Author: editor.udayarashmi@gmail.com

ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ |ನಾಯಕತ್ವ ಮತ್ತು ಸಂಘಟನಾ ಸಾಮರ್ಥ್ಯದ ಆಧಾರದ ಮೇಲೆ ಸ್ಥಾನ ನಿರ್ಧಾರ | ಹುದ್ದೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಅನಗತ್ಯ ಬೆಂಗಳೂರು: ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಾವು ಯಾವುದೇ ಹುದ್ದೆದೆ ಅಂಟಿಕೊಂಡು ಕೂತಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಹೊಸ ರಾಜ್ಯಾಧ್ಯಕ್ಷರ ಬೇಡಿಕೆಯ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, “ನಾನು ಯಾವುದೇ ಹುದ್ದೆಗೆ ಅಂಟಿಕೊಂಡು ಕೂತಿಲ್ಲ . ನಮ್ಮ ಪಕ್ಷದಲ್ಲಿ ಅವರ ನಾಯಕತ್ವ ಮತ್ತು ಸಂಘಟನಾ ಸಾಮರ್ಥ್ಯದ ಆಧಾರದ ಮೇಲೆ ಸ್ಥಾನಗಳನ್ನು ನೀಡಲಾಗುತ್ತದೆ. ನಾನು ಇತರ ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ. ಹುದ್ದೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚಿಸಬೇಕಾಗಿಲ್ಲ” ಎಂದರು.”ಪಕ್ಷವು ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಕರ್ನಾಟಕದವರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿದೆ” ಎಂದರು. ಏತನ್ಮಧ್ಯೆ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು…

Read More

ಓರ್ವನ ಕಾಲಿಗೆ ಗುಂಡು | ಗಾಯಾಳು ವಶಕ್ಕೆ | ಮೂವರು ಪರಾರಿ | ನಗರವಾಸಿಗಳಲ್ಲಿ ಮುಂದುವರೆದ ಆತಂಕ | ಪೊಲೀಸರ ಸಾಹಸಕ್ಕೆ ನಾಗರಿಕರ ಪ್ರಶಂಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಪೊಲೀಸರ ಗುಂಡಿನ ಮೊರೆತ ಕೇಳಿದೆ. ಕಳೆದ ಐದು ದಿನಗಳಿಂದ ಜಿಲ್ಲೆಯ ಜನರ‌ ನಿದ್ದೆಗೆಡಿಸಿದ್ದ ಡಕಾಯಿತರ ಗ್ಯಾಂಗ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಓರ್ವ ದುರುಳನ ಕಾಲಿಗೆ ಗುಂಡು ತಗುಲಿ ಆಸ್ಪತ್ರೆ ಪಾಲಾಗಿದ್ದು, ಇನ್ನು ಮೂವರು ಪರಾರಿಯಾಗಿದ್ದಾರೆ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ದರೋಡೆಕೋರರ ತಂಡ ಪ್ರತಿದಿನ ಒಂದೊಂದು ಪ್ರದೇಶದಲ್ಲಿ ದಾಳಿ ಮಾಡಿ ಚಿನ್ನಾಭರಣ ದೋಚುತ್ತಿತ್ತು.‌‌ ವಿಜಯಪುರ ಪೊಲೀಸರಿಗೆ ಸವಾಲಾಗಿದ್ದ, ಈ ಗ್ಯಾಂಗ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡಿನ ದಾಳಿ ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಿಜಯಪುರ ನಗರದ ಟೋಲ ನಾಕಾ ಬಳಿ ಬೆಳಗಿನ ಜಾವ 3 ಗಂಟೆಗೆ ಪರಾರಿಯಾಗುತ್ತಿದ್ದ…

