Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ವಜ್ಞನ ತತ್ವಗಳು ಆದರ್ಶ ಬದುಕಿಗೆ ಸರ್ವಕಾಲಿಕ ಕನ್ನಡಿಯಾಗಿದೆ ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಚರಿಸಿದ ಸಂತ ಸರ್ವಜ್ಞ ಜಯಂತಿ ಆಚರಣೆ ವೇಳೆ ಅವರು ಮಾತನಾಡಿದರು.ಸರ್ವಜ್ಞನ ತ್ರಿಪದಿಗಳು ಸಂಕ್ಷಿಪ್ತವಾಗಿದ್ದರೂ ಅರ್ಥಗರ್ಭಿತವಾಗಿದೆ. ಅಲ್ಲದೆ ಎಲ್ಲರೂ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅನ್ವಯಿಸಿಕೊಳ್ಳುವ ಅವಶ್ಯಕತೆ ಇದೆ. ವಿದ್ಯೆಗೆ ಗರ್ವಪಡಬಾರದು. ವಿದ್ಯೆಯಲ್ಲಿ ಹೊಸತನ ಕಂಡಾಗ ಅನ್ವಯಿಸಿಕೊಳ್ಳುವ ಪ್ರವೃತ್ತಿ ರೂಢಿಸಿಕೊಳ್ಳ ಬೇಕಾಗಿದೆ ಎಂದರು.ಈ ವೇಳೆ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ಮಾತೆ ರಂಜಿತಾ ಭಟ್ಟ, ಪ್ರಾಥಮಿಕ ವಿಭಾಗದ ಮುಖ್ಯಗುರು ಮಾತೆ ಸರಸ್ವತಿ ಮಡಿವಾಳರ, ಶಿಕ್ಷಕರಾದ ಅನ್ನಪೂರ್ಣ ನಾಗರಾಳ, ಬಿ.ಟಿ.ಭಜಂತ್ರಿ, ಕಿರಣ ಕಡಿ, ಮಂಜುನಾಥ ಪಡದಾಳಿ, ಎನ್.ಡಿ.ಬಡಿಗೇರ, ಮೀನಾಕ್ಷೀ ಗಣಾಚಾರಿ, ಶಿವಶಂಕರಯ್ಯ ಮಠ, ಭಾಗ್ಯ ಸಿದ್ದಾಪೂರ, ಕೀರ್ತಿ ತಳಗೇರಿ, ತ್ರಿವೇಣಿ ಕುಲಕರ್ಣಿ, ದಾನಮ್ಮ ಮಡಿವಾಳರ್, ಅನ್ನಪೂರ್ಣ ಹೊಸಮನಿ, ರೂಪಾ ನಾಟೇಕರ್, ಶಾಹಿನ ನಾಲತವಾಡ, ನೀಲಮ್ಮ ಹಡಪದ, ವಿನಾಯಕ ನಾಗರಾಳ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಾರ್ಟ್ ಸರ್ಕೀಟ್ ನಿಂದಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಳವಾಡ ಏತ ನೀರಾವರಿ ಯೋಜನೆಯ ವಿಭಾಗ ಸಂಖ್ಯೆ -೪ ಕಚೇರಿಯ ಎರಡು ಕೋಣೆಗಳಿಗೆ ಬೆಂಕಿಬಿದ್ದ ಘಟನೆ ಶನಿವಾರ ಸಂಜೆ ಜರುಗಿದೆ.ಬೆಂಕಿ ಅವಘಡಕ್ಕೆ ಕಚೇರಿಯ ಎರಡೂ ಕೋಣೆಯಲ್ಲಿದ್ದ ಹಳೆ ಕಡತಗಳು, ಸ್ಟೇಷನರಿ ಸಾಮಗ್ರಿಗಳು, ೨೦ ಕ್ಕೂ ಕುರ್ಚಿಗಳು, ಟೈರ್ ಗಳೆಲ್ಲವೂ ಭಸ್ಮವಾಗಿವೆ.ಕಚೇರಿಯ ಹಿಂಭಾಗದ ಚಿಕ್ಕ ಸ್ಟೋರ್ ಕೋಣೆಗೆ ಬೆಂಕಿ ಬಿದ್ದ ಪರಿಣಾಮ, ಬೆಂಕಿಯ ಕೆನ್ನಾಲಿ ಪಕ್ಕದ ಕೋಣೆಗೂ ವ್ಯಾಪಿಸಿದೆ. ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ತಕ್ಷಣವೇ ಬೆಂಕಿ ನಂದಿಸಿದರು.ಸ್ಟೋರ್ ರೂಮ್ ಗೆ ಬೆಂಕಿ ಬಿದ್ದ ಪರಿಣಾಮ, ಹಳೆಯ ಕಡತಗಳು ಸುಟ್ಟಿವೆ, ಜತೆಗೆ ಸಾಮಗ್ರಿಗಳು ಭಸ್ಮವಾಗಿವೆ ಸಿಬ್ಬಂದಿಗಳೆಲ್ಲಾ ಹಾನಿಯ ನಿಖರ ಮಾಹಿತಿಯ ಪಟ್ಟಿ ಮಾಡುತ್ತಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮುಂಡಾಸ ತಿಳಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸಾರಂಗ ಮಠದ ಮುಂದಿನ ಉತ್ತರಾಧಿಕಾರಿಯಾಗಿಜಮಖಂಡಿ ತಾಲೂಕಿನ ಕೊಣ್ನೂರು ಗ್ರಾಮದ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ನೇಮಕಗೊಂಡಿದ್ದಾರೆ.