ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದಲ್ಲಿ ಮಾ೨ ರಿಂದ ೨ಸಿಟಿ ಬಸ್‌ಗಳು ಸಂಚರಿಸಲಿವೆ. ತಾಲೂಕಿನ ಹಡಲಗೇರಿ ಗ್ರಾಮದಿಂದ ಬಸ್ ಪದ್ಮಾವತಿ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಜ್ಞಾನ ಭಾರತಿ ವಿದ್ಯಾ ಮಂದಿರ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಓಂ ಶಾಂತಿ ಮಾರ್ಗವಾಗಿ ಮಾರುತಿ ನಗರದ ಕೊನೆಯ ರಸ್ತೆಯವರೆಗೆ ಮತ್ತು ವಿಮುಖವಾಗಿ ಒಂದು ಬಸ್ ಹೀಗೆ ಪ್ರತಿದಿನ ಒಟ್ಟು ಎರಡು ಬಸ್ ಗಳು ೧೬ ಟ್ರಿಪ್‌ಗಳ ಮೂಲಕ ಈ ಬಸ್‌ಗಳು ಬೆಳಿಗ್ಗೆ ೭ಗಂಟೆಯಿಂದ ತಮ್ಮ ಸಂಚಾರವನ್ನು ಪ್ರಾರಂಭಿಸಲಿವೆ.
೨೦೨೧ ರಲ್ಲಿ ಪಟ್ಟಣದಿಂದ ಸರ್ಕಾರಿ ಆಸ್ಪತ್ರೆಗೆ ಸೇರಿದಂತೆ ಹಲವೆಡೆ ತಿರುಗಾಡಲು ಬಡವರಿಗೆ ಕಷ್ಟವಾಗಿತ್ತು. ನಗರಾಭಿವೃದ್ಧಿ ಹೋರಾಟ ವೇದಿಕೆ ಸೇರಿದಂತೆ ಇತರ ಸಂಘಟನೆಗಳಿಂದ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ ವಿವಿಧ ಮಾರ್ಗಗಳನ್ನು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಲಾಗಿತ್ತು. ಆದರೆ ಬಸ್ ಪ್ರಾರಂಭವಾಗಿರಲಿಲ್ಲ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮುತುವರ್ಜಿ ವಹಿಸಿ ಸಿಟಿ ಬಸ್ ಪ್ರಾರಂಭಿಸಿದ್ದು ಬಸ್ ಪ್ರಾರಂಭಕ್ಕೆ ನಗರಾಭಿವೃದ್ಧಿ ಹೋರಾಟ ಯುವ ವೇದಿಕೆ, ಮರ್ಚಂಟ್ ಅಸೋಶಿಯೇಶನ್ ಸೇರಿದಂತೆ ನಗರದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ವಾಸುದೇವ ಶಾಸ್ತಿç, ಬಸವರಾಜ ನಂದಿಕೇಶ್ವರಮಠ, ರಾಮು ಪೂಜಾರಿ, ರಾಜು ಬಳ್ಳೊಳ್ಳಿ, ಅಶೋಕ ಚಿನಿವಾರ, ರವೀಂದ್ರ ಬಿರಾದಾರ, ಹಣಮಂತ ನಲವಡೆ, ಶೇಖರ ಢವಳಗಿ, ಸಿದ್ದನಗೌಡ ಪಾಟೀಲ, ಮಹಾಂತಗೌಡ ಕಾಶಿನಕುಂಟಿ, ಪುನೀತ ಹಿಪ್ಪರಗಿ, ಮಹಾಂತೇಶ ಬೂದಿಹಾಳಮಠ. ಸದ್ದಾಂ ಕುಂಟೋಜಿ, ಸಂತೋಷ ಬಾದರಬಂಡಿ, ಮಶಾಕ ಢವಳಗಿ, ಸಾಬೀರ ಬಾಗವಾನ ಹರ್ಷ ವ್ಯಕ್ತಪಡಿಸಿದ್ದಾರೆ.
ಬಸ್ ಓಡಾಟಕ್ಕೆ ಕಾರಣೀಕರ್ತರಾದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಸೇರಿದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ.