Read More

ಲೇಖನ- ಪ್ರೊ ಶಾರದಾ ಪಾಟೀಲ ಬದಾಮಿ ಉದಯರಶ್ಮಿ ದಿನಪತ್ರಿಕೆ ಬಸವ ಭಕ್ತರು ಮೂರ್ತಿ ಪೂಜೆ ವಿರೋಧಿಗಳು, ಭಕ್ತನು ತನ್ನೊಳಗಿನ ಜಂಗಮ ಚೈತನ್ಯವನ್ನೇ ದೈವೀ ಸಾಕ್ಷಿ ಪ್ರಜ್ಞೆ ಮಾಡಿಕೊಂಡರು. ಶರಣರು ಚಲನಶೀಲತೆಯುಳ್ಳ ಸಕಲ ಜೀವಿಗಳನ್ನು ದೇವರೆಂದು ಕರೆದರು.ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾಗದು.ಭಕ್ತ ಅಷ್ಟಾವರಣ ಸಂಪನ್ನನಾಗಿ ಪಂಚಾಚಾರ ಆಚರಿಸಿ ಷಟಸ್ಥಲ ಮಾರ್ಗದ ಉನ್ನತ ಸ್ಥಾನವನ್ನು ಪಡೆದು ಮತ್ತೆ ಸ್ಥಾವರ ದೈವಕ್ಕೆರಗಲಾಗದು ಅದು ಲಿಂಗ ದ್ರೋಹ ಜಂಗಮ ದ್ರೋಹ. ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕಸ್ಥಾವರದೈವಕ್ಕೆರಗಲಾಗದು.ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇಕರಸ್ಥಲದ ದೇವನಿದ್ದಂತೆಧರೆಯ ಮೇಲಣ ಪ್ರತಿಷ್ಠೆಗೆರಗಿದಡೆನರಕದಲ್ಲಿಕ್ಕುವ ಕೂಡಲಸಂಗಮದೇವ. – 1/962 ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.ಅದಂತಿರಲಿ,ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.ಮೈಲಾರನೇ ದೇವರೆಂದಾರಾಧಿಸಿದಾತನುಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.ಭೈರವನೇ ದೇವರೆಂದಾರಾಧಿಸಿದಾತನುಕೊರಳಲ್ಲಿ ಕವಡೆಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ಜಿಲ್ಲೆಯ ೨೦೨೪-೨೭ ರ ಅವಧಿಗೆ ನೂತನ ಅಧ್ಯಕ್ಷರಾಗಿ ಅತಾವುಲ್ಲಾ ದ್ರಾಕ್ಷಿ, ಉಪಾಧ್ಯಕ್ಷರಾಗಿ ಸಮೀರ್ ಹುಣಸಗಿ ಮತ್ತು ನಾಜಿಯಾ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಸಾರ್ ಅಹ್ಮದ್ ಮನಿಯಾರ್ ಮತ್ತು ಮೆಹಬೂಬ್ ಕೋಲಾರ್, ಕಾರ್ಯದರ್ಶಿಯಾಗಿ ಅಡ್ವೋಕೇಟ್ ಸಮೀಉಲ್ಲಾ ಬಡೇಘರ್, ಕೋಶಾಧಿಕಾರಿಯಾಗಿ ಇಸಾಕ್ ಸಯ್ಯದ್ ಹಾಗೂ ಸಮಿತಿ ಸದಸ್ಯರುಗಳಾಗಿ ಅಡ್ವೋಕೇಟ್ ಗೌಸ್ ಜಕಾತಿ, ಎಜಾಜ್ ಮನಿಯಾರ್, ಮುನಾಫ್ ಪಠಾಣ, ಸೈಫನ್ ಮುಲ್ಲಾ, ಉಮರಖಾನ್ ಪಠಾಣ್, ಯಾಸಿರ್ ಇನಾಮದಾರ್, ನಾಮನಿರ್ದೇಶಿತ ಸದಸ್ಯರಾಗಿ ಉಮರ್ ಪುಣೇಕರ್ ರವರು ಆಯ್ಕೆಯಾಗಿದ್ದಾರೆ.ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು, ಎಸ್‌ಡಿ ಪಿಐ ರಾಜ್ಯ ಕಾರ್ಯದರ್ಶಿಯಾದ ರಂಜಾನ್ ಕಡಿವಾಳ್‌ರವರು ನಡೆಸಿಕೊಟ್ಟರು.ಜಿಲ್ಲಾ ಪ್ರತಿನಿಧಿ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆರವರು ಉದ್ಘಾಟಿಸಿ ಮಾತನಾಡಿ, ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದ್ದ ಬಂದೂಕು ತರಬೇತಿಗೆ ಸಂಬಂಧಿಸಿದಂತೆ ಕೇವಲ ೨೭ ಜನರ ವಿರುದ್ಧ ಕೇಸ್ ದಾಖಲಿಸಿ ಕೈ ತೊಳೆದುಕೊಂಡಿರುವ ಸರಕಾರ ಯಾಕೆ ಈ ಪ್ರಕರಣವನ್ನು ಸಿಓಡಿ ತನಿಖೆ…