ಪಟ್ಟಣದ ಸಾರಂಗಮಠದಲ್ಲಿ ಶ್ರೀ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನದ ಮೊದಲ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಫ್ಜಲಪೂರಿನ ಮಳೇಂದ್ರ ಶಿವಾಚಾರ್ಯರು ಈ ಘೋಷಣೆಯನ್ನು ಮಾಡಿದರು.ಈ ವೇಳೆ ಅವರು ಮಾತನಾಡಿ, ಸಿಂದಗಿ ಸಾರಂಗಮಠಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಗುರುಪರಂಪರೆಯ ಮಠವಾದ ಸಾರಂಗಮಠ ಜಾತಿಧರ್ಮವನ್ನು ಮಿರಿದ ಮಠಗಳಲ್ಲಿ ಒಂದಾಗಿದೆ. ಶಿಕ್ಷಣ, ಧರ್ಮ ಪ್ರಸಾರ, ಸಾಮಾಜಿಕ ಸೇವೆ, ಕೃಷಿ, ಆಧ್ಯಾತ್ಮವನ್ನು ನಿತ್ಯ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ಸೇವೆ ಮೆರೆಯುತ್ತಿದೆ. ಲಿಂ. ಪೂಜ್ಯ ಚನ್ನವೀರ ಸ್ವಾಮಿಗಳು ಮಠವನ್ನು ಬೆಳೆಸುವುದರ ಜೊತೆಗೆ ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಠವನ್ನು ಬೆಳೆಸುವುದು ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೋಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಜ್ಞಾನಿಗಳು, ವಿದ್ಯಾವಂತರು, ಧರ್ಮನಿಷ್ಠರು, ಶ್ರಮಜೀವಿಗಳು ಅಂತವರನ್ನು ಸಾರಂಗಮಠದ ೧೮ ನೇ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವ ಜೀವನ ಪರೋಕಾರದಿಂದಲೇ ನಡೆಯಬೇಕು. ಇಂತಹ ಪರೋಪಕಾರದ ಮನೋಭಾವ ಹೊಂದಿರುವ ಬಿರಾದಾರ ಕುಟುಂಬವು ಮುಕ್ತಿ ವಾಹನವನ್ನು ಸಮಾಜಕ್ಕೆ ಅರ್ಪಿಸಿ ಒಳಿತು ಮಾಡಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾಯರು ಹೇಳಿದರು.ಸಿಂದಗಿ ಪಟ್ಟಣದ ಆಶೀರ್ವಾದ ಗ್ರೂಪ್ ವತಿಯಿಂದ ದಿ.ರವಿಗೌಡ ಬಿರಾದಾರ ಆವರು ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ನೇರವಾಗಿ ಹಸ್ತಾಂತರಿಸಿ ಮಾತನಾಡಿದ ಶ್ರೀಗಳು, ನಗರ ಬೆಳೆಯುತ್ತಿದೆ. ನಗರದ ಎಲ್ಲ ವರ್ಗದ ಜನರ ಅಂತಿಮ ಸಂಸ್ಕಾರಕ್ಕೆ ಮುಕ್ತಿ ವಾಹನವನ್ನು ಒದಗಿಸುವ ಮೂಲಕ ತಮ್ಮ ಪರೋಪಕಾರವನ್ನು ಸಮಾಜಕ್ಕೆ ಬಿತ್ತರಿಸಿದ್ದಾರೆ. ಇವರ ಈ ಸಮಾಜ ಮುಖಿ ಕಾರ್ಯ ಸಮಾಜಕ್ಕೆ ಮಾದರಿ ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ವಿಶ್ರಾಂತ ಶಿಕ್ಷಕ ಸಿದ್ದಪ್ಪ ಮಾಸ್ತರ ಬಿರಾದಾರ, ದಿ.ರವಿ ಬಿರಾದಾರ ಪತ್ನಿ ಲಕ್ಷ್ಮಿ, ಪುತ್ರ ಅಭಿಷೇಕ, ಅದ್ವಿತ್, ನಾಗರತ್ನ ಮನಗೂಳಿ ಸೇರಿದಂತೆ ಬಿರಾದಾರ…

