಕ ನ್ಯಾಯ ಕೊಡಿಸುವದೂ ಆಗಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ವಿವಿಧ ಪದ್ಧತಿಗಳ ಮೂಲಕ ಕೆಲ ಸಮಾಜಗಳನ್ನು ಕಡೆಗಣಿಸಲಾಗಿತ್ತು. ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಥಾನಮಾನವಿದ್ದು ಅವಕಾಶದಿಂದ ವಂಚಿತರಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅಂದಾಗ ಮಾತ್ರ ಸಮಸಮಾಜ ನಿರ್ಮಿಸಲು ಸಾಧ್ಯ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿದರು.
ಉಪಾಧ್ಯಕ್ಷ ಎಚ್.ಜಿ.ನಾಗೋಡ ವಿಶೇಶ ಉಪನ್ಯಾಸ ನೀಡಿದರು.
ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾಯವಾದಿಗಳಾದ ಎಂ.ಎಚ್.ಕ್ವಾರಿ, ಎನ್.ಆರ್.ಮೊಕಾಶಿ, ಎಂ.ಬಿ.ಬಿರಾದಾರ, ಚೇತನ ಶಿವಶಿಂಪಿ ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ, ನ್ಯಾಯಾಲಯದ ಸಿಬ್ಬಂದಿಗಳಾದ ವಾಯ್.ಎಂ.ತಳವಾರ, ಸುರೇಶ ಬಳಗಾನೂರ, ಜ್ಯೋತಿ ಹಕಾರಿ, ಕಸ್ತೂರಿ ಇಂಚೂರ, ಪದ್ಮಾವತಿ ಗಾಯಕವಾಡ, ರೇಣುಕಾ ಜಾನಮಟ್ಟಿ, ಸುಮಿತ್ರಾ ಕುಂಬಾರ, ಶೃತಿ ಜಾಯಿ, ಮಂಜುಳಾ ಗಾಡದ, ಶೃತಿ ಕೌಲಗಿ, ಶುಶ್ಮಾ ಬಾಣಿ, ಮಂಜುಳಾ ಹೊಸಮನಿ, ನೀಲಮ್ಮ ಇರಕಲ್ಲ, ಮೀನಾಕ್ಷಿ ದೊಡಮನಿ, ಅಶೋಕ ದಿಂಡವಾರ, ಬಿ.ಎಂ.ಕಾಜಿ, ಗೀತಾ ರಾಂಪೂರ, ಬಸವರಾಜ ಹುಂಚಾಳ, ವಿಜಯ ಮಹಾಂತೇಶ ಶಿವಣಗಿ, ಆರ್.ಬಿ.ಕುಸ್ತಿ, ಶ್ರೀಕಾಂತ ಸಂಕೀನ, ಇಸಾಕ ಒಂಟಿ ಸೇರಿದಂತೆ ಇತರರು ಇದ್ದರು. ನ್ಯಾ.ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ಎಂ.ಎ.ಲಿಂಗಸೂರ ವಂದಿಸಿದರು.