Read More

ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಅಥಣಿ: ಪರಿಪಕ್ವತೆಯ ಕಾಯಕ ತತ್ವದ ಪರಿಪಾಲಕರಾಗಿರುವ ಪ್ರೊ.ಶಿವಾನಂದ ಪಟ್ಟಣಶೆಟ್ಟರು ಶಿಕ್ಷಣ ರಂಗದಲ್ಲಿ ಅಭೂತಮಯ ಸಾಧನೆ ಗೈದಿದ್ದಾರೆ. ಅವರ ಶೈಕ್ಷಣಿಕ ಪ್ರೀತಿ,ಸಾಮಾಜಿಕ ಕಳಕಳಿ ಆದರ್ಶನೀಯವಾಗಿದೆ. ಇದನ್ನು ಗುರುತಿಸಿ ಅಥಣಿ ಮೋಟಗಿಮಠದವರು ಪಟ್ಟಣಶೆಟ್ಟರ ಅವರಿಗೆ ಸಮಾಜಸೇವಾ ಭೂಷಣ ಪ್ರಶಸ್ತಿ ಕೊಡಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.ಈಚೆಗೆ ಅಥಣಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ಸಮಾಜೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ತೋಂಟದ ಡಾ. ಸಿದ್ದರಾಮ ಪೂಜ್ಯರು, ಕಾಯಕ ಜೀವ ಶಿವಾನಂದ ಪಟ್ಟಣಶೆಟ್ಟರು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಭದ್ರಬೂನಾದಿಯನ್ನು ಹಾಕಿ ಇಂದು ಉಚ್ಚಾಯ ಮಟ್ಟಕ್ಕೆ ತಂದಿದ್ದಾರೆ. ಹಗಲಿರುಳು ಕಾಯಕ ತಪೋಭವದ ತತ್ಪರತೆಯಲ್ಲಿ ಸವೆದು ತೋಂಟದಾರ್ಯ ಮಠ ಸೇರಿದಂತೆ ಸಂಸ್ಥೆಯಡಿಯಲ್ಲಿನ ಎಲ್ಲಾ ಶಾಲಾ,ಕಾಲೇಜುಗಳನ್ನು ಹೆಮ್ಮರವಾಗಿ ಅಭಿವೃದ್ಧಿಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ವಿಸ್ತಾರವಾಗಿ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.ಆ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಆ ಮನೆಯ ಯಜಮಾನ ದಿನದ ಮೂರು ಹೊತ್ತು ಅನ್ನವನ್ನು ಉಣ್ಣುತ್ತಾನೆ. ಆದರೆ ಆತನದು ಜೋರಾಗಿ ಗಾಳಿ ಬಿಟ್ಟರೆ ಹಾರಿ ಹೋಗುವಷ್ಟು ಸಣಕಲು ಮೈಕಟ್ಟು. ಹಾಗಾದರೆ ಅನ್ನ ತಿಂದರೆ/ಉಂಡರೆ ಮೈ ಬರುವುದಿಲ್ಲವೇ!?ಇನ್ನೊಂದು ಮನೆಯಲ್ಲಿ ಒಂದು ಚೂರು ಸಿಹಿಯನ್ನು ಬಾಯಿಗೆ ಹಾಕದ, ಸಕ್ಕರೆಯನ್ನು ತಿನ್ನದ, ಕೇವಲ ಚಪಾತಿ, ರೊಟ್ಟಿ, ತರಕಾರಿ, ಹಣ್ಣುಗಳನ್ನು ಸೇವಿಸುವ ಆ ಮನೆಯ ಪ್ರತಿಯೊಬ್ಬ ಸದಸ್ಯರು ತುಸು ಸ್ಥೂಲಕಾಯರೇ?ಮತ್ತೊಂದೆಡೆ ಇನ್ನೊಬ್ಬ ವ್ಯಕ್ತಿ ಏನೆಲ್ಲವನ್ನು ತಿಂದು ಉಂಡು ಅರಗಿಸಿಕೊಂಡರೂ ಆತನದ್ದು ಕೃಶ ಶರೀರ. ಹಾಗಾದರೆ ಆತನ ಬೊಜ್ಜು ಹೋಯಿತೆಲ್ಲಿಗೆ ??ಮತ್ತೂ ಕೆಲವು ಜನ ಅದೆಷ್ಟೇ ವಿವಿಧ ಬಗೆಯ ಡಯಟ್ಗಳನ್ನು ಪಾಲಿಸಿದರೂ ಆ ಸಮಯಕ್ಕೆ ಇಳಿಯುವ ತೂಕ ಕೆಲವೇ ತಿಂಗಳುಗಳಲ್ಲಿ ‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲಿ’ ಎಂಬಂತೆ ಮತ್ತೆ ಮತ್ತೆ ಕಾಡುತ್ತದೆ. ಹಾಗಾದರೆ ಅವರ ಡಯೆಟ್ ಸುಳ್ಳೇ!?ಪ್ರತಿ ಆರು ತಿಂಗಳು, ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಅವರು ಕೊಡುವ ಆಹಾರವನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಸ್ಪ್ರಿಂಕ್ಲರ್ ಪೈಪ್‌ಗಳ ಗುಣಮಟ್ಟದಲ್ಲಿ ಸಂಪೂರ್ಣ ವಿಫಲವಾಗಿದ್ದು ಕಳಪೆ ಆಗಿವೆ ಎಂದು ಸಿಪೆಟ್‌ದಿಂದ ವರದಿ ಬಂದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿದ ಕಂಪನಿಯವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಇದನ್ನು ಗಮನಿಸಿದರೆ ಕಂಪನಿಯವರೊಂದಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಿಲಾಪೆ ಆಗಿದ್ದಾರೆಂದು ಸ್ಪಷ್ಟವಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಆರೋಪಿಸಿದ್ದಾರೆ.ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨ ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿದ್ದು. ಹೋರಾಟವನ್ನು ಗಮನಿಸಿದ ಕೃಷಿ ಇಲಾಖೆಯ ಆಯುಕ್ತರು ಸ್ಪ್ಪಿಂಕ್ಲರ್ ಪೈಪ್‌ಗಳನ್ನು ತಪಾಸಣೆಗೆ ಕಳುಹಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು…

