Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾತೃಭಾಷೆ ಕಲಿಯುವ ಮೊದಲ ಭಾಷೆ. ಅದು ಪ್ರತಿಯೊಂದು ಸಂಸ್ಕೃತಿಯ ಮತ್ತು ಆತ್ಮವಿಶ್ವಾಸದ ಪ್ರತೀಕ. ಅದು ನಮ್ಮ ಕನಸನ್ನು ಅರಳಿಸುವ ಹೃದಯದ ಭಾಷೆಯಾಗಿದೆ. ಮಾತೃಭಾಷೆಯ ಉಳಿವಿಗೆ ಪ್ರತಿ ಕುಟುಂಬ ಶ್ರಮಿಸಬೇಕಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.ಮಾತೃಭಾಷೆ ಮನುಷ್ಯನ ಮೌಲ್ಯಗಳ ವಾಹಕ. ಅದುನಮ್ಮನ್ನು ರಾಷ್ಟ್ರೀಯತೆಯೊಂದಿಗೆ ಸಂಪರ್ಕಿಸಿ, ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತದೆ. ಮಾತೃಭಾಷೆ ಆತ್ಮದ ಧ್ವನಿಯಾಗಿದ್ದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಭಾಷಾ ವೈವಿಧ್ಯತೆಯನ್ನು ಉತ್ತೇಜಿಸಲು ಮಾತೃಭಾಷೆಯ ಸಂರಕ್ಷಣೆ ಬಹು ಅಗತ್ಯವಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ,ಮಗುವಿಗೆ ಯೋಚಿಸಲು, ಅರ್ಥಮಾಡಿಕೊಳ್ಳಲು ಮತ್ತು ತಿಳುವಳಿಕೆಯನ್ನು ನೀಡುವದೇ ಮಾತೃಭಾಷೆ. ಮಾತೃಭಾಷಾ ಶಿಕ್ಷಣವು ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆ, ಅರಿವಿನ ಬೆಳವಣಿಗೆ ಮತ್ತು ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತ್ರಿಪದಿಗಳ ಮೂಲಕ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನ ಸಾಮಾನ್ಯರನ್ನು ಎಚ್ಚರಿಸಿದ ಸರ್ವಜ್ಞ ಕವಿಯ ಅದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಡಿ.ಪಾಟೀಲ ಹೇಳಿದರು.ಅವರು ತಾಲೂಕಿನ ಮಲ್ಲಾಬಾದ ಗ್ರಾಮದ ಸಿದ್ಧಾರ್ಥ ಪ್ರೌಢ ಶಾಲೆಯಲ್ಲಿ ತ್ರಿಪದಿ ಬ್ರಹ್ಮ ಸರ್ವಜ್ಞ ಕವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವಜ್ಞ ಕವಿಯಲ್ಲಿರುವ ಅಪಾರ ಪಾಂಡಿತ್ಯ ಹಾಗೂ ಜ್ಞಾನ ಭಂಡಾರದಿಂದ ಜಗತ್ತಿಗೆ ಪರಿಚಯಿಸಿಕೊಂಡಿದ್ದಾನೆ. ಹೀಗಾಗಿ ಸರ್ವಜ್ಞ ಕವಿಯ ಸಾಹಿತ್ಯವನ್ನು ಎಂಥಹವರು ಕೂಡಾ ಓದಿ ಅರ್ಥೈಸಿಕೊಳ್ಳುವ ಜೊತೆಗೆ ಎಂದೆಂದಿಗೂ ಮಾರ್ಗದರ್ಶಿಯಾಗಿರಲಿದೆ ಎಂದ ಅವರು ವಿದ್ಯಾರ್ಥಿಗಳು ಕೂಡಾ ನಿರಂತರ ಓದಿನ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿಗಳು ಸಾಧಕ ಮಹಾನ್ ವ್ಯಕ್ತಿಗಳ ಚರಿತ್ರೆ ಹೇಳಿಕೊಡುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ.ಸಂಗಣ್ಣ ಎಂ.ಸಿಂಗೆ, ಸಿದ್ಧಾರ್ಥ ಪ್ರೌಢ ಶಾಲೆಯ ಮುಖ್ಯಗುರು ಸಿದ್ದರಾಮ ಪಾಟೀಲ ಸಿಬ್ಬಂದಿಗಳಾದ ಸಿದ್ದಯ್ಯ…
ಬರಗಾಲದಿಂದ ತತ್ತರಿಸಿರುವ ರೈತರ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ | ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ರೈತರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಪೂರೈಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರ ಸಿದಣ್ಣ ಬೆಂಜಿಗೇರಿ ಅವರ ಮೂಲಕ ಹುಬ್ಬಳ್ಳಿಯ ಹೆಸ್ಕಾಂ ಎಂ.ಡಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಇಂಧನ ಸಚಿವರಿಗೆ ಮನವಿ ಸಲ್ಲಿಸಿ ಬೇಸಿಗೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಬಿರು ಬಿಸಿನ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ ಈಗ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆ ಹಾಗೂ ಕಳಪೆಮಟ್ಟದ ವಿದ್ಯುತ್ ವಿತರಣೆಯಿಂದಾಗಿ ಅಡಚಣೆ ಉಂಟಾಗುತ್ತಿದೆ, ತೋಟದ ವಸ್ತಿಗಳಲ್ಲಿ ವಾಸಿಸುವ ರೈತರ ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬಂದಿರುವುದರಿಂದ ಅಭ್ಯಾಸ ಮಾಡುವುದಾದರು ಹೇಗೆ,…
ಉದಯರಶ್ಮಿ ದಿನಪತ್ರಿಕೆ ಚಡಚಣ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಕೇವಲ ಪಠ್ಯ ಪುಸ್ತಕಗಳು ಮಾಡಲಾರವು. ಅದರೊಟ್ಟಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಇದ್ದಾಗ ಮಾತ್ರ ಯಶಸ್ಸಿನ ಜೀವನದತ್ತ ಸಾಗಲು ಸಾಧ್ಯ ಎಂದು ಬಿಇಒ ಸುಜಾತಾ ಹುನ್ನೂರ ಹೇಳಿದರು.ಪಟ್ಟಣದ ಎಂಇಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಕ್ರೀಡಾಭ್ಯಾಸ ಶಿಕ್ಷಣದ ಅವಿಭಾಜ್ಯ ಅಂಗ. ಮಾನಸಿಕ ಮತ್ತು ದೈಹಿಕ, ಸಮತೋಲನ ಬೆಳವಣಿಗೆಗೆ ಅತ್ಯವಶ್ಯ ಎಂದರು.ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಪ್ರಭಾರಿ ಎನ್.ಎಂ.ಬಿರಾದಾರವರು ಮಾತನಾಡುತ್ತ. ಪುಸ್ತಕದ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿ. ದೈಹಿಕ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಪ್ರಗತಿಗೆ ಅನುಕೂಲ ಕಲ್ಪಿಸಲಿದೆ. ಕ್ರೀಡೆ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯ ಹೆಚ್ಚಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪಠ್ಯದ ಮಾಹಿತಿಯನ್ನು ಬೇಗನೆ ಗ್ರಹಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.ದೈಹಿಕ ಶಿಕ್ಷಣ ಶಿಕ್ಷಕ ಎಂ.ಕೆ.ಮಾನೆಯವರು ಮಾತನಾಡುತ್ತ. ಮಕ್ಕಳಲ್ಲಿ ಅದ್ಭುತವಾದ…
ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನೆ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪ್ರೇರಣೆಯಾಗುವಂತೆ ಆತ್ಮ ವಿಶ್ವಾಸ, ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ನಡೆಯಬೇಕು. ಸಂಸ್ಕಾರಯುತ ಬದುಕು ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ನೀಡುವುದು ಮುಖ್ಯವಾಗಿದೆ ಎಂದು ಕ್ಲಸ್ಟರ್ ೨೪ರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಬಿರಾದಾರ ಹೇಳಿದರು.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪಾರ್ಧಾ ಮನೋಭಾವನೆ ಮೂಡಲು ಸಾಧ್ಯ. ಮಕ್ಕಳು ಅಂಕಗಳಿಗೆ ಸೀಮಿತವಾಗದೇ, ಜ್ಞಾನ ವಿಕಾಸಗೊಳಿಸಬೇಕು. ಸಾಮಾಜಿಕ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.ಬಂಜಾರಾ ಪಿಯು ಕಾಲೇಜಿನ ಪ್ರಾಚಾರ್ಯರಾದ ಎಸ್.ಬಿ.ಪವಾರರವರು ಮಾತನಾಡುತ್ತ. ವಿದ್ಯಾರ್ಥಿಗಳು ನಿತ್ಯ ಪರಿಶ್ರಮ ಪಡಬೇಕು. ತಾಳ್ಮೆಯಿಂದ ವರ್ತಿಸಬೇಕು. ಆಶಾವಾದಿಗಳಾಗಿ ಬದುಕಬೇಕು. ಪಾಲಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು…
