ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಿಲ್ಡ್ರನ್ಸ್ ಆಫ್ ಇಂಡಿಯಾ ಫೌಂಡೇಶನ್, ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರಕ್ಕಾಗಿ ಮಾಧ್ಯಮದವರೊಂದಿಗೆ ಜಾಗೃತಿ ಮತ್ತ ಸಂವಾದ ಕಾರ್ಯಕ್ರಮವನ್ನು ಫೆ.೨೪ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ ಜಿ. ಬೆಣ್ಣೂರ, ಅತಿಥಿಗಳಾಗಿ ಡಾ. ಬಾಬು ಸಜ್ಜನ, ಆಯ್.ಆರ್.ಡಿ., ಯಲ್ಲಪ್ಪ ಯರಕಲ್ ಸಿ.ಡಬ್ಲೂ.ಸಿ, ಭಾರತಿ ಪಾಟೀಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ., ಮೋಹನ ಕುಲಕರ್ಣಿ, ಕಾರ್ಯದರ್ಶಿಗಳು ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ, ಬಾಬು ಅವತಾಳ (ವಕೀಲರು), ಭಾಗವಹಿಸಲಿದ್ದಾರೆಂದು ಶಾಂತಾ ಬೆಲ್ಯಾಳ, ಸಿ.ಗುಡ್, ಪ್ರೊಜೆಕ್ಟರ್, ವಿಜಯಪುರ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
