Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 09, 2026

ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ

ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭಾವೈಕ್ಯದ ಪುಷ್ಪಧಾರೆ ತೋಂಟದ ಸಿದ್ದಲಿಂಗ ಶ್ರೀ :ಡಾ.ಮಾದುಲಿಂಗ
(ರಾಜ್ಯ ) ಜಿಲ್ಲೆ

ಭಾವೈಕ್ಯದ ಪುಷ್ಪಧಾರೆ ತೋಂಟದ ಸಿದ್ದಲಿಂಗ ಶ್ರೀ :ಡಾ.ಮಾದುಲಿಂಗ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಕ್ಕಪಡಸಲಗಿಯಲ್ಲಿ ತೋಂಟದ ಸಿದ್ದಲಿಂಗ ಸ್ವಾಮೀಜಿ ಜಯಂತಿ | ಭಾವೈಕ್ಯತಾ ದಿನಾಚರಣೆ

ಉದಯರಶ್ಮಿ ದಿನಪತ್ರಿಕೆ

ಚಿಕ್ಕಪಡಸಲಗಿ: ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳವರ ಮನಭಾವ ಈ ಯುಗದೊಳು ಭಾವೈಕ್ಯದ ಪುಷ್ಪಧಾರೆಯಲ್ಲಿ ಮಿಂದಿದೆ. ಸಾಮರಸ್ಯವೆಂಬ ಹೂ ತೋಟದ ಭಾವೈಕ್ಯತಾ ಪದರಿನ ಮೊನಚಿನಲ್ಲಿ ಸುಗಂಧ ಭರಿತ ಪರಿಮಳ ಬೀರಿವೆ. ಅವು ಎಂದೂ ಮರೆಯಲಾಗದ ಸವಿ ನೆನಪುಗಳ ಮಧುರ ಬಾಂಧವ್ಯ ತೋರಿವೆ ಎಂದು ಜಕನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ.ಮಾದುಲಿಂಗ ಮಹಾರಾಜರು ಬಣ್ಣಿಸಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 76 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಹಾಗೂ ಐದು, ಏಳು ಮತ್ತು ಹತ್ತನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಿದ್ದಲಿಂಗ ಶ್ರೀಗಳು ನುಡಿ ಸಂಸ್ಕೃತಿಯ ಪರಿಪಾಲಕರಾಗಿದ್ದಾರೆ. ಅವರ ವಾಕ್ ಭಾಷಾ ಪ್ರಾವೀಣ್ಯತೆ ಅಪ್ರತಿಮ. ಪೂಜ್ಯರ ಚರಿತ್ರೆ ಪರಮ ಪವಿತ್ರ. ಮಾತೃ ಹೃದಯ ಭಾವಾಂತರಂಗ ನಿಷ್ಕಲ್ಮಶ. ಕರುಣರಸದ ಉತ್ತುಂಗದ ಮೌಲ್ಯ ಪ್ರತಿಪಾದಿಸಿವೆ. ಜಾತಿ, ಮತ, ಪಂಥದ ಗರಿಯೇ ಇಲ್ಲ ಎಂಬುದಕ್ಕೆ ಜನಸಾಮಾನ್ಯರ ಸ್ವಾಮೀಜಿ ತೋಂಟದ ಸಿದ್ದಲಿಂಗ ಶ್ರೀಗಳ ತತ್ವಾದರ್ಶಗಳು ಸಾಕ್ಷಿಯಾಗಿವೆ. ಪೂಜ್ಯರ ಬದುಕೇ ಭಾವೈಕ್ಯತಾ ಸಂಕೇತದ ಪ್ರತೀಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಮಖಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ, ತೋಂಟದ ಸಿದ್ದಲಿಂಗ ಶ್ರೀಗಳು ಇಲ್ಲಿ ಮಕ್ಕಳು ಬದುಕಿನ ಮೌಲ್ಯ ಕಟ್ಟಿಕೊಳ್ಳಲು ಸಂಸ್ಥೆ ತೆರೆದಿದ್ದಾರೆ. ಮಕ್ಕಳ ಶಿಕ್ಷಣದ ಅಂತಃಕರಣಕ್ಕೆ ಮುನ್ನುಡಿ ಬರೆದಿದ್ದಾರೆ. ಶ್ರೀಗಳು ಶಿಕ್ಷಣ ಸಂಸ್ಕೃತಿ ಮೇಲೆ ತೋರಿದ ಕಳಕಳಿ ಇಲ್ಲಿನ ಮಕ್ಕಳು ಸಾರ್ಥಕ ಪಡಿಸಿಕೊಂಡು ಜೀವನದ ದಾರಿಯಲ್ಲಿ ಯಶಸ್ಸು ಕಾಣಬೇಕು. ಜೀವನವೆಂಬುದು ನಿತ್ಯ ಪಥದ ಹೋಮ್ ವಕ್೯ ಇದ್ದಂತೆ. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು. ರಾತ್ರಿ ಬೇಗನೆ ಮಲಗಿ ಬೆಳಗಿನ ಜಾವ ಬೇಗನೆ ಎದ್ದೇಳಬೇಕು. ನಿಯಮಗಳ ಆಳವಡಿಕೆಗಳಿಲ್ಲದಿದ್ದರೆ ಏನು ಕಲಿಯಲಾಗದು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಾಲ ಸನ್ನಿಹಿತವಾಗಿದೆ. ವ್ಯರ್ಥವಾಗಿ ಕಾಲಹರಣ ಮಾಡದೇ ಸರಿಯಾದ ಅಭ್ಯಾಸಗೊಂದಿಗೆ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ಸಾಧನೆವೆಂಬ ಜ್ಞಾನ ಹಿತಕ್ಕೆ ಸ್ವಯಂ ಪ್ರೇರಿತ ಶಕ್ತಿ ಮಹತ್ವದ್ದಾಗಿದೆ.ಅದು ಕಾರ್ಯ ರೂಪಕ್ಕೆ ತರುವ ಅನುಷ್ಠಾನದ ಇಚ್ಚಾಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಬಿಇಒ ಅಶೋಕ ಬಸಣ್ಣವರ ಹಾಗೂ ತಾಲೂಕಿನ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಂಗಮೇಶ ಬಿಜಾಪೂರ ಅವರನ್ನು ಸಂಸ್ಥೆ, ಶಾಲೆ ಪರವಾಗಿ ಶಾಲುಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಗ್ರಾಮ ಸಹಾಯಕ ಬುಡೆಸಾಬ ಗೆಣ್ಣೂರ, ಚಿಕ್ಕಪಡಸಲಗಿ ಎಂ.ಎಂ.ಐಟಿಐ ಕಾಲೇಜಿನ ಪ್ರಾಂಶುಪಾಲ ರಾಯಪ್ಪ ಸಣಮನಿ, ನಾಗನೂರ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಭೀಮು ಬಡಿಗೇರ, ಆಲಗೂರ ತೋಟದ ಸರಕಾರಿ ಎಚ್.ಪಿ.ಎಸ್. ಶಾಲೆ ಮುಖ್ಯ ಶಿಕ್ಷಕ ಬಾಹುಬಲಿ ಬೀಳಗಿ, ಕವಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅನಿತಾ ಗೋರಕಲ್, ಆಲಗೂರ ಶಾಂತಿನಾಥ ಎಚ್.ಪಿ.ಎಸ್.ಶಾಲೆ ಮುಖ್ಯ ಶಿಕ್ಷಕಿ ಚೌಗಲಾ, ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎಸ್.ಅರಬಳ್ಳಿ, ಜಿ.ಎಸ್.ಬಾಳೆಕುಂದ್ರಿ ಆಂಗ್ಲ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಲಾ ಕಲ್ಯಾಣಿ ಮತ್ತಿತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಜೆಟಿವಿಪಿ ಶಿಕ್ಷಣ ಅಂಗ ಸಂಸ್ಥೆಗಳ ಐದು, ಏಳು ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬೀಳ್ಕೊಡಲಾಯಿತು.
ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಪ್ಪಭಾರಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಅವರ ಉಸ್ತುವಾರಿಯಲ್ಲಿ ನಡೆದ ಸಮಾರಂಭದಲ್ಲಿ ಹಣಮಂತ ಗದಿಗೆಪ್ಪಗೋಳ, ಸುರೇಶ ಸಂತಿ, ಲೋಹಿತ ಮಿಜಿ೯, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಕುಮಾರ ವಾಣಿ, ಸದಾಶಿವ ಹೊಸಮನಿ, ಸದಾಶಿವ ಬೋದ್ಲಿ, ಮಲ್ಲಯ್ಯ ಮಠಪತಿ, ಸಹನಾ ಹತ್ತಳ್ಳಿ (ಕಲ್ಯಾಣಿ), ಶೃತಿ ಲಿಗಾಡೆ, ಶೋಭಾ ಹಿರೇಮಠ, ಸುನಂದಾ ಬಬಲಾದಿಮಠ, ಭಾಗ್ಯಶ್ರೀ ವಿಭೂತಿಮಠ, ಚಂಪಾ ದಯಗೊಂಡ,ರೇಶ್ಮಾ ಕನಾಳ, ರೇಣುಕಾ ಲಾಳಸಂಗಿ, ಅಶ್ವಿನಿ ಕಲ್ಯಾಣಿ, ಪೂಜಾ ಜಾಡರ, ಶಾಂತಾ ರೋಣಿಹಾಳ, ಲಕ್ಕವ್ವ ಸನದಿ, ಮಾಲಾ ಯಣಗಾಯಿ, ಶಾಯಿನ್ ಗೆಣ್ಣೂರ, ಕಸ್ತೂರಿ ಪಟ್ಚಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 09, 2026

ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ

ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ

ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಎಚ್‌ವ್ಹಿಪಿ ಲಸಿಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 09, 2026
    In ದಿನಪತ್ರಿಕೆ
  • ಮಾಧ್ಯಮ ಕಾರ್ಯದರ್ಶಿಗಳಿಗೆಕೆಯುಡಬ್ಲ್ಯೂಜೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಎಸ್ಐಆರ್ ಫಾರಂ ವಿತರಣೆ
    In (ರಾಜ್ಯ ) ಜಿಲ್ಲೆ
  • ಸರ್ವಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಎಚ್‌ವ್ಹಿಪಿ ಲಸಿಕೆ
    In (ರಾಜ್ಯ ) ಜಿಲ್ಲೆ
  • ಮೃತ ಲಕ್ಷ್ಮಣಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ :ಸಾಂತ್ವನ
    In (ರಾಜ್ಯ ) ಜಿಲ್ಲೆ
  • ಹಾಡಿಗಳಲ್ಲಿ ಕಬ್ಬಿಣದ ಕಡಲೆಯಾದ ಎಸ್ಐಆರ್ ಪ್ರಕ್ರಿಯೆ
    In (ರಾಜ್ಯ ) ಜಿಲ್ಲೆ
  • ಮಂದಗತಿಯಲ್ಲಿ ನಡೆದ ಲೋಕಾ ತನಿಖೆ :ಚರ್ಚೆಗೆ ಗ್ರಾಸ
    In (ರಾಜ್ಯ ) ಜಿಲ್ಲೆ
  • ಕೆರೆಯ ಪಕ್ಕದಲ್ಲೇ ಬಾವಿಗಳನ್ನು ತೋಡಿ ಬೇರೆಡೆಗೆ ನೀರು ಸರಬರಾಜು
    In (ರಾಜ್ಯ ) ಜಿಲ್ಲೆ
  • ಎಸ್ ಐಆರ್ ಗೆ ರಾಜಕೀಯ ಪಕ್ಷಗಳು ಸಹಕರಿಸಬೇಕು
    In (ರಾಜ್ಯ ) ಜಿಲ್ಲೆ
  • ಭ್ರೂಣಲಿಂಗ ಪತ್ತೆ: ನಿರ್ದಾಕ್ಷಿಣ್ಯ ಕ್ರಮಕ್ಕೆ ಡಿಸಿ ಡಾ.ಆನಂದ್ ಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.