ದೇವರೇ ಬಂದರೂ ಬೆಂಗಳೂರಿನ ಟ್ರಾಫಿಕ್’ ಸಮಸ್ಯೆ ಸರಿಪಡಿಸಲು ಸಾಧ್ಯವಿಲ್ಲ ಎಂಬ ಡಿಸಿಎಂ ಹೇಳಿಕೆಗೆ ತೀವ್ರ ಖಂಡನೆ ಬೆಂಗಳೂರು: ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ದೇವರೂ ಬಂದರೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶುಕ್ರವಾರ ಆಗ್ರಹಿಸಿದೆ.ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಸ್ಯೆಗಳನ್ನು ನಿಭಾಯಿಸುವ ಸಮರ್ಥ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಒತ್ತಾಯಿಸಿದ್ದಾರೆ.ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ, “ನಾನು ಮಾಧ್ಯಮ ಸ್ನೇಹಿತರಿಗೆ ಮತ್ತು ಇತರರಿಗೆ ಹೇಳಲು ಬಯಸುತ್ತೇನೆ, ಸ್ವತಃ ದೇವರೇ ಮೇಲಿನಿಂದ ಇಳಿದು ಬಂದರೂ, ಮುಂದಿನ ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರನ್ನು(ಸರಿಪಡಿಸಲು) ಸಾಧ್ಯವಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಲು ನಾವು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಸಹಕಾರ ಮನೋಬಾವದಿಂದ ಆಡಳಿತ ನಡೆಸಿದರೆ ಗ್ರಾಮ ಪಟ್ಟಣಗಳ ಸಮಗ್ರ ಅಭಿವೃದ್ದಿ ಮಾಡಬಹುದು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮ ಅಧಿಕಾರ ಹಸ್ತಾಂತರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಮೂರು ವರ್ಷದಿಂದ ಚುನಾಯಿತ ಸದಸ್ಯರಾಗಿದ್ದರೂ ಅಧಿಕಾರವಿಲ್ಲದೆ ಜನರ ಸೇವೆ ಮಾಡಿರುವ ತಾವುಗಳು ಈಗ ಪೂರ್ಣಪ್ರಮಾಣದ ಅಧಿಕಾರವನ್ನು ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಸರಕಾರ ಕೊಟ್ಟಿದ್ದು ತಮ್ಮ ಅಧಿಕಾರ ಅವದಿಯಲ್ಲಿ ಪಟ್ಟಣದ ಸರ್ವಜನಾಂಗದ ಜನರ ಏಳ್ಗೇಗಾಗಿ ಶ್ರಮಿಸುತ್ತಾ ಬದಲಾವಣೆ ದಿಕ್ಕಿನತ್ತ ಸಾಗಲಿ ಎಂದು ಹಾರೈಸಿದರು.ಹಿರೇಮಠದ ಮುರುಘೇಂದ್ರ ಮಹಾಸ್ವಾಮಿಗಳು ವೇದಮಂತ್ರ ಪಠಣದೊಂದಿಗೆ ಪೂಜಾ ಕಾರ್ಯಕ್ರಮ ನಡೆಸಿ ನೂತನವಾಗಿ ಆಯ್ಕೇಯಾದ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಫಗೋಳ ಮತ್ತು ಉಪಾಧ್ಯಕ್ಷರಾದ ಶ್ರಿಮತಿ ರಾಜಮಾ ನಧಾಪ ಹಾಗೂ ಸರ್ವಸದಸ್ಯರ ಹೆಸರಿಗೆ ಕೊಲ್ಹಾರ ಪಟ್ಟಣಕ್ಕೆ ಅಂಟಿರುವ ಕಳಂಕ ದೂರಾಗಿ ರಾಜ್ಯದ ಮಾದರಿ ಪಟ್ಟಣವಾಗಿ ಪ್ರಗತಿಯ ಪಥದತ್ತ ಸಾಗಲಿ ಎಂದು ಸಂಕಲ್ಪ ಮಾಡಿದರು.ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೇಯಾದ ಚನಮಲ್ಲಪ್ಪ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದ ನಂತರ ಸರ್ವ ಸದಸ್ಯರ ಸಾಮಾನ್ಯ ಸಭೆಯು ಅಧ್ಯಕ್ಷ ಚನಮಲ್ಲಪ್ಪ ಶಿ ಗಿಡ್ಡಪ್ಪಗೋಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಥಮ ಬಾರಿಗೆ ಜರುಗಿತು.ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೊಲ್ಹಾರ ಪಟ್ಟಣದ ಅಭಿವೃದ್ದಿ ವಿಷಯವಾಗಿ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಗಂಬೀರವಾದ ಏನೇನೂ ಚರ್ಚೆ ನಡೆಯದಿದ್ದರೂ ಔಪಚಾರಿಕವಾಗಿ ಕೆಲವು ವಿಷಯಗಳ ಕುರಿತು ಸದಸ್ಯರು ಸಭೆಯಲ್ಲಿ ಮಾತನಾಡಿದರು.14 ನೇ ವಾರ್ಡಿನ ಸದಸ್ಯ ಬಾಬು ಭಜಂತ್ರಿ ಮಾತನಾಡಿ ನಾವುಗಳು ಜನರಿಂದ ಚುನಾಯಿತರಾಗಿ ಮೂರು ವರ್ಷಗತಿಸಿದರೂ ಅಧಿಕಾರ ಆಡಳಿತಾಧಿಕರಗಳ ಮೂಲಕ ನಡೆಯುವಂತಾಗಿರುವದರಿಂದನಮಗೆ ಪೂರ್ಣಪ್ರಮಾಣದ ಅಧಿಕಾರ ಇರಲಿಲ್ಲ ಆದರೆ ಈಗ ಚುನಾಯಿತ ಸದಸ್ಯರ ಕೈಗೆ ಆಡಳಿತ ಬಂದಿರುವದರಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾದ ನಾವು ಮೂವರು ಸದಸ್ಯರು ಪಟ್ಟಣದ ಅಭಿವೃದ್ದಿಗಾಗಿ ಸಹಮತವಿದೆ ವಾರ್ಡಗಳ ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷರು ತಾರತಮ್ಯ ಮಾಡದೆ ಸ್ವಾರ್ಥಬಿಟ್ಟು ನಿಸ್ವಾರ್ಥ ಸೇವೆ ಸಲ್ಲಿಸುವಂತಾಗಲಿ ಎಂದರು.15/16 ವಾರ್ಡಿನ ಸದಸ್ಯರಾದ ದಸ್ತಗೀರ ಕಲಾದಗಿ ಮತ್ತು ತೌಸೀಪ್ ಗಿರಗಾಂವಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿಲ್ಡ್ರನ್ಸ್ ಆಫ್ ಇಂಡಿಯಾ ಫೌಂಡೇಶನ್, ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರಕ್ಕಾಗಿ ಮಾಧ್ಯಮದವರೊಂದಿಗೆ ಜಾಗೃತಿ ಮತ್ತ ಸಂವಾದ ಕಾರ್ಯಕ್ರಮವನ್ನು ಫೆ.೨೪ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ ಜಿ. ಬೆಣ್ಣೂರ, ಅತಿಥಿಗಳಾಗಿ ಡಾ. ಬಾಬು ಸಜ್ಜನ, ಆಯ್.ಆರ್.ಡಿ., ಯಲ್ಲಪ್ಪ ಯರಕಲ್ ಸಿ.ಡಬ್ಲೂ.ಸಿ, ಭಾರತಿ ಪಾಟೀಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ., ಮೋಹನ ಕುಲಕರ್ಣಿ, ಕಾರ್ಯದರ್ಶಿಗಳು ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ, ಬಾಬು ಅವತಾಳ (ವಕೀಲರು), ಭಾಗವಹಿಸಲಿದ್ದಾರೆಂದು ಶಾಂತಾ ಬೆಲ್ಯಾಳ, ಸಿ.ಗುಡ್, ಪ್ರೊಜೆಕ್ಟರ್, ವಿಜಯಪುರ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಆಲಮೇಲ ಹಾಗೂ ಸಿಂದಗಿ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ, ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ ನೊಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.ಆಲಮೇಲ ತಾಲೂಕಿನ ಕುಳೇಕುಮಟಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಭೂಸ್ವಾಧೀನದ ರಸ್ತೆ ಸಮಸ್ಯೆ ಕುರಿತಾಗಿ ಸ್ಥಳ ಪರಿಶೀಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.ಆಲಮೇಲದಲ್ಲಿ ಇಂದಿರಾ ಕ್ಯಾಂಟಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಲಮೇಲದ ಆಡಳಿತ ಸೌಧ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಜಮೀನು ಸರ್ವೆ ನಂಬರ್ ೬೦೬/೩.೦೩ ಗುಂಟೆ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆ ವೀಕ್ಷಿಸಿದ ಅವರು,ಕೆರೆ ಅಭಿವೃದ್ಧಿಪಡಿಸುವುದಕ್ಕಾಗಿ…