Read More

ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಕುರಿತು ಒಪ್ಪಂದ | ಸಿದ್ದರಾಮಯ್ಯ ರಾಜಕೀಯ ಜೀವನದ ಸಂಧ್ಯಾಕಾಲ ಸನ್ನಿಹಿತ? | ಮೂಲಗಳ ಮಾಹಿತಿ ಬೆಂಗಳೂರು: ರಾಜ್ಯದಲ್ಲಿ ಸುಗಮ ಅಧಿಕಾರ ವರ್ಗಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್ ತನ್ನ ಕಸರತ್ತು ಆರಂಭಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಲ್ಲಾ ಸಲಹೆಗಳನ್ನು ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.ಸಿದ್ದರಾಮಯ್ಯ ಅವರು ತಮ್ಮ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅವರ ನಿಷ್ಠಾವಂತ, ಆಪ್ತ ಬೆಂಬಲಿಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ, ಪಕ್ಷದ ಹೈಕಮಾಂಡ್ ಯಾವುದೇ ಕಾಂಗ್ರೆಸ್ ನಾಯಕನಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಹೈಕಮಾಂಡ್ ಮಟ್ಟದಲ್ಲಿ, ಅಧಿಕಾರ ಹಂಚಿಕೆಯ ಕುರಿತು ಒಪ್ಪಂದವಾಗಿತ್ತು, ಅದಕ್ಕೆ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸೋಮವಾರ ನಡೆದ ಕೆಪಿಸಿಸಿ ಸಾಮಾನ್ಯ ಸಭೆಯಲ್ಲಿ, ಸಿದ್ದರಾಮಯ್ಯ ಗಾಂಧಿ ಕುಟುಂಬದ ತ್ಯಾಗದ ಬಗ್ಗೆ ಮಾತನಾಡಿದರು. ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತ್ಯಾಗ ಮಾಡಿದ್ದಾರೆ , ಹೀಗಾಗಿ…

