ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾಂಟೆಸ್ಸರಿ ಶಿಕ್ಷಣ ಚಟುವಟಿಕೆ ಆಧಾರಿತ ಮೂಲಕ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಪ್ರಶಾಂತ ಕಮತಗಿ ಹೇಳಿದರು.
ಪಟ್ಟಣದ ಹೊರವಲಯದ ಭೀಮಾ ಮಾಂಟೆಸ್ಸರಿ ಶಾಲೆಯ ಯು.ಕೆ.ಜಿ ಮಕ್ಕಳ ಪದವಿ ಗ್ರಹಣ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಶಿಕ್ಷಣದ ವ್ಯವಸ್ಥೆಯಿಂದ ಮಗುವಿಗೆ ಅಕ್ಷರ ಜ್ಞಾನದ ಜೊತೆಗೆ ಆಟವಾಡುತ್ತಾ ವಿನೂತನ ಕಲಿಕೆಗೆ ಸಹಕರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ನೃತ್ಯ, ಪಠ್ಯಧಾರಿತ ವಿವಿಧ ವಿನ್ಯಾಸಗಳ ಮೂಲಕ ಕಲಿಕೆಯ ವಿಧಾನ ಪ್ರದರ್ಶನ ಸೇರಿದಂತೆ ಅನೇಕ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೋಂಡಿದ್ದು, ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಶಾಹಿನ್ ಶೇಖ್, ಪಾಲಕರಾದ ಶಾಹೆದಾಬೇಗಂ, ಮುನಿರ್ ಅಹಮ್ಮದ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಪಾಲಕರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ನೆರವೇರಿತು.