Read More

ಚಿಕ್ಕಪಡಸಲಗಿಯಲ್ಲಿ ತೋಂಟದ ಸಿದ್ದಲಿಂಗ ಸ್ವಾಮೀಜಿ ಜಯಂತಿ | ಭಾವೈಕ್ಯತಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳವರ ಮನಭಾವ ಈ ಯುಗದೊಳು ಭಾವೈಕ್ಯದ ಪುಷ್ಪಧಾರೆಯಲ್ಲಿ ಮಿಂದಿದೆ. ಸಾಮರಸ್ಯವೆಂಬ ಹೂ ತೋಟದ ಭಾವೈಕ್ಯತಾ ಪದರಿನ ಮೊನಚಿನಲ್ಲಿ ಸುಗಂಧ ಭರಿತ ಪರಿಮಳ ಬೀರಿವೆ. ಅವು ಎಂದೂ ಮರೆಯಲಾಗದ ಸವಿ ನೆನಪುಗಳ ಮಧುರ ಬಾಂಧವ್ಯ ತೋರಿವೆ ಎಂದು ಜಕನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ.ಮಾದುಲಿಂಗ ಮಹಾರಾಜರು ಬಣ್ಣಿಸಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 76 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಹಾಗೂ ಐದು, ಏಳು ಮತ್ತು ಹತ್ತನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸಿದ್ದಲಿಂಗ ಶ್ರೀಗಳು ನುಡಿ ಸಂಸ್ಕೃತಿಯ ಪರಿಪಾಲಕರಾಗಿದ್ದಾರೆ. ಅವರ ವಾಕ್ ಭಾಷಾ ಪ್ರಾವೀಣ್ಯತೆ ಅಪ್ರತಿಮ. ಪೂಜ್ಯರ ಚರಿತ್ರೆ ಪರಮ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಮರಗೂರದ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೪-೨೫ನೇಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಫೆ, ೨೪ ರಂದು ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲಾ ಕಬ್ಬು ನಮ್ಮ ಕಬ್ಬು ಕಟಾವು ಆದೇಶಪತ್ರಗಳನ್ವಯ ಕಟಾವು ಮಾಡಿ ಫೆ,೨೩ ರಂದು ರಾತ್ರಿ ೧೦-೦೦ ಘಂಟೆಯ ಒಳಗಾಗಿ ಕಾರ್ಖಾನೆಗೆ ಕಬ್ಬು ಪೂರೈಸಿ ಕಬ್ಬು ಪೂರೈಕೆಗಾಗಿ ಕಾರ್ಖಾನೆಯಿಂದ ಪಡೆದುಕೊಂಡ ಎಲ್ಲ ಕಬ್ಬು ಪಟಾವು ಆದೇಶ ಪತ್ರಗಳು ಫೆ, ೨೩ ರಂದು ರವಿವಾರ ರಾತ್ರಿ ೧೦-೦೦ ಗಂಟೆಯ ನಂತರ ರದ್ದುಗೊಳಿಸಲಾಗುತ್ತದೆ. ಅವಧಿಯ ನಂತರ ಕಟಾವುಗೊಳ್ಳದೇ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿಯಾಗಿರುವುದಿಲ್ಲ. ಪ್ರಸಕ್ತ ೨೦೨೪-೨೫ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಗೊಳಿಸಲು ಸಹಕಾರ ನೀಡಿದ ಸಮಸ್ತ ಶೇರುದಾರ ಸದಸ್ಯರಿಗೆ, ರೈತ ಬಾಂಧವರಿಗೆ ಕಬ್ಬು ಕಟಾವು ಅಲ್ಲದೆ ಕಬ್ಬು ಸಾಗಾಣಿಕೆ ಗುತ್ತಿಗೆದಾರರಿಗೆ ಕಾರ್ಖಾನೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಬಂಧುಗಳಿಗೆ ಆಡಳಿತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮುದಾಯದ ಆರೋಗ್ಯ ಪ್ರಗತಿಯಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶ, ಸ್ವಾಮಿ ವಿವೇಕಾನಂದ ಅಧ್ಯನಯ ಕೇಂದ್ರ ಹಾಗೂ ಯುವ ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ವಿಜಯಪುರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ರಾಜ್ಯ ಏಡ್ಸ ಪ್ರಿವೆನಷನ್ ಸೊಸೈಟಿ, ಬೆಂಗಳೂರು, ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರು ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೂಲಕ ಸಮಗ್ರ ಸಮಾಜದ ಅಭಿವೃದ್ಧಿಯನ್ನು ಒತ್ತಿಹೇಳಿದರು. ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಲಭ್ಯವಾಗಬೇಕು ಮತ್ತು ಸಮುದಾಯದ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಸೂಕ್ತ ಸೌಲಭ್ಯಗಳನ್ನು ಪಡೆಯಬೇಕು. ಆರೋಗ್ಯ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ ೬ ರಿಂದ ಮಾರ್ಚ್ ೮ರವರೆಗೆ “ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫” ಹಮ್ಮಿಕೊಳ್ಳಲಾಗಿದೆ.“ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫”ದ ಅಂಗವಾಗಿ ಕವಿ-ಕವಿಯತ್ರಿಯರಿಂದ ಮಹಿಳಾ ಕೇಂದ್ರಿತ ಕವನಗಳನ್ನು ಆಹ್ವಾನಿಸಲಾಗಿದೆ. ಬಂದ ಕವನಗಳಲ್ಲಿ ಅತ್ತುö್ಯತ್ತಮ ೩ ಕವನಗಳನ್ನು ಆಯ್ಕೆ ಮಾಡಿ, ರಚನೆ ಮಾಡಿದ ಕವಿಯತ್ರಿ/ಕವಿಗಳನ್ನು ಮಾರ್ಚ್ ೮, ೨೦೨೫ ರಂದು ಓದಲು ಅವಕಾಶ ನೀಡಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಆಸಕ್ತರು ದಿನಾಂಕ: ೨೫-೦೨-೨೦೨೫ರೊಳಗಾಗಿ ತಮ್ಮ ಕವನಗಳನ್ನು ಪ್ರೊ.ಲಕ್ಷಿö್ಮದೇವಿ ವೈ., ನಿರ್ದೇಶಕರು, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಜ್ಞಾನಶಕ್ತಿ ಆವರಣ, ತೊರವಿ, ಕ.ರಾ.ಅ.ಮ.ವಿವಿ, ವಿಜಯಪುರ-೫೮೬೧೦೮, ಮೊ.ಸಂ.೯೯೦೨೨೩೪೪೬೯ ಇವರಿಗೆ ತಲುಪುವಂತೆ ಹಾಗೂ ಸಾಫ್ಟ್ ಪ್ರತಿಯನ್ನು directorwscksawuv@gmail.comಗೆ ಕಳುಹಿಸಬಹುದಾಗಿದೆ. ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ಮತ್ತು ಸಂಭಾವನೆಯನ್ನು ನೀಡಲಾಗುವುದಿಲ್ಲ ಎಂದು…

Read More

