ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರ್ವಜ್ಞನ ತತ್ವಗಳು ಆದರ್ಶ ಬದುಕಿಗೆ ಸರ್ವಕಾಲಿಕ ಕನ್ನಡಿಯಾಗಿದೆ ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಚರಿಸಿದ ಸಂತ ಸರ್ವಜ್ಞ ಜಯಂತಿ ಆಚರಣೆ ವೇಳೆ ಅವರು ಮಾತನಾಡಿದರು.
ಸರ್ವಜ್ಞನ ತ್ರಿಪದಿಗಳು ಸಂಕ್ಷಿಪ್ತವಾಗಿದ್ದರೂ ಅರ್ಥಗರ್ಭಿತವಾಗಿದೆ. ಅಲ್ಲದೆ ಎಲ್ಲರೂ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅನ್ವಯಿಸಿಕೊಳ್ಳುವ ಅವಶ್ಯಕತೆ ಇದೆ. ವಿದ್ಯೆಗೆ ಗರ್ವಪಡಬಾರದು. ವಿದ್ಯೆಯಲ್ಲಿ ಹೊಸತನ ಕಂಡಾಗ ಅನ್ವಯಿಸಿಕೊಳ್ಳುವ ಪ್ರವೃತ್ತಿ ರೂಢಿಸಿಕೊಳ್ಳ ಬೇಕಾಗಿದೆ ಎಂದರು.
ಈ ವೇಳೆ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ಮಾತೆ ರಂಜಿತಾ ಭಟ್ಟ, ಪ್ರಾಥಮಿಕ ವಿಭಾಗದ ಮುಖ್ಯಗುರು ಮಾತೆ ಸರಸ್ವತಿ ಮಡಿವಾಳರ, ಶಿಕ್ಷಕರಾದ ಅನ್ನಪೂರ್ಣ ನಾಗರಾಳ, ಬಿ.ಟಿ.ಭಜಂತ್ರಿ, ಕಿರಣ ಕಡಿ, ಮಂಜುನಾಥ ಪಡದಾಳಿ, ಎನ್.ಡಿ.ಬಡಿಗೇರ, ಮೀನಾಕ್ಷೀ ಗಣಾಚಾರಿ, ಶಿವಶಂಕರಯ್ಯ ಮಠ, ಭಾಗ್ಯ ಸಿದ್ದಾಪೂರ, ಕೀರ್ತಿ ತಳಗೇರಿ, ತ್ರಿವೇಣಿ ಕುಲಕರ್ಣಿ, ದಾನಮ್ಮ ಮಡಿವಾಳರ್, ಅನ್ನಪೂರ್ಣ ಹೊಸಮನಿ, ರೂಪಾ ನಾಟೇಕರ್, ಶಾಹಿನ ನಾಲತವಾಡ, ನೀಲಮ್ಮ ಹಡಪದ, ವಿನಾಯಕ ನಾಗರಾಳ ಸೇರಿದಂತೆ ಇತರರು ಇದ್ದರು.