Read More

ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ದಿಂದ ನಗರ ಮತಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗುತ್ತಿದೆ.ಇದೇ ಜನವರಿ 18 ರ ಶನಿವಾರ ಬೆಳಿಗ್ಗೆ 8.30 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ, ನಗರ ಶಾಸಕರು ಮಕ್ಕಳಿಗೆ ವಿಮೆ ಪ್ರಮಾಣ ಪತ್ರ ವಿತರಿಸುವರು.ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರ ವಲಯದ 7 ಪ್ರೌಢ ಶಾಲೆಗಳು ಹಾಗೂ 119 ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 14,331 ಮಕ್ಕಳು ಹಾಗೂ ಗ್ರಾಮೀಣ ವಲಯ ವ್ಯಾಪ್ತಿಯ 9 ಪ್ರಾಥಮಿಕ ಶಾಲೆಗಳ 968 ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈಗಾಗಲೇ ಎಸ್.ಬಿ.ಐ ಚಾಲುಕ್ಯ ನಗರ ಶಾಖೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮಕ್ಕಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಎಸ್. ಬಳೋಲಮಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿನ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಎನ್.ಎಂ.ಎಂ.ಎಸ್ ಪರೀಕ್ಷೆಗೆ ನೊಂದಾಯಿಸಿದ 1501 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸ್ಪೂರ್ತಿ ಕರಿಯರ ಅಕಾಡೆಮಿ ಧಾರವಾಡದ ಕಾಶಿರಾಜ್ ಅವರನ್ನು ಕರೆಸಿ ಬಬಲೇಶ್ವರ ಪಟ್ಟಷದ ಶಾಂತವೀರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ (ಪ್ರೌಢ ವಿಭಾಗ ) ಬುಧವಾರ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಯಿತು.2024- 25 ನೇ ಸಾಲಿನಲ್ಲಿ ನಮ್ಮ ತಾಲ್ಲೂಕಿನಿಂದ ಅತಿ ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿ ನಮ್ಮ ತಾಲ್ಲೂಕಿಗೆ ಹೆಸರನ್ನು ತರಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರವು ಕೊಡ ಮಾಡುವ ಪ್ರತಿ ವರ್ಷ ₹ 12000 ಗಳು, ಈ ರೀತಿಯಾಗಿ ನಾಲ್ಕು ವರ್ಷಗಳಲ್ಲಿ ₹ 48000 ಶಿಷ್ಯ ವೇತನವನ್ನು ಪಡೆಯುವಂತಾಗಬೇಕೆಂದು ಆಶಿಸುತ್ತಾ ಈ ಕಾರ್ಯಗಾರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಪರೀಕ್ಷೆ ನೋಡಲ್ ಪ್ರಭು ಬಿರಾದಾರ ಮಾತನಾಡಿ 2023-24 ನೇ ಸಾಲಿನಲ್ಲಿ ಬಿಇಓ ಅವರ ವಿಶೇಷ ಕಾಳಜಿಯಿಂದ ಜಿಲ್ಲೆಯಲ್ಲಿಯೇ…

Read More