ಚಡಚಣ ಪ.ಪಂ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ | ಬಹುಮತವಿದ್ದರೂ ಬಿಜೆಪಿಗೆ ದಕ್ಕದ ಉಪಾಧ್ಯಕ್ಷ ಸ್ಥಾನ | ಕಾಂಗ್ರೆಸ್ ನ ಇಲಾಹಿ ನದಾಫ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳೀಯ ಪ.ಪಂ ಗೆ ಶುಕ್ರವಾರ ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ವರ್ಡ್ ನಂ.15 ರ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಧೋತ್ರೆ ಅವರು ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.5 ರ ಕಾಂಗ್ರೆಸ್ ಸದಸ್ಯ ಇಲಾಹಿಸಾಬ ನದಾಫ ಅವರು ತಮ್ಮ ಪ್ರತಿಸ್ಪರ್ಧಿ ವಾರ್ಡ್ ನಂ.9 ರ ಬಿಜೆಪಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ಅವರನ್ನು ನಾಲ್ಕು ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಘೋಷಿಸಿದ್ದಾರೆ.ಕಳೆದ ವರ್ಷ(2023) ರ ಡಿಸೆಂಬರ ತಿಂಗಳಿನಲ್ಲಿ ಪ.ಪಂ ನ ಒಟ್ಟು 16 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ 8 ಜನ ಸದಸ್ಯರು, 4 ಜನ ಕಾಂಗ್ರೆಸ್ ಹಾಗೂ 4 ಜನ ಪಕ್ಷೇತರರು ಆಯ್ಕೆಯಾಗಿದ್ದರು.ಅಧ್ಯಕ್ಷ ಸ್ಥಾನವನ್ನು ಅನುಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ…

Read More

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಿಮೊಥೆರಪಿ ಕೇಂದ್ರ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್ ಕಿಮೊಥೆರಪಿಯನ್ನು ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ ಗುಂಡುರಾವ ಹೇಳಿದರು.ಶನಿವಾರ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಕಿಮೊಥೆರಪಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಈಗಾಗಲೇ ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿಗಳನ್ನು ಸ್ಥಾಪಿಸಲಾಗುತ್ತಿದೆ. ವಿಜಯಪುರದಲ್ಲಿ ಕಿಮೋಥೆರಪಿ ಕೇಂದ್ರದ ಸ್ಥಾಪನೆಯಿಂದ ವಿಜಯಪುರದಿಂದ ದೂರದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ, ದೂರದ ಪ್ರಯಾಣ ಬೆಳೆಸುವ ಬದಲಿಗೆ, ಕ್ಯಾನ್ಸರ್ ರೋಗಿಗಳು ಸ್ಥಳೀಯವಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿಯೇ ಎಲ್ಲ ಚಿಕಿತ್ಸೆ ಸೌಲಭ್ಯ ಒದಗಿಸುವುದರಿಂದ ಇದು ತುಂಬ ಅನುಕೂಲಕರವಾಗಲಿದೆ ಎಂದು ಹೇಳಿದರು.ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ೧೦ ಹಾಸಿಗೆಯುಳ್ಳ ಕಿಮೋಥೆರಪಿ ಡೇ ಕೇರ ಕೇಂದ್ರ ತೆರೆಯುವ ಮೂಲಕ…

Read More