ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯ 71ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ .ಎಸ್.ಎಲ್.ಸಿ. ವಿದ್ಯಾಥಿ೯ಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
ಶಾಲೆಯ ಮುಖ್ಯಗುರುಗಳಾದ ಹೆಚ್.ಆರ್.ಬಗಲಿ ಅವರು ಶಾಲೆಯ ಮತ್ತು ವಿದ್ಯಾರ್ಥಿಗಳ ಸಾಧನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ವ್ಹಿ.ಜಿ.ಮುತ್ತಿನ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟ ಶಿಕ್ಷಣ ಪಡಿಯುತ್ತಾ ಇದ್ದಾರೆ.ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನ ಪಡಬೇಕು ಮತ್ತು ತಂದೆ ತಾಯಿ ಶಿಕ್ಷಕರು ಹೆಮ್ಮೆ ಪಡುವ ಹಾಗೆ ಜೀವನ ರೂಪಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಎಸ್.ಎಸ್.ಚೋರಗಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ, ಶ್ರಮಪಟ್ಟು ಓದಿದರೆ ಗೆಲುವು ಕಟ್ಟಿಟ್ಟ ಬುತ್ತಿ ಮತ್ತು ನಾವು ಯಾವಾಗಲೂ ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದ ಆಚರಣೆಗಳು ಆಚರಿಸಬೇಕು ಎಂದರು.
ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿ.ಎಸ್.ಗೀಡವಿರ, ಶಿಕ್ಷಕರಾದ ಎಸ್.ಆರ್. ಹಿಟ್ನಳೀ, ಟಿ.ಆರ್.ಕೋಳಿ, ಆರ್.ಆರ್.ಕೋಳಿ, ಪಿ.ಎಸ್.ತೋಟಗರ, ಎಸ್.ಜಿ.ಉಮರಾಣಿ, ಎಮ್.ಆಯ್.ಅಮರಖೇಡ, ಎಸ್.ಆಯ್.ಗಚ್ಚಿನಕಟ್ಟೀ, ಜೆ.ಪಿ.ಮುಲ್ಲಾ,ಎಮ್.ಜೆ.ಚಿಚೋಂಳಿ, ಎಮ್.ಬಿ.ಚವ್ಹಾಣ, ಎಸ್.ಆರ್.ಗವಣಿ, ವ್ಹಿ.ಎಸ್.ಕಲ್ಯಾಣಶೆಟ್ಟಿ ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಎ.ಎಸ್. ತಡಕಲ ನಿರೂಪಿಸಿದರು.

